For Quick Alerts
ALLOW NOTIFICATIONS  
For Daily Alerts

ಡಯಟಿಷಿಯನ್ ರುಜುತಾ ದ್ವಿವೇಕರ್ ಟಿಪ್ಸ್: ಪಿಸಿಓಡಿ ಇದ್ದರೆ ಯಾವ ಆಹಾರ ಒಳ್ಳೆಯದು, ಯಾವ ಯೋಗಾಸನ ಸಹಕಾರಿ

|

ಇತ್ತೀಚಿನ ದಿನಗಳಲ್ಲಿ ಪಿಸಿಓಡಿ/ಪಿಸಿಓಎಸ್‌(Polycystic ovary syndrome) ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಅದರಲ್ಲೂ ತುಂಬಾ ಚಿಕ್ಕ ಪ್ರಾಯದವರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ, ಇದಕ್ಕೆ ಪ್ರಮುಖ ಕಾರಣ ಜೀವನಶೈಲಿಯಾಗಿದೆ. ಪ್ರತೀ ಐದರಲ್ಲಿ ಒಬ್ಬ ಮಹಿಳೆ ಪಿಸಿಓಎಸ್‌ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆ ಇರುವ ಮಹಿಳೆಯರಿಗೆ ಸಂತಾನೋತ್ಪತ್ತಿಗೆ ಕೂಡ ತೊಂದರೆ ಉಂಟಾಗುವುದು. ಪಿಸಿಓಎಸ್ ಬಂದ್ರೆ ಆಹಾರಶೈಲಿ ಹಾಗೂ ವ್ಯಾಯಾಮ ಮೂಲಕ ಇದನ್ನು ಇಲ್ಲವಾಗಿದಬಹುದು.

ಅಲಿಯಾ ಬಟ್, ವರುಣ್ ಧವನ್, ಕರೀನಾ ಕಪೂರ್‌ ಸೇರಿ ಅನೇಕ ಸೆಲೆಬ್ರಿಟಿಗಳ ಪರ್ಸನಲ್‌ ಡಯಟಿಷಿಯನ್ ಆಗಿರುವ ರುಜುತಾ ದ್ವಿವೇಕರ್ ಅವರು ದಿನದಲ್ಲಿ ಶಕ್ತಿಯನ್ನು ಕಾಪಾಡಿ, ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡಿ, ಪ್ರತಿನಿತ್ಯ ನಿಯಮಿತ ವ್ಯಾಯಾಮ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದಿದ್ದಾರೆ.

ರುಜುತಾ ಅವರು ಪಿಸಿಓಎಸ್ ಸಮಸ್ಯೆಯಿದ್ದರೆ ಯಾವ ಆಹಾರ ಸೇವಿಸಬೇಕು, ಯಾವ ವ್ಯಾಯಾಮ ಒಳ್ಳೆಯದು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಿಸಿಓಎಸ್ ಲಕ್ಷಣಗಳು

ಪಿಸಿಓಎಸ್ ಲಕ್ಷಣಗಳು

ಪಿಸಿಓಎಸ್ ಲಕ್ಷಣಗಳೆಂದರೆ ಓವರಿಯನ್ ಸಿಸ್ಟ್, ಅನಿಯಮಿತ ಮುಟ್ಟು, ಅತ್ಯಧಿಕ ಪುರುಷ ಹಾರ್ಮೋನ್‌, ಮೈ ಮೇಲೆ ಬೇಡದ ಕೂದಲು ಬೆಳೆಯುವುದು, ಮೊಡವೆ ಈ ರೀತಿಯ ಲಕ್ಷಣಗಳು ಕಂಡು ಬರುವುದು, ಅದರ ಜೊತೆಗೆ ಮೈ ತೂಕ ಹೆಚ್ಚಾಗುತ್ತದೆ ಅಲ್ಲದೆ ಈ ಹೆಚ್ಚಾದ ಮೈ ತೂಕ ಕರಗಿಸಲು ಕಷ್ಟವಾಗುವುದು.

ಪಿಸಿಓಎಸ್‌ ಸಮಸ್ಯೆ ನಿವಾರಣೆಗೆ ಅತ್ಯುತ್ತಮವಾದ ಆಹಾರಗಳು

ಪಿಸಿಓಎಸ್‌ ಸಮಸ್ಯೆ ನಿವಾರಣೆಗೆ ಅತ್ಯುತ್ತಮವಾದ ಆಹಾರಗಳು

* ತೆಂಗಿನೆಣ್ಣೆ, ತುಪ್ಪ, ಬೆಲ್ಲ ಇವುಗಳು ಒಳ್ಳೆಯದು.

* ಬಾಳೆಕಾಯಿ, ಸುವರ್ಣ ಗಟ್ಟೆ, ಮೊಳೆಕ ಬರಿಸಿದ ಕಾಳುಗಳು ಇವುಗಳು ಪಿಸಿಓಎಸ್‌ ಸಮಸ್ಯೆ ಹೋಗಲಾಡಿಸಲು ಅತ್ಯುತ್ತಮ ಆಹಾರವಾಗಿದ್ದು, ಈ ಆಹಾರ ಸೇವಿಸಿದರೆ ಮೈಗ್ರೇನ್ ಸಮಸ್ಯೆ ಕೂಡ ಕಡಿಮೆಯಾಗುವುದು.

* ರಾಗಿ ದೋಸೆ, ರಾಗಿ ರೊಟ್ಟಿ , ಮುದ್ದೆ, ರಾಗಿ ಮಾಲ್ಟ್ ಈ ರೀತಿಯ ಆಹಾರ ಸೇವಿಸಿ.

ತೂಕ ಇಳಿಕೆ ಮಾಡುವುದು ಹೇಗೆ?

ತೂಕ ಇಳಿಕೆ ಮಾಡುವುದು ಹೇಗೆ?

ಪಿಸಿಓಎಸ್ ಸಮಸ್ಯೆ ಇರುವವರಿಗೆ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿರುತ್ತದೆ. ಏಕೆಂದರೆ ಹಾರ್ಮೋನ್‌ಗಳ ಅಸಮತೋಲನದಿಂದ ತೂಕ ಕಡಿಮೆಯಾಗುವುದಿಲ್ಲ. ರುಜುತಾ ಅವರು ಹೇಳುವ ಪ್ರಕಾರ ಪಿಸಿಓಎಸ್‌ ಸಮಸ್ಯೆಯಿದ್ದರೆ ತೂಕ ಇಳಿಕೆ ಕಷ್ಟ ಆದರೆ ಅಸಾಧ್ಯವಲ್ಲ. ನಿಮ್ಮ ಪಿಸಿಓಎಸ್‌ ನಿಯಂತ್ರಣದಲ್ಲಿದ್ದರೆ ತೂಕ ಇಳಿಕೆ ಸಾಧ್ಯ ಎಂದಿದ್ದಾರೆ.

ಪಿಸಿಓಎಸ್‌ ಸಮಸ್ಯೆ ನಿವಾರಣೆಗೆ ಯೋಗಾಸಾನ ಮಾಡಬೇಕು, ಅದರಲ್ಲೂ ಸುಪ್ತಬದ್ಧ ಕೋನಾಸನ ಅನ್ನು ಪ್ರತಿನಿತ್ಯ ಅಭ್ಯಾಸ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಪರಿಹಾರ

ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಪರಿಹಾರ

* ತೂಕ ಇಳಿಕೆಗೆ ವ್ಯಾಯಾಮ ಮಾಡಿ.

* ಸುಪ್ತಬದ್ಧಕೋನಾಸನ ಮುಟ್ಟಿನ ಸಮಯದಲ್ಲಿ ನೋವು ಕಡಿಮೆ ಮಾಡುತ್ತದೆ.

* ಕ್ಯಾಲ್ಸಿಯಂ ಹಾಗೂ ಬಿ 12 ಸಪ್ಲಿಮೆಂಟ್‌ನ ಆ ವಾರ ತೆಗೆದುಕೊಳ್ಳಿ, ಇದರಿಂದ ಬೆನ್ನು ನೋವು ಕಡಿಮೆಯಾಗುವುದು.

English summary

Dietician Rujuta Diwekar On PCOD: Symptoms And treatment

Dietician Rujuta Diwekar On PCOD: symptoms and treatment, read on...
X
Desktop Bottom Promotion