Just In
- 1 hr ago
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- 5 hrs ago
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- 9 hrs ago
Horoscope Today 23 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 1 day ago
ವಾರ ಭವಿಷ್ಯ (ಜ.22-ಜ.28): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
Don't Miss
- News
ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ? ಮಾಧುಸ್ವಾಮಿಗೆ ಜೆಡಿಎಸ್ ಪ್ರಶ್ನೆ
- Sports
IND vs NZ 3rd ODI: ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ, ಟಿವಿ & ಲೈವ್ ಸ್ಟ್ರೀಮಿಂಗ್ ವಿವರ
- Technology
ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಒಪ್ಪೋ ರೆನೋ 8T! ಬೆಲೆ ಎಷ್ಟಿರಬಹುದು?
- Movies
ಒಂದು ಶೋಗೆ 200 ಕೋಟಿ ಸಂಭಾವನೆ ಪಡೆಯುತ್ತಿರುವ ಗಾಯಕಿ! ಯಾರೀಕೆ?
- Finance
Honda New Activa H-Smart: ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿಗಳ ಬಿಡುಗಡೆ
- Automobiles
ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಜನಪ್ರಿಯ ಬಾಲಿವುಡ್ ನಟಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೇಡರ ಹುಳು ಕಚ್ಚಿದರೆ ನಿರ್ಲಕ್ಷ್ಯ ಬೇಡ್ವೆ ಬೇಡ, ಈ ಮನೆಮದ್ದುಗಳನ್ನು ಮಾಡಿ
ಸಾಮಾನ್ಯವಾಗಿ ಮನೆಗಳಲ್ಲಿ ಜೇಡರ ಹುಳುಗಳಿರುತ್ತವೆ. ಅವುಗಳಿಂದ ಬಲೆ ಕಟ್ಟುವ ಉಪದ್ರವ ಬಿಟ್ಟರೆ ಮತ್ತೇನು ಹೆಚ್ಚಿನ ಅಪಾಯವಿಲ್ಲವೆಂದೇ ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ಜೇಡರ ಹುಳ ಕಚ್ಚುತ್ತದೆ, ಹೀಗೆ ಕಚ್ಚಿದಾಗಲೂ ಕೂಡ ಚೇಳಿನಂತೆ ಇದೇನು ವಿಷಕಾರಿ ಅಲ್ಲ ಎಂದು ಸುಮ್ಮನಾಗುತ್ತೇವೆ, ಆದರೆ ಜೇಡರ ಹುಳು ಕಚ್ಚಿದಾಗ ಅದಕ್ಕೆ ಚಿಕಿತ್ಸೆ ಮಾಡದೆ ಹೋದರೆ ಅಪಾಯ ಉಂಟಾಗುವುದು ಎಂದು ನೆನಪಿರಲಿ.
ಜೇಡರ ಹುಳು ಕಚ್ಚಿದಾಗ ನೀವು ಮನೆಮದ್ದು ಮಾಡಬಹುದು, ಇಲ್ಲಿ ಕೆಲವೊಂದು ಮನೆಮದ್ದುಗಳ ಬಗ್ಗೆ ಹೇಳಲಾಗಿದ್ದು, ಆಯುರ್ವೇದದಲ್ಲಿ ಕೂಡ ಈ ಮದ್ದುಗಳನ್ನು ನೀಡಲಾಗುವುದು.

ಮೊದಲಿಗೆ ಜೇಡರ ಹುಳು ಕಚ್ಚಿದಾಗ ನಿರ್ಲಕ್ಷ್ಯ ಮಾಡಬಾರದು ಏಕೆ? ಎಂದು ನೋಡೋಣ:
ಜೇಡರ ಹುಳು ಸಾಮಾನ್ಯವಾಗಿ ಕಚ್ಚುವುದಿಲ್ಲ, ಒಂದು ವೇಳೆ ಕಚ್ಚಿದರೆ ಆ ಭಾಗದಲ್ಲಿ ಉರಿ, ನೋವು ಕಂಡು ಬರುವುದು. ಆ ಭಾಗದಲ್ಲಿ ಊತ ಕೂಡ ಕಂಡು ಬರುವುದು. ಇದು ಜೇಡರ ಹುಳ ಕಚ್ಚಿ 30 ನಿಮಿಷದಿಂದ 2 ಗಂಟೆಯೊಳಗೆ ಕಂಡು ಬರುವುದು.

ಜೇಡರ ಹುಳ ಕಚ್ಚಿದಾಗ ಕೆಲವರಿಗೆ ಈ ತೊಂದರೆಗಳು ಉಂಟಾಗುತ್ತದೆ
* ಕಚ್ಚಿದ ಭಾಗದಲ್ಲಿ ತುಂಬಾ ತುರಿಕೆ
* ಆ ಭಾಗ ಕೆಂಪಾಗುವುದು
* ಊತ
* ಉರಿ
* ಕೆಲವರಿಗೆ ಜ್ವರ ಕೂಡ ಬರಬಹುದು.

ಇನ್ನು ಕೆಲವರಲ್ಲಿ ಈ ರೀತಿ ಅಪಾಯಕಾರಿಯಾಗಿದೆ
* ರಕ್ತದೊತ್ತಡ ಹೆಚ್ಚಿಸುತ್ತದೆ
* ಕಿವಿ ಕೇಳಿಸುವುದಿಲ್ಲ
* ಕಣ್ಣು ಕಾಣಿಸುವುದಿಲ್ಲ
* ಜ್ವರ
* ತಲೆನೋವು
* ಮೈಕೈ ನೋವು
* ಅಸ್ವಸ್ಥತೆ

ಜೇಡರ ಹುಳ ಕಚ್ಚಿದಾಗ ಮನೆಮದ್ದು
1. ಅರಿಶಿಣ:
ಅರಿಶಿಣವನ್ನು ಅನೇಕ ರೀತಿಯಲ್ಲಿ ಮನೆಮದ್ದಾಗಿ ಬಳಸುತ್ತೇವೆ. ಒಂದು ಚಮಚ ಅರಿಶಿಣ ತೆಗೆದು ಪೇಸ್ಟ್ ರೀತಿ ಮಾಡಿ, ಜೇಡ ಕಚ್ಚಿದ ಭಾಗಕ್ಕೆ ತಕ್ಷಣವೇ ಹಚ್ಚಿ. ಪ್ರತೀ ಒಂದು ಗಂಟೆಗೊಮ್ಮೆ ಹೀಗೆ ಮಾಡಿ, ಹೀಗೆ ನೀವು ಮಾಡುತ್ತಾ ಇದ್ದರೆ ಅರಿಶಿಣ ನಂಜು ಎಳೆಯುತ್ತದೆ, ನೋವು, ಉರಿ ಕಡಿಮೆಯಾಗುವುದು.

2. ಆಲೂಗಡ್ಡೆ
ಜೇಡರ ಹುಳು ಕಚ್ಚಿದರೆ ಆಲೂಗಡ್ಡೆ ಅತ್ಯುತ್ತಮವಾದ ಮನೆಮದ್ದಾಗಿದೆ. ಜೇಡರ ಹುಳು ಕಚ್ಚಿದಾಗ ತುಂಬಾ ಉರಿ-ಉರಿ ಅನಿಸುತ್ತಿದ್ದರೆ ಕೂಡಲೇ ಒಂದು ಆಲೂಗಡ್ಡೆ ಕತ್ತರಿಸಿ ಕಚ್ಚಿದ ಭಾಗದಲ್ಲಿಡಿ. ಈ ರೀತಿ ಮಾಡಿದರೆ ಊತ ಹಾಗೂ ಉರಿ ಕಡಿಮೆಯಾಗುವುದು. ಹೀಗೆ ಕೆಲವು ಗಂಟೆಗಳ ಕಾಲ ಇಟ್ಟು, ಅದನ್ನು ತೆಗೆದು ಮತ್ತೊಂದು ತುಂಡು ಇಡಿ. ಹಾಗೇ ಇಟ್ಟುಕೊಂಡಿರುವುದು ಕಷ್ಟವಾದರೆ ಆಲೂಗಡ್ಡೆ ತುಂಡು ಇಟ್ಟು ಒಂದು ಬಟ್ಟೆಯಿಂದ ಸುತ್ತಿ.

3. ಉಪ್ಪು
ಜೇಡರ ಹುಳು ಕಚ್ಚಿದ ವಿಷ ತೆಗೆಯಲು ಉಪ್ಪು ಕೂಡ ಪರಿಣಾಮಕಾರಿ. ಉಪ್ಪು ಕೂಡ ನೋವು ಕಡಿಮೆಯಾಗುತ್ತದೆ. ಆದರೆ ಗಾಯಕ್ಕೆ ಉಪ್ಪು ಹಚ್ಚಿದಾಗ ಮತ್ತಷ್ಟು ಉರಿ ಅನಿಸುವುದು, ಕಲ್ಲುಪ್ಪು ಇಟ್ಟು ಒಂದು ಬಟ್ಟೆಯಿಂದ ಸುತ್ತಿ, ಇದರಿಂದ ಅಸ್ವಸ್ಥತೆ, ಊತ ಕಡಿಮೆಯಾಗುವುದು.

4. ಲೋಳೆ ಸರ
ಲೋಳೆಸರ ಕೂಡ ಅತ್ಯುತ್ತಮವಾದ ಮನೆಮದ್ದಾಗಿದೆ. ಇದನ್ನು ಕೂಡ ಉರಿ ಕಡಿಮೆ ಮಾಡಲು ಬಳಸಬಹುದು, ಜೇಡರ ಹುಳು ಕಚ್ಚಿದ ಭಾಗಕ್ಕೆ ಲೋಳೆಸರದಿಂದ ಮಸಾಜ್ ಮಾಡಿ. ಈ ರೀತಿ ದಿನದಲ್ಲಿ 3-4 ಬಾರಿ ಮಾಡಿ, ನಂತರ ತೊಳೆಯಿರಿ, ಉಳಿದ ಮನೆಮದ್ದು ಜೊತೆಗೂ ಇದನ್ನು ಮಾಡಬಹುದು. ಅಂದರೆ ಅರಿಶಿಣ ಹಚ್ಚಿ ನಂತರ ಅದನ್ನು ತೊಳೆಯುವಾಗ ಲೋಳೆಸರ ಹಚ್ಚಿ ತೊಳೆದು, ನಂತರ ಅರಿಶಿಣ ಹಚ್ಚುವುದು ಹೀಗೆ ಕೂಡ ಮಾಡಬಹುದು.

5. ಬೆಳ್ಳುಳ್ಳಿ ಪೇಸ್ಟ್
3-4 ಬೆಳ್ಳುಳ್ಳಿ ತೆಗೆದು ಪೇಸ್ಟ್ ಮಾಡಿ ಹಚ್ಚಿ, ತುಂಬಾ ಉರಿ ಅನಿಸಿದರೂ ಬೇಗನೆ ಗುಣವಾಗುವುದು. ರಾತ್ರಿ ಮಲಗುವಾಗ ಹೀಗೆ ಮಾಡಿದರೆ ಸ್ವಲ್ಪ ಹೊತ್ತಿಗೆ ಉರಿ ಕಡಿಮೆಯಾಗಿ ನಿದ್ದೆ ಮಾಡಬಹುದು.
ಇಷ್ಟೆಲ್ಲಾ ಮಾಡಿಯೂ ನಿಮಗೆ ಏನಾದರೂ ತೊಂದರೆ ಕಂಡು ಬಂದರೆ ವೈದ್ಯರ ಬಳಿ ಹೋಗಿ, ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ಮಾತ್ರ ಮಾಡಬೇಡಿ.