For Quick Alerts
ALLOW NOTIFICATIONS  
For Daily Alerts

ಅಸಿಡಿಟಿ, ಹಾರ್ಟ್‌ಬರ್ನ್‌ ನಿವಾರಿಸುವ ಕಿನ್ನೋ ಹಣ್ಣು, ಆರೋಗ್ಯಕ್ಕೂ ತುಂಬಾ ಒಳ್ಳೆಯದು

|

ಕಿನ್ನೋಸ್ ಅಥವಾ ಕಿನ್ನೋ ಹಣ್ಣು ನಿಮಗೆಲ್ಲಾ ಗೊತ್ತಿರುತ್ತದೆ. ಇದು ಒಂದು ಬಗೆಯ ಕಿತ್ತಳೆ ಜಾತಿಗೆ ಸೇರಿದ ಹಣ್ಣಾಗಿದೆ. ಜ್ಯೂಸ್‌ ಅಂಗಡಿಗಳಲ್ಲಿ, ಸೂಪರ್‌ಮಾರ್ಕೆಟ್‌ಗಳಲ್ಲಿ ಈ ಹಣ್ಣು ಇರುತ್ತದೆ. ಪಂಜಾಬ್‌ನಲ್ಲಿ ಇದನ್ನು ಕಿಂಗ್ಸ್‌ ಆಫ್‌ ಫ್ರೂಟ್‌ ಎಂದು ಕರೆಯುತ್ತಾರೆ.

Health Benefits Of Including Kinnows In Your Diet

ನ್ಯೂಟ್ರಿಷಿಯನ್ ತಜ್ಞರ ಪ್ರಕಾರ ಇದನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳುತ್ತಾರೆ. ಇಲ್ಲಿ ನಾವು ದಿನನಿತ್ಯದ ಆಹಾರದಲ್ಲಿ ಇದನ್ನು ತೆಗೆದುಕೊಳ್ಳುವುದರಿಂದ ನೀವು ಪಡೆಯಬಹುದಾದ ಅದ್ಭುತ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ ನೋಡಿ: ಇದರ ಬಹುಮುಖ್ಯ ಪ್ರಯೋಜನವೆಂದರೆ ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಯಾರಿಗೆ ಅಜೀರ್ಣ ಸಮಸ್ಯೆ ಇದೆಯೋ ಅವರು ಇದನ್ನು ತೆಗೆದುಕೊಳ್ಳುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ಇದನ್ನು ಬ್ರೇಕ್‌ಫಾಸ್ಟ್‌ ಜೊತೆ ತೆಗೆದುಕೊಳ್ಳಿ. ಇಡೀ ದಿನ ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು.

1. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

1. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

ಇದರ ಬಹುಮುಖ್ಯ ಪ್ರಯೋಜನವೆಂದರೆ ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಯಾರಿಗೆ ಅಜೀರ್ಣ ಸಮಸ್ಯೆ ಇದೆಯೋ ಅವರು ಇದನ್ನು ತೆಗೆದುಕೊಳ್ಳುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ಇದನ್ನು ಬ್ರೇಕ್‌ಫಾಸ್ಟ್‌ ಜೊತೆ ತೆಗೆದುಕೊಳ್ಳಿ. ಇಡೀ ದಿನ ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು.

 2. ಅಸಿಡಿಟಿ, ಹಾರ್ಟ್‌ಬರ್ನ್‌ ಕಡಿಮೆ ಮಾಡುತ್ತದೆ

2. ಅಸಿಡಿಟಿ, ಹಾರ್ಟ್‌ಬರ್ನ್‌ ಕಡಿಮೆ ಮಾಡುತ್ತದೆ

ತುಂಬಾ ಅಸಿಡಿಟಿ, ಇದರಿಂದಾಗಿ ಎದೆಉರಿ ಈ ರೀತಿಯ ತೊಂದರೆಗಳು ತುಂಬಾ ದಿನದಿಮದ ಇವೆಯೇ, ಹಾಗಾದರೆ ಕಿನ್ನೋ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಇದರಲ್ಲಿ ಖನಿಜಾಂಶ ಹಾಗೂ ಉಪ್ಪಿನಂಶವಿದ್ದು ಇದು ಅಸಿಡಿಟಿ ಕಡಿಮೆ ಮಾಡುತ್ತದೆ. ಯಾರಿಗೆ ಈ ಸಮಸ್ಯೆ ಇದೆಯೋ ಅವರು ಪ್ರತಿದಿನ ಒಂದು ಕಿನ್ನೋ ಹಣ್ಣುಸೇವಿಸುವುದು ಒಳ್ಳೆಯದು, ಇದರಿಂದ ಆರೋಗ್ಯ ತುಂಬಾ ಸುಧಾರಿಸುತ್ತದೆ.

3. ವಿಟಮಿನ್ ಸಿ ಮತ್ತು ಖನಿಜಾಂಶಗಳಿವೆ

3. ವಿಟಮಿನ್ ಸಿ ಮತ್ತು ಖನಿಜಾಂಶಗಳಿವೆ

ಕಿನ್ನೋ ಹಣ್ಣಿನಲ್ಲಿ ಅತ್ಯಧಿಕ ವಿಟಮಿನ್ ಸಿ ಇದೆ. ವಿಟಮಿನ್ ಸಿ ಯೌವನದ ಕಳೆ ಕಾಪಾಡುವಲ್ಲಿ ತುಂಬಾ ಸಹಕಾರಿ, ಇದರಿಂದ ಬೇಗನೆ ಮುಖದಲ್ಲಿ ನೆರಿಗೆ ಬೀಳುವುದಿಲ್ಲ. ಅಲ್ಲದೆ ಇದು ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಇದರಿಂದಾಗಿ ತ್ವಚೆಯ ಹೊಳಪು ಕೂಡ ಹೆಚ್ಚಾಗುವುದು.

4. ದೇಹಕ್ಕೆ ಇಂಧನ ಒದಗಿಸುತ್ತದೆ

4. ದೇಹಕ್ಕೆ ಇಂಧನ ಒದಗಿಸುತ್ತದೆ

ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಗ್ಲೂಕೋಸ್, ಫ್ರಕಟ್ಓಸ್‌, ಸುಕ್ರೋಸ್ ಇರುವುದರಿಂದ ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಪ್ರತಿದಿನ ವ್ಯಾಯಾಮದ ಬಳಿಕ ಇದನ್ನು ಒಂದು ತಿಂದರೆ ಸುಸ್ತು ಬೇಗನೆ ಮಾಯವಾಗುವುದು, ದೇಹಲ್ಲಿ ಶಕ್ತಿ ತುಂಬುವುದು. ಇದನ್ನು ಬೆಳಗ್ಗೆ ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ದಿನಪೂರ್ತಿ ಲವಲವಿಕೆಯಿಂದ ಇರಬಹುದು.

5. ಕೊಲೆಸ್ಟ್ರಾಲ್ ಸಮತೋಲನದಲ್ಲಿಡುತ್ತದೆ

5. ಕೊಲೆಸ್ಟ್ರಾಲ್ ಸಮತೋಲನದಲ್ಲಿಡುತ್ತದೆ

ಆರೋಗ್ಯ ತಜ್ಞರ ಪ್ರಕಾರ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಕಿನ್ನೋ ಹಣ್ಣುಗಳು ತುಂಬಾ ಪ್ರಯೋಜನಕಾರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ. ಇದು ಹೃದಯಾಘಾತ, ಸ್ಟ್ರೋಕ್ (ಪಾರ್ಶ್ವವಾಯು) ಮುಂತಾದ ಸಮಸ್ಯೆ ತಡೆಗಟ್ಟುವಲ್ಲಿ ಕೂಡ ಸಹಕಾರಿ.

ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಪ್ರತಿದಿನ ತಿನ್ನುವುದರಿಂದ ಮೂಳೆಯ ಆರೋಗ್ಯಕ್ಕೂ ಒಳ್ಳೆಯದು.

ಇನ್ನು ಇದನ್ನು ಬಳಸಿ ಹಲವಾರು ಸೌಂದರ್ಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದರ ರಸವನ್ನು ನೀವು ಫೇಶಿಯಲ್‌ನಲ್ಲಿ ಕೂಡ ಬಳಸಬಹುದು.

English summary

Health Benefits Of Including Kinnows In Your Diet

According to nutritionists and health experts, adding kinnows to our daily diet can improve our health in many ways. Here are amazing health benefits of kinnows...
X
Desktop Bottom Promotion