For Quick Alerts
ALLOW NOTIFICATIONS  
For Daily Alerts

ಮಾಸ್ಕ್‌ ಕಡ್ಡಾಯವಾಗಿ ಧರಿಸಿ: ಗಾಳಿಯಿಂದಲೂ ಹರಡುತ್ತಿದೆ ಕೊರೊನಾ

|

ಇಷ್ಟು ದಿನ ಕೊರೊನಾ ವೈರಸ್ ಸೋಂಕಿತನ ಸಂಪರ್ಕದಿಂದ ಅಥವಾ ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮುಟ್ಟುವ ಮೂಲಕ ಅಥವಾ ಉಗುಳಿದಾಗ ಹರಡುತ್ತಿತ್ತು. ಇದು ಗಾಳಿಯ ಮೂಲಕ ಹರಡುವುದಿಲ್ಲ ಎಂದು ಹೇಳಲಾಗುತ್ತಿತ್ತು.

Coronavirus Is Airbone 239 Experts Make One big Claim

ಇದೀಗ ಆಘಾತಕಾರಿ ಸುದ್ದಿ ಹೊರ ಬಂದಿದ್ದು ಕೊರೊನಾವೈರಸ್‌ ಗಾಳಿಯ ಮುಖಾಂತರವೂ ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ ಹಾಗೂ ಈ ವೈರಸ್‌ ಬಾರದಂತೆ ನಾವು ಮತ್ತಷ್ಟು ಎಚ್ಚರಿಕೆವಹಿಸಬೇಕಾಗಿದೆ.
 ಗಾಳಿ ಪ್ರವೇಶ ಕಡಿಮೆ ಇರುವ ಕಡೆ ಅಪಾಯ ಹೆಚ್ಚು

ಗಾಳಿ ಪ್ರವೇಶ ಕಡಿಮೆ ಇರುವ ಕಡೆ ಅಪಾಯ ಹೆಚ್ಚು

ಗಾಳಿ ಸರಿಯಾಗಿ ಪ್ರವೇಶಿಸಿದ ಸ್ಥಳಗಳಲ್ಲಿ ಈ ವೈರಸ್‌ ಹೆಚ್ಚಿನ ಜನರಿಗೆ ಹಬ್ಬುತ್ತಿದೆ. ಅದರಲ್ಲೂ ಜನರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಈ ವೈರಸ್‌ ಹಬ್ಬುವ ಸಾಧ್ಯತೆ ಇದೆ. ಆದ್ದರಿಂದ ಒಂದು ಕೋಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ ಗಾಳಿಯ ಮೂಲಕ ಹರಡುವ ಸಾಧ್ಯತೆ ಇರುವುದರಿಂದ ಮನೆಯಿಂದ ಹೊರಗಡೆ ಹೋಗಿ ಮನೆಗೆ ಹಿಂತಿರುಗಿ ಬರುವವರಿಗೆ ಮಾಸ್ಕ್ ತೆಗೆಯಲೇ ಬಾರದು. ಆರೋಗ್ಯ ಸಿಬ್ಬಂದಿಗಳು N95 ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸಬೇಕು.

ಸೋಂಕು ತಡೆಯಲು ಗಾಳಿ, ಬೆಳಕು ಅವಶ್ಯಕ

ಸೋಂಕು ತಡೆಯಲು ಗಾಳಿ, ಬೆಳಕು ಅವಶ್ಯಕ

ಶಾಲಾ ಕಾಲೇಜು,ಬೇಬಿ ಕೇರ್ ಸೆಂಟರ್, ನರ್ಸಿಂಗ್ ಹೋಂ, ಆಫೀಸ್‌, ಏರ್ ಕಂಡೀಷನರ್ ರೂಂ ಇವುಗಳಲ್ಲಿ ಗಾಳಿ ಓಡಾಟ ಕಡಿಮೆ ಇರುತ್ತದೆ. ಇಂಥ ಸ್ಥಳಗಳಲ್ಲಿ ಒಬ್ಬ ಸೋಂಕಿತ ಇದ್ದರೆ ಬೇಗನೆ ಸೋಂಕು ಇತರರಿಗೆ ಹರಡುತ್ತದೆ. ಆದ್ದರಿಂದ ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ಕೋಣೆಯಲ್ಲಿ ಗಾಳಿ ಪ್ರವೇಶ ಚೆನ್ನಾಗಿರಬೇಕು, ಹಾಗೂ ಸೂರ್ಯನ ಬೆಳಕು ಕೋಣೆಗೆ ಬೀಳುವಂತಿರಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗಾಳಿಯಿಂದ ಹರಡುತ್ತದೆ ಎನ್ನುವುದಕ್ಕೆ ಸಾಕ್ಷಿ ಇದೆ ಎಂದ ವಿಜ್ಞಾನಿಗಳು

ಗಾಳಿಯಿಂದ ಹರಡುತ್ತದೆ ಎನ್ನುವುದಕ್ಕೆ ಸಾಕ್ಷಿ ಇದೆ ಎಂದ ವಿಜ್ಞಾನಿಗಳು

ಇದುವರೆಗೆ ವಿಶ್ವ ಸಂಸ್ಥೆ ಕೊರೊನಾವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ಹೇಳಿತ್ತು. ಆದರೆ ವೈದ್ಯಕೀಯ ಕ್ಷೇತ್ರದ ತಜ್ಞರು ಸೈನ್ಸ್ ಜರ್ನಲ್‌ ಪತ್ರಿಕೆಯಲ್ಲಿ ಪ್ರಕಟಿಸಲು ಸಂಶೋಧನಾ ವರದಿ ಸಿದ್ದಪಡಿಸಿದ್ದು ಸಂಶೋಧನೆಯ ಸಾರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಓಪನ್ ಲೆಟರ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. 239 ತಜ್ಞರು ಸೇರಿ ಈ ವರದಿ ಸಿದ್ಧ ಮಾಡಿದ್ದು ವಿಶ್ವದಲ್ಲಿ ಕೊರೊನಾ ವೈರಸ್ ಗಾಳಿಯ ಮೂಲಕವೂ ಹರಡುತ್ತಿದೆ ಎಂಬುವುದಕ್ಕೆ ಸಾಕ್ಷ್ಯ ಇದೆ ಎಂದಿದ್ದಾರೆ.

ವೈರಸ್ ಗಾಳಿಯಿಂದ ಹರಡಲು ಸಾಧ್ಯವಿಲ್ಲ ಎನ್ನುತ್ತಿರುವ ಹೆಲ್ತ್ ಏಜೆನ್ಸಿ

ವೈರಸ್ ಗಾಳಿಯಿಂದ ಹರಡಲು ಸಾಧ್ಯವಿಲ್ಲ ಎನ್ನುತ್ತಿರುವ ಹೆಲ್ತ್ ಏಜೆನ್ಸಿ

ವೈರಸ್ ಗಾಳಿಯಿಂದ ಹರಡುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಹೆಲ್ತ್ ಏಜೆನ್ಸಿಗಳು ಹೇಳಿವೆ. ವೈರಸ್‌ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಡ್ರಾಪ್‌ಲೆಟ್ಸ್ ಮೂಲಕ ಹರಡುತ್ತದೆ, ಆದರೆ ಗಾಳಿಯ ಮುಖಾಂತರ ಹರಡಲು ಸಾಧ್ಯವೇ ಇಲ್ಲ ಎಂಬುವುದು ಇವರ ಬಲವಾದ ವಾದವಾಗಿದೆ. ವೈರಸ್ ಗಾಳಿ ಮೂಲಕ ಹರಡುತ್ತದೆ ಎಂಬುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ 'ವಿಶೇಷವಾಗಿ ಕಳೆದ ಎರಡು ತಿಂಗಳುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮುಖಾಂತರ ಪ್ರಸರಣವಾಗುವ ಬಗ್ಗೆ ಸಾಧ್ಯವಾದಷ್ಟು ಪರಿಗಣಿಸಿದ್ದೇವೆ' ಎಂದಿದ್ದಾರೆ.

 ವೈರಸ್‌ ಗಾಳಿಯಿಂದ ಹರಡುವುದಾದರೆ ಅಪಾಯ ಹೆಚ್ಚು

ವೈರಸ್‌ ಗಾಳಿಯಿಂದ ಹರಡುವುದಾದರೆ ಅಪಾಯ ಹೆಚ್ಚು

ವೈರಸ್‌ ಗಾಳಿ ಮುಖಾಂತರ ಹರಡುವುದಾದರೆ ಆಫೀಸ್, ಶಾಲೆ ಮತ್ತಿತರ ಸ್ಥಳಗಳಲ್ಲಿ ಗಾಳಿ, ಬೆಳಕು ಸರಿಯಾಗಿ ಬೀಳುವಂಥ ವ್ಯವಸ್ಥೆ ಮಾಡಬೇಕು. ಇನ್ನು ವೈರಸ್‌ ಗಾಳಿಯಿಂದ ಹರಡುತ್ತಿದ್ದರೆ ಈ ಸೋಂಕಿನ ತೀವ್ರತೆ ಭಯಾನಕವಾಗಿದ್ದು,ಜನರು ಕೈಗಳನ್ನು ಆಗಾಗ ಸ್ಯಾನಿಟೈಸ್ ಹಾಕಿ ತೊಳೆಯುವುದರ ಜೊತೆಗೆ ಮನೆಯ ಒಳಗಡೆಯೂ ಮಾಸ್ಕ್ ಧರಿಸಿ ಓಡಾಡುವ ಪರಿಸ್ಥಿತಿ ಬರಬಹುದು.

English summary

Coronavirus Is Airborne: 239 Experts Make One big Claim

The coronavirus is finding new victims worldwide, that is coronavirus spreading through air, 239 experts make one big claim, Read on.
X
Desktop Bottom Promotion