For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಕೆಮ್ಮು ಇತರ ಕೆಮ್ಮಿಗಿಂತ ಹೇಗೆ ಭಿನ್ನವಾಗಿರುತ್ತೆ?

|

ಒಂದು ಕಾಲವಿತ್ತು ಕೆಮ್ಮಿದರೆ 'ಶೀತವಾಗಿದೆಯೇ, ಕೆಮ್ಮಿಗೆ ಔಷಧಿ ತಗೊಂಡಿದ್ದೀಯ?' ಅಂತ ಕೇಳುತ್ತಿದ್ದರು, ಇನ್ನು ಸೀನಿದರೆ ಯಾರೋ ನಮ್ಮ ಬಗ್ಗೆ ಹೇಳುತ್ತಿದ್ದಾರೆ ಅಥವಾ god blessing you ಅಂತೆಲ್ಲಾ ಹೇಳುತ್ತಿದ್ದರು.

ಅದೇ ಈಗ ಯಾವುದಾದರೂ ಶಾಪಿಂಗ್ ಸೆಂಟರ್‌ಗೆ ಅಥವಾ ಬಸ್‌ನಲ್ಲಿ, ಮೆಟ್ರೋದಲ್ಲಿ ಹೀಗೆ ಹೊರಗಡೆ ಹೋಗುವಾಗ ಸೀನಿದರೆ ಅಥವಾ ಕೆಮ್ಮಿದರೆ ಜನರು ಪಟ್‌ ಅಂತ ನಮ್ಮಿಂದ ದೂರ ಸರಿದು ನಿಲ್ಲುವುದು ಮಾತ್ರವಲ್ಲ ಒಂಥರಾ ನೋಟ ಬೀರುತ್ತಾರೆ. ಕೊರೊನಾ ಪರಿಸ್ಥಿತಿಯನ್ನು ಹಾಗೇ ಬದಲಾಯಿಸಿದೆ.


ಶೀತವಾದಾಗ ಅಥವಾ ದೂಳಿನ ಅಲರ್ಜಿ, ಕ್ಷಯ ರೋಗ, ಗಂಟಲಿನ ಕ್ಯಾನ್ಸರ್ ಹೀಗೆ ನಾನಾ ಕಾರಣಗಳಿಂದ ಕೆಮ್ಮು ಉಂಟಾಗುತ್ತದೆ. ಎಲ್ಲಾ ಕೆಮ್ಮು ಕೋವಿಡ್ 19 ಕೆಮ್ಮು ಆಗಿರಲ್ಲ. ಕೆಮ್ಮು ಬಂದಾಗ ನನಗೆ ಕೊರೊನಾ ಬಂದಿಲ್ಲ ಅಂತ ನಿರ್ಲಕ್ಷ್ಯ ಮಾಡುವುದು ಕೂಡ ತಪ್ಪು, ಏಕೆಂದರೆ ದಿನ ಕಳೆದಂತೆ ಪರಿಸ್ಥಿತಿ ಗಂಭೀರವಾಗಬಹುದು.

ಆದ್ದರಿಂದ ಕೆಮ್ಮು ಬಂದಾಗ ಬಂದಿರುವುದು ಕೊರೊನಾ ಲಕ್ಷಣವೇ, ಅಲ್ಲವೇ ಎಂದು ತಿಳಿದುಕೊಳ್ಳುವುದು ಒಳ್ಳೆಯದು:

 ಕೋವಿಡ್ 19 ಕೆಮ್ಮಿನ ಲಕ್ಷಣಗಳೇನು?

ಕೋವಿಡ್ 19 ಕೆಮ್ಮಿನ ಲಕ್ಷಣಗಳೇನು?

ಕೋವಿಡ್ 19ನ ರೋಗ ಲಕ್ಷಣ ಸೂಚಿಸುವ ಕೆಮ್ಮು ಒಣ ಕೆಮ್ಮು ಆಗಿರುತ್ತದೆ, ಅಲ್ಲದೆ ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು. ಉಸಿರಾಟಕ್ಕೆ ತೊಂದರೆ, ತುಂಬಾ ಮೈಕೈ ನೋವು ಇದ್ದರೆ ಅದು ಕೊರೊನಾ ಕೆಮ್ಮು ಆಗಿರುತ್ತದೆ. ಕೊರೊನಾವೈರಸ್‌ನ ಸಾಮಾನ್ಯ ಲಕ್ಷಣವೆಂದರೆ ಶೀತ ಅಥವಾ ಜ್ವರ ಹಾಗೂ ಒಣ ಕೆಮ್ಮು. ಕೊರೊನಾವೈರಸ್ ನೇರವಾಗಿ ಶ್ವಾಸಕೋಶಕ್ಕೆ ಹಾನಿ ಮಾಡುವುದರಿಂದ ಶ್ವಾಸಕೋಶದಲ್ಲಿ ನೀರು ತುಂಬುವುದು ಹಾಗೂ ರಕ್ತನಾಳಗಳಿಗೆ ಆಮ್ಲಜನಕದ ಕೊರತೆ ಉಂಟಾಗುವುದು, ಇದರಿಂದಾಗಿ ಕೆಮ್ಮು ಮತ್ತಷ್ಟು ಹೆಚ್ಚಾಗುವುದು, ಉಸಿರಾಟಕ್ಕೆ ತೊಂದರೆ ಉಂಟಾಗುವುದು. ಒಂದು ಗಂಟೆಯಲ್ಲಿ 3-4ಕ್ಕಿಂತ ಅಧಿಕ ಬಾರಿ ಕೆಮ್ಮು ಬಂದರೆ ಅದು ಕೊರೊನಾವೈರಸ್ ಲಕ್ಷಣವಾಗಿರಬಹುದು. ಅಲ್ಲದೆ ಈಗಾಗಲೇ ಕೆಮ್ಮಿನ ಸಮಸ್ಯೆಯಿದ್ದು ಕೊರೊನಾ ತಗುಲಿದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗುವುದು.

ಕಫ ಕೆಮ್ಮು ಹಾಗೂ ಒಣ ಕೆಮ್ಮು ಕಂಡು ಹಿಡಿಯುವುದು ಹೇಗೆ?

ಕಫ ಕೆಮ್ಮು ಹಾಗೂ ಒಣ ಕೆಮ್ಮು ಕಂಡು ಹಿಡಿಯುವುದು ಹೇಗೆ?

ಒಣ ಕೆಮ್ಮು ಬಂದಾಗ ಕಫ ಕಡಿಮೆ ಬರುತ್ತದೆ, ಗಂಟಲು ನಿರಂತರ ತುರಿಸಿ ಕೆಮ್ಮು ಬರ್ತಾ ಇರುತ್ತದೆ. ಅಲ್ಲದೆ ಗಂಟಲಿನ ಭಾಗದಲ್ಲಿ ಉರಿಯೂತ ಉಂಟಾಗುವುದು. ಅದೇ ಕಫ ಕೆಮ್ಮುವಿನಲ್ಲಿ ಕೆಮ್ಮಿದಾಗ ಕಫ ಬರುವುದು ಅಲ್ಲದೆ ಗಂಟಲಿನಲ್ಲಿ ಏನೋ ಸಿಕ್ಕಿ ಕೊಂಡಂತೆ ಅನಿಸುವುದು, ಕಫ ಕೆಮ್ಮು ಬಂದಾಗ ರಕ್ತ ಬರಬಹುದು ಅಲ್ಲದೆ ಶೀತ ಕೂಡ ಇರುತ್ತದೆ.

ಕಫ ಕೆಮ್ಮಿಗೆ ಹೋಲಿಸಿದರೆ ಒಣ ಕೆಮ್ಮು ಗುಣವಾಗಲು ತುಂಬಾ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ಒಣ ಕೆಮ್ಮು, ಕಫ ಕೆಮ್ಮು ಆಗಿ ಮಾರ್ಪಡುವುದು. ಅದು ಕೆಲವೊಮ್ಮೆ ಆರೋಗ್ಯ ಪರಿಸ್ಥಿತಿಯನ್ನು ಅವಲಂಬಿಸುವುದು.

ನೀವೇನು ಮಾಡಬೇಕು?

ನೀವೇನು ಮಾಡಬೇಕು?

ಒಣ ಕೆಮ್ಮು ಇದ್ದು ನೀವು ಕೊರೊನಾವೈರಸ್‌ ಇರಬಹುದೇ ಎಂದು ಸಂಶಯಿಸುತ್ತಿದ್ದರೆ ಅಲ್ಲದೆ ಕೊರೊನಾ ಇತರ ಲಕ್ಷಣಗಳಾದ ಜ್ವರ, ರುಚಿ ಇಲ್ಲವಾಗುವುದು, ಉಸಿರಾಟಕ್ಕೆ ತೊಂದರೆ ಉಂಟಾದರೆ ಕೂಡಲೇ ಐಸೋಲೇಟ್ ಆಗಿ. ನಂತರ ಸ್ಟೀಮ್ ತೆಗೆದುಕೊಳ್ಳಿ. ಹಾಲಿಗೆ ಅರಿಶಿಣ ಹಾಕಿ ಕುಡಿಯಿರಿ. ಹದ ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ. ಅಲ್ಲದೆ ತಡ ಮಾಡದೇ ಕೊರೊನಾ ಪರೀಕ್ಷೆ ಮಾಡಿಸಬೇಕು. ಪರೀಕ್ಷೆ ವರದಿ ಬರುವವರೆಗೆ ಹೊರಗಡೆ ಎಲ್ಲೂ ಹೋಗದೆ ಐಸೋಲೇಟ್ ಆಗಿರಬೇಕು. ಅಲ್ಲದೆ ಸೋಂಕು ಮನೆಯವರಿಗೆ ಹರಡದಂತೆ ಎಚ್ಚರವಹಿಸಬೇಕು.

ಎಲ್ಲಾ ಕೆಮ್ಮು ಕೊರೊನಾವಲ್ಲ

ಎಲ್ಲಾ ಕೆಮ್ಮು ಕೊರೊನಾವಲ್ಲ

ಅಲರ್ಜಿ, ಅಸ್ತಮಾ, ಟಾನ್ಸಿಲಿಟಿಸ್ ಮುಂತಾದ ಕಾರಣಗಳಿಂದಲೂ ಒಣ ಕೆಮ್ಮು ಬರಬಹುದು, ಆದರೆ ಮೊದಲಿಗೆ ಕೊರೊನಾ ಪರೀಕ್ಷೆ ಮಾಡಿಸಿ ಅದು ನೆಗೆಟಿವ್ ಬಂದ್ರೆ ಕೆಮ್ಮಿಗೆ ಏನು ಕಾರಣವೆಂದು ತಿಳಿಯಲು ವೈದ್ಯರನ್ನು ಸಂಪರ್ಕಿಸಿ.

English summary

COVID-19, Cold, Allergies And The Flu: What Are The Differences In Kannada

COVID-19, cold, allergies and the flu: What are the differences in Kannada, read on...
Story first published: Thursday, May 13, 2021, 18:00 [IST]
X