For Quick Alerts
ALLOW NOTIFICATIONS  
For Daily Alerts

ಪ್ರತಿನಿತ್ಯ ಹ್ಯಾಂಡ್‌ಸ್ಯಾನಿಟೈಸರ್ ಬಳಸಿದರೆ ದೇಹದ ಮೇಲಾಗುವ ಕೆಟ್ಟ ಪರಿಣಾಮಗಳಿವು

|

ಹ್ಯಾಂಡ್‌ಸ್ಯಾನಿಟೈಸರ್‌ ಇದೊಂದು ವಸ್ತು ಕಳೆದ ಕೆಲವು ತಿಂಗಳಿನಿಂದ ನಮ್ಮ ಜೊತೆಯೇ ಇಟ್ಟುಕೊಂಡು ಓಡಾಡುವ ವಸ್ತುಗಳಲ್ಲಿ ಒಂದಾಗಿದೆ. ಎಲ್ಲಿಗೆ ಹೋಗಲಿ ಹ್ಯಾಂಡ್‌ ಸ್ಯಾನಿಟೈಸರ್, ಮಾಸ್ಕ್‌ ಕಡ್ಡಾಯ.

Side affect of hand sanitizer

ಕೆಲವರಂತೂ ಗಂಟೆಗೆ 10ಕ್ಕಿಂತ ಹೆಚ್ಚು ಬಾರಿ ಕೈಗೆ ಸ್ಯಾನಿಟೈಸರ್ ಹಾಕಿ ಕೊಳ್ಳುವವರೂ ಇದ್ದಾರೆ. ಈ ಹ್ಯಾಂಡ್‌ ಸ್ಯಾನಿಟೈಸರ್‌ ಕೊರೊನಾವೈರಸ್‌ ಕೈಯಲ್ಲಿದ್ದರೆ ಅದನ್ನು ನಾಶಪಡಿಸುವುದೇನೋ ನಿಜ, ಆದರೆ ಇದನ್ನು ಹೀಗೆ ಬಳಸುತ್ತಿದ್ದರೆ ಇದರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ತಳ್ಳಿ ಹಾಕುವಂತಿಲ್ಲ.

ಇಲ್ಲಿ ನಾವು ಸ್ಯಾನಿಟೈಸರ್‌ ತುಂಬಾ ಸಮಯ ಬಳಸುತ್ತಿದ್ದರೆ ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳ ಬಗ್ಗೆ ಹೇಳಿದ್ದೇವೆ ನೋಡಿ:

ತ್ವಚೆ ಅಲರ್ಜಿ ಉಂಟಾಗುವುದು

ತ್ವಚೆ ಅಲರ್ಜಿ ಉಂಟಾಗುವುದು

ಹ್ಯಾಂಡ್ ಸ್ಯಾನಿಟೈಸರ್‌ನಲ್ಲಿ ಆ್ಯಂಟಿಸೆಪ್ಟಿಕ್ ವಸ್ತುಗಳು ಹಾಗೂ ಈಥೈಲ್ ಅಥವಾ ಐಸೋಪ್ರೊಪೈಲ್ ಆಲ್ಕೋಹಾಲ್ ಅಂಶವಿದ್ದು ನಿರಂತರ ಬಳಸುತ್ತಿದ್ದರೆ ತ್ವಚೆ ಅಲರ್ಜಿ ಉಂಟಾಗಬಹುದು.

ಬಿಸಿ ನೀರಿನಲ್ಲಿ ಸೋಪ್‌ ಹಚ್ಚಿ ಕೈತೊಳೆಯುವುದು ಅತ್ಯುತ್ತಮವಾದ ವಿಧಾನ. ಇದು ಸಾಧ್ಯವಾಗದಿದ್ದಾಗ ತ್ವಚೆಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ, ಮಾಯಿಶ್ಚರೈಸರ್ ಬಳಸುವುದರಿಂದ ತ್ವಚೆ ಒಣಗುವುದಿಲ್ಲ.

 ಕೆಲವೊಂದು ಸ್ಯಾನಿಟೈಸರ್‌ನಿಂದ ಬಂಜೆತನ ಉಂಟಾಗುವುದು

ಕೆಲವೊಂದು ಸ್ಯಾನಿಟೈಸರ್‌ನಿಂದ ಬಂಜೆತನ ಉಂಟಾಗುವುದು

ಕ್ಯಾಲಿಫೋರ್ನಿಯಾ ಯೂನಿರ್ವಸಿಟಿಯ ಡಾ. ಕ್ರಿಸ್‌ ನಾರಿಸ್ sleepstandards.comಗೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ನಾನ್ ಆಲ್ಕೋಹಾಲಿಕ್ ಹ್ಯಾಂಡ್‌ಸ್ಯಾನಿಟೈಸರ್‌ನಲ್ಲಿ triclosan ಅಥವಾ triclocarban ಅಂಶವಿರುತ್ತದೆ. ಈ ಅಂಶಗಳು ಫಲವತ್ತತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದನ್ನು ಅಧ್ಯಯನಗಳು ವರದಿಗಳು ಸಾಬೀತು ಪಡಿಸಿವೆ ಅಲ್ಲದೆ ಈ ರೀತಿಯ ಸ್ಯಾನಿಟೈಸರ್ ಬಳಕೆ ಅಸ್ತಮಾ ರೋಗಿಗಳಿಗೂ ಒಳ್ಳೆಯದಲ್ಲ.

ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುವುದು

ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುವುದು

ಸ್ಯಾನಿಟೈಸರ್‌ ಬಳಸುತ್ತಿದ್ದರೆ ದೇಹದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಸ್ವಾಭಾವಿಕವಾಗಿ ಹೋರಾಡುವ ರೋಗನಿರೋಧಕಗಳು ಪರಿಣಾಮ ಬೀರದೇ ಹೋಗಬಹುದು.

Triclosan ರೋಗ ನಿರೋಧಕ ವ್ಯವಸ್ಥೆಯ ಕಾರ್ಯವಿಧಾನವನ್ನು ಕುಗ್ಗಿಸುತ್ತದೆ, ಕೆಲವರಲ್ಲಿ ಅಲರ್ಜಿ ಸಮಸ್ಯೆ ಕೂಡ ಉಂಟಾಗಲು ಇದು ಕಾರಣವಾಗಿದೆ.

ಹಾರ್ಮೋನ್‌ಗಳಲ್ಲಿ ತೊಂದರೆ ಉಂಟಾಗುತ್ತದೆ

ಹಾರ್ಮೋನ್‌ಗಳಲ್ಲಿ ತೊಂದರೆ ಉಂಟಾಗುತ್ತದೆ

ಹ್ಯಾಂಡ್‌ಸ್ಯಾನಿಟೈಸರ್‌ನಲ್ಲಿರುವ ಟ್ರೈಕ್ಲೋಸನ್ ಅಂಶ ಹಾರ್ಮೋನ್‌ ಸಮಸ್ಯೆ ಉಂಟು ಮಾಡುವುದು ಎಂದು FDA ಹೇಳಿದೆ. ಹ್ಯಾಂಡ್‌ ಸ್ಯಾನಿಟೈಸರ್‌ನಲ್ಲಿರುವ ಕಟುವಾದ ವಾಸನೆ ಕೂಡ ರಾಸಾಯನಿಕವಾಗಿದೆ ಇದು ದೇಹದ ಬೆಳವಣಿಗೆ ಹಾಗೂ ಸಂತಾನೋತ್ಪತ್ತಿ ಸಾಮಾರ್ಥ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು

ಆಲ್ಕೋಹಾಲ್ ಪಾಯಿಸನಿಂಗ್ ಉಂಟಾಗುವುದು

ಆಲ್ಕೋಹಾಲ್ ಪಾಯಿಸನಿಂಗ್ ಉಂಟಾಗುವುದು

ಹ್ಯಾಂಡ್‌ಸ್ಯಾನಿಟೈಸರ್ ಬಳಸಿ ಆಲ್ಕೋಹಾಲ್‌ ಪಾಯಿಸನಿಂಗ್ ಆಗಿರುವ ಉದಾಹರಣೆಗಳಿವೆ, ಮಕ್ಕಳಿಗಂತೂ ಹ್ಯಾಂಡ್‌ ಸ್ಯಾನಿಟೈಸರ್‌ ಸೂಕ್ತವಲ್ಲ. ಹ್ಯಾಂಡ್‌ ಸ್ಯಾನಿಟೈಸರ್ ಹಚ್ಚಿದ ತಕ್ಷಣ ತುಟಿ ಮುಟ್ಟುವುದು ಅಥವಾ ಅದರ ಸ್ವಲ್ಪ ಅಂಶ ಬಾಯಿಗೆ ಹೋದರೆ ಆಲ್ಕೋಹಾಲ್ ಪಾಯಿಸನಿಂಗ್ ಉಂಟಾಗುವುದು ಎಂದು ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಹೇಳಿದೆ. ಆದ್ದರಿಂದ ಹ್ಯಾಂಡ್‌ ಸ್ಯಾನಿಟೈಸರ್ ಮಕ್ಕಳಿಗೆ ಸಿಗದಂತೆ ಇಡಬೇಕು.

ಸಲಹೆ: ಹ್ಯಾಂಡ್‌ ಸ್ಯಾನಿಟೈಸರ್‌ ಸೋಪ್‌ ಬಳಸಲು ಸಾಧ್ಯವಾಗದೇ ಇರುವ ಕಡೆ ಮಾತ್ರಬಳಸಿ. ಆದಷ್ಟು ಸೋಪ್ ಹಚ್ಚಿ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಹೊರಗಡೆ ಹೋದಾಗ ಹ್ಯಾಂಡ್‌ಸ್ಯಾನಿಟೈಸರ್ ಹಚ್ಚಿದರೂ ಮನೆಗೆ ಬಂದ ಮೇಲೆ ಚೆನ್ನಾಗಿ ಸೋಪ್ ಹಚ್ಚಿ ಕೈ ತೊಳೆದು ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

English summary

Side Effects of Using Too Much Hand Sanitizer

After this coronavirus pendamic we all started to use sanitizer. This is what happens to your body if you use too much hand sanitizer, Read on.
X
Desktop Bottom Promotion