For Quick Alerts
ALLOW NOTIFICATIONS  
For Daily Alerts

ಹೀಗೆ ಮಾಡಿದರೆ ಕ್ಯಾನ್ಸರ್ ಅಪಾಯ ತಡೆಗಟ್ಟಬಹುದು

|

ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಎಂಬುವುದು ಹೆಚ್ಚಿನವರನ್ನು ಕಾಡುತ್ತಿರುವ ಸಮಸ್ಯಯಾಗಿದೆ. ಜನರ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕ್ಯಾನ್ಸರ್ ಹಲವು ಕಾರಣಗಳಿಂದ ಬರುತ್ತದೆ. ಅಧ್ಯಯನಗಳು ಹೇಳುವ ಪ್ರಕಾರ ಹೆಚ್ಚು ಕ್ಯಾನ್ಸರ್‌ಗೆ ಕಾರಣವಾಗಿದೆ. ನಾವು ಹೇಗೆ ಜೀವನ ಮಾಡುತ್ತೇವೆ ಅದು ನಮ್ಮ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಆರೋಗ್ಯಕರ ಜೀವನಶೈಲಿ ಕ್ಯಾನ್ಸರ್ ತಡೆಗಟ್ಟುವುದು ಮಾತ್ರವಲ್ಲ, ಇತರ ಕಾಯಿಲೆಗಳೂ ಕಾಡದಂತೆ ಆರೋಗ್ಯ ರಕ್ಷಣೆ ಮಾಡುತ್ತದೆ.

ನಾವು ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಪ್ರಮುಖವಾಗಿ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಕೇಬೇಕಾಗಿದೆ. ಯಾವ ರೀತಿಯ ಜೀವನಶೈಲಿ ಮತ್ತು ಆಹಾರಶೈಲಿ ಕ್ಯಾನ್ಸರ್ ಅಪಾಯ ತಗ್ಗಿಸುತ್ತದೆ ಎಂದು ನೋಡೋಣ ಬನ್ನಿ:

ಅಧಿಕ ನಾರಿನಂಶವಿರುವ ಆಹಾರ ಸೇವಿಸಿ

ಅಧಿಕ ನಾರಿನಂಶವಿರುವ ಆಹಾರ ಸೇವಿಸಿ

ಅಧಿಕ ನಾರಿನಂಶವಿರುವ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿಯಾಗಿದೆ. ಇದು ಕ್ಯಾನ್ಸರ್‌ಗೆ ಕಾರಣವಾಗುವ ಬೇಡದ ಅಂಶಗಳನ್ನು ದೇಹದಿಂದ ಹೊರ ಹಾಕುತ್ತದೆ. ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವ ಮೂಲಕ ದೇಹದ ಆರೋಗ್ಯ ಹೆಚ್ಚಿಸುತ್ತದೆ.

ಸಂಸ್ಕರಿಸಿದ ಆಹಾರ ದೂರವಿಡಿ

ಸಂಸ್ಕರಿಸಿದ ಆಹಾರ ದೂರವಿಡಿ

ಈಗೀನ ಜೀವನಶೈಲಿಯಲ್ಲಿ ಪ್ರತಿಯೊಂದು ಸಂಸ್ಕರಿಸಿದ ಆಹಾರವನ್ನೇ ಸೇವಿಸುವುದಾಗಿದೆ, ಇದು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ನಾವು ಸಂಸ್ಕರಿಸಿದ ಆಹಾರವನ್ನು ದೂರವಿಡುವ ಮೂಲಕ ಕ್ಯಾನ್ಸರ್ ಬರುವ ಅಪಾಯವನ್ನು ಶೇ.11ರಷ್ಟು ತಡೆಗಟ್ಟಬಹುದು.

ಧೂಮಪಾನ-ತಂಬಾಕು ಸೇವನೆ ಮಾಡಬಾರದು

ಧೂಮಪಾನ-ತಂಬಾಕು ಸೇವನೆ ಮಾಡಬಾರದು

ಇವೆರಡೂ ಕ್ಯಾನ್ಸರ್‌ಗೆ ಬಹುಮುಖ್ಯ ಕಾರಣವಾಗಿದೆ. ಬಾಯಿ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ಈ ಅಭ್ಯಾಸಗಳಿಂದ ದೂರವಿರಬೇಕು.

ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು

ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು

ದೈಹಿಕ ಚಟುವಟಿಕೆಯಿಂದ ಇದ್ದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಅರ್ಧ ಗಂಟೆ ವ್ಯಾಯಾಮ ಮಾಡುವುದು ಒಳ್ಳೆಯದು.

 ನಿಮ್ಮನ್ನು ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡಿ

ನಿಮ್ಮನ್ನು ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡಿ

ದೇಹಕ್ಕೆ ಸೂರ್ಯನ ಕಿರಣಗಳು ಬೀಳಬೇಕು, ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಬೆಳಗ್ಗೆ 10 ಗಂಟೆಯ ಬಳಿಕ 3 ಗಂಟೆಯ ಒಳಗೆ ಓಡಾಡುವಾಗ ಸೂರ್ಯನ ನೇರಳಾತೀತ ಕಿರಣಗಳು ಬೀಳುವ ಸಾಧ್ಯತೆ ಹೆಚ್ಚು. ಇದು ಚರ್ಮ ಕ್ಯಾನ್ಸರ್ ಉಂಟು ಮಾಡುತ್ತದೆ. ಆದ್ದರಿಂದ ಬಿಸಿಲಿನಲ್ಲಿ ಓಡಾಡುವಾಗ, ಕೆಲಸ ಮಾಡುವಾಗ ಟೋಪಿ ಧರಿಸುವುದು, ತುಂಬು ತೋಳಿನ ಉಡುಪು ಧರಿಸುವುದು ಒಳ್ಳೆಯದು.

ಮದ್ಯ ಸೇವನೆ ಮಿತಿಯಲ್ಲಿರಲಿ

ಮದ್ಯ ಸೇವನೆ ಮಿತಿಯಲ್ಲಿರಲಿ

ಮದ್ಯ ಸೇವನೆಯನ್ನು ಮಿತಿಯಲ್ಲಿ ಮಾಡಿದರೆ ಯಾವುದೇ ಅಪಾಯವಿಲ್ಲ, ಆದರೆ ತುಂಬಾ ಮದ್ಯಪಾನ ಕರುಳಿನ, ಲಿವರ್‌ನ ಕ್ಯಾನ್ಸರ್ ಉಂಟು ಮಾಡುತ್ತದೆ.

ಅಪಾಯ ತರುವ ಅಭ್ಯಾಸ ಬಿಡಿ

ಅಪಾಯ ತರುವ ಅಭ್ಯಾಸ ಬಿಡಿ

ಸುರಕ್ಷಿತಾ ಲೈಂಗಿಕ ಕ್ರಿಯೆ ನಡೆಸಿ, ಸೂಜಿ ಶೇರ್‌ ಮಾಡಬೇಡಿ, ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.

ನಿಯಮಿತ ಚೆಕಪ್ ಮಾಡಿಸಿ

ನಿಯಮಿತ ಚೆಕಪ್ ಮಾಡಿಸಿ

ಕಾಯಿಲೆ ಬಂದಾಗ ಹೋಗಿ ಚಿಕಿತ್ಸೆ ಪಡೆಯುವ ಬದಲು ಮುಂಜಾಗ್ರತೆವಹಿಸುವುದು ತುಂಬಾನೇ ಮುಖ್ಯ. ನೀವು ನಿಯಮಿತ ಚೆಕಪ್ ಮಾಡಿಸಿ, ಇದರಿಂದ ರೋಗ್ಯ ಸಮಸ್ಯೆ ಇದ್ದರೆ ಮೊದಲನೇ ಹಂತದಲ್ಲಿಯೇ ತಿಳಿದು ಬರುವುದು. ಕ್ಯಾನ್ಸರ್ ಮೊದಲನೇ ಹಂತದಲ್ಲಿ ತಿಳಿದುಬಂದರೆ ಗುಣಪಡಿಸುವುದು ಸುಲಭ.

English summary

Diet And Lifestyle Changes To Reduce The Risk Of Cancer

These Diet and Lifestyle Changes to Reduce the Risk of Cancer, read on,
X
Desktop Bottom Promotion