For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಇದ್ದು ಕೊರೊನಾದಿಂದ ಹೇಗೆ ಚೇತರಿಸಿದೆ: ಶ್ರೀಧರ್ ರಾವ್ ಹಂಚಿಕೊಂಡ ಅನುಭವ

|

ಕೊರೊನಾವೈರಸ್‌ ಈ ಪದ ಕೇಳಿಯೇ ಜನರಿಗೆ ಸಾಕಾಗಿದೆ. ಯಾವಾಗಪ್ಪಾ ಈ ಹೆಸರು ಮರೆತು ಹೋಗುವುದು ಎಂದು ಜನರು ಬಯಸುತ್ತಿದ್ದಾರೆ. ಆದರೆ ದಿನಾ ಕೊರೊನಾ ಕೇಸ್‌ಗಳು ಪತ್ತೆಯಾಗುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ.

ಕೊರೊನಾ ಬಗ್ಗೆ ಸಾಕಷ್ಟು ಭಯ ಕೂಡ ಜನರಲ್ಲಿದೆ. ಆದರೆ ಈ ಕಾಯಿಲೆಯನ್ನು ಮಣಿಸಲು ಸಾಧ್ಯ ಎಂದು ಇದರಿಂದ ಚೇತರಿಸಿಕೊಂಡವರು ಸಾಬೀತು ಪಡಿಸಿದ್ದಾರೆ ಕೋವಿಡ್‌ 19ನಿಂದ ಚೇತರಿಸಿಕೊಂಡ ಶ್ರೀಧರ್ ರಾವ್‌ ಅವರು ಬೋಲ್ಡ್‌ ಸ್ಕೈ ಕನ್ನಡ ಜೊತೆ ಅನುಭವ ಹಂಚಿಕೊಂಡಿದ್ದಾರೆ. ಈ ಸಂದರ್ಶನವನ್ನು ಅಂಜಲಿರಾವ್ ಅವರು ನಡೆಸಿಕೊಟ್ಟಿದ್ದಾರೆ.

Covid 19 Survivor Sridhar Rao Shared Experience How He Combat Coronavirus

ಶ್ರೀಧರ್‌ ರಾವ್‌ ಅವರು ಸಾಕಷ್ಟು ಕೋವಿಡ್ 19 ಬಾರದಂತೆ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆವಹಿಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದರು, ಆಗಾಗ ಸ್ಯಾನಿಟೈಸರ್ ಬಳಸುತ್ತಿದ್ದರು, ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುತ್ತಿದ್ದರು. ಆದರೂ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಮಗೆ ಹೇಗೆ ಕೊರೊನಾ ಬಂದಿರಬಹುದು ಎಂಬುವುದನ್ನು ಅವರು ಹೇಳಿರುವ ಅಂಶವನ್ನು ಪ್ರತಿಯೊಬ್ಬರು ಗಮನಿಸಬೇಕಾಗಿದೆ. ಏಕೆಂದರೆ ನಾವೆಲ್ಲಾ ತೋರುವ ಚಿಕ್ಕ ನಿರ್ಲಕ್ಷ್ಯ ಕೂಡ ಹೇಗೆ ಅಪಾಯವನ್ನು ತರಬಹುದು ಎಂದು ಹೇಳಿದ್ದಾರೆ.

ಅಲ್ಲದೆ ಮನೆಯಲ್ಲಿಯೇ ಐಸೋಲೇಟ್ ಆಗಿ ಕೊರೊನಾದಿಂದ ಚೇತರಿಸಿಕೊಂಡಿರುವ ಅವರು ಆಯುರ್ವೇದ ಔಷಧಿ, ನಿಂಬೆಹಣ್ಣಿನ ರಸ ಹಾಗೂ ಯೋಗ ಹೇಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯವಾಯಿತು ಎಂಬುವುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಇವರ ಮಾತುಗಳನ್ನು ಕೇಳುತ್ತಿದ್ದರೆ ಮನಸ್ಸಿನಲ್ಲಿದ್ದ ಭಯ ಹೋಗಿ ಕೊರೊನಾವೈರಸ್ ಗೆಲ್ಲಲು ಸಾಧ್ಯ ಎಂಬ ಆತ್ಮವಿಶ್ವಾಸ ಮೂಡುವುದು.

English summary

Covid 19 Survivor Sridhar Rao Shared Experience How He Combat Coronavirus

Here are video of Covid 19 survivor shared experience with us how he combat coronavirus, have a look,
X
Desktop Bottom Promotion