For Quick Alerts
ALLOW NOTIFICATIONS  
For Daily Alerts

ಕೊರೊನಾ ಜೊತೆಗೆ ಕಾಲರಾ ಭಯ, ಮುನ್ನೆಚ್ಚರಿಕೆ ಕ್ರಮಗಳೇನು?

|

2020ರಲ್ಲಿ ಒಂದರ ಹಿಂದೆ ಮತ್ತೊಂದು ಭಯಾನಕ ರೋಗಗಳು ಕಾಲಿಡುತ್ತಿವೆ. ಕೊರೊನಾ ಎಂಬ ಮಹಾಮಾರಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿರುವಾಗಲೇ H1N1,ಕಾಲರಾ, ಹಕ್ಕಿ ಜ್ವರ ಮುಂತಾದ ರೋಗಳು ಪತ್ತೆಯಾಗಿದ್ದು ಈ ರೋಗಗಳಿಂದ ಪಾರಾಗಲು ಆರೋಗ್ಯ ಹಾಗೂ ಶುಚಿತ್ವದ ಕಡೆಗೆ ಸಾಕಷ್ಟು ಮುನ್ನಚ್ಚರಿಕೆವಹಿಸಬೇಕಾಗಿದೆ.

Symptoms Of Cholera & How To Prevent It | Boldsky Kannada
cholera symptoms

ಇದೀಗ ಬೆಂಗಳೂರಿನಲ್ಲಿ ಕೊರೊನಾ ಜೊತೆಗೆ ಕಾಲರಾ ರೋಗದ ಭೀತಿ ಶುರುವಾಗಿದೆ. ಜನರು ಬೀದಿ ಬದಿಯ ಆಹಾರಗಳನ್ನು ಸೇವಿಸದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕಾಲರಾ ಆಹರ ಹಾಗೂ ನೀರಿನಿಂದ ಹರಡುವ ರೋಗವಾಗಿದೆ.

ಇಲ್ಲಿ ನಾವು ಕಾಲರಾ ರೋಗದ ಲಕ್ಷಣಗಳು ಹಾಗೂ ಇದು ಹರಡುವುದು ಹೇಗೆ, ಇದನ್ನು ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ನೀಡಿದ್ದೇವೆ ನೋಡಿ:

 ಕಾಲರಾದ ಲಕ್ಷಣಗಳು

ಕಾಲರಾದ ಲಕ್ಷಣಗಳು

ಮೊದಲಿಗೆ ವಾಂತಿ-ಭೇದಿ ಶುರುವಾಗುತ್ತದೆ , ಇದನ್ನು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

* ಒಂದೆರಡು ಬಾರಿ ವಾಂತಿ-ಭೇದಿ ಉಂಟಾದರೆ ಕೂಡಲೇ ವೈದ್ಯರಿಗೆ ತೋರಿಸಿ, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

ರೋಗ ಹರಡುವುದು ಹೇಗೆ?

ರೋಗ ಹರಡುವುದು ಹೇಗೆ?

* ಸೋಂಕಿತನ ಮಲದಿಂದ ಕೂಡ ಹರಡುವುದು

* ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ಬೇಗ ಹರಡುತ್ತದೆ

* ನಿಂತ ನೀರಿನಿಂದ ಕೂಡ ಹರಡುತ್ತಿದೆ.

* ಸೋಂಕಿತ ವ್ಯಕ್ತಿಯನ್ನು ಮುಟ್ಟುವುದಿಂದ, ಕೈ ಕುಲುಕುವುದರಿಂದ ಕೂಡ ಹರಡುತ್ತದೆ

ಚಿಕಿತ್ಸೆ

ಚಿಕಿತ್ಸೆ

* ವಾಂತಿ-ಭೇದಿ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

* ಭೇದಿಯ ಮೂಲಕ ನಷ್ಟವಾದ ದೇಹದ ಜೀವ ದ್ರವ ಮತ್ತು ಲವಣಗಳನ್ನು ದೇಹಕ್ಕೆ ಸೇರಿಸಲು ಒಆರ್ ಎಸ್ ನಂತಹ ದ್ರವ ಕುಡಿಸಬೇಕು.

* ವಾಂತಿ-ಭೇದಿಯಾದವರಿಗೆ ಸಕ್ಕರೆ ಮತ್ತು ಉಪ್ಪನ್ನು ಸೇರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಸಬೇಕು

* ತೀರಾ ನಿತ್ರಾಣವಾಗಿದ್ದರೆ ಗ್ಲೂಕೋಸ್ ಹಾಕಿಸಬೇಕು.

ಸೋಂಕು ತಗುಲಿದ ಸುಮಾರು 20 ಜನರಲ್ಲಿ ಒಬ್ಬರಿಗೆ ತೀವ್ರ ಲಕ್ಷಣಗಳು ಕಂಡುಬರುತ್ತವೆ. ಅತಿಯಾದ ವಾಂತಿ, ಭೇದಿ, ಮತ್ತು ಕಾಲು ಸೆಳೆತ ಕಂಡುಬರುತ್ತದೆ. ಇಂತಹ ವ್ಯಕ್ತಿಗಳಲ್ಲಿ ದೇಹ ನಿರ್ಜಲೀಕರಣ ಆಗುತ್ತದೆ. ಕೆಲವೇ ಗಂಟೆಗಳಲ್ಲೂ ಮರಣ ಹೊಂದಬಹುದು.

ಕಾಲರಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳು

ಕಾಲರಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳು

* ಸುತ್ತ-ಮುತ್ತಲಿನ ವಾತಾವರಣದಲ್ಲಿ ಸೋಂಕು ಕಂಡು ಬಂದರೆ ಆ ಪ್ರದೇಶದ ವ್ಯಕ್ತಿಗಳು ತುಂಬಾ ಜಾಗ್ರತೆವಹಿಸಬೇಕು.

* ನೀರನ್ನು ಚೆನ್ನಾಗಿ ಕುದಿಸಿ ಕುಡಿಯಬೇಕು.

* ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.

* ಹಣ್ಣುಗಳನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆ ಸುಲಿದು ತಿನ್ನಬೇಕು.

* ಕೈಗಳ ಸ್ವಚ್ಛತೆಗೆ ಹಚ್ಚಿನ ಆದ್ಯತೆ ನೀಡಬೇಕು.

* ಕಾಲರಾ ರೋಗಿಗಳ ಆರೈಕೆ ಮಾಡುವಾಗ ಮಾಸ್ಕ್‌ ಧರಿಸಬೇಕು

* ಅವರ ಬಟ್ಟೆಯನ್ನು ಶುಚಿ ಮಾಡುವಾಗ ಗ್ಲೌಸ್ ಹಾಗೂ ಮಾಸ್ಕ್ ಧರಿಸಬೇಕು. ಆ ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿ ತೊಳೆಯಿರಿ.

English summary

Symptoms Of Cholera And How to Prevent It?

Cholera is an infectious disease that causes severe watery diarrhea, caused by eating food or drinking water contaminated with a bacterium.
X
Desktop Bottom Promotion