For Quick Alerts
ALLOW NOTIFICATIONS  
For Daily Alerts

ಅನಿಮಿಯಾ: ಅಲಕ್ಷಿಸಿದರೆ ತಪ್ಪದು ಅಪಾಯ

|
beetroot
ತುಂಬಾ ಸುಸ್ತು, ನಿಂತಲ್ಲಿ ನಿಲ್ಲೋದಕ್ಕೆ ಆಗಲ್ಲ, ಯಾವಾಗ್ಲೂ ತಲೆ ತಿರುಗು ಬರುತ್ತೆ ಡಾಕ್ಟರ್ ಅಂತ ಕ್ಲಿನಿಕ್ ಗಳಿಗೆ ಹೋಗೋ ಮಂದಿ ಈಗ ಹೆಚ್ಚಾಗಿದ್ದಾರೆ. ಫಾಸ್ಟ್ ವಲ್ಡ್ ಜೊತೆ ಹೆಜ್ಜೆ ಹಾಕೊ ಭರದಲ್ಲಿ ಆರೋಗ್ಯದ ಕಡೆಗೂ ಗಮನ ಹರಿಸದೆ ಕೊನೆಗೆ ಮೇರೆ ಮೀರಿದಾಗ ಪರಿತಪಿಸೋರಿಗೆ ಕಡಿಮೆ ಇಲ್ಲ. ಇದು ಅನಿಮಿಯಾ ಅಂತ ಡಾಕ್ಟರ್ ಹೇಳಿದಾಗ ಅವರ ಮುಖ ಪೆಚ್ಚಾಗುತ್ತೆ. ಆದರೆ ಕೆಲವು ಪೌಷ್ಟಿಕಯುಕ್ತ ಆಹಾರವನ್ನು ಸೇವಿಸೋದ್ರಿಂದ ರಿಸ್ಕ್ ಇಲ್ಲದೆ ರಕ್ತಹೀನತೆಯನ್ನು ತಪ್ಪಿಸಬಹುದು.

ಯಾವ ಆಹಾರಸೇವನೆ ಅನಿಮಿಯಾ ತೊಂದರೆಯನ್ನು ದೂರ ಮಾಡುತ್ತೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಿ.

* ವಿಟಮಿನ್ -ಬಿ12: ರಕ್ತ ಹೀನತೆ ದೂರ ಮಾಡಲು ವಿಟಮಿನ್ ಬಿ-12 ತುಂಬಾ ಅವಶ್ಯಕ. ಇದು ಹೆಚ್ಚಾಗಿ ಮಾಂಸಾಹಾರ, ಅದರಲ್ಲೂ ಪ್ರಾಣಿಯ ಕಿಡ್ನಿ ಮತ್ತು ಲಿವರ್ ಗಳಲ್ಲಿ ಹೆಚ್ಚು ಇರುತ್ತದೆ. ಅಷ್ಟೇ ಅಲ್ಲದೆ ಹಾಲು ಮತ್ತು ಮೊಸರಿನ ಸೇವನೆಯೂ ಇದಕ್ಕೆ ಫಲಕಾರಿ.

* ಬೀಟ್ ರೂಟ್: ಬೀಟ್ ರೂಟ್ ನಲ್ಲಿ ಪೊಟಾಶಿಯಂ, ಕ್ಯಾಲ್ಸಿಯಂ, ಸಲ್ಫರ್, ಅಯೋಡಿನ್, ಕಬ್ಬಿಣಾಂಶ, ಕಾಪರ್, ಕಾರ್ಬೋಹೈಡ್ರೇಡ್, ಪ್ರೊಟೀನ್, ಕೊಬ್ಬು, ವಿಟಮಿನ್ ಬಿ 1,2,6 ಮತ್ತು ವಿಟಮಿನ್ ಪಿ ಹೇರಳವಾಗಿದೆ. ಇದರಲ್ಲಿನ ಕಬ್ಬಿಣಾಂಶ ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅದರಲ್ಲೂ ಮಕ್ಕಳು ಮತ್ತು ಹದಿವಯಸ್ಸಿನವರಿಗೆ ಇದು ಅತಿ ಅವಶ್ಯಕ.

* ಮೆಂತ್ಯೆ: ರಕ್ತದ ಉತ್ಪತ್ತಿಗೆ ಮೆಂತ್ಯೆ ಸೊಪ್ಪು ಹೆಚ್ಚು ಸಹಕಾರಿ. ಮೆಂತ್ಯೆ ಯನ್ನು ಬೇಯಿಸಿ ಅದರ ರಸವನ್ನು ಯುವತಿಯರು ಸೇವಿಸಿದರೆ ಮುಟ್ಟಿನಿಂದ ಉಂಟಾಗುವ ರಕ್ತಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಕಬ್ಬಿಣಾಂಶ ಹೆಚ್ಚಿರುವ ಮೆಂತ್ಯೆ ಕಾಳುಗಳು ಕೂಡ ಅನೀಮಿಯಾ ನಿವಾರಣೆಗೆ ಉಪಯುಕ್ತ.

* ಬಸಳೆ ಸೊಪ್ಪು: ಅಂಗಳದಲ್ಲಿ ಬೆಳೆಯುವ ಬಸಳೆ ಸೊಪ್ಪು ಕಬ್ಬಿಣಾಂಶಗಳ ಆಕರ. ಇದರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಾಗುವುದಲ್ಲದೆ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.

* ಸೊಯಾಬೀನ್: ಸಾಮಾನ್ಯವಾಗಿ ಅನಿಮಿಯಾ ತೊಂದರೆಗೆ ಒಳಪಟ್ಟವರಿಗೆ ಜೀರ್ಣಕ್ರಿಯೆ ಸರಿಯಿರುವುದಿಲ್ಲ. ಅಂತಹವರು ಪ್ರೊಟೀನ್ ಹೇರಳವಾಗಿರುವ ಸೊಯಾಬೀನ್ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಸುಲಭವಾಗಿ ಜೀರ್ಣಕ್ರಿಯೆ ನಡೆದು ರಕ್ತ ಹೆಚ್ಚುತ್ತದೆ.

* ಬಾದಾಮಿ: ಬಾದಾಮಿಯಲ್ಲಿ ತಾಮ್ರದ ಅಂಶ, ಐರನ್, ವಿಟಮಿನ್ ಹೆಚ್ಚಿರುವ ಕಾರಣ ಏಳು ಬಾದಾಮಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ರುಬ್ಬಿ ಸುಮಾರು ಮೂರು ತಿಂಗಳ ಕಾಲ ಬೆಳಗ್ಗಿನ ಸಮಯ ಸೇವಿಸಿದರೆ ಖಂಡಿತ ರಕ್ತಹೀನತೆಗೆ ಪರಿಹಾರ ಕಂಡುಕೊಳ್ಳಬಹುದು.

* ಎಳ್ಳು: ಕರಿಎಳ್ಳಿನಲ್ಲಿರುವ ಸಾಕಷ್ಟು ಕಬ್ಬಿಣಾಂಶ ಅನಿಮಿಯಾಗೆ ಪರಿಣಾಮಕಾರಿ. ಒಂದು ಚಮಚ ಎಳ್ಳನ್ನು ಬೆಚ್ಚಗಿನ ನೀರಿಗೆ ಹಾಕಿ 2 ಗಂಟೆ ನೆನೆಸಿ, ನಂತರ ಸೋಸಿ ರುಬ್ಬಿಕೊಳ್ಳಬೇಕು. ಇದನ್ನು ಹಾಲಿಗೆ ಸಕ್ಕರೆಯೊಂದಿಗೆ ಬೆರೆಸಿ ಕುಡಿದರೆ ಉತ್ತಮ.

* ಜೇನು: ಜೇನಿನಲ್ಲಿ ಅನೇಕ ಸತ್ವಗಳು ಇರುವುದರಿಂದ ಇದರ ಸೇವನೆ ಬಹುಪಯೋಗಿ. ಆದರೆ ಕಚ್ಚಾ ಜೇನಿನಲ್ಲಿ ಕೆಲವು ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಇರುವುದರಿಂ ಮಕ್ಕಳಿಗೆ ಕೊಡಬಾರದು. ಯಾವುದಾದರೂ ಆಹಾರದಲ್ಲಿ ಇದನ್ನು ಬೆರೆಸಿ ಸೇವನೆ ಮಾಡಬಹುದು.

* ಬಾಳೆಹಣ್ಣು, ಕಪ್ಪು ದ್ರಾಕ್ಷಿ, ಸ್ಟ್ರಾಬೆರಿ, ಈರುಳ್ಳಿ, ಕ್ಯಾರೆಟ್, ಮೂಲಂಗಿ, ಟೊಮೊಟೊ, ಕೊತ್ತಂಬರಿ, ಒಣಹಣ್ಣುಗಳಲ್ಲೂ ರಕ್ತಹೀನತೆಯನ್ನು ದೂರ ಮಾಡುವ ಅನೇಕ ಸತ್ವಗಳಿವೆ.

ಆದ್ದರಿಂದ ಇವುಗಳನ್ನು ಆದಷ್ಟು ನಮ್ಮ ದಿನ ನಿತ್ಯದ ಆಹಾರದ ಭಾಗವಾಗಿಸಿಕೊಂಡರೆ ಮುಂಬರುವ ಅನೇಕ ಕಾಯಿಲೆಗಳನ್ನು ತಡೆಯಬಹುದು.

English summary

Anaemia disorder | Health and anaemia | Anaemia and natural remedy | Health tips, ರಕ್ತಹೀನತೆ | ರಕ್ತಹೀನತೆ ಮತ್ತು ಆರೋಗ್ಯ | ರಕ್ತಹೀನತೆಗೆ ಮನೆಮದ್ದು

Anaemia is the most common ailments affecting human beings. It is a condition in which there is a decrease in the quantity of haemoglobin or in the number of red cells. The raw materials required in the production of these cells are iron, proteins, and vitamins, especially folic acid and B12. So you can look into the list where you come to know in which of the vegetables or food we can gain haemoglobin
Story first published: Saturday, July 23, 2011, 15:09 [IST]
X
Desktop Bottom Promotion