For Quick Alerts
ALLOW NOTIFICATIONS  
For Daily Alerts

ನೀವು ಶ್ಯಾಂಪೂ ಬಳಸುತ್ತೀರಾ ಎಚ್ಚರ ಈ ಎಲ್ಲಾ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು

|

ಜನರಲ್ಲಿ ಸೌಂದರ್ಯ ಕಾಳಜಿ ದಿನೇ ದಿನೇ ಹೆಚ್ಚುತ್ತಿದೆ, ಹಿಂದೆಲ್ಲಾ ಕೂದಲಿಗೆ ಶೀಗೇಕಾಯಿ, ಅಲೊವೆರಾ, ದಾಸವಾಳ, ಭೃಂಗರಾಜ್‌ ನಂಥ ಅಪ್ಪಟ ಆಯುರ್ವೇದದ ಗಿಡಮೂಲಿಕೆಗಳಿಂದ ಕೂದಲನ್ನು ಕಾಳಜಿ ಮಾಡುತ್ತಿದ್ದರು, ಇದೀಗ ಜನರು ಇಷ್ಟೆಲ್ಲಾ ಕಷ್ಟ ಪಡುವ ಮನಸ್ಥಿತಿಯಲ್ಲಿಲ್ಲ. ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಸಿಗುವ ಶ್ಯಾಂಪೂಗಳನ್ನು ಬಳಸುತ್ತಾರೆ.

123

ಆದರೆ ನಿಮಗೆ ಗೊತ್ತೆ ಈ ಶ್ಯಾಂಪೂಗಳು ಮಾರಕ ಕಾಯಿಲೆಗಳನ್ನು ತರುವ ಹಾನಿಕಾರಕ ರಾಸಾಯನಿಕಗಳಿಂದ ತುಂಬಿದೆ ಎಂದು. ಹೌದು ಸೌಂದರ್ಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಶ್ಯಾಂಪೂಗಳು ಸಾಕಷ್ಟು ರಾಸಾಯನಿಕಗಳಿಂದ ತುಂಬಿದ್ದು, ಇದು ಕ್ಯಾನ್ಸರ್‌, ಆಸ್ತಮಾ, ಸಂತಾನೋತ್ಪತ್ತಿ ಸಮಸ್ಯೆ, ಹೆಣ್ಣು ಮಕ್ಕಳು ಬೇಗ ಪ್ರೌಢಾವಸ್ಥೆಗೆ ಬರುವುದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಶ್ಯಾಂಪೂ ಹೇಗೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ, ಇದರಲ್ಲಿರುವ ಯಾವೆಲ್ಲಾ ಅಂಶಗಳು ಸಮಸ್ಯೆ ಉಂಟುಮಾಡುತ್ತದೆ ಮುಂದೆ ನೋಡೋಣ:

ಸಲ್ಫೇಟ್‌ಗಳು

ಸಲ್ಫೇಟ್‌ಗಳು

ಶಾಂಪೂವಿನ ನೊರೆ ಹೆಚ್ಚಾದಾಗ ಯಾರಿಗೆ ತಾನೆ ಇಷ್ಟವಾಗುವುದಿಲ್ಲ, ಅಷ್ಟೇ ಅಲ್ಲದೆ ನೊರೆ ಹೆಚ್ಚಾದರೆ ಕೂದಲು ಸ್ವಚ್ಛವಾಯಿತು ಎಂಬ ಕಲ್ಪನೆಯು ನಮ್ಮಲ್ಲಿದೆ. ಆದರೆ ನೆನಪಿರಲಿ ಈ ನೊರೆ ನಿಮ್ಮ ಆರೋಗ್ಯ ಅತೀ ಅಪಾಯಕಾರಿಯಂತೆ. ಹೌದು, ಈ ನೊರೆ ಹೆಚ್ಚಸುವ ಅಂಶವೇ ಸಲ್ಫೇಟ್. ಈ ಸಲ್ಫೇಟ್‌ ಒಂದು ಕ್ಲೆನ್ಸಿಂಗ್ ಏಜೆಂಟ್ ಆಗಿದ್ದು ಅದು ನಿಮ್ಮ ನೆತ್ತಿಯ ಕೊಳೆಯನ್ನು ತೆಗೆಯಲು ಫೋಮ್ ಮಾಡುತ್ತದೆ. ಇದು ನಿಮ್ಮ ಕೂದಲನ್ನು ಸ್ವಚ್ಛಗೊಳಿಸಬಹುದಾದರೂ, ಅದು ನಿಮ್ಮ ನೆತ್ತಿಯ ನೈಸರ್ಗಿಕ ತೈಲಗಳನ್ನು ಸಹ ತೆಗೆದುಹಾಕುವಷ್ಟು ಅಪಾಯಕಾರಿಯಾಗಿದೆ. ಸಲ್ಫೇಟ್‌ಗಳು ಚರ್ಮವನ್ನು ಹೆಚ್ಚು ಸೂಕ್ಷ್ಮವಾಗಿಸುತ್ತದೆ ಮತ್ತು ಅದರ ನೈಸರ್ಗಿಕ ತೈಲಗಳನ್ನು ತೆಗೆದುಹಾಕುವ ಮೂಲಕ ಕೂದಲನ್ನು ಒಣಗಿಸುತ್ತದೆ.

ಪ್ಯಾರಾಬೆನ್ಸ್

ಪ್ಯಾರಾಬೆನ್ಸ್

ಪ್ಯಾರಾಬೆನ್ಸ್ಗಳು ನಿಮ್ಮ ಶಾಂಪೂದಲ್ಲಿ ಬಳಸುವ ಸಂರಕ್ಷಕ ಸಂಶ್ಲೇಷಿತ ರಾಸಾಯನಿಕ ಸಂಯುಕ್ತಗಳ ಒಂದು ಗುಂಪು. ಪ್ಯಾರಾಬೆನ್‌ ಅಂದರೆ ಬ್ಯುಟೈಲ್, ಪ್ರೊಪೈಲ್ ಮತ್ತು ಈಥೈಲ್ ಪ್ಯಾರಬೆನ್‌ಗಳು ಸಂತಾನೋತ್ಪತ್ತಿಯಲ್ಲಿ ತೊಡಗಿರುವ ಸ್ತ್ರೀ ಹಾರ್ಮೋನ್ ಈಸ್ಟ್ರೊಜೆನ್ನ ಕ್ರಿಯೆಯ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೆ ಪ್ಯಾರಾಬೆನ್‌ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ. ಪ್ಯಾರಾಬೆ್‌ನ ಸುಗಂಧ ದ್ರವ್ಯವು ನಿಮ್ಮ ಕೂದಲು ಮತ್ತು ನೆತ್ತಿಗೆ ಅಂಟಿಕೊಳ್ಳಲು ಸಹಾಯ ಮಾಡುತ್ತದೆ. ಪ್ಯಾರಾಬೆನ್‌ಗಳು ಚಿಕ್ಕ ಹೆಣ್ಣು ಮಕ್ಕಳಲ್ಲಿ ಆರಂಭಿಕ ಪ್ರೌಢಾವಸ್ಥೆಗೆ ಕಾರಣವಾಗಬಹುದು ಮತ್ತು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಬಹುದು ಏಕೆಂದರೆ ಅವು ಅಂತಃಸ್ರಾವಕ ಅಡ್ಡಿಪಡಿಸುತ್ತವೆ.

ಫಾರ್ಮಾಲ್ಡಿಹೈಡ್

ಫಾರ್ಮಾಲ್ಡಿಹೈಡ್

ಫಾರ್ಮಾಲ್ಡಿಹೈಡ್ ಸಂಯುಕ್ತವು ಬಣ್ಣರಹಿತ ಮತ್ತು ಸುಡುವ ಅನಿಲವಾಗಿದ್ದು ಅದು ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ತಮ್ಮ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ತಜ್ಞರ ಪ್ರಕಾರ, ಫಾರ್ಮಾಲ್ಡಿಹೈಡ್ ಬಲವಾದ ಉದ್ರೇಕಕಾರಿಯಾಗಿದ್ದು ಅದು ಚರ್ಮಕ್ಕೆ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ಮಾರಕ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಸುಗಂಧ ದ್ರವ್ಯಗಳು

ಸುಗಂಧ ದ್ರವ್ಯಗಳು

ನಮ್ಮ ಶ್ಯಾಂಪೂಗಳಲ್ಲಿನ ಆಕರ್ಷಕ ಹೂವಿನ ಪರಿಮಳವನ್ನು ನಾವು ಎಷ್ಟು ಪ್ರೀತಿಸುತ್ತೇವೆಯೋ, ಅದು ನಿಮ್ಮ ನೆತ್ತಿ, ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಅಷ್ಟೇ ಹಾನಿಕಾರಕ. ಹೂವುಗಳು ಮತ್ತು ಹಣ್ಣುಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಸುಗಂಧ ದ್ರವ್ಯಗಳನ್ನು ನಿಮ್ಮ ಶಾಂಪೂಗೆ ಸೇರಿಸಲಾಗುವುದಿಲ್ಲ ಮತ್ತು ಸೇರಿಸಲಾದ ಸಂಶ್ಲೇಷಿತ ಸುಗಂಧವು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಸಂಶ್ಲೇಷಿತ ಸುಗಂಧ ದ್ರವ್ಯಗಳು ಆಸ್ತಮಾ, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

English summary

Most Harmful Ingredients Found in Your Shampoo in Kannada

Here we are discussing about Most Harmful Ingredients Found in Your Shampoo in Kannada. Read more.
X
Desktop Bottom Promotion