For Quick Alerts
ALLOW NOTIFICATIONS  
For Daily Alerts

ವಿಶ್ವ ಆರೋಗ್ಯ ಸಂಸ್ಥೆ: ಮಾರಕ ಕೊರೊನಾ ವೈರಸ್‌ ತಡೆಗಟ್ಟಲು ಸಲಹೆಗಳು

|

ವಿಶ್ವದೆಲ್ಡೆಡೆ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಚೀನಾದಲ್ಲಿ ಹುಟ್ಟಿದ ಈ ಮಾರಕ ಕಾಯಿಲೆ ಇದೀಗ ಇತರ ದೇಶಗಳಲ್ಲಿ ಕಂಡು ಬರುತ್ತಿದ್ದು, ಈ ಭೀತಿ ಭಾರತಕ್ಕೂ ತಟ್ಟಿದೆ. ಇದುವರೆಗೆ 1239 ಜನರಿಗೆ ಈ ಸೋಂಕು ತಗುಲಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ, ಸುಮಾರು 9,239 ಜನರಿಗೆ ಕೊರೊನೊ ವೈರಸ್ ಸೋಂಕು ತಗುಲಿರುವ ಲಕ್ಷಣಗಳಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿದೆ. 130ಕ್ಕೂ ಹೆಚ್ಚಿನ ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಚೀನಾ, ಭಾರತ ಇತರ ದೇಶಗಳು ಈ ವೈರಸ್‌ ತಡೆಗಟ್ಟಲು ಅನೇಕ ಕ್ರಮಗಳನ್ನು ಅನುಸರಿಸುತ್ತಿದ್ದು, ಚೀನಾದಲ್ಲಿ ಈ ವೈರಸ್‌ ತಗುಲಿದವರ ಚಿಕಿತ್ಸೆಗಾಗಿ ಪ್ರತ್ಯೇಕ ಅಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಭಾರತವು ಈ ರೋಗ ಹರಡದಂತೆ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದೆ.

ಕೊರೊನೊ ವೈರಸ್ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ವಿಶ್ವ ಆರೊಗ್ಯ ಸಂಸ್ಥೆಯು ಈ ರೋಗ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಳು

ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಳು

ವಿಶ್ವ ಸಂಸ್ಥೆಯು ಕೊರೊನಾ ವೈರಸ್ ಆಹಾರ ಹಾಗೂ ಉಸಿರಾಟದ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ನೀಡಿರುವ ಮಾರ್ಗದರ್ಶನಗಳು:

* ಆಗಾಗ ಕೈಯನ್ನು ಸ್ವಚ್ಛಗೊಳಿಸಬೇಕು. ಅದರಲ್ಲೂ ಆಲ್ಕೋಹಾಲ್ ಅಂಶವಿರುವ ಹ್ಯಾಂಡ್‌ವಾಶ್ ಬಳಸುವಂತೆ ಸಲಹೆ ನೀಡಿದೆ.

* ಕೆಮ್ಮುವಾಗ, ಸೀನಿದಾಗ ಬಾಯಿಗೆ ಅಡ್ಡ ಹಿಡಿದ ಟಿಶ್ಯೂವನ್ನು ಬಳಸಿದ ಕೂಡಲೇ ಬಿಸಾಡಬೇಕು.

* ಯಾರಿಗಾದರೂ ಜ್ವರ, ಶೀತವಿದ್ದರೆ ಅವರಿಂದ ಅಂತರ ಕಾಯ್ದುಕಳ್ಳಿ, ಒಂದು ವೇಳೆ ಮನೆಯಲ್ಲಿ ಯಾರಿಗಾದರೂ ಜ್ವರ, ಶೀತವಿದ್ದರೆ ಗ್ಲೌಸ್‌, ಮಾಸ್ಕ್ ಧರಿಸಿ ಅವರ ಆರೈಕೆ ಮಾಡಬೇಕು.

* ಕೆಮ್ಮು, ಸೀನು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು.

* ಮಾಂಸದ ಮಾರುಕಟ್ಟೆಗೆ ಹೋಗುವಾಗ ಮುನ್ನೆಚ್ಚರಿಕೆ ಕ್ರಮವಹಿಸಿ, ಮಾಂಸವನ್ನು ಕೈಯಿಂದ ಮುಟ್ಟುವುದು ಮಾಡಬೇಡಿ.ಆದಷ್ಟೂ ಅಂತಹ ಪ್ರದೇಶಗಳಿಗೆ ಭೇಟಿ ನೀಡದಿರುವುದು ಒಳ್ಳೆಯದು.

* ಮೊಟ್ಟೆ, ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿದ ಬಳಿಕವಷ್ಟೇ ತಿನ್ನಬೇಕು.

ಕೊರೊನಾ ವೈರಸ್‌ ತಿಳಿಯಬೇಕಾದ ಅಂಶಗಳು

ಕೊರೊನಾ ವೈರಸ್‌ ತಿಳಿಯಬೇಕಾದ ಅಂಶಗಳು

ಕೊರೊನಾವೈರಸ್ ಇದೊಂದು ಮಾರಕ ವೈರಸ್ ಆಗಿದ್ದು ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿದೆ. ಕೊರೊನಾ ವೈರಸ್ ಮನುಷ್ಯನ ದೇಹದ ಮೇಲೆ ದಾಳಿ ಮಾಡಿದಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು, ಕೆಲವು ಸಂದರ್ಭದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಕೊರೊನಾ ವೈರಸ್‌ನಲ್ಲಿ ನಾಲ್ಕು ವಿಧಗಳಿವೆ, ಅವುಗಳಲ್ಲಿ

ಆಲ್ಭಾ ಕೋರ್ನೋವೈರಸ್‌ಗಳಾದ NL63 ಮತ್ತು 229E ಮನುಷ್ಯನ ದೇಹದ ಸೇರಿದಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಬೀಟಾ ಕೋರ್ನೋವೈರಸ್ ಆದ HKU1ಮತ್ತು OC43ಮನುಷ್ಯನ ದೇಹ ಸೇರಿದಾಗ ಆರೋಗ್ಯ ಸ್ಥಿತಿ ಗಂಭೀರವಾಗಿ ಸಾವು ಸಂಭಿವಿಸುವುದು. ಈ ವೈರಸ್ ದಾಳಿಯಾದಾಗ ಮೊದಲಿಗೆ ಶೀತ, ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು.

ಕೊರೊನೊ ವೈರಸ್ ಹೇಗೆ ಹರಡುತ್ತದೆ?

ಕೊರೊನೊ ವೈರಸ್ ಹೇಗೆ ಹರಡುತ್ತದೆ?

ಈ ವೈರಸ್‌ ಸಾಮಾನ್ಯವಾಗಿ ಸೋಂಕು ತಗುಲಿದ ವ್ಯಕ್ತಿಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ

* ಸೋಂಕು ತಗುಲಿದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ

* ಸೋಂಕು ಇರುವ ವ್ಯಕ್ತಿಯನ್ನು ಮುಟ್ಟುವುದು, ಕೈ ಕುಲುಕುವುದು ಮಾಡಿದಾಗ

* ಸೋಂಕು ಇರುವ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದ

ಕೊರೊನಾ ವೈರಸ್ ಲಕ್ಷಣಗಳು

ಕೊರೊನಾ ವೈರಸ್ ಲಕ್ಷಣಗಳು

* ಶೀತ

*ತಲೆನೋವು

* ಕೆಮ್ಮು

* ಗಂಟಲು ಕೆರೆತ

* ಜ್ವರ

* ಸುಸ್ತು

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಕಾಯಿಲೆ ಬೇಗೆ ಹರಡುತ್ತದೆ. ಅದರಲ್ಲೂ ವಯಸ್ಸಾದವರಲ್ಲಿ ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಇರುವುದರಿಂದ ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚು.

ತಡೆಗಟ್ಟುವ ವಿಧಾನ

ತಡೆಗಟ್ಟುವ ವಿಧಾನ

ಕೊರೊನಾ ವೈರಸ್‌ಗೆ ಇದುವರೆಗೆ ಔಷಧಿ ಕಂಡು ಹಿಡಿದಿಲ್ಲ ಆದರೆ ಕೆಲವು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಇದನ್ನು ತಡೆಗಟ್ಟಬಹುದು.

* ಸೋಂಕು ಇರುವ ವ್ಯಕ್ತಿಯಿಂದ ದೂರವಿರಬೆಕು

* ಆಗಾಗ ಕಣ್ಣು, ಬಾಯಿ, ಮೂಗು ಮುಟ್ಟುತ್ತಾ ಇರಬಾರದು.

* ಕೈಗಳನ್ನು ಶುಚಿಯಾಗಿಡಬೇಕು.

* ಸ್ವಲ್ಪ ಹುಷಾರರು ತಪ್ಪಿದರೂ ಸಾಕಷ್ಟು ನೀರು ಕುಡಿದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.

* ಕಾಯಿಲೆಯ ಲಕ್ಷಣ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರನ್ನು ಕಾಣಬೇಕು.

English summary

WHO:Tips To Prevents Coronavirus

WHO’s standard recommendations for the general public to reduce exposure to and transmission of a range of illnesses are as follows, which include hand and respiratory hygiene, and safe food practices
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X