For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ

|

ಕೋವಿಡ್‌ 19 ಲಸಿಕೆ ಇದೀಗ ದೇಶದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಲಸಿಕೆ ಕೊರೊನಾ ತಡೆಗಟ್ಟಲು ಸಹಕಾರಿಯಾದರೂ ಕೆಲವರಲ್ಲಿ ಅಡ್ಡಪರಿಣಾಮಗಳು ಕಂಡು ಬರುತ್ತಿರುವ ಬಗ್ಗೆ ವರದಿಯಾಗಿವೆ.

ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ಲಸಿಕೆ ನೀಡಿದ 2 ದಿನಗಳಲ್ಲಿ 447 ಜನರಿಗೆ ಅಡ್ಡಪರಿಣಾಮಗಳು ಉಂಟಾಗಿವೆ. ಇದರ ಕುರಿತು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀಡುವ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುವುದಾದರೂ ಸಾವು ಸಂಭವಷ್ಟು ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದಿದ್ದಾರೆ.

ಕೆಲವೊಮ್ಮೆ ವ್ಯಕ್ತಿ ಕ್ರೋಸಿನ್, ಪ್ಯಾರಾಸಿಟಮೋಲ್ ತೆಗೆದುಕೊಂಡಾಗಲೂ ಅಲರ್ಜಿ ಉಂಟಾಗುತ್ತದೆ, ಆದ್ದರಿಂದ ಈ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಭಯ ಪಡುವ ಅಗ್ಯತವಿಲ್ಲ ಎಂದಿದ್ದಾರೆ.

ಡಾ. ಗುಲೇರಿಯಾ ಅವರ ಪ್ರಕಾರ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು

ಡಾ. ಗುಲೇರಿಯಾ ಅವರ ಪ್ರಕಾರ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು

ವೈದ್ಯರು ಹೇಳಿರುವ ಪ್ರಕಾರ ಲಸಿಕೆ ಪಡೆದವರಲ್ಲಿ ಶೇ. 10ಕ್ಕಿಂತ ಕಡಿಮೆ ಜನರಲ್ಲಿ ಮಾತ್ರ ಅಡ್ಡಪರಿಣಾಮಗಳು ಕಂಡು ಬರುತ್ತದೆ. ಪ್ರಮುಖವಾಗಿ ಕಂಡು ಬರುವ ಅಡ್ಡಪರಿಣಾಮಗಳೆಂದರೆ ಮೈಕೈ ನೋವು, ಜ್ವರ, ಲಸಿಕೆ ಹಾಕಿದ ಭಾಗದಲ್ಲಿ ನೋವು, ತ್ವಚೆಯಲ್ಲಿ ಅಲರ್ಜಿ, ವಾಂತಿ, ಉಸಿರಾಟದಲ್ಲಿ ತೊಂದರೆ ಕಾಣಿಸಿಬಹುದು. ಆದರೆ ಇವುಗಳು ಪ್ರಾಣಕ್ಕೆ ಕುತ್ತು ತರುವಂಥ ಅಡ್ಡಪರಿಣಾಮಗಳಲ್ಲ ಎಂದಿದ್ದಾರೆ.

ಆದ್ದರಿಂದ ಜನರು ಈ ಲಸಿಕೆ ಪಡೆಯಲು ಹಿಂದೇಟು ಹಾಕಬಾರದು, ಈ ಲಸಿಕೆ ಪಡೆಯುವುದರಿಂದ ಕೊರೊನಾದಿಂದ ಸಾಯುವವರ ಸಂಖ್ಯೆ ತಗ್ಗಿಸಬಹುದು. ಅಲ್ಲದೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಹಾಗೂ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯಲು ಈ ಲಸಿಕೆ ಪಡೆಯುವುದರಿಂದ ಸಹಾಯಕವಾಗುತ್ತದೆ ಎಂದಿದ್ದಾರೆ.

ಲೈವ್‌ನಲ್ಲಿ ಲಸಿಕೆ ಪಡೆದಿದ್ದರು ಡಾ. ಗುಲೇರಿಯಾ

ಲೈವ್‌ನಲ್ಲಿ ಲಸಿಕೆ ಪಡೆದಿದ್ದರು ಡಾ. ಗುಲೇರಿಯಾ

ಪ್ರಧಾನಿ ನರೇಂದ್ರ ಜನವರಿ 16ಕ್ಕೆ ಕೊರೊನಾ ಲಸಿಕೆಗೆ ಚಾಲನೆ ನೀಡಿದ ಬಳಿಕ ಡಾ. ಗುಲೇರಿಯಾ ಲಸಿಕೆ ಪಡೆಯುವ ವೀಡಿಯೋ ಟಿವಿಯಲ್ಲಿ ಲೈವ್ ಹೋಗಿತ್ತು, ನಂತರ ಸೋಮವಾರ ಮಾದ್ಯಮದ ಮುಂದೆ ಬಂದ ವೈದ್ಯರು ನನಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ, ನಾನು ಚೆನ್ನಾಗಿದ್ದೇನೆ ಎಂದು ಹೇಳಿದರು.

ಕೋವಿಡ್‌ 19 ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದರೇ ಆರೋಗ್ಯ ಕಾರ್ಯಕರ್ತ?

ಕೋವಿಡ್‌ 19 ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದರೇ ಆರೋಗ್ಯ ಕಾರ್ಯಕರ್ತ?

ಮೊರಾಡಾಬಾದ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರೊಬ್ಬರು ಕೋವಿಡ್‌ 19 ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದರು ಎಂಬುವುದಾಗಿ ವರದಿಯಾಗಿತ್ತು. ಆದರೆ ಅದರ ಪೋಸ್ಟ್‌ಮಾರ್ಟಂ ವರದಿಯು ಅವರು ಹೃದಯಾಘಾಟತದಿಂದ ಸಾವನ್ನಪ್ಪಿದಾಗಿ ಹೇಳಿದೆ.

ದೆಹಲಿಯಲ್ಲಿ ಲಸಿಕೆಯಿಂದಾಗಿ ಅಡ್ಡಪರಿಣಾಮ ಉಂಟಾಗಿರುವ 51 ಕೇಸ್ ವರದಿಯಾಗಿತ್ತು. ಏಮ್ಸ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ 22 ವರ್ಷದ ವ್ಯಕ್ತಿಗೆ ಲಸಿಕೆ ಬಳಿಕ ತುಂಬಾ ಅಡ್ಡಪರಿಣಾಮಗಳು ಕಂಡು ಬಂದ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈಗ ಅವರು ಕೂಡ ಚೇತರಿಸಿಕೊಂಡಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಅವಶ್ಯಕ

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಅವಶ್ಯಕ

ಕೋವಿಡ್‌ 19 ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳು ಉಂಟಾಗಿರುವ ಕೆಲವೊಂದು ಕೇಸ್‌ಗಳು ಬಂದಿರುವುದರಿಂದ ಜನರಿಗೆ ಈ ಲಸಿಕೆ ಪಡೆಯಲು ಭಯವಿದೆ, ಆದರೆ ಈ ಲಸಿಕೆ ಬಗ್ಗೆ ಯಾವುದೇ ಭಯ ಬೇಡ ಸ್ವತಃ ಏಮ್ಸ್‌ ನಿರ್ದೇಶಕ ಡಾ. ಗುಲೇರಿಯಾ ಹೇಳಿದ್ದಾರೆ. ಇದೀಗ ಆರೋಗ್ಯ ಕಾರ್ಯತರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡುತ್ತಿದ್ದು ಕೆಲವು ತಿಂಗಳುಗಳಲ್ಇ ಎಲ್ಲರಿಗೂ ಸಿಗುವ ನಿರೀಕ್ಷೆ ಇದೆ. ಕೊರೊನಾ ಎಂಬ ಮಹಾಮಾರಿಯನ್ನು ಎದುರಿಸಲು ಇದೊಂದೇ ಇಡೀ ವಿಶ್ವದ ಮುಂದಿರುವ ದಾರಿಯಾಗಿದೆ, ಆದ್ದರಿಂದ ಲಸಿಕೆ ಬಗ್ಗೆ ಅನವಶ್ಯಕ ಭಯ ಬೇಡ.

English summary

Covid-19 Vaccination Side Effects Will Not Result in Death: AIIMS Director

Covid-19 Vaccination Side Effects Will Not Result in Death: AIIMS Director, read on...
Story first published: Wednesday, January 20, 2021, 17:04 [IST]
X
Desktop Bottom Promotion