For Quick Alerts
ALLOW NOTIFICATIONS  
For Daily Alerts

ಮಹಿಳೆಯರನ್ನು ಕಾಡುವ ಯೋನಿಸ್ಮಸ್(ಸೆಕ್ಸ್ ವೇಳೆ ನೋವು) ಕಾರಣ, ಚಿಕಿತ್ಸೆ

|

ಯೋನಿಸ್ಮಸ್ (Vaginismus) ಎನ್ನುವುದು ಯೋನಿಯ ಸ್ನಾಯುಗಳು ಸಂಕುಚಿತವಾಗುವ ಸಮಸ್ಯೆಯಾಗಿದ್ದು ಸಾಕಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.

Vaginismus: Types, Causes, Symptoms, Diagnosis And Treatments

ಈ ಸಮಸ್ಯೆ ದಾಂಪತ್ಯ ಸಂಬಂಧದ ಮೇಲೂ ತುಂಬಾ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಇರುವವರಿಗೆ ಲೈಂಗಿಕ ಕ್ರಿಯೆ ವೇಳೆ ವಿಪರೀತ ನೋವು ಉಂಟಾಗುವುದರಿಂದ ಆ ಭಯದಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರಿಸುವುದಿಲ್ಲ, ಈ ಸಮಸ್ಯೆ ಗಂಡ-ಹೆಂಡತಿ ಅನ್ಯೂನ್ಯತೆ ಮೇಲೆ ಗಂಭೀರ ಪರಿಣಾಮ ಬೀರುವುದು.

ನಾವು ಈ ಲೇಖನದಲ್ಲಿ ಯೋನಿಸ್ಮಸ್ ಸಮಸ್ಯೆಗೆ ಕಾರಣವೇನು? ಈ ಸಮಸ್ಯೆ ಹೋಗಲಾಡಿಸಲು ಚಿಕಿತ್ಸೆಯೇನು ಎಂಬುವುದರ ಬಗ್ಗೆ ತಿಳಿಯೋಣ:

ಯೋನಿಸ್ಮಸ್ ಉಂಟಾದಾಗ ಏನಾಗುತ್ತದೆ?

ಯೋನಿಸ್ಮಸ್ ಉಂಟಾದಾಗ ಏನಾಗುತ್ತದೆ?

ಯೋನಿಸ್ಮಸ್ ಸಮಸ್ಯೆ ಸಾಮಾನ್ಯವಾಗಿ ಹದಿಹರೆಯದ ಪ್ರಾಯದಲ್ಲಿ ಅಥವಾ 20ರ ಪ್ರಾಯದಲ್ಲಿ ಕಂಡು ಬರುತ್ತದೆ. ಹದಿಯರೆಯದ ಪ್ರಾಯದಲ್ಲಿ ಟ್ಯಾಂಪೂನ್ ಬಳಸಲು ಪ್ರಾರಂಭಿಸಿದಾಗ ಅಥವಾ ಲೈಂಗಿಕ ಬದುಕು ಪ್ರಾರಂಭವಾದ ಮೇಲೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.

ಈ ರೀತಿಯ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಅಥವಾ ಚರ್ಚಿಸಲು ಅನೇಕ ಮಹಿಳೆಯರು ಹಿಂದೇಟು ಹಾಕುತ್ತಾರೆ, ವೈದ್ಯರಿಗೆ ಇದನ್ನೆಲ್ಲಾ ಹೇಗಪ್ಪಾ ಹೇಳುವುದು ಎಂದು ಮುಜುಗರಪಟ್ಟು ಹೇಳುವುದೇ ಇಲ್ಲ. ಆದರೆ ರೀತಿಯ ಸಮಸ್ಯೆ ಭಯ, ಒತ್ತಡ ಅಥವಾ ಮತ್ತಿತರ ಸೈಕೋಲಾಜಿಕಲ್ ಕಾರಣಗಳಿಂದಾಗಿ ಉಂಟಾಗುತ್ತದೆ.

ಯೋನಿಸ್ಮಸ್ ಸಮಸ್ಯೆ ಎರಡು ರೀತಿಯಾಗಿ ಕಂಡು ಬರುತ್ತದೆ

ಯೋನಿಸ್ಮಸ್ ವಿಧಗಳು

ಯೋನಿಸ್ಮಸ್ ವಿಧಗಳು

1. ಪ್ರೈಮರಿ ವೇಜಿನಿಮಸ್ (PV)

ಈ ರೀತಿಯ ಸಮಸ್ಯೆ ಮೊದಲ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಕಂಡು ಬರುತ್ತದೆ ಅಥವಾ ಮೊದಲ ಬಾರಿಗೆ ಟ್ಯಾಂಪೂನ್ ಬಳಸಿದಾಗ ಕಂಡು ಬರುತ್ತದೆ, ನಂತರ ಸರಿಯಾಗುವುದು. ಆದರೆ ಈ ಸಮಸ್ಯೆ ಹಾಗೇ ಉಳಿದುಕೊಂಡರೆ ಲೈಂಗಿಕ ಸುಖ ಅಥವಾ ತೃಪ್ತಿ ಪಡೆಯಲು ಸಾಧ್ಯವಾಗುವುದಿಲ್ಲ.

2. ಸೆಕೆಂಡರಿ ವೇಜಿಮಸ್:

ಈ ರೀತಿಯ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಕಂಡು ಬರುತ್ತದೆ. ಕೆಲವೊಂದು ಕಾಯಿಲೆಗೆ ಚಿಕಿತ್ಸೆ ಪಡೆದಾಗ, ಮೆನೋಪಾಸ್, ಮಕ್ಕಳಾದ ಮೇಲೆ ಅಥವಾ ಸರ್ಜರಿ ನಂತರ ಈ ರೀತಿಯ ಸಮಸ್ಯೆ ಕಮಡು ಬರುವುದು.

 ಯೋನಿಸ್ಮಸ್‌ಗೆ ಕಾರಣಗಳು

ಯೋನಿಸ್ಮಸ್‌ಗೆ ಕಾರಣಗಳು

ಯೋನಿಸ್ಮಸ್‌ಗೆ ಯಾವುದೋ ಸೈಕೋಲಾಜಿಕಲ್ ಕಾರಣವಿರಬಹುದು ಅಥವಾ ದೈಹಿಕ ಕಾರಣಗಳಿರಬಹುದು. ಇದರಿಂದಾಗಿ ಯೋನಿ ಭಾಗ ಸಂಕುಚಿತಗೊಂಡು ಲೈಂಗಿಕ ಕ್ರಿಯೆ ವೇಳೆ ತುಂಬಾ ನೋವು ಕಂಡು ಬರುವುದು.

ಈ ರೀತಿಯ ಸೈಕೋಲಾಜಿಕಲ್ ಕಾರಣಗಳು ಕೂಡ ಯೋನಿ ಸಂಕುಚಿತವಾಗಲು ಒಂದು ಕಾರಣವಾಗಿದೆ

  • ಹಳೆಯ ದುರ್ಘಟನೆ ಅಂದರೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ
  • ಲೈಂಗಿಕ ಕ್ರಿಯೆ ಬಗ್ಗೆ ಆತಂಕ
  • ಹಳೆಯ ಸಂಬಂಧದ ಸಮಸ್ಯೆ ಅಂದರೆ ಸಂಗಾತಿ ಕ್ರೂರವಾಗಿ ನಡೆದುಕೊಂಡಿದ್ದರೆ
  • ಸೆಕ್ಸ್‌ ಬಗ್ಗೆ ತಪ್ಪಾದ ಭಾವನೆ ಅಥವಾ ಲೈಂಗಿಕ ಕ್ರಿಯೆ ಬಗ್ಗೆ ತಪ್ಪಾದ ತಿಳುವಳಿಕೆ
  • ಲೈಂಗಿಕ ಕ್ರಿಯೆ ನಡೆಸುವಾಗ ನೋವಾಗುತ್ತದೆ ಎಂಬ ಭಯ
  • ಮದುವೆಯ ಕೆಟ್ಟ ಅನುಭವ
  • ನಿಯಂತ್ರಣ ಕಳೆದುಕೊಳ್ಳುತ್ತೇವೆ ಎಂಬ ಆತಂಕ
  •  ದೈಹಿಕ ಕಾರಣಗಳು

    ದೈಹಿಕ ಕಾರಣಗಳು

    • ಸರ್ಜರಿ
    • ಮೂತ್ರ ಸೋಂಕು
    • ಯೋನಿ ಭಾಗ ಒಣಗಿರುವುದು
    • ಮಗುವಾದ ಬಳಿಕ
    • ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ
    • ಕೆಲವೊಂದು ಔಷಧಿಯ ಅಡ್ಡಪರಿಣಾಮ
    • ಯೋನಿಸ್ಮಸ್ ಲಕ್ಷಣಗಳು

      ಯೋನಿಸ್ಮಸ್ ಲಕ್ಷಣಗಳು

      • ಲೈಂಗಿಕಕ್ರಿಯೆಯಲ್ಲಿ ತೊಡಗಿದಾಗ ನೋವು
      • ಟ್ಯಾಂಪೂನ್ ಹಾಕುವಾಗ ನೋವು ಉಂಟಾಗುವುದು
      • ಯೋನಿ ಭಾಗ ಪರೀಕ್ಷಿಸುವಾಗ ನೋವು
      • ಯೋನಿ ಭಾಗ ಅಗಲ ಮಾಡುವಾಗ ತುಂಬಾ ನೋವು (ನಿಮ್ಮ ಸಂಗಾತಿ ಸೆಕ್ಸ್ ವೇಳೆ ಪ್ರಯತ್ನಿಸುವಾಗ)
      • ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುವುದು
      • ಯೋನಿ ಭಾಗದಲ್ಲಿ ಉರಿ
      • ಸೆಕ್ಸ್ ವೇಳೆ ಉಸಿರಾಟದಲ್ಲಿ ತೊಂದರೆ(ಭಯದಿಂದಾಗಿ)
      •  ಚಿಕಿತ್ಸೆ:

        ಚಿಕಿತ್ಸೆ:

        ಹೈಮೆನೆಕ್ಟಮಿ:ಸರ್ಜರಿ ಮೂಲಕ ಈ ರೀತಿಯ ಸಮಸ್ಯೆಯನ್ನು ಸರಿಪಡಿಸಲಾಗುವುದು.

        ಸೆಕ್ಸ್‌ ಥೆರಪಿ: ಈ ರೀತಿಯ ಸಮಸ್ಯೆ ಇರುವವರು ಸೆಕ್ಸ್ ಥೆರಪಿ ಪಡೆದುಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು. ಈ ರೀತಿಯ ಸಮಸ್ಯೆ ಇರುವವರು ಲೈಂಗಿಕ ತಜ್ಞರನ್ನು ಕಂಡು ಸೂಕ್ತ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು

        ವೇಜಿನಲ್ ಡಯಾಲೇಟರ್: ಈ ಮೂಲಕ ಯೋನಿ ಫ್ಲೆಕ್ಸಿಬಲ್ ಆಗುವಂತೆ ಮಾಡಲಾಗುವುದು

        ಮಸಾಜ್: ಯೋಗ, ಮಸಾಜ್ ಹಾಗೂ ಉಸಿರಾಟದ ವ್ಯಾಯಾಮ ಮೂಲಕ ಕೂಡ ಈ ಸಮಸ್ಯೆ ಪರಿಹರಿಸಬಹುದು.

English summary

Vaginismus: Types, Causes, Symptoms, Diagnosis And Treatments

Vaginismus usually starts during teenage or early twenties when a girl starts to use tampons or have sexual intercourse for the first time. However, it can also start later in life
X
Desktop Bottom Promotion