For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ: ಈ ರೀತಿ ಮಾಡಿ ಕ್ಯಾನ್ಸರ್ ಬಾರದಂತೆ ತಡೆಗಟ್ಟಬಹುದು

|

ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್‌ ಕಾಯಿಲೆ ಹೆಚ್ಚಾಗುತ್ತಿದೆ. ಈ ಕ್ಯಾನ್ಸರ್‌ ಕಾಯಿಲೆಗೆ ನಮ್ಮ ಆಹಾರಶೈಲಿ ನಮ್ಮ ಜೀವನಶೈಲಿ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಲವು ಬಗೆಯ ಕ್ಯಾನ್ಸರ್‌ಗಳಿವೆ, ಕೆಲವೊಮ್ಮೆ ಕ್ಯಾನ್ಸರ್ ಏಕೆ ಬಂತು ಎಮದು ನಿರ್ದಿಷ್ಟವಾದ ಕಾರಣ ಹೇಳಲಾಗುವುದಿಲ್ಲ, ಹಲವಾರು ಕಾರಣಗಳಿಂದಾಗಿ ದೇಹದಲ್ಲಿ ಕ್ಯಾನ್ಸರ್ ಕಣಗಳು ಬೆಳೆಯುತ್ತವೆ.'

National Cancer Awareness Day

ಅದರಲ್ಲಿ ಜೀವನಶೈಲಿ ಹಾಗೂ ಆಹಾರಶೈಲಿ ಪ್ರಮುಖವಾಗಿದೆ. ಇವುಗಳಲ್ಲಿ ಬದಲಾವಣೆ ಮಾಡಿಕೊಂಡರೆ ಕ್ಯಾನ್ಸರ್‌ ಅಪಾಯ ತಡೆಗಟ್ಟಬಹುದಾಗಿದೆ:

ತಂಬಾಕು ಬಳಸಬೇಡಿ:

ತಂಬಾಕು ಬಳಸಬೇಡಿ:

ಕ್ಯಾನ್ಸರ್‌ಗೆ ಪ್ರಮುಖ ಕಾರಣ ತಂಬಾಕು ಬಳಕೆ. ಧೂಮಪಾನ, ಗುಟುಕ, ಹೊಗೆಸೊಪ್ಪು ಬಳಕೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚು.

ಧೂಮಪಾನ ಬಳಸದವರಿಗೂ ಕ್ಯಾನ್ಸರ್ ಬರುವುದು ಅದಕ್ಕೆ ಕಾರಣ ಪ್ಯಾಸಿವ್ ಸ್ಮೋಕ್ಮಿಂಗ್. ಅಂದ್ರೆ ಧೂಮಪಾನ ಮಾಡಿ ಬಿಡುವವರ ಹೊಗೆಯನ್ನು ಸೇವಿಸುವುದರಿಂದ ನಾವು ಧೂಮಪಾನ ಮಾಡದೇ ಹೋದರೂ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

ಆದ್ದರಿಂದ ಯಾರು ಧೂಮಪಾನ ಮಾಡುತ್ತಾರೋ ಅವರ ಸಮೀಪದಲ್ಲಿ ನಿಲ್ಲಬೇಡಿ. ಇನ್ನು ದೂಮಪಾನ ಮಾಡುವವರಗೆ ಮನೆಯ ಒಳಗಡೆ ಧೂಮಪಾನ ಮಾಡದಂತೆ ಸೂಚಿಸಿ, ಇಲ್ಲದಿದ್ದರೆ ನೀವು ಧೂಮಪಾನ ಮಾಡದೇ ಇದ್ದರೂ ನಿಮಗೆ, ಮಕ್ಕಳಿಗೆ ಧೂಮಪಾನದ ಅಪಾಯ ಹೆಚ್ಚು.

 ಹಣ್ಣು-ತರಕಾರಿಗಳನ್ನು ತುಂಬಾ ಸೇವಿಸಿ

ಹಣ್ಣು-ತರಕಾರಿಗಳನ್ನು ತುಂಬಾ ಸೇವಿಸಿ

ತುಂಬಾ ಹಣ್ಣು-ತರಕಾರಿಗಳನ್ನು ಸೇವಿಸಬೇಕು. ಸಂಸ್ಕರಿಸಿದ ಆಹಾರ ಸೇವನೆ ಕಡಿಮೆ ಮಾಡಿ. ಮಾಂಸಾಹಾರ ಸೇವನೆ ಮಿತಿಯಲ್ಲಿ ಮಾಡಿ. ಕೆಂಪು ಮಾಂಸಾಹಾರ ಸೇವನೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚು.

ಆರೋಗ್ಯಕರ ಮೈತೂಕ ಹೊಂದಿ

ಆರೋಗ್ಯಕರ ಮೈತೂಕ ಹೊಂದಿ

ಆರೋಗ್ಯಕರ ಮೈತೂಕ ಹೊಂದಿದವರಿಗೆ ಸ್ತನ ಕ್ಯಾನ್ಸರ್, ಪ್ರೊಸ್ಟೇಟ್‌ ಕ್ಯಾನ್ಸರ್, ಶ್ವಾಸಕೋಶ, ಕರುಳು, ಕಿಡ್ನಿ ಕ್ಯಾನ್ಸರ್ ಅಪಾಯ ಕಡಿಮೆ.

ದಿನಾ ಅರ್ಧಗಂಟೆ ವ್ಯಾಯಾಮ ಮಾಡಿ.

ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ

ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ

* ಮಧ್ಯಾಹ್ನ ಹೊತ್ತು ಉರಿ ಬಿಸಿಲಿನಲ್ಲಿ ಓಡಾಡಬೇಡಿ

* ಬಿಸಿಲಿನಲ್ಲಿ ಓಡಾಡುವಾಗ ಕೊಡೆ ಬಳಸಿ

* ಬಿಸಿಲು ತ್ವಚೆಗೆ ನೇರವಾಗಿ ಬೀಳದಿರಲು ಮೈ ತುಂಬಾ ಬಟ್ಟೆ ಧರಿಸಿ.

* ಹೊರಗಡೆ ಹೋಗುವ ಸನ್‌ಸ್ಕ್ರೀನ್‌ ಲೋಷನ್ ಹಚ್ಚಿ.

ಲಸಿಕೆಯನ್ನು ಪಡೆಯಿರಿ

ಲಸಿಕೆಯನ್ನು ಪಡೆಯಿರಿ

ಹೆಪಟೈಟಿಸ್ ಬಿ: ಹೆಪಟೈಟಿಸ್‌ ಬಿಯಿಂದ ಲಿವರ್‌ಕ್ಯಾನ್ಸರ್ ಅಪಾಯ ಹೆಚ್ಚು. ಈ ಕಾಯಿಲೆ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ದೇಹದ ದ್ರವ ಅಥವಾ ರಕ್ತದ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

ಹೆಚ್‌ಪಿವಿ (Human papillomavirus): ಇದು ಕೂಡ ಲೈಂಗಿಕ ಸೋಂಕಾಗಿದೆ. HPV ಲಸಿಕೆಯನ್ನು 11-12 ವರ್ಷದೊಳಗೆ ತೆಗೆದುಕೊಳ್ಳಬೇಕು.

 ಈ ಅಪಾಯಕಾರಿ ವರ್ತನೆಗಳನ್ನು ಬಿಡಿ

ಈ ಅಪಾಯಕಾರಿ ವರ್ತನೆಗಳನ್ನು ಬಿಡಿ

ಅಸುರಕ್ಷಿತ ಲೈಂಗಿಕ ಕ್ರಿಯೆ

ಒಬ್ಬರೇ ಸಂಗಾತಿ ಜೊತೆ ಸುರಕ್ಷಿತ ಲೈಂಗಿಕ ಸಂಬಂಧ ಹೊಂದಿರುವುದು ಒಳ್ಳೆಯದು.

*ಒಂದೇ ಸೂಜಿ ಬಳಸಬೇಡಿ (ಒಬ್ಬರಿಗೆ ಚುಚ್ಚಿದ್ದು ಮತ್ತೊಬ್ಬರಿಗೆ ಬಳಸಬಾರದು)

ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ

ಪ್ರತೀವರ್ಷ ವೈದ್ಯರ ಬಳಿ ಹೋಗಿ ನಿಯಮಿತ ಚೆಕಪ್ ಮಾಡಿಸುವುದರಿಂದ ಕ್ಯಾನ್ಸರ್‌ ಅಪಾಯವಿದ್ದರೆ ಪ್ರಾರಂಭದಲ್ಲಿಯೇ ಪತ್ತೆಹಚ್ಚಬಹುದು.

English summary

National Cancer Awareness Day: Tips To Reduce Cancer Risk In Kannada

National Cancer Awareness Day: Lifestyle and diet to avoid cancer risk, read on....
Story first published: Monday, November 7, 2022, 9:29 [IST]
X
Desktop Bottom Promotion