For Quick Alerts
ALLOW NOTIFICATIONS  
For Daily Alerts

N95 ಮಾಸ್ಕ್‌ ಧರಿಸಿ ಕೊರೊನಾವೈರಸ್‌ ತಡೆಗಟ್ಟಲು ಸಾಧ್ಯವಿಲ್ಲ: ಸರಕಾರದ ಎಚ್ಚರಿಕೆ

|

ಜನರು ಹೊರಗಡೆ ಹೋಗುವಾಗ ಯಾವಬಟ್ಟೆ ಧರಿಸಲಿ ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ, ಯಾವ ಮಾಸ್ಕ್‌ ಧರಿಸಲಿ ಎಂದು ಯೋಚಿಸುತ್ತಾರೆ. ಕೆಲವರು ಬಟ್ಟೆಯ ಮಾಸ್ಕ್‌ ಧರಿಸಿದರೆ ಇನ್ನು ಕೆಲವರು ಸರ್ಜಿಕಲ್ ಮಾಸ್ಕ್ ಮತ್ತೆ ಕೆಲವರೂ ಇನ್ನೂ ಸೇಫ್‌ ಆಗಿರಲಿ ಎಂದು ಉಸಿರಾಟದ ಕವಾಟಗಳನ್ನು ಹೊಂದಿರುವ N95 ಮಾಸ್ಕ್‌ ಧರಿಸುತ್ತಿದ್ದಾರೆ.

Government Warns Against Use Of N-95 Masks With Valves

N95 ಮಾಸ್ಕ್‌ ಧರಿಸಿದರೆ ಸೇಫ್‌ ಎಂದೇ ಧರಿಸಿದ ಮಾಸ್ಕ್‌ ಅನ್ನೇ ಪ್ರತಿದಿನ ಧರಿಸಿ ಎಷ್ಟೋ ಜನರು ಓಡಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರವೂ N95 ಮಾಸ್ಕ್ ಧರಿಸಿ ಓಡಾಡದಂತೆ ಎಚ್ಚರಿಕೆ ನೀಡಿದೆ. ಉಸಿರಾಟದ ಕವಾಟಗಳ N95 ಮಾಸ್ಕ್‌ ಧರಿಸಿ ಓಡಾಡಿದರೆ ಕೊರೊನಾವೈರಸ್‌ ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ.

ಜನರು N95 ಮಾಸ್ಕ್‌ ಧರಿಸುವುದರಿಂದ ಪ್ರಯೋಜನವಿಲ್ಲ, ಏಕೆ?

ಜನರು N95 ಮಾಸ್ಕ್‌ ಧರಿಸುವುದರಿಂದ ಪ್ರಯೋಜನವಿಲ್ಲ, ಏಕೆ?

ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಯ ನಿರ್ದೇಶಕ ರಾಜೀವ್ ಗಾರ್ಗ್ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲೆಟರ್ ಮೂಲಕ ಜನರು N95 ಮಾಸ್ಕ್ ಧರಿಸದಂತೆ ಎಚ್ಚರಿಕೆ ನೀಡಿದೆ.

ಜನರಿಗೆ N95 ಇರುವ ಮಾಸ್ಕ್‌ನ ಸರಿಯಾದ ಬಳಕೆ ಗೊತ್ತಿಲ್ಲದೇ ಇರುವುದರಿಂದ ಅದನ್ನು ಬಳಸದಿರುವುದೇ ಉತ್ತಮ ಎಂದು ತಿಳಿಸಿದ್ದಾರೆ. ಅದರಲ್ಲೂ ಜನರು ಉಸಿರಾಟದ ಕವಾಟಗಳ ಮಾಸ್ಕ್‌ ಧರಿಸುತ್ತಿದ್ದಾರೆ, ಇದು ಸ್ವಲ್ಪವೂ ಸುರಕ್ಷಿತವಲ್ಲ, ಈ ಮೂಲಕ ಕೊರೊನಾವೈರಸ್‌ ಹರಡುವುದು, ಆದ್ದರಿಂದ ಇಂಥ ಮಾಸ್ಕ್‌ ಧರಿಸದೇ ಇರುವುದೇ ಒಳ್ಳೆಯದು ಎಂಬ ಸಲಹೆ ನೀಡಿದ್ದಾರೆ.

N95 ಮಾಸ್ಕ್‌ ಆರೋಗ್ಯ ಕಾರ್ಯಕರ್ತರಿಗಷ್ಟೇ ಸೂಕ್ತ

N95 ಮಾಸ್ಕ್‌ ಆರೋಗ್ಯ ಕಾರ್ಯಕರ್ತರಿಗಷ್ಟೇ ಸೂಕ್ತ

N95 ಮಾಸ್ಕ್‌ ಅನ್ನು ಆರೋಗ್ಯ ಕಾರ್ಯಕರ್ತರು ಅಷ್ಟೇ ಬಳಸುತ್ತಾರೆ. ಆದರೆ ಇಂಥ ಮಾಸ್ಕ್‌ ಮರುಬಳಕೆ ಮಾಡುವುದು ಕೂಡ ಸುರಕ್ಷಿತವಲ್ಲ. ಇದನ್ನು ಒಮ್ಮೆಯಷ್ಟೇ ಬಳಸುವುದು ಸುರಕ್ಷಿತ.

ಆದರೆ ಜನರು ಒಂದೇ ಮಾಸ್ಕ್‌ ಅನ್ನು ಬಳಸುತ್ತಿದ್ದಾರೆ. ಇದರಿಂದ ಕೊರೊನಾವೈರಸ್‌ ಮಾತ್ರವಲ್ಲ ಇತರ ಆರೋಗ್ಯ ಸಮಸ್ಯೆಯೂ ಕಾಡುವ ಸಾಧ್ಯತೆ ಇದೆ.

ಯಾವ ಮಾಸ್ಕ್ ಸುರಕ್ಷಿತ

ಯಾವ ಮಾಸ್ಕ್ ಸುರಕ್ಷಿತ

ಕೇಂದ್ರ ಆರೋಗ್ಯ ಇಲಾಖೆಯು ಜನರಿಗೆ ಮನೆಯಲ್ಲಿಯೇ ಮಾಡುವ ಬಟ್ಟೆಯ ಮಾಸ್ಕ್‌ ಧರಿಸಲು ಸಲಹೆ ನೀಡಿದೆ. ಬಟ್ಟೆಯ ಬಣ್ಣ ಯಾವುದಾದರೂ ಸರಿ ಶುದ್ಧವಾದ ಬಟ್ಟೆಯ ಮಾಸ್ಕ್ ಧರಿಸುವುದು ಒಳ್ಳೆಯದು. ಇನ್ನು ಮಾಸ್ಕ್ ಧರಿಸುವ ಮುನ್ನ ಕೈಗಳನ್ನು ಸೋಪ್‌ ಹಾಕಿ ತೊಳೆಯಬೇಕು, ನಂತರ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸಿದ ಬಳಿಕ ಆಗಾಗ ಬಿಚ್ಚುವುದು-ಹಾಕುವುದು, ಮಾಸ್ಕ್ ಅನ್ನು ಆಗಾಗ ಮುಟ್ಟುವುದು ಮಾಡಬೇಡಿ.

 ಮಾಸ್ಕ್ ಹೇಗೆ ತೊಳೆದು ಸ್ವಚ್ಛ ಮಾಡಬೇಕು?

ಮಾಸ್ಕ್ ಹೇಗೆ ತೊಳೆದು ಸ್ವಚ್ಛ ಮಾಡಬೇಕು?

ನೀವು ಮಾಸ್ಕ್ ತೊಳೆಯಲು ಬಿಸಿ ನೀರು ಬಳಸಿ, ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಆ ನೀರಿನಲ್ಲಿ ಸ್ವಲ್ಪ ಹೊತ್ತು ಮಾಸ್ಕ್ ಹಾಕಿಟ್ಟು, ನಂತರ ಸೋಪ್‌ ಹಚ್ಚಿ ತೊಳೆಯಿರಿ. ಮಾಸ್ಕ್‌ ಅನ್ನು ಚೆನ್ನಾಗಿದ ಒಣಗಿದ ಬಳಿಕ ಬಳಸಿ. ಒಂದು ಒಗೆದು ಹಾಕುವಾಗ ಮತ್ತೊಂದು ಮಾಸ್ಕ್ ಬಳಸಲು 2-3 ಜೊತೆ ಮಾಸ್ಕ್ ಇರುವುದು. ಅಲ್ಲದೆ ಒಬ್ಬರ ಮಾಸ್ಕ್ ಅನ್ನು ಮತ್ತೊಬ್ಬರು ಬಳಸಲು ಹೋಗಬೇಡಿ.

English summary

Government Warns Against Use Of N-95 Masks With Valves

The Central Government has written to all states and union territories warning against the use of N-95 masks with valved respirators by people, saying these do not prevent the virus from spreading.
Story first published: Tuesday, July 21, 2020, 17:49 [IST]
X
Desktop Bottom Promotion