Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೇಸಿಗೆಯಲ್ಲಿ ಪೈನಾಪಲ್ ತಿಂದರೆ ಈ 7 ಪ್ರಯೋಜನಗಳಿವೆ
ಎಂಥ ಬಿಸಿಲು ಅಲ್ವಾ? ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಓಡಾಡಿದರೆ ಸಾಕು ಈ ಸೆಕೆಗೆ ಸುಸ್ತಾಗಿ ಬಿಡುತ್ತೇವೆ. ಕೆಲವು ಕಡೆ ಉಷ್ಣಾಂಶ ಎಷ್ಟು ಅಧಿಕವಾಗಿದೆ ಎಂದರೆ ಮನೆಯೊಳಗಡೆ ಕೂರಲು ಕಷ್ಟವಾಗುವುದು. ಫ್ಯಾನ್ ಗಾಳಿಯಿಲ್ಲದೆ ಅಥವಾ ಎಸಿಯಿಲ್ಲದೆ 5 ನಿಮಿಷ ಕಳೆಯುವುದು ಕಷ್ಟವಾಗಿದೆ.
ಇಂಥ ಸಮಯದಲ್ಲಿ ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು, ನೀವು ಬೇಸಿಗೆಯಲ್ಲಿ ತಿನ್ನಬೇಕಾದ ಪ್ರಮುಖ ಆಹಾರಗಳಲ್ಲಿ ಅನಾನಾಸ್ ಕೂಡ ಒಂದಾಗಿದೆ.
ಬೇಸಿಗೆಯಲ್ಲಿ ಅನಾನಾಸ್ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ:

ಪೈನಾಪಲ್‌ನಲ್ಲಿರುವ ಪೋಷಕಾಂಶಗಳು
ಪೈನಾಪಲ್‌ನಲ್ಲಿ ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಫೋಲೆಟ್, ರಂಜಕ, ಸತು, ವಿಟಮಿನ್ ಎ ಮತ್ತು ವಿಟಮಿನ್ ಕೆ, ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಪೈನಾಪಲ್ ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಕೆಗೆ ಡಯಟ್ ಮಾಡುತ್ತಿದ್ದೀರಾ, ಈ ಪೈನಾಪಲ್ ಕೂಡ ಸೇರಿಸಿಕೊಳ್ಳಿ. ಇದು ತೂಕ ಇಳಿಕೆಗೆ ತುಂಬಾನೇ ಸಹಾಯ ಮಾಡುತ್ತದೆ. ಪೈನಾಪಲ್ ಬಳಸುವುದರಿಂದ ಮೈ ತೂಕ, ಹೊಟ್ಟೆ ಬೊಜ್ಜು ಈ ಬಗೆಯ ಬೊಜ್ಜಿನ ಸಮಸ್ಯೆ ತಡೆಗಟ್ಟಬಹುದು.
ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ
ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಲು ಸಹಕಾರಿ. ಬೇಡದ ಕಶ್ಮಲಗಳು ದೇಹದಲ್ಲಿದ್ದರೆ ಕ್ಯಾನ್ಸರ್‌ಗಳು ಉಂಟಾಗುವುದು. ಪೈನಾಪಲ್ ದೇಹವನ್ನು ಡಿಟಾಕ್ಸ್ ಮಾಡುವುದರಿಂದ ಕ್ಯಾನ್ಸರ್ ಕಣಗಳು ಉಂಟಾಗದಂತೆ ತಡೆಗಟ್ಟಲು ಸಹಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಪೈನಾಪಲ್‌ನಲ್ಲಿ ವಿಟಮಿನ್ ಸಿ ಇದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ನೀವು ಗಮನಿಸಿರಬಹುದು, ಹೊಟ್ಟೆ ತುಂಬಾ ತಿಂದ ಬಳಿಕ ಎರಡು ಪೀಸ್ ಪೈನಾಪಲ್ ತಿನ್ನಿ. ಕೆಲವೇ ಗಂಟೆಗಳಲ್ಲಿ ಹಸಿವು ಉಂಟಾಗುವುದು. ಏಕೆಂದರೆ ಪೈನಾಪಲ್ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಅಜೀರ್ಣ ಸಮಸ್ಯೆ ಇರುವವರು ಆಹಾರದ ಬಳಿಕ ಒಂದು ತುಂಡು ಪೈನಾಪಲ್ ತಿಂದ್ರೆ ಅಜೀರ್ಣ ಸಮಸ್ಯೆ ದೂರಾಗುವುದು.
ಮಧುಮೇಹಿಗಳು ತಿನ್ನಬಹುದಾದ ಹಣ್ಣಾಗಿದೆ
ಎಲ್ಲಾ ಹಣ್ಣುಗಳು ಮಧುಮೇಹಿಗಳಿಗೆ ಸುರಕ್ಷಿತವಲ್ಲ, ಏಕೆಂದರೆ ಕೆಲವೊಂದು ಹಣ್ಣುಗಳು ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಿಸುತ್ತೆ. ಅದೇ ಪೈನಾಪಲ್ ಮಧುಮೇಹಿಗಳು ತಿನ್ನಬಹುದಾದ ಅತ್ಯುತ್ತಮವಾದ ಹಣ್ಣಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಸಮಸ್ಯೆ ಅಧಿಕ. ಪೈನಾಪಲ್‌ನಲ್ಲಿ ಅತ್ಯಧಿಕ ನಾರಿನಂಶ, ಪೊಟಾಷ್ಯಿಯಂ ವಿಟಿಮಿನ್ ಸಿ ಇರುವುದರಿಂದ ದೇಹದ ಆರೋಗ್ಯ ಕಾಪಾಡುತ್ತದೆ. ಆದ್ದರಿಂದ ಹೀಟ್ ಸ್ಟ್ರೋಕ್ ಅಪಾಯ ತಡೆಗಟ್ಟಬಹುದು.
ತ್ವಚೆಗೆ ಒಳ್ಳೆಯದು
ಬೇಸಿಗೆಯಲ್ಲಿ ಬಿಸಿಲಿನಲ್ಲಿ ಓಡಾಡಿದಾಗ ತ್ವಚೆ ಕೂಡ ಬಳಲಿ ಮಂಕಾಗುವುದು. ಅನಾನಸ್ ದೇಹದ ಒಳಗಿನ ತ್ವಚೆಯ ಕಣಗಳನ್ನು ರಿಲೇಪರಿ ಮಾಡಿ ಮುಖದ ಹೊಳಪು ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

