For Quick Alerts
ALLOW NOTIFICATIONS  
For Daily Alerts

ಮೊಬೈಲ್‌ನಲ್ಲಿ 9 ದಿನಕ್ಕೂ ಹೆಚ್ಚು ಕಾಲ ಜೀವಿಸಿರುತ್ತೆ ಕೊರೊನಾ ವೈರಸ್!

|

ಈಗ ವಿಶ್ವದೆಲ್ಲಡೆ ಕೊರೊನಾ ವೈರಸ್‌ದ್ದೇ ಭೀತಿ. ಚೀನಾದಲ್ಲಿ ಹುಟ್ಟಿಕೊಂಡ ಈ ಮಾರಕ ವೈರಸ್‌ ದಕ್ಷಿಣ ಕೊರಿಯಾ, ಇಟಲಿ, ಭಾರತ, ಅಮೆರಿಕಾ ಸೇರಿ ಹಲವಾರು ರಾಷ್ಟ್ರಗಳಿಗೆ ಹರಡಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ.

Beware, Corona Virus Can Spread Through Your Phone!

ಕೊರೊನಾ ವೈರಸ್‌ ತಡೆಗಟ್ಟಲು ಜನರು ಮಾಸ್ಕ್ ಮೊರೆ ಹೋಗುತ್ತಿದ್ದಾರೆ, ಸ್ವಚ್ಛತೆಯ ಕಡೆಗೆ ತುಂಬಾ ಗಮನ ಕೊಡುತ್ತಿದ್ದಾರೆ. ಸ್ಯಾನಿಟೈಸರ್‌ ಬಳಸಿ ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ, ಆದರೆ ಜನರು ತಾವು ಬಳಸುವ ಫೋನ್‌ಗಳು ಕೂಡ ವೈರಸ್ ಹರಡುತ್ತವೆ ಎಂಬುವುದನ್ನು ಅರಿಯದೆ ಬರೀ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಎಂದು ತಲೆಕೆಡಿಸಿಕೊಂಡಿದ್ದಾರೆ.

coronavirus can live on your phon

ಜರ್ನಲ್‌ ಆಫ್‌ ಹಾಸ್ಪಟಲ್ ಇನ್‌ಫೆಕ್ಷನ್ ಪ್ರಕಾರ ಕೊರೊನಾ ವೈರಸ್ ಹಾಗೂ ಇತರ ಸೂಕ್ಷಾಣು ವೈರಸ್‌ಗಳು ಫೋನ್‌ನಲ್ಲಿ 9 ದಿನಗಳವರೆಗೆ ಬದುಕಿರುತ್ತವೆ. ಫೋನ್‌ನ ಪರದೆ ಹಾಗೂ ಅದರ ಮೆಟಲ್ ಹಾಗೂ ಪ್ಲಾಸ್ಟಿಕ್‌ ಭಾಗಗಳಲ್ಲಿ ವೈರಸ್ ಬದುಕಿಳಿದಿರುತ್ತವೆ. ಟಾಯ್ಲೆಟ್‌ಗೆಹೋಲಿಸಿದರೆ ಫೋನ್‌ನಲ್ಲಿ ಹೆಚ್ಚು ಬ್ಯಾಕ್ಟಿರಿಯಾಗಳು ಕಂಡು ಬರುತ್ತವೆ ಎಂದು ಆ ಹಾಸ್ಪಿಟಲ್ ವರದಿ ಮಾಡಿದೆ.

ಆದ್ದರಿಂದ ಸ್ಯಾನಿಟೈಸರ್ ಹಚ್ಚಿ ನೀವೇಷ್ಟೇ ಕೈಗಳನ್ನು ಶುದ್ಧ ಮಾಡಿದರೂ, ಫೋನ್‌ನಲ್ಲಿರುವ ವೈರಸ್‌ ಇದ್ದರೆ ಅದರ ಮೂಲಕವೂ ರೋಗ ಹರಡುತ್ತದೆ. ಆದ್ದರಿಂದ ಕೊರೊನಾ ವೈರಸ್‌ ತಡೆಗಟ್ಟಲು ಪ್ರತಿಯೊಬ್ಬರು ಫೋನ್‌ ಸ್ವಚ್ಛತೆ ಕಡೆಗೂ ಗಮನ ನೀಡಬೇಕಾಗಿದೆ.

ಕೊರೊನಾ ವೈರಸ್‌ ಫೋನ್ ಮೂಲಕ ಹರಡದಂತೆ ತಡೆಯಿರಿ

ಕೊರೊನಾ ವೈರಸ್‌ ಫೋನ್ ಮೂಲಕ ಹರಡದಂತೆ ತಡೆಯಿರಿ

ಹಾಗಂತ ಭಯಬಿದ್ದು ನಿಮ್ಮ ಫೋನ್‌ ಬಿಸಾಡಬೇಡಿ, ಇಲ್ಲಿ ಫೋನ್ ಸ್ವಚ್ಛ ಮಾಡುವುದು ಹೇಗೆ ಎಂದು ಹೇಳಿದ್ದೇವೆ, ಹಾಗೆ ಮಾಡಿದರೆ ಸಾಕು:

ಮೊಬೈಲ್‌ ಸ್ಕ್ರೀನ್ ಸ್ವಚ್ಛ ಮಾಡಲು

* ಮೈಕ್ರೋಫೈಬರ್ ಬಟ್ಟೆ

* ನೀರು

* ಸೋಪ್

ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಕಂಪನಿಗಳು ಈ ರೀತಿಯ ಸಲಹೆ ನೀಡಿದೆ:

ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಕಂಪನಿಗಳು ಈ ರೀತಿಯ ಸಲಹೆ ನೀಡಿದೆ:

  • ನಿಮ್ಮ ಮೊಬೈಲ್‌ ಅನ್ನು ಚಾರ್ಜ್‌ನಿಂದ ತೆಗೆದು, ಸ್ವಿಚ್ಡ್‌ ಆಫ್‌ ಮಾಡಿ.
  • ಮೊಬೈಲ್ ಕೇಸ್ ಇದ್ದರೆ ಅದನ್ನು ಬಿಚ್ಚಿ.
  • ಫೋನ್‌ನ ಸ್ಕ್ರೀನ್‌ ಅನ್ನು ಮೃದುವಾದ ಬಟ್ಟೆಯಿಂದ ಒರೆಸಿ
  • ಮೊಬೈಲ್‌ನಲ್ಲಿ ಕೊಳೆ ಎದ್ದು ಕಾಣುತ್ತಿದ್ದರೆ ಸ್ವಲ್ಪ ಸೋಪ್‌ ನೀರು ಮಾಡಿ, ಅದನ್ನು ಚಿಮುಕಿಸಿ ಅದರಿಂದ ಒರೆಸಿ, ನಂತರ ಮೃದುವಾದ ಬಟ್ಟೆಯಿಂದ ಒರೆಸಿ.
  • ಏನೂ ಮಾಡಬಾರದು?

    ಏನೂ ಮಾಡಬಾರದು?

    • ನಿಮ್ಮ ಮೊಬೈಲ್‌ ಸ್ಕ್ರೀನ್‌ ಅನ್ನು ರಬ್ಬಿಂಗ್ ಆಲ್ಕೋಹಾಲ್ ಅಥವಾ ಡಿಸ್‌ಇನ್‌ಫೆಕ್ಟನೆಂಟ್‌ ವೈಪ್ ಹಾಕಿ ಉಜ್ಜಬಾರದು. ಇವುಗಳನ್ನು ಬಳಸಿದರೆ ಮೊಬೈಲ್ ಸ್ಕ್ರೀನ್‌ ಹಾಳಾಗಬಹುದು.
    • ಮೊಬೈಲ್‌ನಲ್ಲಿ ಒಂದಿಷ್ಟು ನೀರಿನಂಶ ಅಥವಾ ತೇವಾಂಶವಿರಬಾರದು. ಎಲ್ಲಾದರೂ ನೀರಿನಂಶವಿದ್ದರೆ ಮೊಬೈಲ್‌ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ.
    • ಮೊಬೈಲ್ ಕೇಸ್

      ಮೊಬೈಲ್ ಕೇಸ್

      ಮೊಬೈಲ್‌ ಕೇಸ್‌ ಬಳಸುತ್ತಿದ್ದರೆ ಅದರ ಸ್ವಚ್ಛತೆ ಮಾಡಲೇಬೇಕು. ಕೇಸ್‌ ಸ್ವಚ್ಛತೆಗೆ ಮನೆ ಸ್ವಚ್ಛತೆಗೆ ಬಳಸುವ ಕ್ಲೀನರ್ ಬಳಸಬಹುದು. ನಂತರ ಆ ಕೇಸ್‌ ಮೊಬೈಲ್ ಹಾಕುವ ಮುನ್ನ ಅದರಲ್ಲಿ ಸ್ವಲ್ಪವೂ ತೇವಾಂಶವಿರಬಾರದು. ನಿಮ್ಮ ಕೇಸ್‌ ತುಂಬಾ ಕೊಳೆಯಾಗಿದ್ದರೆ ಅದನ್ನು ಬೊಸಾಡಿ ಹೊಸತು ಬಳಸಿ.

      ಇನ್ನು ನಿಮ್ಮ ಫೋನ್‌ನಲ್ಲಿ ಬ್ಯಾಕ್ಟಿರಿಯಾ ಉಳಿಯದಮತೆ ಮಾಡಲು ನೀವೇನು ಮಾಡಬೇಕು ಎಂದು CDC ಸಲಹೆ ನೀಡಿದೆ:

      ಮೊಬೈಲ್ ಮುಟ್ಟುವ ಮುನ್ನ ಕೈ ತೊಳೆಯಿರಿ

      ಮೊಬೈಲ್ ಮುಟ್ಟುವ ಮುನ್ನ ಕೈ ತೊಳೆಯಿರಿ

      ಆಗಾಗ ಫೋನ್‌ ಬಲಸುತ್ತಿದ್ದರೆ ಕೈಗಳಿಗೆ ಸ್ಯಾನಿಟೈಸರ್ ಹಚ್ಚಿ. ಫೋನ್‌ ಅನ್ನು ನೇರವಾಗಿ ಕೈಯಿಂದ ಮುಟ್ಟುವುದಕ್ಕಿಂತ ಎರ್‌ಪೋಡ್ಸ್, ಬಡ್ಸ್, ಇವುಗಳನ್ನು ಬಳಸುವುದು ಒಳ್ಳೆಯದು. ಇವುಗಳನ್ನು ಐಸೋಪ್ರೊಪೈಲ್ ಆಲ್ಕೊಹಾಲ್ ಹಾಕಿ ಸ್ವಚ್ಛ ಕೂಡ ಮಾಡಬಹುದು.

      ಟಾಯ್ಲೆಟ್‌ಗೆ ಹೋಗುವಾಗ ಫೋನ್‌ ಬಳಸಬೇಡಿ

      ಟಾಯ್ಲೆಟ್‌ಗೆ ಹೋಗುವಾಗ ಫೋನ್‌ ಬಳಸಬೇಡಿ

      ಟಾಯ್ಲೆಟ್‌ಗೆ ಹೋಗುವಾಗ ಫೋನ್ ಬಳಸುವ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ. ಚೈನೀಸ್‌ ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಕೊರೊನಾ ವೈರಸ್ ಮಲ ಹಾಗೂ ಉಗುಳಿನ ಮೂಲಕ ಹರಡುವುದು ಎಂದು ಹೇಳಿದೆ.

      * ನಿಮ್ಮ ಫೋನ್‌ ಅನ್ನು ಬೇರೆ ಯಾರಿಗೂ ಮುಟ್ಟಲು ಕೊಡಬೆಡಿ.

English summary

Coronavirus Can Live On Your Phone As Well

Do you know coronavirus can live on your phone as well, Read on,
X
Desktop Bottom Promotion