For Quick Alerts
ALLOW NOTIFICATIONS  
For Daily Alerts

World Cancer Day: ಈ ವೃತ್ತಿಯಲ್ಲಿರುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ

|

ಫೆಬ್ರವರಿ 4 ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುವುದು.

ನಾವು ಮಾಡುವ ವೃತ್ತಿಯಿಂದ ಕ್ಯಾನ್ಸರ್ ರೋಗ ಬರುವ ಅಪಾಯ ಇದೆಯೇ? ಅಮೆರಿಕದ ಕ್ಯಾನ್ಸರ್ ಸೊಸೈಟಿಯ ವರದಿ ಹೌದು ಎನ್ನುತ್ತಿದೆ. ಕ್ಯಾನ್ಸರ್ ನಾನಾ ಕಾರಣಗಳಿಂದ ಹೆಚ್ಚಾಗುತ್ತಿದೆ. ಆಹಾರ ವಸ್ತುಗಳಿಗೆ ರಾಸಾಯನಿಕ ಸಿಂಪಡಿಸುವುದು, ವ್ಯಾಯಾಮ ಇಲ್ಲದಿರುವುದು, ಅಧಿಕ ರಾಸಾಯನಿಕ ವಸ್ತುಗಳ ಬಳಕೆ, ಕಲುಷಿತ ವಾತಾವರಣ ಹೀಗೆ ನಾನಾ ಕಾರಣಗಳಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ.

World Cancer Day

ಇನ್ನು ಕೆಲವೊಂದು ಕೆಲಸ ಮಾಡುವುದರಿಂದ ಕೂಡ ಕ್ಯಾನ್ಸರ್ ಅಪಾಯ ಹೆಚ್ಚಿದೆ. ಈ ವೃತ್ತಿಯಲ್ಲಿ ಅಪಾಯಕಾರಿ ವಿಕಿರಣಗಳು, ರಾಸಾಯನಿಗಳು ದೇಹವನ್ನು ಸೇರಿ ಕ್ಯಾನ್ಸರ್ ಕಣಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಯಾವೆಲ್ಲಾ ಕೆಲಸದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿದೆ ಎಂದು ಇಲ್ಲಿ ಹೇಳಲಾಗಿದೆ ನೋಡಿ:

ಕ್ಯಾನ್ಸರ್‌ ಕುರಿತು ನೀವು ತಿಳಿದಿರಬೇಕಾದ 10 ಸಂಗತಿಗಳು

1. ಕಟ್ಟಡ ಕಟ್ಟುವುದು

1. ಕಟ್ಟಡ ಕಟ್ಟುವುದು

ಕಟ್ಟಡ ಕಟ್ಟುವ ಕೆಲಸ ಅಂದರೆ ಗಾರೆ ಕೆಲಸ ಮಾಡುವವರಿಗೆ ಕ್ಯಾನ್ಸರ್ ಬರುವ ಅಪಾಯವಿದೆ. ತುಂಬಾ ಹೊತ್ತು ಬಿಸಿಲಿನಲ್ಲಿ ನಿಂತು ಕೆಲಸ ಮಾಡುವುದರಿಂದ ಸೂರ್ಯ ನೇರಳಾತೀತ ಕಿರಣಗಳು ತಾಗಿ ಕ್ಯಾನ್ಸರ್ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕಟ್ಟಡ ಕಟ್ಟುವ ಕೆಲಸ ಮಾಡುವವರಿಗೆ ಮೆಸೊಥೆಲಿಯೋಮಾ ಎಂಬ ಶ್ವಾಸಕೋಶದ ಕ್ಯಾನ್ಸರ್ ಅಪಾಯವೂ ಇದೆ. ಕಟ್ಟಡ ಕಟ್ಟುವಾಗ ದೂಳು, ಸಿಮೆಂಟ್‌ ಕಣಗಳು ಶ್ವಾಸಕೋಶವನ್ನು ಸೇರಿ, ಶ್ವಾಸಕೋಶದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಈ ವೃತ್ತಿಯಲ್ಲಿರುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಬರುವ ಸಾಧ್ಯತೆ ಹೆಚ್ಚು.

2. ರಬ್ಬರ್ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುವವರು

2. ರಬ್ಬರ್ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುವವರು

ರಬ್ಬರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರು ದೂಳು ಹಾಗೂ ರಾಸಾಯನಿಕ ವಸ್ತುಗಳಿಂದಾಗಿ ಹೊಟ್ಟೆ, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಕಾಣಿಸುವ ಸಾಧ್ಯತೆ ಹೆಚ್ಚು. ಕಾಯಿಲೆ ತಡೆ ಮತ್ತು ನಿಯಂತ್ರಣ ಕೇಂದ್ರದ ಪ್ರಕಾರ ರಬ್ಬರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಬ್ಲಡ್ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಗಡ್ಡೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದೆ. ಕಾರ್ಸಿನೋಜೀನ್ಸ್ ಎಂಬ ರಾಸಾಯನಿಕ ತ್ವಚೆ ಮುಖಾಂತರ ದೇಹವನ್ನು ದೇಹದಲ್ಲಿ ಆರೋಗ್ಯವಂತ ಕಣಗಳನ್ನು ಹಾಳು ಮಾಡುತ್ತದೆ.

3. ಮರು ಸಂಸ್ಕರಣೆ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗೆ

3. ಮರು ಸಂಸ್ಕರಣೆ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗೆ

ಹಾಳಾದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು ಇವುಗಳನ್ನು ಮರು ಸಂಸ್ಕರಣೆ ಮಾಡುವುದರಿಂದ ಹಣ ಗಳಿಸಬಹುದು. ಆದರೆ ಮರುಸಂಸ್ಕರಣೆ ಮಾಡುವಾಗ ಎಲೆಕ್ಟ್ರಾನಿಕ್ಸ್ ವಸ್ತುಗಳ ರಾಸಾಯನಿಗಳು ದೇಹದ ಮೇಲೆ ಅಡ್ಡ ಪರಿಣಾಮ ಬೀರುವುದು. ಇದರಿಂದ ರಾಸಾಯನಿಕ ಅನಿಲಗಳು ಉತ್ಪತ್ತಿಯಾಗುತ್ತವೆ. ಈ ರಾಸಾಯನಿಕಗಳು ಮೈ ಸೋಕುತ್ತಿದ್ದರೆ ಕಿಡ್ನಿ,ಲಿವರ್, ಶ್ವಾಸಕೋಶ, ಮೂಗಿನ ಕ್ಯಾನ್ಸರ್ ಮುಂತಾದ ತೊಂದರೆಗಳು ಬರುವ ಸಾಧ್ಯತೆ ಹೆಚ್ಚು.

 4. ರೈತರಿಗೆ

4. ರೈತರಿಗೆ

ರೈತರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಅದರಲ್ಲಿ ರೈತ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಿದೆ. ಇತರ ಮಹಿಳೆಯರಿಗೆ ಹೋಲಿಸಿದರೆ ರೈತ ಮಹಿಳೆಯರಿಗೆ ಕ್ಯಾನ್ಸರ್ ಬರುವ ಅಪಾಯ ಶೇ. 35ರಷ್ಟು ಹೆಚ್ಚಿದೆ. ಏಕೆಂದರೆ ಈಗ ಎಲ್ಲರು ಅಧಿಕ ಬೆಳೆ ಬೆಳೆಯುವ ಆಸೆಯಿಂದ ರಾಸಾಯನಿಕ ರಸಗೊಬ್ಬರಗಳನ್ನು ಬಳಸುತ್ತಾರೆ. ಇನ್ನು ಬೆಳೆದ ಬೆಳೆ ಹಾಳಾಗಬಾರದೆಂದು ಕೀಟ ನಾಶಕಗಳನ್ನು ಬಳಸುತ್ತಾರೆ. ಇವುಗಳನ್ನು ಕೈಯಿಂದ ಮುಟ್ಟುವಾಗ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ತುಂಬಾ ಕಡಿಮೆ. ಇದರಿಂದಾಗಿ ರಾಸಾಯನಿಕಗಳು ದೇಹವನ್ನು ಸೇರಿ ಕ್ಯಾನ್ಸರ್ ಗಡ್ಡೆ ಉಂಟಾಗುವ ಸಾಧ್ಯತೆ ಹೆಚ್ಚು.

5. ಕೂದಲಿಗೆ ಬಣ್ಣ ಹಚ್ಚುವುದು

5. ಕೂದಲಿಗೆ ಬಣ್ಣ ಹಚ್ಚುವುದು

ನ್ಯಾಷನಲ್ ಕ್ಯಾನ್ಸರ್ ಇನ್ಸಿಟ್ಯೂಟ್ ಪ್ರಕಾರ ಹೇರ್‌ಸ್ಟೈಲ್ ಮಾಡುವುದು ಅಂದರೆ ಕೂದಲಿಗೆ ಬಣ್ಣ ಹಚ್ಚುವುದರಿಂದ, ಹೇರ್‌ ಡೈ ಮಾಡುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಹೇಳಿದೆ. ಹೇರ್‌ ಡೈಯಲ್ಲಿ ಶಾಶ್ವತ ಹೇರ್‌ಡೈ ಮಾಡುವುದು ಇನ್ನೂ ಅಪಾಯಕಾರಿ. ಇನ್ನು ಹೇರ್ ಡೈ ಮಾಡುವವರಿಗೆ ಮಾತ್ರವಲ್ಲ, ಹೇರ್ ಡೈ ಹಚ್ಚಿಕೊಡುವವರಿಗೆ ಅಂದರೆ ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸ ಮಾಡುವವರಿಗೆ ಕ್ಯಾನ್ಸರ್ ಬರುವ ಅಪಾಯವಿದೆ.

6. ಮೆಕ್ಯಾನಿಕ್ ಕೆಲಸ ಮಾಡುವವರು

6. ಮೆಕ್ಯಾನಿಕ್ ಕೆಲಸ ಮಾಡುವವರು

ಕಾರು, ಬೈಕ್ ಮೆಕ್ಯಾನಿಕ್ ಕೆಲಸ ಮಾಡುವವರಿಗೆ ರಕ್ತ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಏಕೆಂದರೆ ವಾಹನಗಳನ್ನು ದುರಸ್ತಿ ಮಾಡುವಾಗ ಅನೇಕ ಬಗೆಯ ರಾಸಾಯನಿಕಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪೆಟ್ರೋಲಿಯಂ ಮುಂತಾದ ವಸ್ತುಗಳಿಂದ ಮೆಸೊಥೆಲಿಯೋಮಾ ಕ್ಯಾನ್ಸರ್ ಬರುವುದು.

7. ಮ್ಯಾನಿಕ್ಯೂರ್, ಪೆಡಿಕ್ಯೂರ್ ಎಕ್ಸ್‌ಫರ್ಟ್

7. ಮ್ಯಾನಿಕ್ಯೂರ್, ಪೆಡಿಕ್ಯೂರ್ ಎಕ್ಸ್‌ಫರ್ಟ್

ಬ್ಯೂಟಿ ಇಂಡೆಸ್ಟ್ರ್ರಿಯಲ್ಲಿ ಕೆಲಸ ಮಾಡುವವರಿಗೆ ಕೂಡ ಕ್ಯಾನ್ಸರ್ ಬರುವ ಅಪಾಯ ಇದೆ. ಉಗುರು ಸ್ವಚ್ಛ ಮಾಡಲು ಬಳಸುವ ರಾಸಾಯನಿಕಗಳನ್ನು ಆಗಾಗ ಮುಟ್ಟುವುದರಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬ್ಯೂಟಿ ಎಕ್ಸ್‌ಫರ್ಟ್ ತಮ್ಮ ಗ್ರಾಹಕರ ಉಗುರುಗಳನ್ನು ಸ್ವಚ್ಛ ಮಾಡಲು ಒಂದು ದಿನದಲ್ಲಿ ಅನೇಕ ಬಾರಿ ಈ ರಾಸಾಯನಿಕಗಳನ್ನು ಮುಟ್ಟುತ್ತಾರೆ. ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚು.

8. ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ

8. ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ

ಇಲ್ಲಿ ಡೀಸೆಲ್ ಹಾಗೂ ದೂಳು ಮತ್ತಿತರ ರಾಸಾಯನಿಕ ವಸ್ತುಗಳಿಂದಾಗಿ ಶರೀರದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇಲ್ಲಿ ತುಂಬಾ ವರ್ಷದಿಂದ ಕೆಲಸ ಮಾಡುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಹೆಚ್ಚು. ಅಧಿಕಮ ರಾಸಾಯನಿಕಗಳು ಮೈಯನ್ನು ಸೋಕುವುದರಿಂದ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವುದು.

9. ವಿಮಾನದಲ್ಲಿ ಕೆಲಸ ಮಾಡುವವರಿಗೆ

9. ವಿಮಾನದಲ್ಲಿ ಕೆಲಸ ಮಾಡುವವರಿಗೆ

ಇವರು ಭೂಮಿಯಿಂದ ಎತ್ತರದ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ನೇರಳಾತೀತ ಕಿರಣಗಳು ಹಾಗೂ ಕಾಸ್ಮಿಕ್ ವಿಕಿರಣ ಸೋಕುವ ಸಾಧ್ಯತೆ ಹೆಚ್ಚು. ವಿಮಾನದಲ್ಲಿ ಕೆಲಸ ಮಾಡುವವರಿಗೆ ತ್ವಚೆ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ.

10 . ಶಿಫ್ಟ್‌ನಲ್ಲಿ ಕೆಲಸ ಮಾಡುವುದು

10 . ಶಿಫ್ಟ್‌ನಲ್ಲಿ ಕೆಲಸ ಮಾಡುವುದು

ಯಾರು ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೋ ಅವರ ಆರೋಗ್ಯಕ್ಕೆ ಅಪಾಯ ಹೆಚ್ಚು. ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದರಿಂದ ನಮ್ಮ ದೇಹದ ಕಾರ್ಯವಿಧಾನದಕ್ಕೆ ಅಡಚಣೆ ಉಂಟಾಗುತ್ತದೆ, ನಿದ್ದೆಗೆ ಭಂಗ ಉಂಟಾಗುತ್ತದೆ. ಆದ್ದರಿಂದ ಆರೋಗ್ಯದ ಮೇಲೂ ಗಂಭೀರ ಪ್ರಭಾವ ಬೀರುವುದು. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಪಾಯ ಉಂಟಾಗುವ ಸಾಧ್ಯತೆ ಇದೆ. ಪುರುಷರಲ್ಲಿ ಹೃದಯ ಹಾಗೂ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುವುದು.

ಗಮನಕ್ಕೆ

ಅಮೆರಿಕನ್ ಕ್ಯಾನ್ಸರ್ ಸುಸೈಟಿ ಪ್ರಕಾರ ವೃತ್ತಿಯಿಂದ ಬರುವ ಕ್ಯಾನ್ಸರ್ ರೋಗದ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಕಾರಣ ಅಂಥ ಜಾಗದಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯ ಸುರಕ್ಷಿತೆಗೆ ಹೆಚ್ಚಿನ ಗಮನ ನೀಡಲಾಗಿದೆ.

English summary

Jobs That Increase The Chance To Get Cancer

Can your workplace cause health problems? Yes. According to the American Cancer Society reports, your workplace can cause you cancer.
X
Desktop Bottom Promotion