For Quick Alerts
ALLOW NOTIFICATIONS  
For Daily Alerts

ವ್ಯಾಕ್ಸಿನ್ ಪಡೆಯಲು ಶೆಡ್ಯೂಲ್ ಮಾಡಿದ್ದೀರಾ? ಅದಕ್ಕಿಂತ ಮೊದಲು ಇದನ್ನು ಮಾಡಿ

|

ಭಾರತದಲ್ಲಿ ಒಂದು ಕಡೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಆದರೆ ಈಗೀನ ಪರಿಸ್ಥಿತಿ ನೋಡಿದಾಗ ಲಸಿಕೆ ಪಡೆದವರ ಮೇಲೆ ಕೊರೊನಾ ಅಷ್ಟೇನು ಬೀರುತ್ತಿಲ್ಲ, ಲಸಿಕೆ ಪಡೆದ ಬಳಿಕ ಕೆಲವರಿಗೆ ಕೊರೊನಾ ಪಾಸಿಟಿವ್ ಬರುತ್ತಾ ಇದೆಯಾದರೂ ಪ್ಲಸ್‌ ಪಾಯಿಂಟ್‌ ಅಂದ್ರೆ ವ್ಯಾಕ್ಸಿನ್ ಪಡೆದವರು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ಜನರು ವ್ಯಾಕ್ಸಿನ್ ಪಡೆಯಲು ತುಂಬಾ ಉತ್ಸಾಹ ತೋರುತ್ತಿದ್ದಾರೆ.

ಲಸಿಕೆ ಹಾಕಿದರೆ ಕೊರೊನಾದಿಂದ ಪಾರಾಗಬಹುದು, ಆದರೆ ಲಸಿಕೆ ಹಾಕುವುದಾದರೆ ನೀವು ಕೆಲವೊಂದು ಕ್ರಮ ಅನುಸರಿಸಿದರೆ ಕೋವಿಡ್ 19 ಲಸಿಕೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಕೊರೊನಾ ಲಸಿಕೆ ಪಡೆಯುವುದಕ್ಕೆ ಮುನ್ನ ನೂವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೇಳಲಾಗಿದೆ ನೋಡಿ:

1. ನಿದ್ದೆ

1. ನಿದ್ದೆ

ಲಸಿಕೆ ಪಡೆಯುವ ಮುನ್ನ ಚೆನ್ನಾಗಿ ನಿದ್ದೆ ಮಾಡಿ. ಒಳ್ಳೆಯ ನಿದ್ದೆ ದೇಹದಲ್ಲಿ ಪ್ರತಿಕಾಯ ವ್ಯವಸ್ಥೆ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ, ಇದರಿಂದಾಗಿ ಲಸಿಕೆ ದೇಹದಲ್ಲಿ ಒಳ್ಳೆಯ ಪರಿಣಾಮ ಬೀರುವುದು.

2. ಚೆನ್ನಾಗಿ ನೀರು ಕುಡಿಯಿರಿ.

2. ಚೆನ್ನಾಗಿ ನೀರು ಕುಡಿಯಿರಿ.

ಬಿಸಿ ಬಿಸಿ ನೀರನ್ನು ತೆಗೆದುಕೊಳ್ಳಿ. ನೀರು ಜೊತೆಗೆ ಸೂಪ್‌ ಕೂಡ ಒಳ್ಳೆಯದೇ. ಇವೆಲ್ಲಾ ದೇಹದಲ್ಲಿ ನಿರಿನಂಶ ಕಾಪಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.

3. ಸತುವಿನ ಸಪ್ಲಿಮೆಂಟ್‌ ತೆಗೆದುಕೊಳ್ಳಿ ಹಾಗೂ ಸತುವಿನಂಶವಿರುವ ಆಹಾರ ಸೇವಿಸಿ.

3. ಸತುವಿನ ಸಪ್ಲಿಮೆಂಟ್‌ ತೆಗೆದುಕೊಳ್ಳಿ ಹಾಗೂ ಸತುವಿನಂಶವಿರುವ ಆಹಾರ ಸೇವಿಸಿ.

* ಅಗಸೆ ಬೀಜ

* ಸಿಹಿ ಕುಂಬಳಕಾಯಿ ಬೀಜ

* ಬಾದಾಮಿ

* ವಾಲ್ನಟ್

* ಎಳ್ಳು

* ಮೊಟ್ಟೆ

* ಧಾನ್ಯಗಳು

* ಹಾಲಿನ ಉತ್ಪನ್ನ

* ಪೌಲ್ಟ್ರಿ

* ಹಣ್ಣುಗಳು

* ತರಕಾರಿಗಳು

ಭಯಬೇಡ

ಭಯಬೇಡ

ದೇಹದ ಆರೋಗ್ಯಕ್ಕೆ ಹಾಗೂ ನಮ್ಮ ಮನಸ್ಸಿನ ಚಿಂತನೆಗೆ ತುಂಬಾನೇ ಸಂಬಂಧವಿದೆ. ನಾವು ಕೆಟ್ಟದನ್ನು ಯೋಚಿಸಿ, ಒಳ್ಳೆಯದನ್ನು ಬಯಸಿದರೆ ಆಗಲ್ಲ. ಮೊದಲು ಭಯಬಿಡಿ. ಲಸಿಕೆ ಮೇಲೆ ನಂಬಿಕೆ ಇರಲಿ. ಒಳ್ಳೆಯದನ್ನೇ ಬಯಸಿ, ಒಳ್ಳೆದಾಗುತ್ತದೆ.

ಧನ್ಯವಾದಗಳು

English summary

How to prepare for your COVID-19 vaccine appointment in Kannada

Here is how to prepare for your COVID-19 vaccine appointment, Read On..
X
Desktop Bottom Promotion