For Quick Alerts
ALLOW NOTIFICATIONS  
For Daily Alerts

ಅಪೌಷ್ಟಿಕತೆ ಎಂದರೇನು?, ಲಕ್ಷಣ, ಕಾರಣ ಮತ್ತು ಚಿಕಿತ್ಸೆ

|

ಅಪೌಷ್ಟಿಕತೆಯು ಕಳಪೆ ಆಹಾರ ಅಥವಾ ಆಹಾರದ ಕೊರತೆಯಿಂದ ಉಂಟಾಗುತ್ತದೆ. ಸೇವಿಸುವ ಆಹಾರದಲ್ಲಿ ಪೋಷಕಾಂಶಗಳ ಮಟ್ಟ ಕಡಿಮೆ ಇರುವಾಗ ಅಥವಾ ಅಸಮತೋಲನದಿಂದ ಕೂಡಿರುವಾಗ ಪೌಷ್ಟಿಕಾಂಶದ ಕೊರತೆ ಉಂಟಾಗುವುದು. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳು ಇಲ್ಲದಿದ್ದರೆ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯದು. ಅಂತಹ ಸಮಯದಲ್ಲಿ ನಾನಾ ಬಗೆಯ ಅನಾರೋಗ್ಯ ಸಮಸ್ಯೆಗಳು ಪ್ರಚೋದನೆ ಪಡೆದುಕೊಳ್ಳುತ್ತವೆ. ಈ ಸಮಸ್ಯೆಯು ಮಕ್ಕಳಲ್ಲಿ ಕಾಣಿಸಿಕೊಂಡರೆ ಅವರ ಬೆಳವಣಿಗೆಯಲ್ಲಿ ಕುಂದು ಕೊರತೆ ಕಾಣಿಸಿಕೊಳ್ಳುವುದು.

ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಅಪೌಷ್ಟಿಕತೆ

ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಅಪೌಷ್ಟಿಕತೆ

ಪ್ರಪಂಚದ ವಿವಿಧ ಭಾಗದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳು ಬಳಲುತ್ತಿರುವುದು ಹಾಗೂ ಅನಾರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿರುವುದನ್ನು ಕಾಣಬಹುದು. ಹಿಂದುಳಿದ ರಾಷ್ಟ್ರ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ. ಪೌಷ್ಟಿಕಾಂಶದ ಕೊರತೆ ಎನ್ನುವ ಪಿಡುಗಿನಿಂದ ಭಾರತ ದೇಶವೂ ಹೊರಗುಳಿದಿಲ್ಲ. ನಮ್ಮಲ್ಲೂ ಸಾಕಷ್ಟು ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳನ್ನು ಒಳಗೊಂಡಿರುವುದು ಕಾಣಬಹುದು. ಒಂದು ಅಂಕಿ ಅಂಶ ಹಾಗೂ ಅಧ್ಯಯನಗಳ ಪ್ರಕಾರ ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸುವ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದರ ಮೂಲಕ ಅಸುನೀಗುವರು ಎಂದು ಹೇಳಲಾಗುತ್ತದೆ. ಅಲ್ಲದೆ ವಯಸ್ಕರಲ್ಲೂ ಈ ಸಮಸ್ಯೆ ಸಾಮಾನ್ಯವಾಗಿದೆ ಎಂದು ಹೇಳಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಪ್ರಕಾರ ಅಪೌಷ್ಟಿಕತೆಯು ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ಅತ್ಯಂತ ದೊಡ್ಡ ಅಪಾಯವಾಗಿದೆ. ಜಾಗತಿಕವಾಗಿ ಐದು ವರ್ಷದ ಒಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಅನೇಕ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಅಧ್ಯಯನದ ಪ್ರಕಾರ ಅಪೌಷ್ಟಿಕತೆಯಿಂದ ಶೇ.45ರಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ.

ಭಾರತದಲ್ಲಿ ಅಪೌಷ್ಟಿಕತೆ

ಭಾರತದಲ್ಲಿ ಅಪೌಷ್ಟಿಕತೆ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮಂಡಿಸಿದ ಅಪೌಷ್ಟಿಕತೆಯ ಫಲಿತಾಂಶವು ಆಶ್ಚರ್ಯವನ್ನು ಉಂಟುಮಾಡುವಂತಿದೆ. ಭಾರತದಲ್ಲಿ ಜನಿಸುತ್ತಿರುವ ಮಕ್ಕಳಲ್ಲಿ ಶೇ. 15ರಷ್ಟು ಮಕ್ಕಳಲ್ಲಿ ಕಡಿಮೆ ಅನುಪಾತದ ತೂಕ, ಶೇ.32ರಷ್ಟು ಮಕ್ಕಳಲ್ಲಿ ರಕ್ತಹೀನತೆ, ಶೇ.11ರಷ್ಟು ಮಕ್ಕಳಲ್ಲಿ ಅತಿಯಾದ ತೂಕ ಇರುವ ಅಂಕಿವಂಶವನ್ನು ತಿಳಿಸಿದೆ. ಭಾರತದಲ್ಲಿ ಪ್ರಸ್ತುತ ಜನರಲ್ಲಿ ಪೌಷ್ಟಿಕತೆಗೆ ಸಂಬಂಧಿಸಿದಂತೆ ಶೇ. 8.9 ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಶೇ. 9.6 ರಷ್ಟು ಮಕ್ಕಳಲ್ಲಿ ರಕ್ತ ಹೀನತೆಯ ಸಮಸ್ಯೆ ಇದೆ ಎಂದು ಅಧ್ಯಯನಗಳು ಸಾಬೀತು ಪಡಿಸಿದೆ.

ಅಪೌಷ್ಟಿಕತೆ ಎಂದರೇನು?

ಅಪೌಷ್ಟಿಕತೆ ಎಂದರೇನು?

ಕಳಪೆ ಗುಣಮಟ್ಟದ ಆಹಾರವನ್ನು ಹೊಂದುವುದಕ್ಕೆ ಅಪೌಷ್ಟಿಕತೆ ಎನ್ನಲಾಗುವುದು. ನಾವು ಸೇವಿಸುವ ಆಹಾರದಲ್ಲಿ ಸೂಕ್ತ ಪ್ರಮಾಣದ ಖನಿಜಗಳು, ಜೀವಸತ್ವಗಳು, ಪ್ರೋಟೀನ್‍ಗಳು ಇಲ್ಲದೆ ಹೋದರೆ ಆಗ ಪೌಷ್ಟಿಕತೆಯ ಕೊರತೆ ಅಥವಾ ಅಪೌಷ್ಟಿಕತೆ ಎಂದು ಕರೆಸಿಕೊಳ್ಳುವುದು. ಅಪೌಷ್ಟಿಕತೆಯು ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಸಾಕಷ್ಟು ಸಮಸ್ಯೆಯನ್ನು ಒಡ್ಡುವುದು. ವಿಶ್ವ ಆರೋಗ್ಯ ಸಂಸ್ಥೆಯು ಹೇಳಿರುವ ಪ್ರಕಾರ ವಿಶ್ವದಾದ್ಯಂತ 462 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅರಿಯಾದ ಪೋಷಣೆ ಹಾಗೂ ಪೋಷಕಾಂಶವಿಲ್ಲದೆ 159 ಮಿಲಿಯನ್ ಮಕ್ಕಳು ಬಳಲಿಕೆಗೆ ಒಳಗಾಗಿದ್ದಾರೆ.

ಪೌಷ್ಟಿಕಾಂಶದ ಅಗತ್ಯತೆ ಎಲ್ಲರಿಗೂ ಪ್ರಮುಖವಾದ ಸಂಗತಿ. ಅಪೌಷ್ಟಿಕತೆಯ ಸಮಸ್ಯೆಗೆ ಕಾರಣಗಳು, ಅಪೌಷ್ಟಿಕತೆಯ ಲಕ್ಷಣಗಳು ಹಾಗೂ ಅದಕ್ಕೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ತಿಳಿಯೋಣ.

ಅಪೌಷ್ಟಿಕತೆಯ ಲಕ್ಷಣಗಳು

ಅಪೌಷ್ಟಿಕತೆಯ ಲಕ್ಷಣಗಳು

ದೇಹದಲ್ಲಿ ಅಪೌಷ್ಟಿಕತೆ ಉಂಟಾದರೆ ಸಾಮಾನ್ಯವಾಗಿ ಕೆಲವು ಲಕ್ಷಣಗಳು ಗೋಚರವಾಗುತ್ತವೆ. ಅವುಗಳ ಪರಿಶೀಲನೆಗೆ ಒಳಪಡಿಸಿ ಪೋಷಣೆ ಮಾಡಿದರೆ ಸಮಸ್ಯೆಯನ್ನು ಪರಿಹರಿಸಬಹುದು.

* ಊಟ-ತಿಂಡಿ-ಪಾನೀಯಗಳ ಬಗ್ಗೆ ಆಸಕ್ತಿ ಇಲ್ಲದೆ ಇರುವುದು.

* ದಣಿವು ಮತ್ತು ಕಿರಿಕಿರಿ ಉಂಟಾಗುವುದು.

* ಯಾವುದೇ ಸಂಗತಿಯ ಬಗ್ಗೆ ಹೆಚ್ಚಿನ ಬುದ್ಧಿಯನ್ನು ಕೇಂದ್ರೀಕರಿಸಲು ಕಷ್ಟವಾಗುವುದು.

* ದೇಹದಲ್ಲಿ ಕೊಬ್ಬು, ಸ್ನಾಯು ಹಾಗೂ ದ್ರವ್ಯರಾಶಿಗಳ ಕೊರತೆ ಉಂಟಾಗುವುದು.

* ಪದೇ ಪದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಅದು ಗುಣಮುಖವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುವುದು.

* ಗಾಯ ಉಂಟಾದರೆ ಗುಣಮುಖವಾಗಲು ಅಧಿಕ ಸಮಯ ತೆಗೆದುಕೊಳ್ಳುವುದು.

* ಶಸ್ತ್ರಚಿಕಿತ್ಸೆಯ ನಂತರ ಅಧಿಕ ತೊಡುಕುಗಳು ಕಾಣಿಸಿಕೊಳ್ಳುತ್ತವೆ.

* ಖಿನ್ನತೆ ಕಾಣಿಸಿಕೊಳ್ಳುವುದು.

* ಪುರುಷ ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಕೊರತೆ ಉಂಟಾಗುವುದು.

* ಉಸಿರಾಟದ ಸಮಸ್ಯೆ.

* ಚರ್ಮವು ತೆಳುವಾಗುವುದು, ಅತಿಯಾಗಿ ಚಳಿಯ ಸಂವೇದನೆಗೆ ಒಳಗಾಗುವುದು.

* ಕೂದಲು ಹಾಗೂ ಚರ್ಮವು ಶುಷ್ಕತೆಯನ್ನು ಪಡೆಯುವುದು.

ಅಪೌಷ್ಟಿಕತೆ ಉಂಟಾಗಲು ಕಾರಣಗಳು

ಅಪೌಷ್ಟಿಕತೆ ಉಂಟಾಗಲು ಕಾರಣಗಳು

* ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು

ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಪೌಷ್ಟಿಕತೆಗೆ ಮುಖ್ಯ ಕಾರಣ. ಕೆಲವರಿಗೆ ಊಟದ ಪೂರೈಕೆ ಇಲ್ಲದೆ ಇರುವುದರಿಂದ ಕಡಿಮೆ ಆಹಾರ ಸೇವಿಸಬಹುದು. ಇನ್ನೂ ಕೆಲವರು ಡಯಟ್ ಅಥವಾ ದೇಹ ದಂಡನೆಗಾಗಿ ಕಡಿಮೆ ಆಹಾರ ಸೇವಿಸುವರು. ಇದು ಅಪೌಷ್ಟಿಕತೆಗೆ ಕಾರಣವಾಗುತ್ತದೆ.

* ಮಾನಸಿಕ ಆರೋಗ್ಯದ ಸಮಸ್ಯೆ

ಮಾನಸಿಕ ಆರೋಗ್ಯ ಸರಿಯಾಗಿ ಇಲ್ಲದಿದ್ದರೆ ಊಟವನ್ನು ತ್ಯಜಿಸುವರು. ಯಾವುದು ತಿನ್ನಬೇಕು ಎನ್ನುವ ಗೊಂದಲ ಇರುವುದು. ಖಿನ್ನತೆ ಅನುಭವಿಸುವವರು, ಬುದ್ಧಿಮಾಂದ್ಯತೆ ಇರುವವರು, ಸ್ಕಿಜೋಫ್ರೇನಿಯಾ, ಅನೋರೆಕ್ಸಿಯಾ, ನರ್ಮೋಸಾ ಮತ್ತು ಬುಲಿಮಿಯಾಗಳಂತಹ ಆರೋಗ್ಯ ಸಮಸ್ಯೆ ಇರುವವರಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುವುದು.

* ಅತಿಯಾದ ಸಾಮಾಜಿಕ ಕ್ರಿಯಾಶೀಲತೆ

ಕೆಲವರಿಗೆ ಸಾರ್ವಜನಿಕರ ಕೆಲಸದಲ್ಲಿ ತೊಡಗಿಕೊಳ್ಳುವುದು ಅತ್ಯಂತ ಹೆಮ್ಮೆ ಹಾಗೂ ಖುಷಿಯನ್ನು ತಂದುಕೊಡುವುದು. ಆದರೆ ಅಂತಹವರು ಸರಿಯಾದ ಸಮಯದಲ್ಲಿ ಊಟ-ತಿಂಡಿಯನ್ನು ಮಾಡದೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕೆಲವರಿಗೆ ಆಹಾರಕ್ಕಾಗಿ ಹೆಚ್ಚು ಹಣವನ್ನು ವ್ಯಯಿಸುವಷ್ಟು ಅನುಕೂಲತೆ ಇರುವುದಿಲ್ಲ.

* ಆರೋಗ್ಯದ ಸಮಸ್ಯೆ

ಕೆಲವರಿಗೆ ಕಾಡುವ ಅಜೀರ್ಣ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಸೂಕ್ತ ಆಹಾರವನ್ನು ಸೇವಿಸಲು ಕಷ್ಟವನ್ನುಂಟು ಮಾಡುವುದು. ಕೆಲವು ಆಹಾರ ಪದಾರ್ಥಗಳು ಜೀರ್ಣವಾಗದೆ ಇರಬಹುದು. ಇನ್ನೂ ಕೆಲವೊಮ್ಮೆ ಆರೋಗ್ಯ ಸಮಸ್ಯೆಗೆ ಪತ್ಯವನ್ನು ಅನುಸರಿಸುವುದರಿಂದಲೂ ಅಪೌಷ್ಟಿಕತೆ ಉಂಟಾಗುವುದು.

* ಮದ್ಯ ಸೇವನೆ

ಆಲ್ಕೋಹಾಲ್ ಸೇವನೆಯಿಂದ ವ್ಯಕ್ತಿ ಆಹಾರವನ್ನು ಹೊಂದುವ ಪ್ರಮಾಣ ಕಡಿಮೆ ಮಾಡಬಹುದು. ಆಲ್ಕೋಹಾಲ್ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅದನ್ನು ಅತಿಯಾಗಿ ಕುಡಿದಿರುವಾಗ ಹಸಿವಿನ ಅನುಭವ ಆಗುವುದಿಲ್ಲ. ದೇಹಕ್ಕೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾಗುವುದು.

* ಎದೆಹಾಲಿನ ಕೊರತೆ

ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯಗತ್ಯವಾಗಿರುತ್ತದೆ. ಯಾವ ಮಹಿಳೆಗೆ ಎದೆ ಹಾಲಿನ ಕೊರತೆ ಉಂಟಾಗುವುದೋ ಅವರ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುವುದು. ನಂತರ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅಪೌಷ್ಟಿಕತೆಗೆ ಚಿಕಿತ್ಸೆ

ಅಪೌಷ್ಟಿಕತೆಗೆ ಚಿಕಿತ್ಸೆ

ಸೂಕ್ತ ತಪಾಸಣೆ ಹಾಗೂ ಪರೀಕ್ಷೆಯನ್ನು ಮಡಿಸಿದಾಗ ನಮ್ಮ ಆರೋಗ್ಯದ ಸಮಸ್ಯೆ ಏನು ಎನ್ನುವದರ ಬಗ್ಗೆ ಸೂಕ್ತ ಮಾಹಿತಿ ದೊರೆಯುವುದು. ಅಪೌಷ್ಟಿಕತೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಪೋಷಕಾಂಶ ಭರಿತ ಆಹಾರ ಸೇವಿಸುವುದರ ಮೂಲಕ ಸಮಸ್ಯೆಯನ್ನು ತಡೆಯಬಹುದು.

* ನಿಮ್ಮ ವಯಸ್ಸು, ಎತ್ತರ ಹಾಗೂ ತೂಕವನ್ನು ಮೊದಲು ಪರಿಶೀಲಿಸಿ. ನಿಮ್ಮ ತೂಕ ನಷ್ಟಕ್ಕೆ ಹಾಗೂ ಪೌಷ್ಟಿಕಾಂಶದ ಕೊರತೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದು. ಆರೋಗ್ಯ ಸುಧಾರಣೆಗೆ ಪ್ರಯತ್ನಿಸಿ.

* ತಪಾಸಣೆಯ ಮೂಲಕ ನಿಮ್ಮ ಆರೋಗ್ಯದಲ್ಲಿ ಯಾವ ಬಗೆಯ ಕೊರತೆ ಉಂಟಾಗಿದೆ ಎನ್ನುವುದನ್ನು ತಿಳಿದು, ಅದರ ಆರೈಕೆ ಅಥವಾ ದೇಹದಲ್ಲಿ ಆ ಅಂಶವನ್ನು ಹೆಚ್ಚಿಸುವ ಸೂಕ್ತ ಆಹಾರ ಹಾಗೂ ಔಷಧವನ್ನು ಸ್ವೀಕರಿಸಿ. ವೈದ್ಯರಲ್ಲಿ ಯಾವ ಬಗೆಯ ಪೌಷ್ಟಿಕಾಂಶದ ಮೊರೆ ಹೋಗಬೇಕು ಎನ್ನುವುದನ್ನು ತಿಳಿಯಿರಿ.

* ನೀವು ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಂಡರೂ ಆಂತರಿಕವಾಗಿ ದೇಹದಲ್ಲಿ ಕೆಲವು ಸಮಸ್ಯೆಗಳು ಉಂಟಾಗಿರುವ ಸಾಧ್ಯತೆಗಳು ಇರುತ್ತವೆ. ಅವು ನಿಧಾನವಾಗಿ ಹೆಚ್ಚುತ್ತಾ, ದೊಡ್ಡ ಆರೋಗ್ಯ ಸಮಸ್ಯೆಗಳಾಗಬಹುದು. ಹಾಗಾಗಿ ಆಗಾಗ ಆರೋಗ್ಯದ ಬಗ್ಗೆ ಸೂಕ್ತ ಚಿಕಿತ್ಸೆ ನಡೆಸುವುದು ಸೂಕ್ತ. ಅದರಿಂದ ಸಮಸ್ಯೆಗಳಿಗೆ ತಕ್ಷಣ ಚಿಕಿತ್ಸೆ ಪಡೆಯಬಹುದು.

* ನಾವು ಸೇವಿಸುವ ಆಹಾರ ಕ್ರಮವನ್ನು ಆರೋಗ್ಯ ರೀತಿಯಲ್ಲಿ ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕು. ದೇಹಕ್ಕೆ ಬೇಕಾಗುವಂತಹ ಉತ್ತಮ ಕಾರ್ಬೋಹೈಡ್ರೇಟ್ಸ್, ವಿಟಮಿನ್, ಖನಿಜಾಂಶ ಹಾಗೂ ಪೋಷಕಾಂಶ ಇರುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

English summary

Malnutrition: Symptoms, Causes And Treatment

Malnutrition (undernutrition) is caused by a lack of nutrients in your diet, either due to a poor diet or problems absorbing nutrients from food.Certain things can increase a person's risk of becoming malnourished.
X
Desktop Bottom Promotion