ಮುಟ್ಟಿನ ಹೊಟ್ಟೆ ನೋವಿನಿಂದ ಮುಕ್ತಿ ಹೇಗೆ?

Posted By:
Subscribe to Boldsky
ಹೊಟ್ಟೆ ನೋವು ಮಹಿಳೆಯರನ್ನು ಕಾಡುವ ದೊಡ್ಡ ಸಮಸ್ಯೆ. ತಿಂಗಳಿಗೊಮ್ಮೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಈ ನೋವಿಗೆ ಪರಿಹಾರ ಹುಡುಕುವುದು ಎಷ್ಟೋ ಮಹಿಳೆಯರಿಗೆ ಸಾಧ್ಯವಾಗಿರುವುದಿಲ್ಲ. ಆದರೆ ಕೆಲವೊಂದು ವಿಧಾನವನ್ನು ಅನುಸರಿಸಿದರೆ ತಿಂಗಳ ಮುಟ್ಟಿನ ನೋವನ್ನು ಸುಲಭವಾಗಿ ನಿಯಂತ್ರಣಕ್ಕೆ ತರುವುದು ಸಾಧ್ಯವಿದೆ.

ಹೊಟ್ಟೆನೋವನ್ನು ಕಡಿಮೆ ಮಾಡುವ ಕೆಲವು ಸಲಹೆ ಇಲ್ಲಿವೆ.

1. ಹೊಟ್ಟೆ ತುಂಬಾ ನೋಯುತ್ತಿದ್ದರೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತುಪ್ಪವನ್ನು ಬೆರೆಸಿ ಕುಡಿದರೆ ನೋವು ನಿಯಂತ್ರಣಕ್ಕೆ ಬರುತ್ತದೆ.

2. ಮುಟ್ಟಿನ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯುವುದರಿಂದ (8 ಲೋಟ), ಅದರಲ್ಲೂ ಬಿಸಿ ನೀರನ್ನು ಕುಡಿಯುವುದರಿಂದ ನೋವಿಗೆ ಬೇಗನೆ ಉಪಶಮನ ನೀಡುತ್ತದೆ.

3. ಮುಟ್ಟಿನ ಸಮಯದಲ್ಲಿ ಆದಷ್ಟು ಹಣ್ಣುಗಳನ್ನು ಸೇವಿಸುವುದು ಉತ್ತಮ. ಮಿನರಲ್ ಹೆಚ್ಚಿರುವ ಆಹಾರದ ಸೇವನೆ ಈ ಸಮಯಕ್ಕೆ ಸೂಕ್ತ. ಅದರಲ್ಲೂ ಪಪ್ಪಾಯ ತಿಂದರೆ ನೋವು ಬೇಗ ಕಳೆಯುತ್ತದೆ.

4. ಮುಟ್ಟಿನ ಅವಧಿಯಲ್ಲಿ ರಾತ್ರಿ ಮಲಗುವಾಗ ಹಾಲಿನೊಂದಿಗೆ ಗಸಗಸೆ ಸೇರಿಸಿ ಕುಡಿದು ಮಲಗಿದರೆ ಒಳ್ಳೆಯ ನಿದ್ದೆ ಬಂದು ಮುಟ್ಟಿನ ನೋವನ್ನು ನಿವಾರಿಸುತ್ತದೆ.

5. ತುಂಬಾ ಹೊಟ್ಟೆ ನೋವು ನಿಮ್ಮನ್ನು ಕಾಡುತ್ತಿದೆ ಎಂದಾದರೆ ಮಜ್ಜಿಗೆಯಲ್ಲಿ ಸ್ವಲ್ಪ ಹೊತ್ತು ನೆನೆಹಾಕಿದ ಮೆಂತ್ಯೆ ಬೆರೆಸಿ ಕುಡಿಯಬೇಕು.

6. ಹೂಕೋಸು, ಮೀನು, ಸೀಗಡಿ, ಸೇಬು, ಬಾದಾಮಿ, ಬೀನ್ಸ್, ದೊಡ್ಡ ಅವರೆ, ಗೋಡಂಬಿ, ಪಾಲಾಕ್, ಎಲೆಕೋಸು, ಇನ್ನಿತರ ಹಸಿರು ತರಕಾರಿಗಳು ಮಿನರಲ್ ಗಳ ಮೂಲ. ಆದ್ದರಿಂದ ಇದರ ಸೇವನೆ ಅವಶ್ಯಕ ಶಕ್ತಿ ಒದಗಿಸುತ್ತದೆ.

7. ಅರ್ಧ ಗಂಟೆ ನಡಿಗೆ ನೋವಿಗೆ ಉಪಶಮನ ನೀಡಬಹುದು. ಈ ಸಮಯದಲ್ಲಿ ಹೆಚ್ಚು ವ್ಯಾಯಾಮ ಒಳ್ಳೆಯದಲ್ಲ. ವ್ಯಾಯಾಮ ಗರ್ಭಕೋಶದ ಮೇಲೆ ಹೆಚ್ಚು ಒತ್ತಡ ಬೀರಬಹುದು.

8. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಈ ಸಮಯಕ್ಕೆ ದೇಹಕ್ಕೆ ಅವಶ್ಯವಿರುವ ಕ್ಯಾಲ್ಸಿಯಂ ದೊರೆಯಲು ಅನುಕೂಲವಾಗುತ್ತದೆ.

9. ಆಹಾರದಲ್ಲಿ ಚಕ್ಕೆ, ಅರಿಶಿನ, ಪುದೀನ, ಕೊತ್ತಂಬರಿ, ಶುಂಠಿ ಮತ್ತು ತುಳಸಿ ಇವುಗಳನ್ನು ಆಗಾಗ್ಗೆ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

English summary

How to reduce Menstrual pain | Menstrual pain home remedies | Relieving Menstrual Cramps |ಮುಟ್ಟಿನ ಸಮಸ್ಯೆಗೆ ಆಹಾರ ಕ್ರಮ | ಹೊಟ್ಟೆನೋವಿನಿಂದ ಹೊರಬರುವುದು ಹೇಗೆ

Do you have periods? Then try these useful periods diet tips that will help you on what to and what not to have during periods. So take a look at our simple diet tips for happy and safe periods.
Story first published: Monday, September 26, 2011, 11:49 [IST]
Please Wait while comments are loading...
Subscribe Newsletter