Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕಣ್ಣುಗಳ ಆರೋಗ್ಯಕ್ಕೆ ಏನೇನು ತಿನ್ನಬೇಕು?

ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ:
*ವಿಟಮಿನ್ಸ್: ಕಣ್ಣಿಗೆ ಅಗತ್ಯವಿರುವ ವಿಟಮಿಮ್ ಎ, ಇ ಮತ್ತು ಸಿ ದಿನನಿತ್ಯ ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ಕಣ್ಣಿನ ಪೋಷಣೆಗೆ ಉತ್ತಮ ವಿಟಮಿನ್ ನೀಡುವ ಹಣ್ಣುಗಳು. ಇವುಗಳ ಸೇವನೆ ಕಣ್ಣನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
* ಸೌತೆಕಾಯಿ: ನಿಮ್ಮ ಕಣ್ಣು ತುಂಬಾ ಒತ್ತಡದಿಂದ ಬಳಲಿದ್ದರೆ ಅದಕ್ಕೆ ಸೌತೆಕಾಯಿ ರಸ, ಬೂದುಗುಂಬಳಕಾಯಿ ರಸ ಅಥವಾ ಒಂದು ಚಮಚ ಹರಳೆಣ್ಣೆ, ಯಾವುದೂ ಇಲ್ಲವೆಂದರೆ ಐಸ್ ವಾಟರ್ ಅನ್ನು ಕಣ್ಣುಗಳ ಮೇಲಿಟ್ಟರೂ ಬೇಗನೆ ಆಯಾಸ ಕಡಿಮೆಯಾಗುತ್ತದೆ. ಇದು ತಲೆನೋವನ್ನು ಕಡಿಮೆ ಮಾಡಿ ಒತ್ತಡದಿಂದ ಕಣ್ಣಿನ ನೋವು ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ. ಆಗಾಗ್ಗೆ ಸೌತೆಕಾಯಿ ಅಥವಾ ಅದರ ಜ್ಯೂಸ್ ಸೇವಿಸಿದರೆ ಕಣ್ಣಿಗೆ ತುಂಬಾ ಹಿತ.
* ಬಾದಾಮಿ: ಬಾದಾಮಿ (ನೀರಿನಲ್ಲಿ ಸೋಕಿಸಿ ಸಿಪ್ಪೆ ತೆಗೆದದ್ದು), ಕರ್ಜೂರ, ಸೊಯಾ ಬೀನ್, ಹಸಿರು ಬಟಾಣಿಯಲ್ಲಿ ಹೇರಳವಾಗಿರುವ ವಿಟಮಿನ್ ಎ ಕಣ್ಣಿನ ಪೋಷಣೆಗೆ ಅಗತ್ಯವಾದ ಪೋಷಕಾಂಶ ನೀಡುತ್ತದೆ.
* ಪಾಲಾಕ್ : ಹಸಿರು ಸೊಪ್ಪುಗಳಾದ ಪಾಲಾಕ್ ಸೊಪ್ಪು, ಹೂಕೋಸು, ಟರ್ನಿಪ್ ಮುಂತಾದವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ ಕಣ್ಣಿನ ದೃಷ್ಠಿ ಚುರುಕುಗೊಳ್ಳುವಂತೆ ಮಾಡುತ್ತದೆ. ಈ ಸೊಪ್ಪುಗಳು ನಿಮ್ಮ ಆಹಾರದಲ್ಲಿದ್ದರೆ ನೀವು ಕಣ್ಣಿನ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
* ಹಾಲು: ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ಚೀಸ್ ಮುಂತಾದುವು ಕಣ್ಣಿನ ಆರೋಗ್ಯದ ಆಹಾರದ ಲಿಸ್ಟ್ ನಲ್ಲಿರಲಿ. ಕಣ್ಣಿನ ದಣಿವನ್ನು ನೀಗಿಸಿ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಕಣ್ಣಿಗೆ ಅಗತ್ಯವಾದ ಪೋಷಕಾಂಶವನ್ನೂ ಹೆಚ್ಚಾಗಿ ಒದಗಿಸುತ್ತದೆ.
* ತುಳಸಿ: ಆಯುರ್ವೇದ ಚಿಕಿತ್ಸೆಯಲ್ಲಿ ಕಣ್ಣಿನ ಚಿಕಿತ್ಸೆಗೆಂದು ತುಳಸಿ ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ಬಳಸಲಾಗುತ್ತದೆ. ಇದರಲ್ಲಿನ ಔಷಧೀಯ ಗುಣ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ವಯಸ್ಸಾದರೂ ದೃಷ್ಟಿ ಬೇಗ ಮಾಸದಂತೆ ನೋಡಿಕೊಳ್ಳುತ್ತದೆ. ಇದನ್ನು ನೀರು ಮತ್ತು ಜೇನಿನೊಂದಿಗೆ ಬೆರೆಸಿ ಜ್ಯೂಸ್ ಮಾಡಿ ಕುಡಿದರೆ ತುಂಬಾ ಕಣ್ಣುಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಈ ಸಿಂಪಲ್ ಡಯಟ್ ನೊಂದಿಗೆ ಸರಳವಾದ ಕೆಲವು ಕಣ್ಣಿನ ವ್ಯಾಯಾಮಗಳನ್ನೂ ಮಾಡಿಕೊಂಡರೆ ನೀವು ಜಗತ್ತನ್ನು ಹೆಚ್ಚು ಕಾಲ ನೋಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
