For Quick Alerts
ALLOW NOTIFICATIONS  
For Daily Alerts

ಸಂಗೀತ ಕೇಳುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಗೊತ್ತಾ?

|

ಮನುಷ್ಯ ಎಂದ ಮೇಲೆ ಒತ್ತಡ, ಆನಾರೋಗ್ಯಗಳು ಸಾಮಾನ್ಯ. ಆದರೆ ಒತ್ತಡದಿಂದ ಹೊರಬರುವುದು ಹೇಗೆ ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ. ಒಂದು ಸರಳ ಪರಿಹಾರ ಮನುಷ್ಯನಿಗೆ ಒತ್ತಡದಿಂದ ಮಾತ್ರವಲ್ಲ ಆನಾರೋಗ್ಯ ಸಹ ಬಾಧಿಸದಂತೆ ಮಾಡುತ್ತದೆ.

ಹೌದು ತಜ್ಞರ ಪ್ರಕಾರ, ನಿತ್ಯ ಸಂಗೀತ ಕೇಳುವುದರಿಂದ ನಮ್ಮ ಮನಸ್ಥಿತಿ ಹಗುರವಾಗುತ್ತದೆ ಹಾಗೂ ಬಹುತೇಕ ಆರೋಗ್ಯ ಸಮಸ್ಯೆ ಬರುವುದಿಲ್ಲ. ಹಾಗಾದರೆ ಸಂಗೀತ ಕೇಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ:

ಸಂಗೀತ ಕೇಳುವುದರಿಂದ ಸಂತೋಷದ ಹಾರ್ಮೋನು ಹೆಚ್ಚುತ್ತದೆ

ಸಂಗೀತ ಕೇಳುವುದರಿಂದ ಸಂತೋಷದ ಹಾರ್ಮೋನು ಹೆಚ್ಚುತ್ತದೆ

ಸಂಗೀತ ಕೇಳುವುದರಿಂದ ಸಂತೋಷದ ಹಾರ್ಮೋನು ಬಿಡುಗಡೆಯಾಗುತ್ತವೆ ತಜ್ಞರ ಪ್ರಕಾರ, ಸಂಗೀತ ಕೇಳುವುದರಿಂದ ನಿಮ್ಮ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಉದಾಹರಣೆಗೆ ಸಂಗೀತವನ್ನು ಕೇಳುವುದರಿಂದ ಎಂಡಾರ್ಫಿನ್, ಆಕ್ಸಿಟೋಸಿನ್, ಸಿರೊಟೋನಿನ್, ಡೋಪಮೈನ್ ಇತ್ಯಾದಿ ಹಾರ್ಮೋನ್‌ಗಳ ಮಟ್ಟ ಹೆಚ್ಚುತ್ತದೆ ಮತ್ತು ನಿಮಗೆ ಸಂತೋಷವಾಗುತ್ತದೆ.

ಒತ್ತಡ ನಿವಾರಿಸುತ್ತದೆ

ಒತ್ತಡ ನಿವಾರಿಸುತ್ತದೆ

ಸಂಗೀತವನ್ನು ಕೇಳುವುದರಿಂದ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಸಂಶೋಧನೆಯ ಪ್ರಕಾರ, ಸಂಗೀತ ಚಿಕಿತ್ಸೆಯು ನೋವು, ಆತಂಕ, ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ.

ನಿದ್ರಾಹೀನತೆ ಸಮಸ್ಯೆ ಇರುವುದಿಲ್ಲ

ನಿದ್ರಾಹೀನತೆ ಸಮಸ್ಯೆ ಇರುವುದಿಲ್ಲ

ನಿಮಗೆ ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗದಿದ್ದರೆ, ರಾತ್ರಿಯಲ್ಲಿ ಕಡಿಮೆ ಧ್ವನಿಯಲ್ಲಿ ಹಾಡುಗಳನ್ನು ಕೇಳಿ. ಇದು ನಿಮ್ಮ ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ನಿದ್ದೆ ಕೂಡ ತುಂಬಾ ಚೆನ್ನಾಗಿರುತ್ತದೆ. ರಾತ್ರಿಯಲ್ಲಿ ನೀವು ಕೇಳಬಹುದಾದ ಕೆಲವು ಮೃದುವಾದ ಸಂಗೀತ.

ಗಮನ ಹೆಚ್ಚಿಸುತ್ತದೆ

ಗಮನ ಹೆಚ್ಚಿಸುತ್ತದೆ

ನೀವು ಯಾವುದರ ಮೇಲೆಯೂ ಗಮನಹರಿಸಲು ಸಾಧ್ಯವಾಗದಿದ್ದರೆ ಸಂಗೀತ ಕೇಳಬಹುದು. ಸಂಗೀತವು ವಿಷಯಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸಂಗೀತವನ್ನು ಕೇಳುವುದು ನಿಮ್ಮ ಸುತ್ತಲೂ ಸಕಾರಾತ್ಮಕ ವಾತಾವರಣ ಸೃಷ್ಟಿಸುತ್ತದೆ, ಅದರ ಹೊರತಾಗಿ ನಿಮ್ಮೊಳಗೆ ನೀವು ಧನಾತ್ಮಕವಾಗಿ ಭಾವಿಸುತ್ತೀರಿ.

ಧ್ಯಾನದ ಸಮಯದಲ್ಲಿ ಸಂಗೀತ

ಧ್ಯಾನದ ಸಮಯದಲ್ಲಿ ಸಂಗೀತ

ತಜ್ಞರ ಪ್ರಕಾರ ನೀವು ಯೋಗ ಅಥವಾ ಧ್ಯಾನದ ಸಮಯದಲ್ಲಿ ಸಂಗೀತ ಕೇಳಿದರೆ ನಿಮ್ಮ ಗಮನವು ಹೆಚ್ಚುತ್ತದೆ. ಧ್ಯಾನದ ಸಮಯದಲ್ಲಿ ನೀವು ಭಾರತೀಯ ಶಾಸ್ತ್ರೀಯ ಸಂಗೀತ, ಪ್ರಕೃತಿ ಶಬ್ದಗಳು, ವಾದ್ಯ ಸಂಗೀತ, ಕ್ರಿಶ್ಚಿಯನ್ ಸಂಗೀತವನ್ನು ಕೇಳಬಹುದು. ಇದರಿಂದ ನಿಮ್ಮ ಒತ್ತಡವೂ ನಿವಾರಣೆಯಾಗುತ್ತದೆ.

ಸಂಗೀತ ಕೇಳುವಾಗ ಈ ವಿಷಯ ನೆನಪಿಡಿ...!

ಸಂಗೀತ ಕೇಳುವಾಗ ಈ ವಿಷಯ ನೆನಪಿಡಿ...!

ಯಾವಾಗಲೂ ಕಡಿಮೆ ಧ್ವನಿಯಲ್ಲಿ ಸಂಗೀತ ಆಲಿಸಿ. ಅತಿ ಹೆಚ್ಚು ವಾಲ್ಯೂಮ್‌ನಲ್ಲಿ ಸಂಗೀತವನ್ನು ಕೇಳುವುದರಿಂದ ನಿಮಗೆ ಹಾನಿಯಾಗಬಹುದು.

ನೀವು ಖಿನ್ನತೆಗೆ ಒಳಗಾಗಿದ್ದರೆ, ದುಃಖದ ಸಂಗೀತದ ಬದಲಿಗೆ ಜೋರಾಗಿ ಬೀಟ್ ಅಥವಾ ಹಗುರವಾದ ಸಂಗೀತವನ್ನು ಕೇಳಿ. ಇದು ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತದೆ.

English summary

Health Benefits Of Listening To Music in Kannada

Here we are discussing about Health Benefits Of Listening To Music in Kannada. Read more.
Story first published: Thursday, December 1, 2022, 15:23 [IST]
X
Desktop Bottom Promotion