For Quick Alerts
ALLOW NOTIFICATIONS  
For Daily Alerts

ಮತ್ತೆ ಜಿಮ್‌ಗೆ ಹೋಗುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

|

ದೇಹದ ಫಿಟ್‌ನೆಸ್‌, 6 ಪ್ಯಾಕ್‌, ದೈಹಿಕವಾಗಿ ಸದೃಢವಾಗಿರಲು ನಿತ್ಯವೂ ತಪ್ಪದೇ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುತ್ತಿದ್ದ ಮಂದಿಗೆ ಕಳೆದ 6 ತಿಂಗಳಿನಿಂದ ತರಬೇತುದಾರರು, ತಜ್ಙರ ಮಾರ್ಗದರ್ಶನವಿಲ್ಲದೆ, ಜಿಮ್‌ ಸಾಧನಗಳಿಲ್ಲದೆ ವರ್ಕೌಟ್‌ ಮಾಡಲಾಗದಂಥ ಪರಿಸ್ಥಿತಿ ಬಂದೊದಗಿತ್ತು. ಮನೆಯಲ್ಲೇ ವರ್ಕೌಟ್‌ ಮಾಡುಬಹುದಾದರೂ ಅದು ತಜ್ಙರ ತರಬೇತಿ, ಜಿಮ್‌ ಸಾಧನಗಳ ಕೊರತೆ ಎದುರಿಸುತ್ತಿದ್ದರು.

ಆದರೆ ಇದೀಗ ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ಮೂರನೇ ಹಂತದಲ್ಲಿ ಅನ್ಲಾಕ್ ಮಾಡಲು ಸಿದ್ಧತೆ ನಡೆಸಿದೆ. ಅದರಂತೆ ಆಗಸ್ಟ್ 3 ರಿಂದ ಸಿನೆಮಾ ಹಾಲ್‌ಗಳು ಮತ್ತು ಜಿಮ್‌ಗಳನ್ನು ಪುನಃ ತೆರೆಯುವುದಾಗಿ ಹೇಳಿದೆ.

ಮನೆಯಿಂದಲೇ ವರ್ಕೌಟ್‌ ಮಾಡುತ್ತಿದ್ದ ಮಂದಿಗೆ ಇದೀಗ ನಿರಾಳರಾಗಿ ಜಿಮ್‌ ಹೋಗಬಹುದಾದರು ಸರ್ಕಾರ ಕೆಲವು ಷರತ್ತಿಗಳನ್ನು ವಿಧಿಸಲಿದೆ. ಇದೆಲ್ಲದರ ನಡುವೆ ಕೊರೋನಾ ಮಹಾಮಾರಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜಿಮ್‌ಗೆ ಎಲ್ಲಾ ರೀತಿಯ ಜನರು ಬರುವುದರಿಂದ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು, ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಂದೆ ತಿಳಿಸಿದ್ದೇವೆ ನೋಡಿ:

ನಿಗದಿತ ಸಮಯಕ್ಕೆ ಆಗಮಿಸಿ

ನಿಗದಿತ ಸಮಯಕ್ಕೆ ಆಗಮಿಸಿ

ಜಿಮ್‌ಗೆ ನಿಮಗೆ ನಿಗದಿ ಮಾಡಿರುವ ಸಮಯಕ್ಕೆ ಸರಿಯಾಗಿ ಬನ್ನಿ, ಅದೇ ಸಮಯದಲ್ಲಿ ವರ್ಕೌಟ್‌ ಮುಗಿಸಿ ತೆರಳಿರಿ. ಕೊನೆಯ ಗಳಿಗೆಯಲ್ಲಿ ಬಂದು ನೂಕು ನುಗ್ಗಲಿನಲ್ಲಿ ಬರುವುದನ್ನು ತಪ್ಪಿಸಿ, ಪ್ರವೇಶದ್ವಾರದಲ್ಲಿ ಹೆಚ್ಚು ಹೊತ್ತು ಓಡಾಡಬೇಡಿ, ಸಮಯ ಕಳೆಯಬೇಡಿ. ಜಿಮ್‌ ನಲ್ಲಿ ಕಾಯುವ ಸಂದರ್ಭ ಬಂದರೆ ಜನರು ಇಲ್ಲದಿರುವ ಸ್ಥಳದಲ್ಲಿ ಅಥವಾ ನಿಮ್ಮ ಕಾರಿನಲ್ಲಿ ಕಾಯುವುದು ಉತ್ತಮ. ನೀವು ಜಿಮ್‌ನ ಒಳಗೆ ಹೋಗುವಾಗ ಹೆಚ್ಚು ಜನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜಿಮ್‌ನಲ್ಲಿ ಇತರರೊಂದಿಗೆ ಅನವಶ್ಯಕವಾಗಿ ಮಾತನಾಡಬೇಡಿ, ನಿಮ್ಮ ಕೋಚ್‌ ಜತೆ ಸಹ ಕನಿಷ್ಠ ಅಂತರದಲ್ಲಿ ನಿಂತು ತರಬೇತಿ ಪಡೆಯಿರಿ.

ಸ್ಯಾನಿಟೈಸರ್

ಸ್ಯಾನಿಟೈಸರ್

ಜಿಮ್‌ನಲ್ಲಿನ ಉಪಕರಣಗಳನ್ನು ಬಳಸುವಾಗ ನೀವು ಕೈ ಕೈಗವಸುಗಳನ್ನು ಧರಿಸದಿದ್ದರೆ, ಪ್ರತಿ ಬಳಕೆಯ ನಂತರವೂ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿದ ಬಗ್ಗೆ ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಮುಖವನ್ನು ಮುಟ್ಟಬೇಡಿ. ಮರೆಯದೇ ಸಣ್ಣ ಬಾಟಲಿ ಹ್ಯಾಂಡ್ ಸ್ಯಾನಿಟೈಜರ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.

ನೀರಿನ ಬಾಟಲ್ ಮತ್ತು ಇತರ ಅಗತ್ಯ ವಸ್ತುಗಳನ್ನು ನಿಮ್ಮ ಬಳಿ ಇರಲಿ

ನೀರಿನ ಬಾಟಲ್ ಮತ್ತು ಇತರ ಅಗತ್ಯ ವಸ್ತುಗಳನ್ನು ನಿಮ್ಮ ಬಳಿ ಇರಲಿ

ಜಿಮ್‌ನಲ್ಲಿರುವ ಬಳಸುವ ನೀರು ಅಥವಾ ಪ್ಲಾಸ್ಟಿಕ್‌ ಕಪ್‌ಗಳ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸಿ. ಬದಲಿಗೆ ತಪ್ಪದೇ ನಿತ್ಯ ನಿಮ್ಮದೇ ಸ್ವಂತ ನೀರಿನ ಬಾಟಲಿಯನ್ನು ಒಯ್ಯಿರಿ. ಸೋಂಕು ಅಥವಾ ವೈರಸ್‌ ನಿಮಗೆ ತಾಕದೇ ಇರದಂತೆ ನೋಡಿಕೊಳ್ಳಲು ಮನೆಯಿಂದಲೇ ಜಿಮ್‌ ವಸ್ತ್ರಗಳನ್ನು ಧರಿಸಿ ಬನ್ನಿ, ಜಿಮ್‌ನ ಕೊಠಡಿಗಳನ್ನು ಬಳಸಬೇಡಿ. ನಿಮ್ಮ ಸ್ವಂತ ಯೋಗ ಮ್ಯಾಟ್‌ ಅನ್ನು ಮನೆಯಿಂದ ಕೊಂಡೊಯ್ಯಿರಿ.

ವರ್ಕೌಟ್‌ ಮಾಡುವಾಗ ಫೇಸ್ ಮಾಸ್ಕ್ ಧರಿಸಬೇಡಿ

ವರ್ಕೌಟ್‌ ಮಾಡುವಾಗ ಫೇಸ್ ಮಾಸ್ಕ್ ಧರಿಸಬೇಡಿ

ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ನಿಯಮವಾದರು, ಎಲ್ಲ ಸಮಯದಲ್ಲು ಇದು ಕಷ್ಟಕರ ಎಂದೇ ಹೇಳಬಹುದು. ವರ್ಕೌಟ್‌, ಜಾಗಿಂಗ್ ಮಾಡುವಾಗ ಅಥವಾ ಕಠಿಣವಾದ ತಾಲೀಮಿನ ಸಮಯದಲ್ಲಿ ಮಾಸ್ಕ್‌ಗಳನ್ನು ಧರಿಸುವುದು ಬಹಳ ಕಷ್ಟ ಅಲ್ಲದೇ, ಇದರಿಂದ ಉಸಿರಾಟಕ್ಕೆ ಸಮಸ್ಯೆಯಾಗಬಹುದು, ನಿಮ್ಮ ಹೃದಯ ಬಡಿತವನ್ನು ತ್ವರಿತವಾಗಿ ಹೆಚ್ಚಿಸಬಹುದು. ಇದರಿಂದ ನೀವು ಬೇಗನೆ ಆಯಾಸಗೊಳ್ಳಬಹುದು, ತಲೆತಿರುಗುವಿಕೆ ಅಥವಾ ತಲೆನೋವು ಕಾಣಿಸಬಹುದು. ಆದ್ದರಿಂದ ಜನರ ನಡುವೆ ಕನಿಷ್ಠ ಅಂತರದಲ್ಲಿ ಇದ್ದೀರಿ ಎಂದು ಖಚಿತಪಡಿಸಿಕೊಂಡು ಮಾಸ್ಕ್‌ ತೆಗೆದು ವರ್ಕೌಟ್‌ ಮಾಡುವುದು ಉತ್ತಮ

ಜಿಮ್ ಕೈಗವಸು ಮತ್ತು ತೋಳಿನಲ್ಲಿ ಸ್ವೆಟ್‌ಬ್ಯಾಂಡ್‌ ಇರಲಿ

ಜಿಮ್ ಕೈಗವಸು ಮತ್ತು ತೋಳಿನಲ್ಲಿ ಸ್ವೆಟ್‌ಬ್ಯಾಂಡ್‌ ಇರಲಿ

ಕೈಗವಸು ಹಾಗೂ ಸ್ವೆಟ್‌ಬ್ಯಾಂಡ್‌ ಧರಿಸುವುದು ಎರಡು ವಿಷಯಗಳನ್ನು ಖಚಿತಪಡಿಸುತ್ತದೆ, ಒಂದು ನೀವು ತಾಲೀಮು ಮಾಡಿದ ಜಿಮ್‌ ಸಾಧನಗಳಿಂದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ನೀವು ದೂರ ಇರುವಿರಿ ಮತ್ತು ನಿಮ್ಮ ಮುಖವನ್ನು ಆಕಸ್ಮಿಕವಾಗಿ ಸ್ಪರ್ಶಿಸುವುದನ್ನು ತಡೆಯಬಹುದು. ಬೆವರು ಒರೆಸಲು ಪದೇ ಪದೇ ನ್ಯಾಪ್ಕಿನ್‌ ಬಳಸುವ ಬದಲಿಗೆ ಕೈಗೆ ಸ್ವೆಟ್‌ ಬ್ಯಾಂಡ್‌ ಧರಿಸಿದರೆ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿರಲಿದೆ.

ಜಿಮ್‌ನಲ್ಲಿ ಸಹ ಸಾಮಾಜಿಕ ಅಂತರ ಕಾಪಾಡಿ

ಜಿಮ್‌ನಲ್ಲಿ ಸಹ ಸಾಮಾಜಿಕ ಅಂತರ ಕಾಪಾಡಿ

ಜಿಮ್‌ಗಳು ತೆರೆದಿರಬಹುದು, ಆದರೆ ಕೊರೊನಾ ಸೋಂಕು ಇನ್ನು ಹೋಗಿಲ್ಲ. ಈ ಬಗ್ಗೆ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಗೆಳೆಯ, ಗೆಳತಿ ಅಥವಾ ಜಿಮ್‌ ತರಬೇತುದಾರರಬಳಿ ಸೇರಿದಂತೆ ಅನವಶ್ಯಕ ಚರ್ಚೆ ಮಾಡಬೇಡಿ. ಅಗತ್ಯವಿದ್ದಲ್ಲಿ ಕನಿಷ್ಠ 6 ಅಡಿಗಳಷ್ಟು ದೂರವನ್ನು ಖಚಿತಪಡಿಸಿಕೊಳ್ಳಿ.

ಅನಾರೋಗ್ಯ ಅನಿಸಿದರೆ ಹೋಗಬೇಡಿ

ಅನಾರೋಗ್ಯ ಅನಿಸಿದರೆ ಹೋಗಬೇಡಿ

ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಜಿಮ್‌ಗೆ ಹೋಗಲೇಬೇಡಿ. ಇದು ಇತರರನ್ನು ಸುರಕ್ಷಿತವಾಗಿಡಲು ನೀವು ಮನೆಯಲ್ಲಿಯೇ ಇರಬೇಕೆಂದು ನೀಡುತ್ತಿರುವ ಸಲಹೆ ಯಾಗಿದೆ. ನಿಮಗೆ ಕೆಮ್ಮು, ಜ್ವರ ಇದ್ದರೆ ಶೀಘ್ರ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ.

English summary

Gyms Are Reopening: Follow These Rules to Keep Yourself Safe During Coronavirus

Here we are discussing about During Corona virus Gym: Follow These Rules To Keep Yourself Safe. we are listing down seven precautions you must follow while hitting the gym and fitness centres, to keep yourself safe. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X