For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಸಿಗಲಿದೆ ಕೋವಿಡ್‌ 19ಗೆ ಚಿಕಿತ್ಸೆ: ಸರ್ಕಾರ ನೀಡಿರುವ ಮಾರ್ಗಸುಚಿಗಳಿವು

|

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರಿಗೆ ಕೊರೊನಾದ ಯಾವುದೇ ಲಕ್ಷಣಗಳು ಗೋಚರಿಸದಿದ್ದರೂ ಪಾಸಿಟಿವ್‌ ಬರುತ್ತಿದೆ. ಇನ್ನು ಕೆಲವರಿಗೆ ಸಣ್ಣ-ಪುಟ್ಟ ಲಕ್ಷಣಗಳಷ್ಟೇ ಕಂಡು ಬರುತ್ತದೆ.

How To Treat Covid 19 Patient At Home

ಕೆಲವರಲ್ಲಿ ಮಾತ್ರ ಕೊರೊನಾ ತೀವ್ರ ಸ್ವರೂಪ ಪಡೆಯುತ್ತಿದೆ. ಕೊರೊನಾ ಸೋಂಕಿನ ಸಣ್ಣ-ಪುಟ್ಟ ಲಕ್ಷಣಗಳು ಕಂಡು ಬಂದರೆ ಹೆದರಬೇಕಾದ ಅಗ್ಯತವಿಲ್ಲ, ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖವಾಗಬಹುದು. ಹೆಚ್ಚಿನ ಸೋಂಕಿನ ಲಕ್ಷಣಗಳು ಇಲ್ಲದ ರೋಗಿಗಳೇ ಮನೆಯಲ್ಲಿಯೇ ಚಿಕಿತ್ಸೆ ನೀಡಲು ರಾಜ್ಯ ಸರಕಾತ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಇದೊಂದು ರೀತಿಯಲ್ಲಿ ಒಳ್ಳೆಯದೇ ಆಗಿದ್ದು, ಆಸ್ಪತ್ರೆಗಳಲ್ಲಿ ಈಗಾಗಲೇ ಎದುರಾಗಿರುವ ಹಾಸಿಗೆ ಕೊರತೆ ಸಮಸ್ಯೆ ಉಂಟಾಗುವುದಿಲ್ಲ, ಗಂಭೀರವಾದವರನ್ನು ಆಸ್ಪತ್ರೆಯವರು ದಾಖಲಿಸಿಕೊಳ್ಳಬಹುದು. ಉಳಿದವರು ಇತರ ಸೋಂಕಿತರ ಜೊತೆಗಿರದೆ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು.

ಈ ರೀತಿ ಮಾಡುವುದರಿಂದ ಕುಟುಂಬದವರ ಆತಂಕ, ಆರೋಗ್ಯ ಸಿಬ್ಬಂದಿಯವರ ಹೊರೆಯೂ ಕಡಿಮೆಯಾಗಲಿದೆ. ಕೋವಿಡ್ 19 ಮೈಲ್ಡ್ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು ಎಂಬುವುದರ ಬಗ್ಗೆ ಕೇಂದ್ರ ಸರಕಾರ ನೀಡಿರುವ ಮಾರ್ಗ ಸೂಚಿಗಳೇನು ಎಂದು ನೋಡೋಣ ಬನ್ನಿ:

 ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದ ನಂತರ ಪ್ರತ್ಯೇಕ ಇರಬೇಕು

ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದ ನಂತರ ಪ್ರತ್ಯೇಕ ಇರಬೇಕು

ವ್ಯಕ್ತಿಯ ಗಂಟಲು ದ್ರವದ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದರೆ ರೋಗಿಯು ಪ್ರತ್ಯೇಕವಾಗಿರಬೇಕು. ಅಧಿಕಾರಿಗಳ ತಂಡ ಬಂದು ಪರಿಶೀಲನೆ ಮಾಡಿದ ಬಳಿಕ ವ್ಯಕ್ತಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದೇ, ಇಲ್ಲ ಆಸ್ಪತ್ರೆಗೆ ದಾಖಲಿಸಬೇಕೆ? ಎಂಬುವುದನ್ನು ತಿಳಿಸುತ್ತಾರೆ.

ರೋಗ ಲಕ್ಷಣ ನೋಡಿ ರೋಗದ ತೀವ್ರತೆ ತಿಳಿಯುತ್ತಾರೆ

ರೋಗ ಲಕ್ಷಣ ನೋಡಿ ರೋಗದ ತೀವ್ರತೆ ತಿಳಿಯುತ್ತಾರೆ

ಪರಿಶೀಲನೆ ವೇಳೆ ಶೀತ, ಗಂಟಲು ನೋವು, ಉಸಿರಾಟದ ತೊಂದರೆ, ರಕ್ತದೊತ್ತಡ, ಜ್ವರದ ತೀವ್ರತೆ ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ವ್ಯಕ್ತಿಗೆ ಕೊರೊನಾ ಜೊತೆಗೆ ಕ್ಯಾನ್ಸರ್, ಹೆಚ್‌ಐವಿ, ಕ್ಷಯರೋಗ, ಥೈರಾಯ್ಡ್ ಮುಂತಾದ ಕಾಯಿಲೆಗಳಿದ್ದರೆ ಅಮಥವರಿಗೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲು ಶಿಫಾರಸು ಮಾಡುವುದಿಲ್ಲ.

ಕೋವಿಡ್‌ 19 ರೋಗಿಗೆ ಮನೆಯಲ್ಲಿಯೇ ಚಿಕಿತ್ಸೆ

ಕೋವಿಡ್‌ 19 ರೋಗಿಗೆ ಮನೆಯಲ್ಲಿಯೇ ಚಿಕಿತ್ಸೆ

  • ಪ್ರತ್ಯೇಕವಾಗಿ ವಾಸಿಸಬೇಕು
  • ಜಿಲ್ಲಾ ಆರೋಗ್ಯ ಪ್ರಾಧಿಕಾರ ಅಥವಾ ಬಿಬಿಎಂಪಿ ಆರೋಗ್ಯ ತಂಡವು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ
  • ಆರೈಕೆ ವಿಧಾನದ ಬಗ್ಗೆ ಮಾಹಿತಿಯನ್ನು ಟೆಲಿ ಕನ್ಸಲ್ಟೇಶನ್ ಮೂಲಕ ಪಡೆದುಕೊಳ್ಳಬೇಕು.
  • ಐಸೋಲೇಷನ್ ನಿಯಮಗಳನ್ನು ಆ ಮನೆಯ ಸದಸ್ಯರೂ ಪಾಲಿಸಬೇಕು.
  • ಉತ್ತಮವಾಗಿ ಗಾಳಿ ಬೆಳಕು ಇರುವ ಕೊಠಡಿ, ಪ್ರತ್ಯೇಕ ಶೌಚಾಲಯ ಇರಬೇಕು.
  • ಆರೋಗ್ಯದ ಸ್ಥಿತಿ ಬಗ್ಗೆ ಪ್ರತಿನಿತ್ಯ ವೈದ್ಯರಿಗೆ ಮಾಹಿತಿ ನೀಡಬೇಕು.
  • ರೋಗಿ ಮನೆಯಿಂದ ಹೊರಬರುವಂತಿಲ್ಲ, ಅವರ ಕೈಗೆ ಟ್ಯಾಗ್ ಹಾಕುತ್ತಾರೆ ಹಾಗೂ ಗೇಟ್‌ಗೆ ಭಿತ್ತಿಪತ್ರ ಅಂಟಿಸಲಾಗುವುದು.
  • ಯಾರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ

    ಯಾರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ

    50 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮನೆಯಲ್ಲಿ ಚಿಕಿತ್ಸೆ ನೀಡುವುದಕ್ಕಿಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಉತ್ತಮವೆಂದು ತೀರ್ಮಾನಿಸಲಾಗಿದೆ. ಆದ್ದರಿಂದ ಅಂಥವರು ಆಸ್ಪತ್ರೆಗೆ ದಾಖಲಾಗಬೇಕು.

    ರೋಗಿ ಪಾಲಿಸಬೇಕಾದ ಸೂಚನೆಗಳೇನು?

    ರೋಗಿ ಪಾಲಿಸಬೇಕಾದ ಸೂಚನೆಗಳೇನು?

    • ರೋಗಿ N95 ಮಾಸ್ಕ್ ಧರಿಸಬೇಕು, ಅದನ್ನು 8 ಗಂಟೆಗಳ ಬಳಿಕ ಸೋಡಿಯಂ ಹೈಪೋಕ್ಲೋರೈಡ್‌ನಿಂದ ತೊಳೆದು ಕಸದ ಬುಟ್ಟಿಗೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪ್ರತೀ 8 ಗಂಟೆಗೊಮ್ಮೆ ಹೊಸ ಮಾಸ್ಕ್ ಬಳಸಬೇಕು,
    • ಮನೆಯವರಿಂದ ಅಂತರ ಕಾಯ್ದುಕೊಳ್ಳಬೇಕು, ವಯಸ್ಸಾದವರು ಹಾಗೂ ಮಕ್ಕಳ ಸಂಪರ್ಕಕಕ್ಕೇ ಬರಬಾರದು.
    • ಬಿಸಿ ಬಿಸಿ ಆದ ನೀರು ಕುಡಿಯಬೇಕು, ಕೈಯನ್ನು ಆಗಾಗ್ಗೆ ಸೋಪ್ ಹಚ್ಚಿ ತೊಳೆಯಬೇಕು. ಟವಲ್, ಲೋಟ, ತಟ್ಟೆ ಪ್ರತ್ಯೇಕವಾಗಿರಬೇಕು. ಯಾವುದೇ ವಸ್ತುಗಳನ್ನು ಮುಟ್ಟಿದರು ಸ್ಯಾನಿಟೈಸ್ ಮಾಡಬೇಕು.
    • ಆಕ್ಸಿಮೀಟರ್ ಅಥವಾ ಥರ್ಮಾಮೀಟರ್ ಬಳಸಿ ಜ್ವರ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸಬೇಕು.
    • ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು.
    • ಧೂಮಪಾನ, ಮದ್ಯಪಾನ ಮಾಡಬಾರದು, ಆರೋಗ್ಯ ಸೇತು ಆ್ಯಪ್ ಬಳಸಿ.
    • ಕುಟುಂಬದವರಿಗೆ ಸೂಚನೆ

      ಕುಟುಂಬದವರಿಗೆ ಸೂಚನೆ

      • ರೋಗಿಯ ಆರೈಕೆಯನ್ನು ಒಬ್ಬರಷ್ಟೇ ಮಾಡಿ, ಅವರು ಆರು ಅಡಿ ಅಂತರಕಾಯ್ದುಕೊಳ್ಳಬೇಕು
      • ಹೊರಗಿನವರಿಗೆ ಮನೆಗೆ ಬರಲು ಅವಕಾಶ ನೀಡಬಾರದು
      • ನೆರೆಯವರ ಸಹಾಯದಿಂದ ಅಗ್ಯತ ವಸ್ತುಗಳನ್ನು ತರಿಸಿಕೊಳ್ಳಿ
      • ಆತಂಕ ಪಡಬೇಡಿ
      • ವ್ಯಕ್ತಿಯಲ್ಲಿ ಆತ್ಮವಿಶ್ವಾಸ ತುಂಬುವಂತೆ ನಡೆದುಕೊಳ್ಳಿ
      • ಹೊಂದಲ ಉಂಟಾದರೆ ಸಹಾಯವಾಣಿ 14410ಕ್ಕೆ ಕರೆ ಮಾಡಿ
      • ರೋಗಿ ಬಳಸಿದ ತಟ್ಟೆ, ಲೋಟ ಬೇರೆಯವರು ಬಳಸಬಾರದು ಹಾಗೂ ರೋಗಿ ಇರುವ ಕೋಣೆಗೆ ಹೋಗುವಾಗ ಸರ್ಜಿಕಲ್ ಮಾಸ್ಕ್ ಧರಿಸಿ, ಅಲ್ಲಿಂದ ಬಂದ ತಕ್ಷಣ ಸ್ಯಾನಿಟೈಸ್ ಮಾಡಿ
      •  ಎಷ್ಟು ದಿನಗಳ ಕಾಲ ಆರೈಕೆ ಮಾಡಬೇಕು?

        ಎಷ್ಟು ದಿನಗಳ ಕಾಲ ಆರೈಕೆ ಮಾಡಬೇಕು?

        ಜ್ವರ ಕಡಿಮೆಯಾಗುವವರೆಗೆ ಆರೈಕೆ ಮಾಡಬೇಕಾಗುತ್ತದೆ. ರೋಗ ಲಕ್ಷಣಗಳು ಗೋಚರಿಸದೇ ಇದ್ದಲ್ಲಿ, ಜ್ವರ ಇಲ್ಲದಿದ್ದರೆ ರೋಗಿ ಗುಣಮುಖನಾಗಿದ್ದಾನೆ/ಳೆ ಎಂದು ಹೇಳಬಹುದು. ಕೆಲವರಿಗೆ 10 ದಿನಗಳಲ್ಲಿ ರೋಗ ಲಕ್ಷಣಗಳು ಇಲ್ಲವಾಗುವುದು. ಆದರೂ ಮತ್ತೆ 7 ದಿನ ಕ್ವಾರೆಂಟೈನ್‌ನಲ್ಲಿರಬೇಕು. ನಂತರ ರೋಗಿ ಬಳಸಿದ ಕೋಣೆ, ಬಟ್ಟೆ, ವಸ್ತುಗಳನ್ನು ಕ್ರಿಮಿ ನಾಶಕ ಬಳಸಿ ಸ್ವಚ್ಛ ಮಾಡಿ, ಸ್ಯಾನಿಟೈಸರ್ ಬಳಸಿ ಸ್ವಚ್ಛ ಮಾಡಿ.

        ಕೊರೊನಾ ವೈರಸ್‌ ಬಗ್ಗೆ ಭಯ ಬೇಡ, ಧೈರ್ಯದಿಂದ ಹಾಗೂ ಮಾನವೀಯತೆಯಿಂದ ವರ್ತಿಸಿ ಕೊರೊನಾ ಗೆಲ್ಲೋಣ...

English summary

How To Treat Covid-19 Patient At Home; Home isolation Guidelines

Now Karnataka government planing to treat government at home only, here are government guideline to treat covid 19 patient at home, read on,
X
Desktop Bottom Promotion