For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ತಡೆಗೆ ಬರೀ ಮಾಸ್ಕ್‌ ಸಾಲದು, ಗಾಗಲ್ಸ್ ಕೂಡ ಬೇಕು

|

ಮಾಸ್ಕ್‌ ಇದೀಗ ದಿನನಿತ್ಯದ ಅವಶ್ಯವಸ್ತುಗಳಲ್ಲಿ ಒಂದಾಗಿ ಬಿಟ್ಟಿದೆ. ಕೊರೊನಾವೈರಸ್‌ ತಡೆಗಟ್ಟಲು ಮಾಸ್ಕ್‌ ಧರಿಸುವುದು ಅವಶ್ಯಕ. ಆದರೆ ಕೊರೊನಾವೈರಸ್ ತಡೆಗಟ್ಟಲು ಮಾಸ್ಕ್‌ ಒಂದೇ ಸಾಲದು ಅದರ ಜೊತೆಗೆ ಗಾಗಲ್ಸ್ (ಕನ್ನಡಕ) ಧರಿಸುವುದು ಕೂಡ ಮುಖ್ಯ ಎಂದು ಏಪ್ರಿಲ್ 2020ರಲ್ಲಿ ನಡೆಸಿದ ಸಂಶೋಧನೆ ಹೇಳಿದೆ.

Goggles To Control Coronavirus

ಕೊರೊನಾವೈರಸ್ ಮೂಗು ಹಾಗೂ ಬಾಯಿ ಮೂಲಕ ದೇಹ ಪ್ರವೇಶಿಸುವುದರಿಂದ ಅದನ್ನು ತಡೆಗಟ್ಟಲು ಮಾಸ್ಕ್‌ ಧರಿಸಬೇಕು ಹಾಗೂ ಇನ್ನು ಕೈ ಮುಖಾಂತರ ದೇಹವನ್ನು ಸೇರಬಾರದು ಎಂಬ ಉದ್ದೇಶಕ್ಕೆ ಕೈಗೆ ಸ್ಯಾನಿಟೈಸರ್ ಹಾಕಲಾಗುತ್ತದೆ. ಆದರೆ ಇಷ್ಟು ಸಾಲದು ನಮ್ಮ ಕಣ್ಣುಗಳನ್ನು ಕೂಡ ಕೊರೊನಾವೈರಸ್‌ನಿಂದ ರಕ್ಷಿಸಬೇಕಾಗಿದೆ ಎಂದು ಹೊಸ ಸಂಶೋಧನೆಗಳು ಹೇಳಿವೆ.

ಅಲರ್ಜಿ ಹಾಗೂ ಸೋಂಕು ಕಾಯಿಲೆ ನಿಯಂತ್ರಣದ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಡಾ. ಆಂಟೋನಿ ಫೌಸಿ ABC ನ್ಯೂಸ್ ಜೊತೆ ಮಾತನಾಡುತ್ತಾ ಮಾಸ್ಕ್‌ಗೆ ಬದಲಾಗಿ ಕನ್ನಡಕ ಕೆಲಸ ಮಾಡುವುದಿಲ್ಲ, ಆದರೆ ಮಾಸ್ಕ್‌ ಜೊತೆಗೆ ಕನ್ನಡಕ ಧರಿಸುವುದರಿಂದ ಕೊರೊನಾವೈರಸ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಹೇಳಿದೆ.

ಕೋವಿಡ್-19 ಪರಿಸ್ಥಿತಿಯಲ್ಲಿ ಕಣ್ಣುಗಳ ಸುರಕ್ಷಿತೆ ಕೂಡ ಮುಖ್ಯ

ಕೋವಿಡ್-19 ಪರಿಸ್ಥಿತಿಯಲ್ಲಿ ಕಣ್ಣುಗಳ ಸುರಕ್ಷಿತೆ ಕೂಡ ಮುಖ್ಯ

JAMA Ophthalmology ಪ್ರಕಟಿಸಿದ ವರದಿಯಲ್ಲಿ ಕೋವಿಡ್-19 ಕಣ್ಣುಗಳ ಮುಖಾಂತರವೂ ಹರಡಬಹುದು ಎಂದು ಹೇಳಿದೆ. ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವರ ಎಂಜಲಿನ ಅತ್ಯಂತ ಸೂಕ್ಷ್ಮ ಹನಿ ನಮ್ಮ ಕಣ್ಣಿನ ಭಾಗದಲ್ಲಿ ಬಂದು ಕೂರಬಹುದು ಈ ಮೂಲಕ ಕೊರೊನಾವೈರಸ್ ಹರಡಬಹುದು ಎಂದು ತಜ್ಞರು ಹೇಳಿದ್ದಾರೆ.

 ಕನ್ನಡ ಹಾಗೂ ಫೇಸ್‌ಶೀಲ್ಡ್ ತುಂಬಾ ಪರಿಣಾಮಕಾರಿ

ಕನ್ನಡ ಹಾಗೂ ಫೇಸ್‌ಶೀಲ್ಡ್ ತುಂಬಾ ಪರಿಣಾಮಕಾರಿ

ಕೆಲವರು ಮಾಸ್ಕ್‌ ಜೊತೆಗೆ ಫೇಸ್‌ಶೀಲ್ಡ್ ಹಾಗೂ ಕನ್ನಡ ಧರಿಸುತ್ತಿದ್ದಾರೆ. ಇದು ಬರೀ ಮಾಸ್ಕ್‌ ಧರಿಸುವುದಕ್ಕಿಂತ ಹೆಚ್ಚಿನ ಸುರಕ್ಷಿತ ವಿಧಾನವಾಗಿದೆ. ಆದರೆ ಮಾಸ್ಕ್‌ನಂತೆ ಕನ್ನಡ ಧರಿಸಲೇಬೇಕೆಂಬ ನಿಯಮಗಳಿಲ್ಲ. ಆದರೆ ತರಕಾರಿ, ದಿನಸಿ ಅಂಗಡಿಯಲ್ಲಿ ಇರುವವರು, ಮೆಡಿಕಲ್‌ ಶಾಪ್‌ಗಳಲ್ಲಿ ಇರುವವರು ಹೀಗೆ ಜನರು ಹೆಚ್ಚು ಬರುವ ಕಡೆ ಕೆಲಸ ಮಾಡುವವರು ಮಾಸ್ಕ್‌ ಜೊತೆಗೆ ಕನ್ನಡಕ ಧರಿಸುವುದು ಸುರಕ್ಷಿತವಾಗಿದೆ.

ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಡಿ

ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಡಿ

ಕಾಂಟ್ಯಾಕ್ಟ್ ಲೆನ್ಸ್ ಬಳಸುವುದರಿಂದ ಕೊರೊನಾವೈರಸ್ ಸೋಂಕು ಬರುವುದಿಲ್ಲ, ಆದರೆ ಕಾಂಟ್ಯಾಕ್ಟ್ ಲೆನ್ಸ್ ಹಾಕುವವರು ಅದನ್ನು ತೆಗೆಯಲು, ಹಾಕಲು ಕಣ್ಣುಗಳನ್ನು ಆಗಾಗ ಮುಟ್ಟುತ್ತಾರೆ, ಆದ್ದರಿಂದ ಕೈ ಮುಖಾಂತರ ಸೋಂಕು ಹರಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮಗೆ ಕಣ್ಣಿನ ತಜ್ಞರು ಸೂಚಿಸಿದ ಕನ್ನಡ ಧರಿಸುವುದೇ ಸುರಕ್ಷಿತವಾಗಿದೆ.

ಕೈಗಳಿಂದ ಆಗಾಗ ಕಣ್ಣು ಮುಟ್ಟುವುದು, ಉಜ್ಜುವುದು ಮಾಡಬೇಡಿ

ಕೈಗಳಿಂದ ಆಗಾಗ ಕಣ್ಣು ಮುಟ್ಟುವುದು, ಉಜ್ಜುವುದು ಮಾಡಬೇಡಿ

ನಾವು ಕಣ್ಣು ಎಷ್ಟು ಬಾರಿ ಮುಟ್ಟುತ್ತೇವೆ, ಯಾವಾಗ ಕಣ್ಣು ಉಜ್ಜುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಚಿಕ್ಕ ದೂಳಿನ ಕಣ ಬಿದ್ದರೂ ಕಣ್ಣು ಉಜ್ಜುತ್ತೇವೆ. ಅದೇ ಕನ್ನಡಕ ಧರಿಸಿದರೆ ಅಂಥ ತೊಂದರೆಗಳಿರುವುದಿಲ್ಲ, ಅಲ್ಲದೆ ನಿಮ್ಮ ಮುಖದ ಯಾವುದೇ ಭಾಗ ಮುಟ್ಟುವುದಾದರೂ ಮೊದಲು ಕೈಗಳನ್ನು ಚೆನನ್ಆಗಿ 20 ಸೆಕೆಂಡ್‌ ಸೋಪ್‌ನಲ್ಲಿ ತೊಳೆದು ಅಥವಾ ಸ್ಯಾನಿಟೈಸರ್‌ ಹಚ್ಚಿದ ಬಳಿಕವಷ್ಟೇ ಮುಟ್ಟಬೇಕು.

ಸಾಮಾಜಿಕ ಅಂತರ ಮರೆಯಬೇಡಿ

ಸಾಮಾಜಿಕ ಅಂತರ ಮರೆಯಬೇಡಿ

ಈಗ ನಿಯಮಗಳು ಸಡಿಲವಾಗಿದೆ, ಸಾಮಾಜಿಕ ಅಂತರ ಮರೆತು ಓಡಾಡುವವರನ್ನೂ ಕಾಣಬಹುದು. ಆದರೆ ನಿಮ್ಮ ಜಾಗ್ರತೆಯಲ್ಲಿ ನೀವಿರುವುದು ಒಳ್ಳೆಯದು. ಎಲ್ಲಿಯೇ ಹೋಗಿ ಜನರಿಂದ ಅಂತರಕಾಯ್ದುಕೊಳ್ಳಿ.

English summary

Do We Need To Wear Goggles To Control Covid 19

Covering mask is not enough, wear goggles to stay safe from coronavirus, Read on
Story first published: Saturday, August 29, 2020, 16:59 [IST]
X
Desktop Bottom Promotion