For Quick Alerts
ALLOW NOTIFICATIONS  
For Daily Alerts

ನಿಮಗೆ ಚಿಕಿತ್ಸೆ ನೀಡುವ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಕೇಳಿದರೆ ಒಳ್ಳೆಯದು

|

ಏನಾದರೂ ಆರೋಗ್ಯ ಸಮಸ್ಯೆಯಿಂದ ವೈದ್ಯರ ಅಪಾಯಿಂಟ್‌ಮೆಂಟ್‌ ಪಡೆದು ಅವರನ್ನು ಭೇಟಿ ಮಾಡಿದಾಗ ಎಷ್ಟೋ ಬಾರಿ ಅವರಲ್ಲಿ ಕೇಳಬೇಕಾದ ಪ್ರಶ್ನೆಗಳೇ ಮರೆತು ಹೋಗುವುದು. ಕ್ಲೀನಿಕ್‌ ಅಥವಾ ಆಸ್ಪತ್ರೆಯಿಂದ ಹೊರಗಡೆ ಬಂದ ಮೇಲೆ ಅಯ್ಯೋ... ಈ ಪ್ರಶ್ನೆ ಕೇಳ ಬೇಕಾದೀತು ಎಂದು ಅಂದುಕೊಳ್ಳುವುದುಂಡು.

ಕೆಲವು ವೈದ್ಯರನ್ನು ಭೇಟಿ ಮಾಡಲು ಒಂದೆರಡು ಗಂಟೆ ಕಾಯಬೇಕಾದರೆ ಇನನ್ನು ಕೆಲ ವೈದ್ಯರ ಅಪಾಯಿಂಟ್‌ಮೆಂಟ್‌ 15 ದಿನದ ಮೊದಲು ಅಥವಾ ವಾರದ ಮೊದಲು ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳಬೇಕು, ನೇರ ಭೇಟಿ ಸಿಗುವುದು ತುಂಬಾನೇ ಕಷ್ಟವಾಗಿರುತ್ತದೆ. ಆಗ ನಾವು ವೈದ್ಯರನ್ನು ಭೇಟಿಯಾಗಿ ನಮ್ಮ ಸಮಸ್ಯೆ ಹೇಳಿದಾಗ ಅವರು ಕೆಲವೊಂದು ಔಷಧಿಗಳನ್ನು ನೀಡಿ, ಕೆಲ ಆರೋಗ್ಯ ಟಿಪ್ಸ್ ನೀಡುತ್ತಾರೆ. ಅಂಥ ಸಂದರ್ಭದಲ್ಲಿ ನೀವೂ ಕೆಲವೊಂದು ಪ್ರಶ್ನೆಗಳನ್ನೂ ಕೇಳಿದರೆ ನಿಮಗೆ ಮತ್ತಷ್ಟು ಮಾಹಿತಿ ಸಿಗಲು ಸಹಕಾರಿ. ನೀವು ವೈದ್ಯರಲ್ಲಿ ಪ್ರಮುಖವಾಗಿ ಕೇಳಬೇಕಾದ ಪಶ್ನೆಗಳೇನು ಎಂದು ನೋಡೋಣ ಬನ್ನಿ:

1. ಇದಕ್ಕೆ ಬೇರೆ ಚಿಕಿತ್ಸೆ ಇದೆಯೇ?

1. ಇದಕ್ಕೆ ಬೇರೆ ಚಿಕಿತ್ಸೆ ಇದೆಯೇ?

ಕೆಲವೊಂದು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವಾಗ ನೀವು ಇದಕ್ಕೆ ಬೇರೆ ಚಿಕಿತ್ಸೆ ವಿಧಾನವಿದೆಯೇ ಎಂದು ನಿಮ್ಮ ವೈದ್ಯರಲ್ಲಿ ಕೇಳಬಹುದು. ಉದಾಹರಣೆಗೆ ಕಿಡ್ನಿ ಸ್ಟೋನ್ ಸಮಸ್ಯೆಯಿದ್ದರೆ ಸರ್ಜರಿ ಅಲ್ಲದೆ ಹಾಗೇ ಕಲ್ಲು ಕರಗಿಸುವ ವಿಧಾನವಿದೆಯೇ ಅಥವಾ ಥೈರಾಯ್ಡ್ ಸಮಸ್ಯೆಯಲ್ಲಿ ಸರ್ಜರಿ ಒಳ್ಳೆಯದಾ, ರೇಡಿಯೇಷನ್ ಒಳ್ಳೆಯದಾ ಹೀಗೆ ಪ್ರಶ್ನೆಗಳನ್ನು ಕೇಳಬಹುದು. ಆಗ ಅವರು ನಿಮಗೆ ಯಾವ ಚಿಕಿತ್ಸೆಯಿಂದ ಏನು ಪ್ರಯೋಜನ , ಏನು ಅಡ್ಡಪರಿಣಾಮ ಎಂದು ತಿಳಿಯಬಹುದು.

2. ನಾನು ಈ ಚಿಕಿತ್ಸೆ ಈಗಲೇ ತೆಗೆಯಬೇಕಾ ಅಥವಾ ಸ್ವಲ್ಪ ಸಮಯ ಕಾಯಬಹುದಾ?

2. ನಾನು ಈ ಚಿಕಿತ್ಸೆ ಈಗಲೇ ತೆಗೆಯಬೇಕಾ ಅಥವಾ ಸ್ವಲ್ಪ ಸಮಯ ಕಾಯಬಹುದಾ?

ವೈದ್ಯರು ನಿಮ್ಮ ಬಳಿ ಸರ್ಜರಿ ಮಾಡಿಸಿ ಅಥವಾ ಬಯೋಸ್ಪೈ ಮಾಡಿಸಿ ಮುಂತಾದ ಸಲಹೆ ನೀಡಿದಾಗ ನೀವು ವೈದ್ಯರ ಹತ್ತಿರ ಈ ಶಸ್ತ್ರ ಚಿಕಿತ್ಸೆ ಈಗಲೇ ಮಾಡಿಸಬೇಕಾ ಅಥವಾ ಸ್ವಲ್ಪ ಕಾದು ಮಾಡಿಸಬಹುದಾ ಎಂಬ ಮಾಹಿತಿ ಪಡೆಯಿರಿ.

3. ಚಿಕಿತ್ಸೆ ಜೊತೆಗೆ ನನ್ನ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳೇನು?

3. ಚಿಕಿತ್ಸೆ ಜೊತೆಗೆ ನನ್ನ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳೇನು?

ಅವರು ಚಿಕಿತ್ಸೆ ನೀಡುವಾಗ ಅದರ ಜೊತೆಗೆ ನನ್ನ ಜೀವನಶೈಲಿ, ಆಹಾರಶೈಲಿ ಹೇಗಿದ್ದರೆ ಬೇಗ ಚೇತರಿಸಿಕೊಳ್ಳಬಹುದು ಎಂಬುವುದರ ಬಗ್ಗೆ ಅವರಲ್ಲಿ ಕೇಳಿ ತಿಳಿದುಕೊಳ್ಳಿ.

4. ಏನಾದರೂ ಅಡ್ಡಪರಿಣಾಮವಿದೆಯೇ?

4. ಏನಾದರೂ ಅಡ್ಡಪರಿಣಾಮವಿದೆಯೇ?

ನಾವು ಮಾತ್ರೆ ತೆಗೆದುಕೊಳ್ಳುವಾಗ ಅಥವಾ ಇತರ ಚಿಕಿತ್ಸೆ ಪಡೆಯುವಾಗ ಅದರ ಅಡ್ಡಪರಿಣಮಗಳ ಬಗ್ಗೆಯೂ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು, ಇಲ್ಲದಿದ್ದರೆ ಒಂದು ವೇಳೆ ಅಡ್ಡಪರಿಣಾವಾದರೆ ನೀವು ಸುಮ್ಮನೆ ಗಾಬರಿ ಬೀಳುತ್ತೀರಿ, ಆದ್ದರಿಂದ ಮೊದಲೇ ತಿಳಿದುಕೊಂಡಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬಹುದು.

5. ನನ್ನ ಚಿಕಿತ್ಸೆಗೆ ಎಷ್ಟು ಹಣವಾಗುತ್ತದೆ?

5. ನನ್ನ ಚಿಕಿತ್ಸೆಗೆ ಎಷ್ಟು ಹಣವಾಗುತ್ತದೆ?

ನಾವು ಯಾವುದಾದರೂ ಚಿಕಿತ್ಸೆ ತೆಗೆದುಕೊಳ್ಳುವಾಗ ಎಷ್ಟು ಹಣಬೇಕು ಎಂಬುವುದನ್ನು ಕೇಳಿ ತಿಳಿದುಕೊಂಡರೆ ಬಿಲ್‌ ಬಂದಾಗ ಹಣಕ್ಕಾಗಿ ಪರಿದಾಡುವುದು ತಪ್ಪುವುದು, ಅಲ್ಲದೆ ಮೊದಲೇ ಹಣದ ಬಗ್ಗೆ ತಿಳಿದುಕೊಂಡರೆ ಅದೇ ಚಿಕಿತ್ಸೆಗೆ ಬೇರೆ ಆಸ್ಪತ್ರೆಯಲ್ಲಿ ಎಷ್ಟು ಪಡೆಯುತ್ತಾರೆ ಎಂದು ವಿಚಾರಿಸಿ ಚಿಕಿತ್ಸೆ ಪಡೆಯಬಹುದು. ಒಂದು ಬ್ಲಡ್‌ ಟೆಸ್ಟ್‌ಗೆ ಒಂದು ಆಸ್ಪತ್ರೆಯಲ್ಲಿ ಒಂದು ಚಾರ್ಜ್‌ ಮಾಡದರೆ ಮತ್ತೊಂದು ಆಸ್ಪತ್ರೆಯಲ್ಲಿ ಬೇರೆನೇ ಚಾರ್ಜ್ ಮಾಡುತ್ತಾರೆ. ಆದ್ದರಿಂದ ಬಜೆಟ್‌ಗೆ ಹೊಂದುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

6. ನಿಮ್ಮ ಯಾವ ಸಂಶಯವನ್ನೂ ಮನಸ್ಸಿನಲ್ಲಿ ಇಡಬೇಡಿ

6. ನಿಮ್ಮ ಯಾವ ಸಂಶಯವನ್ನೂ ಮನಸ್ಸಿನಲ್ಲಿ ಇಡಬೇಡಿ

ವೈದ್ಯರ ಬಳಿ ಮಾತನಾಡುವಾಗ ನಿಮ್ಮ ಕಾಯಿಲೆ ಬಗ್ಗೆ ಅವರಲ್ಲಿ ಮುಕ್ತವಾಗಿ ಚರ್ಚಿಸಿ, ಎಲ್ಲಾ ಲಕ್ಷಣಗಳ ಬಗ್ಗೆ ಹೇಳಿ, ಅವರಲ್ಲಿ ಏನಾದರೂ ಕೇಳಬೇಕೆಂದು ಬಯಸಿ, ಕೇಳದೆ ಹಿಂದೇಟು ಹಾಕಬೇಡಿ, ಅವರ ಬಳಿ ಮುಕ್ತವಾಗಿ ಮಾತನಾಡಿ, ಇದರಿಂದ ನಿಮ್ಮ ಮನಸ್ಸಿಗೆ ಸಮಧಾನ ಸಿಗುವುದು.

7. ಎರಡನೇ ಅಭಿಪ್ರಾಯ ಪಡೆದುಕೊಳ್ಳಿ

7. ಎರಡನೇ ಅಭಿಪ್ರಾಯ ಪಡೆದುಕೊಳ್ಳಿ

ಇನ್ನು ಕೆಲವೊಂದು ಕಾಯಿಲೆಗಳಲ್ಲಿ ಒಬ್ಬ ವೈದ್ಯರು ಹೇಳಿದ್ದನ್ನು ಮಾತ್ರ ಚಿಕಿತ್ಸೆ ಮಾಡುವುದಕ್ಕಿಂತ ಮತ್ತೊಬ್ಬ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

English summary

National Doctor's Day: Questions You Always Need to Ask Your Doctor

National Doctor's Day: Questions You Always Need to Ask Your Doctor read on...
Story first published: Wednesday, June 30, 2021, 12:22 [IST]
X
Desktop Bottom Promotion