For Quick Alerts
ALLOW NOTIFICATIONS  
For Daily Alerts

ಬಜೆಟ್‌ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?

|

2023ರ ಕೇಂದ್ರ ಬಜೆಟ್‌ನಲ್ಲಿ 2047ರಷ್ಟಿಗೆ ಭಾರತದಿಂದ ಸಿಕೆಲ್‌ ಸೆಲ್‌ ಅನಿಮಿಯಾ ಸಂಪೂರ್ಣವಾಗಿ ಹೋಗಲಾಡಿಸಲು ಮಿಷನ್‌ ರೂಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

Sickle Cell anemia

ಈ ಸಿಕಲ್‌ ಸೆಲ್ ಅನಿಮಿಯಾ ಎಂದರೇನು? ಇದು ಹೇಗೆ ಬರುತ್ತದೆ, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಮಗುವಿಗೆ ಸಿಕಲ್‌ ಸೆಲ್ ಅನಿಮಿಯಾ ಇದ್ದರೆ ಬದುಕಿವುದೇ?'

ಮಗುವಿಗೆ ಸಿಕಲ್‌ ಸೆಲ್ ಅನಿಮಿಯಾ ಇದ್ದರೆ ಬದುಕಿವುದೇ?'

ಈಗ ತಂತ್ರಜ್ಞಾನ ತುಂಬಾನೇ ಮುಂದುವರೆದಿದೆ, ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಈ ಮಗು ಬೆಳೆದು 50 ವರ್ಷದವರೆಗೆ ಜೀವನ ನಡೆಸಬಹುದು. ಯಾರಿಗೆ ಈ ಸಮಸ್ಯೆ ಬರುತ್ತದೋ ಅವರಿಗೆ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯಕರ ರಕ್ತ ಕಣಗಳು ಇಲ್ಲದಿದ್ದರೆ ರಕ್ತಹೀನತೆ ಉಂಟಾಗುವುದು. ಈ ಸ್ಥಿತಿಗೆ ಸಿಕಲ್ ಸೆಲ್‌ ಅನಿಮಿಯಾ ಉಂಟಾಗುವುದು.

ಈ ಹಿಂದೆ ಸೆಕಲ್ ಸೆಲ್ ಅನಿಮಿಯಾ ಇರುವ ಮಗು ಜನಿಸಿದರೆ ಕಷ್ಟವಾಗಿತ್ತು

ಈ ಹಿಂದೆ ಜನಿಸಿದ ಮಗುವಿಗೆ ಸೆಕಲ್ ಸೆಲ್ ಅನಿಮಿಯಾ ಇದ್ದರೆ ಬದುಕುವುದು ಕಷ್ಟವಿತ್ತು, ಅದು ಪ್ರೌಢಾವಸ್ಥೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪುವ ಸಾಧ್ಯತೆ ಇತ್ತು, ಆದರೆ ತಂತ್ರಜ್ಞಾನ ಬೆಳೆದಿರುವುದರಿಂದ ಈಗ ಮಗುವಿನಲ್ಲಿ ಸೆಕಲ್ ಸೆಲ್‌ ಅನಿಮಿಯಾ ಇದ್ದರೆ 50 ವರ್ಷದವರೆಗೆ ಬದುಕುತ್ತಾರೆ.

ಆದರೆ ಬಹುತೇಕ ಜನರಿಗೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗಲ್ಲ.

ಯಾರಿಗೆ ಸಿಕಲ್ ಸೆಲ್‌ ಅನಿಮಿಯಾ ಕಾಡುವುದು?

ಯಾರಿಗೆ ಸಿಕಲ್ ಸೆಲ್‌ ಅನಿಮಿಯಾ ಕಾಡುವುದು?

ಇದು ಅಪರೂಪದ ಕಾಯಿಲೆಯಾಗಿದ್ದು ವಂಶವಾಹಿಯಾಗಿ ಬರುವ ಕಾಯಿಲೆಯಾಗಿದೆ. ಇನ್ನು ಮಲೇರಿಯಾ ಬಂದ್ರೆ ಕೂಡ ಈ ಬಗೆಯ ಸಮಸ್ಯೆ ಕಂಡು ಬರುವುದು. ಈ ಜೀನ್‌ ಅನ್ನು ಕೂಡ ಸಿಕಲ್‌ ಸೆಲ್‌ ಅನಿಮಿಯಾ ಎಂದು ಕರೆಯಲಾಗುವುದು. ಸಿಕಲ್‌ ಸೆಲ್ ಅನಿಮಿಯಾ ಸಮಸ್ಯೆ ವಿಶ್ವದಲ್ಲಿ ಹೆಚ್ಚಾಗಿ ಕಪ್ಪು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಬಗೆಯ ಸಮಸ್ಯೆ ಯುರೋಪಿಯನ್, ಮಧ್ಯ ಪ್ರಾಚ್ಯ ಹಾಗೂ ಭಾರತದಲ್ಲಿ ಕಮಡು ಬರುವುದು.

ಸಿಕಲ್‌ ಸೆಲ್ ಅನಿಮಿಯಾದ ಲಕ್ಷಣಗಳೇನು?

ಸಿಕಲ್‌ ಸೆಲ್ ಅನಿಮಿಯಾದ ಲಕ್ಷಣಗಳೇನು?

ಮಗುವಿಗೆ ಸಿಕಲ್‌ ಸೆಲ್ ಅನಿಮಿಯಾ ಸಮಸ್ಯೆಯಿದ್ದರೆ ಮೊದಲಿಗೆ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ, ಮಕ್ಕಳಲ್ಲಿ ಲಕ್ಷಣಗಳು ಕಂಡು ಬರುವುದೆಂದರೆ ಅವರು ತುಂಬಾ ಸುಸ್ತಾಗುತ್ತಾರೆ, ಕೈ ಹಾಗೂ ಕಾಲುಗಳಲ್ಲಿ ಊತ ಕಂಡು ಬರುವುದು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಇದರಿಂದ ಬ್ಯಾಕ್ಟಿರಿಯಾ ಸೋಂಕು ಹೆಚ್ಚುವುದು. ಸಿಕಲ್ ಸೆಲ್‌ ಅನಿಮಿಯಾ ಇರುವ ಮಕ್ಕಳು ಬೆಳೆಯುತ್ತಿದ್ದಂತೆ ಅವರಲ್ಲಿ ರೋಗ ಲಕ್ಷಣಗಳು ಮತ್ತಷ್ಟು ಗಂಭೀರವಾಗುವುದು, ಆ ಮಕ್ಕಳ ಅಂಗಾಂಗಗಳಿಗೆ ಸಾಕಷ್ಟು ಆಮ್ಲಜನಕ ದೊರೆಯುವುದಿಲ್ಲ. ಇದರಿಂದ ಹೃದಯದ ಸಮಸ್ಯೆ, ಕಿಡ್ನಿ, ನರಗಳ ಸಮಸ್ಯೆ ಹಾಗೂ ಲಿವರ್‌ಗೆ ಹಾನಿಯುಂಟಾಗುವುದು.

ಸಿಕಲ್ ಸೆಲ್ ಅನಿಮಿಯಾಗೆ ಕಾರಣವೇನು?

ಸಿಕಲ್‌ ಸೆಲ್‌ ಅನಿಮಿಯಾ ಪೋಷಕರಿಂದ ಮಗುವಿಗೆ ಬರುತ್ತದೆ, ಈ ಜೀನ್ ಇದ್ದರೆ ಸಾಮಾನ್ಯ ರಕ್ತಕಣಗಳನ್ನು ಉತ್ಪಾದಿಸಲು ಬಿಡುವುದಿಲ್ಲ.

 ಸಿಕಲ್ ಸೆಲ್ ಅನಿಮಿಯಾ ರಕ್ತಕಣದ ಮೇಲೆ ಹೇಗೆ ಪರಿಣಾಮ ಬೀರುವುದು?

ಸಿಕಲ್ ಸೆಲ್ ಅನಿಮಿಯಾ ರಕ್ತಕಣದ ಮೇಲೆ ಹೇಗೆ ಪರಿಣಾಮ ಬೀರುವುದು?

ಸಾಮಾನ್ಯ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಇರುತ್ತದೆ, ಇದು ಪ್ರೊಟೀನ್‌ ಅಂಶವಾಗಿದೆ. ಹೀಮೋಗ್ಲೋಬಿನ್ ಜೀನ್‌ ಮ್ಯೂಟೇಟ್‌ ಆದಾಗ ಸಿಕಲ್‌ ಸೆಲ್‌ ಅನಿಮಿಯಾ ರಕ್ತ ನಾಳಗಳಿಗೆ ಆಮ್ಲಜನಕ ಪೂರೈಕೆಯಾಗುವುದಿಲ್ಲ. ಏಕೆಂದರೆ:

* ಸಾಮಾನ್ಯ ಹಿಮೋಗ್ಲೋಬಿನ್ ದ್ರವದ ಜೊತೆಗೆ ಕರಗುವುದು, ಅದೇ ಅಸಹಜ ಹೀಮೋಗ್ಲೋಬಿನ್‌ ದ್ರವದಲ್ಲಿ ಕರಗುವುದಿಲ್ಲ, ಗಂಟುಗಳನ್ನು ರೂಪಿಸುತ್ತದೆ, ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗುವುದು.

* ಸಹಜ ರಕ್ತಕಣ 120 ದಿನಗಳವರೆಗೆ ಇರುತ್ತದೆ. ಅದೇ ಸಿಕಲ್ ಸೆಲ್‌ 10ರಿಂದ 20 ದಿನಗಳ ಒಳಗೆ ನಾಶವಾಗುವುದು, ರಕ್ತ ಕಣಗಳು ಸಾಯುವಾಗ ಹೊಸ ರಕ್ತಕಣಗಳು ಉತ್ಪತ್ತಿಯಾಗುವುದು ಸಹಜ, ಆದರೆ ಸಿಕಲ್ ಸೆಲ್ ಸಮಸ್ಯೆ ಇರುವವರಿಗೆ ರಕ್ತ ಕಣಗಳ ಉತ್ಪತ್ತಿಗೆ ತೊಂದರೆಯಾಗುವುದು.

ಸಿಕಲ್ ಸೆಲ್ ಅನಿಮಿಯಾ ಲಕ್ಷಣಗಳು

ಸಿಕಲ್ ಸೆಲ್ ಅನಿಮಿಯಾ ಲಕ್ಷಣಗಳು

* ತುಂಬಾ ನೋವು

* ಚೂರಿಯಿಂದ ಚುಚ್ಚಿದಂತೆ ನೋವಾಗುವುದು

* ಕಿಬ್ಬೊಟ್ಟೆ, ಬೆನ್ನು, ಕಾಲಿನಲ್ಲಿ ನೋವು ಉಂಟಾಗುವುದು.

* ತುಂಬಾ ಎದೆ ನೋವು

* ಕೆಮ್ಮು

* ಜ್ವರ

* ಉಸಿರಾಟಕ್ಕೆ ತೊಂದರೆ

* ಬಿಳುಚಿಕೊಂಡ ತ್ವಚೆ

* ಸುಸ್ತು, ತಲೆಸುತ್ತು

ಸ್ಟ್ರೋಕ್ ಉಂಟಾಗುವ ಮುನ್ನ

* ತುಂಬಾ ತಲೆನೋವು

* ಸುಸ್ತು

* ಮಾತನಡಲು ತೊಂದರೆ

* ನಡೆದಾಡಲು ಕಷ್ಟವಾಗುವುದು

* ಬ್ಯಾಕ್ಟಿರಿಯಾ ಸೋಂಕು

ಕಿಡ್ನಿಗೆ ತೊಂದರೆ ಉಂಟಾಗಿದ್ದರೆ

* ಆಗಾಗ ಮೂತ್ರ ವಿಸರ್ಜನೆ

* ತಲೆಸುತ್ತು

* ಹೊಟ್ಟೆ ಹಾಳಾಗುವುದು

* ಕೈ-ಕಾಲುಗಳಲ್ಲಿ ಊತ

* ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಬರುವುದು

* ಕಣ್ಣುಗಳಲ್ಲಿ ಊತ

* ನಿದ್ದೆಗೆ ತೊಂದರೆ

* ಗಮನಹರಿಸಲು ತೊಂದರೆ

* ಮೈಕೈ ನೋವು

* ತ್ವಚೆ ಬಣ್ಣ ತುಂಬಾ ಕಪ್ಪಗಾಗುವುದು

ಈ ಬಗೆಯ ಸಮಸ್ಯೆ ಕಂಡು ಬರುವುದು.

ಮಗು ಹುಟ್ಟುವುದಕ್ಕೆ ಮೊದಲೇ ಈ ತೊಂದರೆ ಪತ್ತೆ ಮಾಡಬಹುದೇ?

ಗರ್ಭದಲ್ಲಿ ಇರುವಾಗಲೇ ಮಗುವಿಗೆ ಸಿಕಲ್ ಸೆಲ್‌ ಸಮಸ್ಯೆ ಇದ್ದರೆ ತಿಳಿದು ಬರುತ್ತದೆ.

ಸಿಕಲ್ ಸೆಲ್‌ ಅನಿಮಿಯಾ ತಡೆಗಟ್ಟಬಹುದೇ?

ಪೋಷಕರಿಗೆ ರಕ್ತ ಪರೀಕ್ಷೆ ಮಾಡಿದಾಗ ಅವರಲ್ಲಿ ಸಿಕಲ್ ಸೆಲ್ ಲಕ್ಷಣಗಳಿದ್ದರೆ ಅವರಿಗೆ ಜನಿಸುವ ಮಕ್ಕಳಿಗೆ ಈ ಸಮಸ್ಯೆ ಬರಬಹುದು.

English summary

Union Budget 2023: FM announces mission to eliminate Sickle Cell anemia by 2047; Know All about Sickle Cell anemia

Sickle Cell anemia: what are the reason for this, how to know baby have sickle cell anemia read on...
X
Desktop Bottom Promotion