For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಗಾಳಿಯಲ್ಲಿ ಹರಡುವುದರ ಬಗ್ಗೆ WHO ಸ್ಪಷ್ಟೀಕರಣ

|

ಕೊರೊನಾವೈರಸ್ ಗಾಳಿಯಿಂದ ಹರಡುತ್ತದೆ ಎಂಬ ವಿಷಯದ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿದೆ. ಕೆಲ ತಜ್ಞರು ಗಾಳಿ ಮೂಲಕ ಹರಡುವುದಾದರೆ ಕೊರೊನಾ ರೋಗ ಎಲ್ಲರಿಗೂ ಬಾಧಿಸುತ್ತಿತ್ತು, ಇದು ಗಾಳಿಯಲ್ಲಿ ಹರಡಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತೊಂದು ವರ್ಗ ಇಲ್ಲಾ ಕೊರೊನಾವೈರಸ್ ಗಾಳಿಯಲ್ಲಿ ಹರಡುತ್ತದೆ, ಅದಕ್ಕೆ ನಮ್ಮಲ್ಲಿ ಸಾಕ್ಷಿ ಎಂದು ಹೇಳುತ್ತಿದ್ದಾರೆ.

WHO says emerging evidence points to airborne spread of Covid-19

ಕೊರೊನಾವೈರಸ್ ಗಾಳಿಯಿಂದ ಹರಡುವುದೇ, ಇಲ್ಲವೇ ಎಂಬುವುದರ ಕುರಿತು WHO ಏನು ಹೇಳಿದೆ ಎಂದು ನೋಡೋಣ:

ಸ್ಪಷ್ಟೀಕರಣ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಸ್ಪಷ್ಟೀಕರಣ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

WHOನ ಕೋವಿಡ್‌ 19 ಸಾಂಕ್ರಾಮಿಕ ರೋಗದ ಟೆಕ್ನಿಕಲ್ ಲೀಡ್ ಆಗಿರುವ ಮರಿಯಾ ವ್ಯಾನ್ ಕೆರ್ಖೋವ್ 'ಕೊರೊನಾ ವೈರಸ್‌ ಗಾಳಿ ಮೂಲಕ ಹರಡುವ ಸಾಧ್ಯತೆಯಿದ್ದು, ಗಾಳಿ ಕೂಡ ಕೊರೊನಾವೈರಸ್‌ ಹರಡುವ ಒಂದು ಮಾಧ್ಯಮವಾಗಿದೆ ಎಂದು ಹೇಳಿದ್ದಾರೆ.

WHOಗೆ ಓಪನ್ ಲೆಟರ್‌ ಬರೆದಿದ್ದ ತಜ್ಞರು

WHOಗೆ ಓಪನ್ ಲೆಟರ್‌ ಬರೆದಿದ್ದ ತಜ್ಞರು

ವೈದ್ಯಕೀಯ ಕ್ಷೇತ್ರದ ತಜ್ಞರು ಸೈನ್ಸ್ ಜರ್ನಲ್‌ ಪತ್ರಿಕೆಯಲ್ಲಿ ಪ್ರಕಟಿಸಲು ಸಂಶೋಧನಾ ವರದಿ ಸಿದ್ದಪಡಿಸಿದ್ದು ಸಂಶೋಧನೆಯ ಸಾರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಓಪನ್ ಲೆಟರ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. 239 ತಜ್ಞರು ಸೇರಿ ಈ ವರದಿ ಸಿದ್ಧ ಮಾಡಿದ್ದು ವಿಶ್ವದಲ್ಲಿ ಕೊರೊನಾ ವೈರಸ್ ಗಾಳಿಯ ಮೂಲಕವೂ ಹರಡುತ್ತಿದೆ ಎಂಬುವುದಕ್ಕೆ ಸಾಕ್ಷ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಓಪನ್ ಲೆಟರ್‌ ಬರೆದು ತಿಳಿಸಿದ್ದರು. ಜೆನೆವಾ ಮೂಲದ ಏಜೆನ್ಸಿ ಕ್ಲಿನಿಕಲ್ ಇನ್‌ಫೆಕ್ಷನ್ ಡಿಸೀಜ್‌ ಜರ್ನಲ್‌ನಲ್ಲಿ 32 ದೇಶಗಳಿಂದ 239 ವಿಜ್ಞಾನಿಗಳು ಸೇರಿ ತಯಾರಿಸಿದ ಸಂಶೋಧನಾ ವರದಿಯನ್ನು ಸೋಮವಾರ ಪ್ರಕಟಿಸಿತ್ತು. ಆ ವರದಿಯಲ್ಲಿ ವೈರಸ್‌ ಗಾಳಿಯಲ್ಲಿ ಕೂಡ ಜೀವಿಸಿರುತ್ತದೆ, ಅದನ್ನು ಉಸಿರಾಡುವುದರ ಮುಖಾಂತರ ಹರಡುತ್ತದೆ ಎಂದು ಹೇಳಿದೆ.

 ಚಿಕ್ಕ-ಚಿಕ್ಕ ವೈರಸ್‌ ಕಣಗಳು ಗಾಳಿಯಲ್ಲಿರುತ್ತವೆ

ಚಿಕ್ಕ-ಚಿಕ್ಕ ವೈರಸ್‌ ಕಣಗಳು ಗಾಳಿಯಲ್ಲಿರುತ್ತವೆ

ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ವೈರಾಣು ಸ್ವಲ್ಪ ಹೊತ್ತಿನಲ್ಲಿ ನೆಲಕ್ಕೆ ಅಥವಾ ವಸ್ತುಗಳ ಮೇಲೆ ಬೀಳುತ್ತದೆ ಆದ್ದರಿಂದ ಆಗಾಗ ಕೈ ತೊಳೆಯಬೇಕು, ಸ್ಯಾನಿಟೈಸರ್ ಬಳಸಬೇಕು ಎಂದು ಹೇಳಲಾಗಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ ಜೆನೆವಾದಲ್ಲಿ ಮಾತನಾಡುತ್ತಾ ಕೊರೊನಾವೈರಸ್‌ ಗಾಳಿಯಲ್ಲಿ ಹರಡುತ್ತದೆ ಎಂಬುವುದಕ್ಕೆ ಸಾಕ್ಷ್ಯಗಳಿವೆ, ಆದರೆ ಅದುವೇ ನಿಖರ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೆಲವು ಕಡೆಗಳಲ್ಲಿ ಮಾತ್ರ ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ

ಕೆಲವು ಕಡೆಗಳಲ್ಲಿ ಮಾತ್ರ ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ

ತುಂಬಾ ಜನರು ಗುಂಪು-ಗುಂಪಾಗಿ ಇರುವ ಕಡೆ, ಗಾಳಿ ಪ್ರವೇಶ ಸರಿಯಾಗಿ ಇರದ ಕೋಣೆಗಳಲ್ಲಿ ಗಾಳಿ ಮೂಲಕ ಕೊರೊನಾವೈರಸ್‌ ಹರಡುವುದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಇದರ ಕುರಿತು ವೈಜ್ಞಾನಿಕವಾಗಿ ವಿವರ ನೀಡಲಿರುವ WHO

ಮುಂದಿನ ದಿನಗಳಲ್ಲಿ ಇದರ ಕುರಿತು ವೈಜ್ಞಾನಿಕವಾಗಿ ವಿವರ ನೀಡಲಿರುವ WHO

ಇದೀಗ ಕೊರೊನಾವೈರಸ್‌ ಗಾಳಿಯಲ್ಲೂ ಹರಡುವ ಸಾಧ್ಯತೆ ಇರುವುದರಿಂದ ಈ ಕುರಿತು ವೈಜ್ಞಾನಿಕವಾಗಿ ಮುಂದಿನ ದಿನಗಳಲ್ಲಿ ವರದಿ ನೀಡಲಿದ್ದೇವೆ ಎಂದು ಮರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.

ಈ ವೈರಸ್‌ ತಡೆಗಟ್ಟಲು ಮತ್ತಷ್ಟು ಮುನ್ನೆಚ್ಚರಿಕೆವಹಿಸಬೇಕಾಗಿದೆ, ಇದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಸಾಲದು, ಎಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿ ಸೂಕ್ತ ರೀತಿಯ ಮಾಸ್ಕ್ ಧರಿಸಬೇಕಾಗಿದೆ. ಅದರಲ್ಲೂ ಆರೋಗ್ಯ ಕಾರ್ಯಕರ್ತರು ಸೂಕ್ತವಾದ ಮಾಸ್ಕ್ ಧರಿಸಿ, ಕೊರೊನಾವೈರಸ್ ಹರಡದಂತೆ ಮುನ್ನೆಚ್ಚರಿಕೆವಹಿಸಬೇಕಾಗಿದೆ.

English summary

WHO Says Emerging Evidence Points to Airborne Spread of COVID-19

"We have been talking about the possibility of airborne transmission and aerosol transmission as one of the modes of transmission of Covid-19," said WHo covid 19 technical lead Maria Van Kerkhove.
X
Desktop Bottom Promotion