For Quick Alerts
ALLOW NOTIFICATIONS  
For Daily Alerts

ಏನಿದು ಸ್ಟಿಫ್ ಪರ್ಸನ್ ಸಿಂಡ್ರೋಮ್: ಇದರ ಕಾರಣಗಳು ಹಾಗೂ ಲಕ್ಷಣಗಳೇನು?

|

ಹಾಲಿವುಡ್ ಸಿನಿಮಾ 'ಟೈಟಾನಿಕ್'ನ ಖ್ಯಾತ ಗಾಯಕಿ ಸೆಲಿನ್ ಡಿಯೋನ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ಮೂಲಕ ತುಂಬಾ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತನ್ನ ಆರೋಗ್ಯ ಹದಗೆಟ್ಟ ಕಾರಣ, ತನ್ನ ಅನೇಕ ಸಂಗೀತ ಕಚೇರಿಗಳನ್ನು ರದ್ದುಗೊಳಿಸಬೇಕಾಯಿತು ಮತ್ತು ಮುಂದೂಡಬೇಕಾಯಿತು ಎಂದು ಸೆಲಿನ್ ಹೇಳಿದ್ದರು.

123

ಆ ವೀಡಿಯೊದಲ್ಲಿ, ತನ್ನ ಲಕ್ಷಾಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ತಾನು ಸ್ಟಿಫ್ ಪರ್ಸನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದಾರೆ. ಇದು ಅಪರೂಪದ ಮತ್ತು ಗುಣಪಡಿಸಲಾಗದ ನರವೈಜ್ಞಾನಿಕ ಕಾಯಿಲೆಯಾಗಿದ್ದು ಅದು ವ್ಯಕ್ತಿಯನ್ನು ದುರ್ಬಲಗೊಳಿಸುವ ಸ್ನಾಯು ಸೆಳೆತವನ್ನು ಉಂಟುಮಾಡುತ್ತದೆ. ಈ ಕಾಯಿಲೆಯ ಬಗ್ಗೆ ಇನ್ನಷ್ಟು ಮಾಹಿತಿ ನಿಮಗಾಗಿ.

ಸ್ಟಿಫ್ ಪರ್ಸನ್ ಸಿಂಡ್ರೋಮ್ ಎಂದರೇನು?

ಸ್ಟಿಫ್ ಪರ್ಸನ್ ಸಿಂಡ್ರೋಮ್ ಫೌಂಡೇಶನ್ ಪ್ರಕಾರ, ಈ ಅಸ್ವಸ್ಥತೆಯು ಕೇಂದ್ರ ನರಮಂಡಲದ ಮೇಲೆ , ವಿಶೇಷವಾಗಿ ಮೆದುಳು ಮತ್ತು ಬೆನ್ನುಹುರಿ ಪರಿಣಾಮ ಬೀರುತ್ತದೆ.
ಈ ರೋಗವು ರೋಗಿಯನ್ನು ಅಂಗವಿಕಲರನ್ನಾಗಿ ಮಾಡಬಹುದು, ವೀಲ್‌ಚೇರ್ ಮೇಲೆ ಅವಲಂಬಿತರಾಗವಂತೆ ಮಾಡಬಹುದು ಅಥವಾ ಸಂಪೂರ್ಣವಾಗಿ ಹಾಸಿಗೆ ಹಿಡಿಯಬಹುದು.ಅವರಿಗೆ ಕೆಲಸ ಮಾಡಲು ಕಷ್ಟವಾಗಬಹುದು, ಹಾಗೆಯೇ ತಮ್ಮನ್ನು ತಾವು ಕಾಳಜಿ ವಹಿಸಲು ಸಮರ್ಥರಾಗಿರುವುದಿಲ್ಲ.

ಈ ನರವೈಜ್ಞಾನಿಕ ಕಾಯಿಲೆಯು ಕೆಲವೊಂದು ಚಿಹ್ನೆಗಳನ್ನು ತೋರಿಸುತ್ತದೆ, ಇದು ಹೆಚ್ಚು ಬಿಗಿತ, ದುರ್ಬಲಗೊಳಿಸುವ ನೋವು, ದೀರ್ಘಕಾಲದ ಚಡಪಡಿಕೆ ಮತ್ತು ಸ್ನಾಯು ಸೆಳೆತಗಳಿಂದ ಕೂಡಿದೆ. ಸ್ನಾಯು ಸೆಳೆತವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಅದು ಕೀಲುಗಳ ಸ್ಥಾನಪಲ್ಲಟ ಮತ್ತು ಮೂಳೆಗಳ ಮುರಿಯವಿಕೆಗೂ ಕಾರಣವಾಗಬಹುದು. ಈ ರೋಗವನ್ನು ಹ್ಯೂಮನ್ ಸ್ಟ್ಯಾಚ್ಯೂ ಡಿಸೀಸ್ ಅಥವಾ ಟಿನ್ ಮ್ಯಾನ್ ಡಿಸೀಸ್ ಎಂದೂ ಕರೆಯುತ್ತಾರೆ. ಈ ರೋಗ ಉಂಟಾದಾಗ ಸೆಳೆತ ಇದ್ದಕ್ಕಿದ್ದಂತೆ ಮತ್ತು ಯಾವುದೇ ಮುನ್ಸೂಚನೆಯಿಲ್ಲದೆ ದೇಹದಾದ್ಯಂತ ಬಂದಾಗ, ರೋಗಿ ಮೇಲಿನಿಂದ ಕೆಳಗಿನವರೆಗೂ ಹೆಪ್ಪುಗಟ್ಟುತ್ತಾನೆ. ಪ್ರೀತಿಪಾತ್ರರ ನಿಧನದಿಂದ ಉಂಟಾಗುವ ತೀವ್ರ ಒತ್ತಡ ಮತ್ತು ಭಾವನಾತ್ಮಕ ಆಘಾತವು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಬಹುದು ಎಂದು ವೈದ್ಯರು ನಂಬುತ್ತಾರೆ.

ಆಟೋಇಮ್ಯೂನ್ ಕಾಯಿಲೆ ಅಥವಾ ಸ್ವಯಂ ನಿರೋಧಕ ಅಸ್ವಸ್ಥತೆ ಎಂದರೇನು?
ಯಾವುದೇ ರೀತಿಯ ಸೋಂಕಿನಿಂದ ನಮ್ಮನ್ನು ರಕ್ಷಿಸಲು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಬಾಹ್ಯ ಬ್ಯಾಕ್ಟೀರಿಯಾ, ವೈರಸ್ ದೇಹವನ್ನು ಪ್ರವೇಶಿಸಿದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಅದರ ವಿರುದ್ಧ ಹೋರಾಡುತ್ತದೆ. ಆದರೆ, ಕೆಲವೊಮ್ಮೆ ಗೊತ್ತಿಲ್ಲದೇ ಇದು ದೇಹದ ಸ್ವಂತ ಕೋಶಗಳ ಮೇಲೆ ದಾಳಿ ಮಾಡುತ್ತದೆ, ಈ ಸ್ಥಿತಿಯನ್ನು ಆಟೋಇಮ್ಯೂನ್ ಕಾಯಿಲೆ ಎಂದು ಕರೆಯಲಾಗುತ್ತದೆ.

ಸ್ಟಿಫ್ ಪರ್ಸನ್ ಸಿಂಡ್ರೋಮ್‌ನ ಲಕ್ಷಣಗಳು ಯಾವುವು?
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ನಿಮ್ಮ ಮುಂಡ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುತ್ತವೆ. ಆರಂಭದಲ್ಲಿ, ಸ್ನಾಯುಗಳ ಬಿಗಿತವು ಆಗಾಗ ಬರುತ್ತದೆ, ಆದರೆ ನಂತರ ಈ ಬಿಗಿತವು ನಿರಂತರವಾಗಿರುತ್ತದೆ. ಕಾಲಾನಂತರದಲ್ಲಿ, ಕಾಲುಗಳ ಸ್ನಾಯುಗಳು ಗಟ್ಟಿಯಾಗುತ್ತವೆ, ನಂತರ ಕೈ ಮತ್ತು ಮುಖದ ಸ್ನಾಯುಗಳು ಸಹ ಗಟ್ಟಿಯಾಗುತ್ತವೆ. ಚಿಕಿತ್ಸೆಯಿಂದ ಈ ಲಕ್ಷಣಗಳನ್ನು ಕಡಿಮೆ ಮಾಡಬಹುದು.

ಸ್ಟಿಫ್ ಪರ್ಸನ್ ಸಿಂಡ್ರೋಮ್ ಅನ್ನು ಹೇಗೆ ತಪ್ಪಿಸಬಹುದು?
ಕ್ಲೀವ್‌ಲ್ಯಾಂಡ್ ಕ್ಲಿನಿಕ್ ವೆಬ್‌ಸೈಟ್‌ನ ಪ್ರಕಾರ, ಸ್ಟಿಫ್ ಪರ್ಸನ್ ಸಿಂಡ್ರೋಮ್‌ಗೆ ಕಾರಣವೇನು ಎಂದು ವಿಜ್ಞಾನಿಗಳಿಗೆ ಪ್ರಸ್ತುತ ತಿಳಿದಿಲ್ಲದ ಕಾರಣ, ಅದನ್ನು ತಡೆಯಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ ನಿಮ್ಮ ಜೀವನಶೈಲಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಉತ್ತಮ.

ಸ್ಟಿಫ್ ಪರ್ಸನ್ ಸಿಂಡ್ರೋಮ್‌ನ ತೊಡಕುಗಳು ಯಾವುವು?
ಸ್ಟಿಫ್ ಪರ್ಸನ್ ಸಿಂಡ್ರೋಮ್ ನಲ್ಲಿ ರೋಗಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲು ಕಷ್ಟವಾಗುತ್ತದೆ ಮತ್ತು ಸ್ನಾಯುಗಳಲ್ಲಿ ಬಿಗಿತ ಇರುತ್ತದೆ.
ಆತಂಕ ಮತ್ತು ಒತ್ತಡವೂ ಕಾಡುತ್ತದೆ
ತೀವ್ರವಾದ ಸ್ನಾಯುಗಳ ಬಿಗಿತವು ಕೀಲುಗಳು ಅಥವಾ ಮುರಿದ ಮೂಳೆಗಳಿಗೆ ಕಾರಣವಾಗಬಹುದು.
ರೋಗಿಗಳು ಆಗಾಗ ಬೀಳುತ್ತಾರೆ
ಅತಿಯಾಗಿ ಬೆವರುತ್ತಾರೆ
ಸ್ನಾಯುಗಳ ಈ ಬಿಗಿತವು ತನ್ನ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ಸೆಲೀನ್ ತನ್ನ ವೀಡಿಯೊದಲ್ಲಿ ಹೇಳಿದ್ದಾರೆ. ಅವರಿಗೆ ಕೆಲವೊಮ್ಮೆ ನಡೆಯಲು ತೊಂದರೆಯಾಗುತ್ತದೆ, ಕೆಲವೊಮ್ಮೆ ಆಕೆಗೆ ಮೊದಲಿನಂತೆ ಹಾಡಲು ಕಷ್ಟವಾಗುತ್ತದೆ.

English summary

Stiff Person Syndrome: Symptoms, Causes, Treatment in Kannada

Here we talking about Stiff Person Syndrome Know its causes and Symptoms in Kannada, read on
Story first published: Sunday, December 18, 2022, 17:00 [IST]
X
Desktop Bottom Promotion