For Quick Alerts
ALLOW NOTIFICATIONS  
For Daily Alerts

ಇಬ್ಬರು ಸಲಿಂಗಿ ತಾಯಿಂದಿರ ಗರ್ಭದಲ್ಲಿ ಬೆಳೆದ ಮಗು

|

ಮಕ್ಕಳಿಲ್ಲದ ದಂಪತಿಗಳು ಮಕ್ಕಳನ್ನು ಪಡೆಯಲು ಕೃತಕ ಗರ್ಭಧಾರಣೆ ತಂತ್ರಜ್ಞಾನ ಸೌಲಭ್ಯವಿದೆ, ಅಷ್ಟೇ ಏಕೆ ಗೇ ಅಥವಾ ಲೆಸೆಬಿಯನ್‌ ಜೋಡಿಗಳು ಮಕ್ಕಳನ್ನು ಪಡೆದಿರುವ ನಿದರ್ಶನಗಳಿವೆ. ತಂತ್ರಜ್ಙಾನ ತುಂಬಾ ಮುಂದುವರೆದಿದ್ದು ಯುಕೆ ಮೂಲದ ಲೆಸೆಬಿಯನ್ ಜೋಡಿ ಮಗನಿಗೆ ಜನ್ಮ ನೀಡಿದ್ದಾರೆ. ವಿಶೇಷಯೆಂದರೆ ಆ ಮಗುವನ್ನು ಇಬ್ಬರೂ ತಮ್ಮ ಗರ್ಭದಲ್ಲಿ ಹೊತ್ತುಕೊಂಡಿದ್ದರು! ಈ ಮೂಲಕ ತಾಯ್ತನವನ್ನು ಇಬ್ಬರೂ ಅನುಭವಿಸಿ, ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಓಟಿಸ್ ಎಂದು ಹೆಸರಿಡಲಾಗಿದೆ. ಸಲಿಂಗಿಗಳಲ್ಲಿ ಒಬ್ಬರು ಗರ್ಭಿಣಿಯಾಗಿ ಮಗು ಪಡೆದಿರುವ ಘಟನೆಗಿವೆ, ಆದರೆ ಇಬ್ಬರು ಒಂದು ಮಗುವನ್ನು ತಮ್ಮ ಗರ್ಭದಲ್ಲಿ ಹೊತ್ತು ಜನ್ಮ ನೀಡಿರುವುದು ಇದೇ ಮೊದಲಾಗಿದೆ. ಇದು ಇನ್‌ವಿಟ್ರೋ ಫರ್ಟಿಲಿಟಿ ತಂತ್ರಜ್ಞಾನಕ್ಕಿಂತ ಮುಂದುವರೆದ ತಂತ್ರಜ್ಞಾನವಾಗಿದೆ.

IVF

ಈ ಲೆಸೆಬಿಯನ್‌ ದಂಪತಿ ವಿವೊ ನ್ಯಾಚುರಲ್‌ ಫರ್ಟಿಲೈಸೇಷನ್‌ ಎಂಬ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದಿದ್ದಾದರೆ. ಐವಿಎಫ್‌ನಲ್ಲಿ ಅಂಡಾಣು ಹಾಗೂ ವೀರ್ಯಾಣುಗಳನ್ನು ಪ್ರಾಣಾಳ ತಂತ್ರಜ್ಞಾನದಲ್ಲಿ ಮಿಲನಗೊಳಿಸಿ, ಅದು ಭ್ರೂಣಾವಸ್ಥೆಗೆ ಬಂದಾಗ ಮಹಿಳೆಯ ಗರ್ಭದಲ್ಲಿ ಸೇರಿಸಲಾಗುತ್ತಿತ್ತು. ಏನೆವಿವೊ ನ್ಯಾಚುರಲ್‌ ಫರ್ಟಿಲೈಸೇಷನ್‌ನಲ್ಲಿ ಮಹಿಳೆಯ ಗರ್ಭದಲ್ಲಿಯೇ ಭ್ರೂಣ ಬೆಳೆಯುವಂತೆ ಮಾಡಲಾಗುವುದು. ಅನೆಕೊವಾ ಎಂಬ ಸ್ವಿಸ್‌ ಕಂಪನಿ ಈ ಹೊಸ ತಂತ್ರಜ್ಞಾನವನ್ನು ಬಳಸಿ ಡೋನಾ ಹಾಗೂ ಜಾಸ್ಮಿನ್ ಲೆಸೆಬಿಯನ್ ಜೋಡಿ ಮಗುವನ್ನು ಪಡೆದಿದ್ದಾರೆ.

ಎರಡು ಗರ್ಭದಲ್ಲಿ ಬೆಳೆದ ಮಗು

ಎರಡು ಗರ್ಭದಲ್ಲಿ ಬೆಳೆದ ಮಗು

ಭ್ರೂಣವನ್ನು ಜಾಸ್ಮಿನ್ ಗರ್ಭದಲ್ಲಿ ಸೇರಿಸುವ ಮುನ್ನ, ಅಂಡಾಶಯಗಳನ್ನು 18 ಗಂಟೆಗಳ ಕಾಲ ಡೋನಾರ ದೇಹದಲ್ಲಿ ಫಲವತ್ತತೆ ಮಾಡಲಾಯಿತು. ಇಲ್ಲಿ ಮಗುವಿನ ಜನನದಲ್ಲಿ ಒಬ್ಬರು ತಾಯಿಂದಿರು ಪ್ರಮುಖ ಪಾತ್ರವಹಿಸಿದ್ದಾರೆ. ಈ ಚಿಕಿತ್ಸೆಯಲ್ಲಿ ಯಶಸ್ಸು ಸಿಗುವುದು ತುಂಬಾ ಅಪರೂಪ, ಆದರೆ ಈ ಜೋಡಿಗೆ ಮಗುವನ್ನು ಪಡೆಯುವ ಅದೃಷ್ಟ ಸಿಕ್ಕಿದೆ.ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾ ಜಾಸ್ಮಿನ್ 'ಈ ಮಗು ನಮ್ಮಿಬ್ಬರನ್ನು ಭಾವನಾತ್ಮಕವಾಗಿ ಮತ್ತಷ್ಟು ಬೆಸೆದಿದೆ. ನಾವಿಬ್ಬರು ತುಂಬಾ ಪ್ರೀತಿಸುತ್ತೇವೆ, ಓಟಿಸ್ ಬಂದ ನಮ್ಮ ಬಂಧ ಮತ್ತಷ್ಟು ಗಟ್ಟಿಯಾಗಿದೆ' ಎಂದಿದ್ದಾರೆ.

ಅನೆವಿವೋ ಫರ್ಟಿಲೈಸೇಷನ್ ಎಂದರೇನು?

ಅನೆವಿವೋ ಫರ್ಟಿಲೈಸೇಷನ್ ಎಂದರೇನು?

ಅನೆವಿವೋ ಕಾರ್ಯವಿಧಾನದಲ್ಲಿ ಅಂಡಾಣುಗಳನ್ನು ಚಿಕ್ಕ ಕ್ಯಾಪ್ಸೂಲ್‌ನ ಒಳಗೆ ಹಾಕಿ ಅದನ್ನು ಗರ್ಭದೊಳಗೆ ಸೇರಿಸಲಾಗುವುದು, ಅಲ್ಲಿ ಆ ಅಂಡಾಶಯಗಳನ್ನು ವೀರ್ಯಾಣುಗಳನ್ನು ಸೇರಿಸುವುದರ ಮೂಲಕ ಫಲವತ್ತತೆ ಮಾಡಲಾಗುವುದು, ಅಂಡಾಶಯ ಭ್ರೂಣವಾದ ಬಳಿಕ ಅದನ್ನು ತೆಗೆದು ಗರ್ಭಧಾರಣೆ ಬಯಸುವ ಗರ್ಭದಲ್ಲಿ ಸೇರಿಸಲಾಗುವುದು. ಇಲ್ಲಿ ಪ್ರಣಾಳಿಕೆ ಬಳಸುವುದಿಲ್ಲ.

ಯಾರಿಗೆ ಇದು ಪ್ರಯೋಜನಕಾರಿ?

ಯಾರಿಗೆ ಇದು ಪ್ರಯೋಜನಕಾರಿ?

ಫಲೋಪಿಯನ್ ಟ್ಯೂಬ್‌ಗೆ ಹಾನಿಯಾಗಿದ್ದು ಗರ್ಭಧಾರಣೆಗೆ ತೊಂದರೆ ಉಂಟಾಗಿದ್ದರೆ, ಪುರುಷರಿಗೆ ಸಂಬಂಧಿಸಿದ ಬಂಜೆತನ, ಎಂಡೋಮೆಟ್ರೋಸಿಸ್, ಅನುವಂಶೀಯ ಕಾರಣ, ಅಥವಾ ಬಂಜೆತನಕ್ಕೆ ಕಾರಣವೇ ಗೊತ್ತಾಗದಿದ್ದರೆ ಹಾಗೂ ಸಲಿಂಗಿ ಜೋಡಿಗಳಿಗೆ ಮಗು ಪಡೆಯಲು ಈ ತಂತ್ರಜ್ಞಾನ ವರದಾನವಾಗಿದೆ.

ಈ ವಿಧಾನದಲ್ಲಿ ಭ್ರೂಣ ಹಾಗೂ ತಾಯಿ ನಡುವಿನ ಭಾವನಾತ್ಮಕ ಸಂಬಂಧ ವೃದ್ಧಿಯಾಗಲು ಸಹಕಾರಿಯಾಗಿದೆ. ಮಗುವಿಗೆ ಜನ್ಮ ನೀಡಲು ಇರುವ ಅನೇಕ ತೊಡಕುಗಳನ್ನು ಹೋಗಲಾಡಿಸುವಲ್ಲಿ ಇದು ಸಹಕಾರಿಯಾಗಿದೆ.

ತಾಯಿಯ ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದು

ತಾಯಿಯ ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದು

ಈ ವಿಧಾನದಲ್ಲಿ ಗರ್ಭಧಾರಣೆಯಲ್ಲಿ ತಾಯಿಯೂ ಪ್ರಮು ಪಾತ್ರವಹಿಸುವುದರಿಂದ ಮಗು ಹಾಗೂ ತಾಯಿಯ ನಡುವಿನ ಭಾವನಾತ್ಮಕ ಸಂಬಂಧ ಹೆಚ್ಚಾಗುವುದು. ತಾಯಿ ಭಾವನಾತ್ಮಕ ಹಾಗೂ ಒಟ್ಟು ಆರೋಗ್ಯಕ್ಕೆ ಈ ವಿಧಾನ ಸಹಕಾರಿಯಾಗಿದೆ. ಇನ್ನು ಭ್ರೂಣದ ಆರಂಭಿಕ ಹಂತದ ಚಿಕಿತ್ಸೆಯಲ್ಲಿಯೇ ಪೋಷಕರು ಪ್ರಮುಖ ಪಾತ್ರವಹಿಸುವುದರಿಂದ ಮಗು ಹಾಗೂ ಅವರ ನಡುವೆ ಮೊದಲ ಹಂತದಲ್ಲಿಯೇ ಭಾವನಾತ್ಮಕ ಸಂಬಂಧ ಏರ್ಪಡುವುದು. ಇನ್‌ವಿಟ್ರೋಫರ್ಟಿಲಿಟಿಯಲ್ಲಿ ಕೃತಕ ಗರ್ಭಧಾರಣೆ ಮಾಡಿದರೆ ಈ ಚಿಕಿತ್ಸೆಯಲ್ಲಿ ದೇಹದಲ್ಲಿಯೇ ಭ್ರೂಣ ಬೆಳೆಯುವುದರಿಂದ ಈ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ.

English summary

Same-sex CoupleFirst To Carry Baby In Both Of Their Wombs Through IVF

A same-sex couple from the UK has made history by carrying their baby in both their wombs. The procedure termed as 'shared motherhood' has given the women the ultimate opportunity to carry their baby.
Story first published: Tuesday, December 10, 2019, 12:42 [IST]
X
Desktop Bottom Promotion