For Quick Alerts
ALLOW NOTIFICATIONS  
For Daily Alerts

ಕಾಲುಗಳಲ್ಲಿ ಊತವೇ? ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿದೆ ನೋಡಿ

|

ಕಾಲುಗಳಲ್ಲಿ ಊತ ಇತ್ತೀಚೆಗೆ ಹೆಚ್ಚಿನವರಿಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಕಾಲುಗಳಲ್ಲಿ ಊತ ಅನೇಕ ಕಾರಣಗಳಿಂದ ಉಂಟಾಗುತ್ತದೆ. ಕಾಲುಗಳಲ್ಲಿ ಊತದ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಜೀವನಶೈಲಿ ಹಾಗೂ ಆಹಾರಕ್ರಮ, ಅಲ್ಲದೆ ದೈಹಿಕ ವ್ಯಾಯಾಮ ಇಲ್ಲದಿರುವುದು, ಕಾಲುಗಳನ್ನು ನೇತು ಹಾಕಿ ತುಂಬಾ ಹೊತ್ತು ಕೂರುವುದು, ಮೈ ತೂಕ ಹೆಚ್ಚಾಗಿರುವುದು, ಪಾದಗಳಿಗೆ ಗಾಯವಾಗಿದ್ದರೆ ಕಾಲುಗಳಲ್ಲಿ ಊತ ಹಾಗೂ ನೋವು ಕಂಡು ಬರುವುದು.

Swollen Feet

ಸೂಚನೆ: ಇನ್ನು ಗರ್ಭಾವಸ್ಥೆ ಸಮಯದಲ್ಲಿ ಕಾಲುಗಳಲ್ಲಿ ಊತ ಕಂಡು ಬರುವುದು ಸಹಜ. ಗರ್ಭಿಣಿಯರು ಯಾವುದೇ ಔಷಧಿ ತೆಗೆದುಕೊಳ್ಳಬೇಡಿ, ಲೈಟಾಗಿ ನೋವಿನ ಮಸಾಜ್ ಮಾಡಿ. ಅಲ್ಲದೆ ನಾವಿಲ್ಲಿ ನೀಡಿರುವ ಮನೆಮದ್ದು ನೀವು ಕೂಡ ಟ್ರೈ ಮಾಡಬಹುದು:

ಕಾಲುಗಳ ಊತ ಕಡಿಮೆ ಮಾಡಲು ಮನೆಮದ್ದು

 ಕಾಲು ಊತ ಕಡಿಮೆ ಮಾಡಲು ಮನೆಮದ್ದು

ಕಾಲು ಊತ ಕಡಿಮೆ ಮಾಡಲು ಮನೆಮದ್ದು

ಹದ ಬಿಸಿ ನೀರಿಗೆ ಕಲ್ಲುಪ್ಪು ಹಾಕಿ ಅದರಲ್ಲಿ 15-20 ನಿಮಿಷ ಇಡಿ. ಬೆಳಗ್ಗೆ ಎದ್ದಾಗ, ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ. ಉಪ್ಪಿನಲ್ಲಿ ಮೆಗ್ನಿಷ್ಯಿಯಂ ಸಲ್ಫೇಟ್ ಇರುವುದರಿಂದ ಅದು ನಿಮ್ಮ ತ್ವಚೆಯ ಮೂಲಕ ದೇಹವನ್ನು ಸೇರಿ ಊತ ಹಾಗೂ ನೋವನ್ನು ಕಡಿಮೆ ಮಾಡುವುದು.

ಪಾದಗಳಿಗೆ ಮಸಾಜ್ ಮಾಡಿ

ಪಾದಗಳಿಗೆ ಮಸಾಜ್ ಮಾಡಿ

ಇನ್ನು ಮಸಾಜ್ ಕೂಡ ಪಾಗಳಿಗೆ ರಿಲೀಫ್‌ ನೀಡುವುದು. ಇದು ಉರಿಯೂತ ಕಡಿಮೆ ಮಾಡುವುದು, ಪ್ರತಿದಿನ ಪಾದಗಳಿಗೆ ಎಣ್ಣೆ ಹಚ್ಚಿ. ಇನ್ನು ಆಯುರ್ವೇದ ಟ್ರೀಟ್‌ಮೆಂಟ್‌ ಅಂದರೆ ಮಸಾಜ್‌ ಕೂಡ ವರ್ಕೌಟ್ ಆಗುವುದು.

 ಐಸ್‌ಪ್ಯಾಕ್‌

ಐಸ್‌ಪ್ಯಾಕ್‌

ಇನ್ನು ಕಾಲು ಊತ ಅಥವಾ ನೋವು ಇದ್ದಾಗ ಐಸ್‌ಪ್ಯಾಕ್‌ ಇಟ್ಟಾಗ ಊತ ಹಾಗೂ ನೋವು ಕಡಿಮೆಯಾಗುವುದು. ಇನ್ನು ಮದ್ಯಮಾನದಿಂದ ಉಂಟಾದ ಉರಿಯೂತ ಕಡಿಮೆ ಮಾಡಲು ಇದು ಸಹಕಾರಿ. ಇನ್ನು ಮದ್ಯಪಾನದಿಂದ ಕಾಲು ಊತ ಉಂಟಾಗಿದ್ದರೆ ತುಂಬಾ ತಣ್ಣೆಯ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಇಡುವುದರಿಂದ ಉರಿಯೂತ ಕಡಿಮೆಯಾಗುವುದು.

ಪಾದಗಳನ್ನು ಎತ್ತರದಲ್ಲಿ ಇಡಿ

ಪಾದಗಳನ್ನು ಎತ್ತರದಲ್ಲಿ ಇಡಿ

ಚೇರ್‌ನಲ್ಲಿ ಕೂತಾಗ ಪಾದಗಳನ್ನು ನೇತು ಹಾಕಬೇಡಿ, ಫೂಟ್‌ ರೆಸ್ಟ್ ಮೇಲಿಡಿ. ಇಲ್ಲದಿದ್ದರೆ ಪಾದಗಳನ್ನು ಸ್ವಲ್ಪ ಮೇಲಿಡಿ, ಇದರಿಂದ ಕಾಲಿನಲ್ಲಿ ಊತ ಉಂಟಾಗುವುದನ್ನು ತಡೆಗಟ್ಟಬಹುದು.

ಮೆಗ್ನಿಷ್ಯಿಯಂ ಇರುವ ಆಹಾರ ಸೇವಿಸಿ

ಮೆಗ್ನಿಷ್ಯಿಯಂ ಇರುವ ಆಹಾರ ಸೇವಿಸಿ

ಮೆಗ್ನಿಷ್ಯಿಯಂ ಅಧಿಕವಿರುವ ಆಹಾರ ಸೇವಿಸಿ.

* ಟೋಫು

* ಪಾಲಾಕ್‌

* ಗೋಡಂಬಿ

* ಬಾದಾಮಿ

* ಡಾರ್ಕ್‌ ಚಾಕೋಲೆಟ್, ಬ್ರೊಕೋಲಿ

* ಬೆಣ್ಣೆಹಣ್ಣು

ಈ ರೀತಿಯ ಆಹಾರ ಸೇವಿಸಿ.

English summary

Effective Home Remedies for Swollen Feet in Kannada

Effective Home Remedies for Swollen Feet in Kannada, read on..
X
Desktop Bottom Promotion