For Quick Alerts
ALLOW NOTIFICATIONS  
For Daily Alerts

ಎಚ್1ಎನ್1 ಮಹಾಮಾರಿಗೆ ಭಾರತದ ಲಸಿಕೆ

By Mahesh
|
Swine flu vaccine
ಹೈದರಾಬಾದ್, ಅ.18: ಇಲ್ಲಿನ ಭಾರತ್ ಬಯೋಟೆಕ್ ಎಚ್ 1ಎನ್ 1 ಮಹಾಮಾರಿಗೆ ಲಸಿಕೆ ಕಂಡುಹಿಡಿದಿದೆ. ಭಾರತದ ಮೊತ್ತಮೊದಲ ಅಧಿಕೃತ ಲಸಿಕೆಯಾಗಿ HNVAC ಬ್ರ್ಯಾಂಡ್ ಹೆಸರಿನಲ್ಲಿ ಇಂದು ಬಿಡುಗಡೆಗೊಳಿಸಲಾಗಿದೆ.

ತತ್ತಿಗಳ ಪುನರುತ್ಪತ್ತಿಯ ಮೇಲೆ ನಿಯಂತ್ರಣ ಸಾಧಿಸುವ ಕೋಶ ಸಂಸ್ಕೃತಿ(cell culture) ಆಧಾರ ಮೆಲೆ ಈ HNVAC ಲಸಿಕೆಯನ್ನು ಉತ್ಪಾದಿಸಲಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.

ಸುಮಾರು ಮೂರು ಹಂತಗಳಲ್ಲಿ ಲಸಿಕೆಯ ಗುಣ ಪರೀಕ್ಷೆ ನಡೆಸಲಾಗಿದೆ. ಇದು ನೂರಕ್ಕೆ ನೂರರಷ್ಟು ಸುರಕ್ಷಿತ, ಪರಿಣಾಮಕಾರಿ ಹಾಗೂ ಕಡಿಮೆ ವೆಚ್ಚದಲ್ಲಿ ಜನರಿಗೆ ಸಿಗಲಿದೆ ಎಂದು ಭಾರತ್ ಬಯೋಟೆಕ್ ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರಿ ಏಜೆನ್ಸಿಗಳ ಮೂಲಕ ಖಾಸಗಿ ಮಾರುಕಟ್ಟೆಯಲ್ಲೂ ಈ ಲಸಿಕೆ ಲಭ್ಯವಾಗಲಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಈ HNVAC ಲಸಿಕೆಗೆ Drugs Controller General of India ದಿಂದ ಮಾನ್ಯತೆ ಸಿಕ್ಕಿದೆ.

ಈ ಜ್ವರ (swine influenza) ಸಾಂಕ್ರಾಮಿಕವಾಗಿದ್ದು, ಬಹುಬೇಗ ಎಲ್ಲರಿಗೂ ಹರಡುತ್ತದೆ. ಸಾಮಾನ್ಯ ಜ್ವರ, ಗಂಟಲು ನೋವು, ಮೈಕೈ ನೋವು, ತೀವ್ರ ತಲೆನೋವು , ಕೆಮ್ಮು, ನಿಃಶಕ್ತಿ ಹಾಗೂ ಆಲಸ್ಯ ಮುಂತಾದ ಲಕ್ಷಣಗಳು ಎಚ್ 1ಎನ್ 1 ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತದೆ.

X
Desktop Bottom Promotion