For Quick Alerts
ALLOW NOTIFICATIONS  
For Daily Alerts

ಹೆಚ್ಚಾಗಿದೆ ಚಳಿ: ಈ ಬಗೆಯ ಮುನ್ನೆಚ್ಚರಿಕೆವಹಿಸಿದರೆ ಕಾಯಿಲೆ ಬೀಳುವುದು ತಡೆಗಟ್ಟಬಹುದು

|

ಇತ್ತೀಚಿನ ಕೆಲ ದಿನಗಳಿಂದ ಚಳಿ ಸ್ವಲ್ಪ ಹೆಚ್ಚಾಗಿದೆ ಅಲ್ವಾ? ಭಾರತದಲ್ಲಿ ಕೋಲ್ಡ್‌ ವೇವ್‌ನ ಅಲರ್ಟ್ ಘೋಷಿಸಲಾಗಿದೆ. ಚಳಿಗಾಲದಲ್ಲಿ ಚಳಿ ಸಹಜ ಆದರೆ ತುಂಬಾ ಚಳಿಯಿದ್ದರೆ ಅಂಥ ಚಳಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು, ಏಕೆಂದರೆ ನಿರ್ಲಕ್ಷ್ಯ ಮಾಡಿದರೆ ಕಾಯಿಲೆ ಬರುವುದು.

ಚಳಿ ಹೆಚ್ಚಾದಾಗ ಮಕ್ಕಳ, ಗರ್ಭಿಣಿಯರ, ವಯಸ್ಸಾದವರ ಆರೋಗ್ಯದ ಬಗ್ಗೆ ತುಂಬಾನೇ ಗಮನಹರಿಸಬೇಕು. ಚಳಿ ಹೆಚ್ಚಾದಾಗ ಕಂಡು ಬರುವ ತೊಂದರೆಗಳೇನು? ಚಳಿಯಿಂದ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ವಾತಾವರಣದಲ್ಲಿ ಚಳಿ ಹೆಚ್ಚಾದಾಗ ಈ ಬಗೆಯ ಸಮಸ್ಯೆಗಳು ಕಂಡು ಬರುವುದು

ವಾತಾವರಣದಲ್ಲಿ ಚಳಿ ಹೆಚ್ಚಾದಾಗ ಈ ಬಗೆಯ ಸಮಸ್ಯೆಗಳು ಕಂಡು ಬರುವುದು

* ಕೆಮ್ಮು

* ಗಂಟಲು ಕೆರೆತ'* ಶೀತ

* ಮೈಕೈ ನೋವು

* ಜ್ವರ

* ಬೇಧಿ

* ಇದರ ಜೊತೆಗೆ ಕಫ

* ಎದೆ ನೀವು, ಅಸತಮಾ

* ಉಸಿರಾಟದಲ್ಲಿ ತೊಂದರೆ

ಚಳಿ ಹೆಚ್ಚಾದಾಗ ಯಾವ ಬಗೆಯ ಮುನ್ನೆಚ್ಚರಿಕೆವಹಿಸಬೇಕು?

ಚಳಿ ಹೆಚ್ಚಾದಾಗ ಯಾವ ಬಗೆಯ ಮುನ್ನೆಚ್ಚರಿಕೆವಹಿಸಬೇಕು?

* ಬಿಸಿ ನೀರಿನಲ್ಲಿ ಕೈ ತೊಳೆಯಿರಿ, ಕೈಗಳಿಗೆ ಚೆನ್ನಾಗಿ ಸೋಪು ಹಚ್ಚಿ, ಆಗಾಗ ತೊಳೆಯಿರಿ.

* ಮೂಗು, ಕಣ್ಣು ಹಾಗೂ ಬಾಯಿಯನ್ನು ಆಗಾಗ ಮುಟ್ಟಬೇಡಿ

* ಕೆಮ್ಮುವಾಗ, ಸೀನುವಾಗ ಕರ್ಚೀಫ್‌ ಅಥವಾ ಟಿಶ್ಯೂ ಅಡ್ಡ ಹಿಡಿಯಿರಿ

* ಒಬ್ಬರು ತಿಂದ ತಟ್ಟೆ ಅಥವಾ ಲೋಟ ತೊಳೆಯದೆ ಬಳಸಬೇಡಿ

* ಒಂದೇ ಟವಲ್‌ ಬಳಸಬೇಡಿ

* ಮನೆ ಹಾಗೂ ಕೆಲಸದ ಜಾಗವನ್ನು ಸ್ವಚ್ಛವಾಗಿಡಿ

* ಆರೊಗ್ಯಕರ ಆಹಾರಕ್ರಮ ಪಾಲಿಸಿ'

* ಪ್ರತಿದಿನ ವ್ಯಾಯಾಮ ಮಾಡಿ

ಚಳಿಗಾಲದಲ್ಲಿ ಮೈ ಬೆಚ್ಚಗಿರಿಸಿ

ಚಳಿಗಾಲದಲ್ಲಿ ಮೈ ಬೆಚ್ಚಗಿರಿಸಿ

* ಸ್ಟೆಟರ್ ಧರಿಸಿ

* ಮಕ್ಕಳ ಮೈಯನ್ನುಬೆಚ್ಚಗಿಡುವ ಉಡುಪುಗಳನ್ನು ಧರಿಸಿ

* ಗರ್ಭಿಣಿಯರು ಮೈಯನ್ನು ಬೆಚ್ಚಗಿಡಬೇಕು.

* ಬಿಸಿ ಬಿಸಿ ಆಹಾರ ಸೇವಿಸಿ

* ಆಗಷ್ಟೇ ತಯಾರಿಸಿದ ಆಹಾರ ತಯಾರಿಸಿ. ನೆನ್ನೆಯ ಆಹಾರ ಬಿಸಿ ಮಾಡಿ ಸೇವಿಸಬೇಡಿ.

* ಬಿಸಿ ಬಿಸಿ ನೀರು ಕುಡಿಯಿರಿ.

ಈ ಬಗೆಯ ಪಾನೀಯ ಸೇವಿಸಿ

ಈ ಬಗೆಯ ಪಾನೀಯ ಸೇವಿಸಿ

ಸೂಪ್‌ ಕುಡಿಯಿರಿ

ಚಳಿಗಾಲದಲ್ಲಿ ಸೂಪ್ ಕುಡಿಯುವುದು ತುಂಬಾ ಒಳ್ಳೆಯದು. ವೆಜ್ ಹಾಗೂ ನಾನ್‌ವೆಜ್‌ ಸೂಪ್‌ ಬಳಸಬಹುದು. ಸೂಪ್‌ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು

ತುಳಸಿ ನೀರು

ಕುಡಿಯುವ ನೀರಿಗೆ 3-4 ಎಸಲು ತುಳಸಿ ಹಾಕಿ ಆ ನೀರನ್ನು ಕುದಿಸಿ ಕುಡಿದರೆ ಒಳ್ಳೆಯದು.

ಮಸಾಲೆ ಟೀ

ಚಳಿಗಾಲದಲ್ಲಿ ಶುಂಠಿ ಟೀ ಕುಡಿಯಿರಿ.

ಗಿಡ ಮೂಲಿಕೆ ಬಳಸಿ

ಗಿಡಮೂಲಿಕೆಗಳನ್ನು ಬಳಸಿ ಕಷಾಯ ಮಾಡಿ ಕುಡಿಯಿರಿ.

ಚಳಿಗಾಲದಲ್ಲಿ ಏನು ಮಾಡಬೇಕು?

ಚಳಿಗಾಲದಲ್ಲಿ ಏನು ಮಾಡಬೇಕು?

* ನೀವು ಬೆಚ್ಚಗಿರುವ ಉಡುಪುಗಳನ್ನು ಧರಿಸಿ, ಅಗ್ಯತವಿರುವ ಬಡ ವ್ಯಕ್ತಿಗಳಿಗೆ ಹಳೆಯ ಅಥವಾ ಹೊಸ ಬೆಚ್ಚನೆಯ ಉಡುಪುಗಳನ್ನು ನೀಡಿ

* ತುಂಬಾ ಚಳಿ ಇರುವಾಗ ಹೊರಗಡೆ ಓಡಾಡಬೇಡಿ.

* ದ್ವಿಚಕ್ರ ವಾಹನ ಓಡಿಸುವಾಗ ಕೈಗಳಿಗೆ ಗ್ಲೌಸ್‌ ಧರಿಸಿ.

* ಆಗಾಗ ಬಿಸಿ ನೀರು ಅಥವಾ ಹರ್ಬಲ್ ಟೀ ಕುಡಿಯಿರಿ.

* ಚಿಕ್ಕ ಮಕ್ಕಳನ್ನು ತುಂಬಾ ಬೆಚ್ಚಗೆ ಇಡಿ

ಚಳಿಗಾಳಿ ಹೆಚ್ಚಾದಾಗ ಏನು ಮಾಡಬಾರದು

* ಮದ್ಯ ಸೇವಿಸಬಾರದು: ಮದ್ಯ ಕುಡಿಯುವುದರಿಂದ ನಿಮ್ಮ ಮೈ ಉಷ್ಣತೆ ಮತ್ತಷ್ಟು ಕಡಿಮೆಯಾಗುವುದು, ಆದ್ದರಿಂದ ಮದ್ಯ ಸೇವಿಸಬೇಡಿ.

* ಕೈ-ಕಾಲುಗಳನ್ನು ಉಜ್ಜಬೇಡಿ: ತುಂಬಾ ಚಳಿಯಿದ್ದಾಗ ಕೈಗಳನ್ನು,ಕಾಲುಗಳನ್ನುಉಜ್ಜುವುದು ಮಾಡಬೇಡಿ, ಏಕೆಂದರೆ ಗಾಯವಾಗುವುದು. ಆದ್ದರಿಂದ ತುಂಬಾ ಚಳಿ ಅನಿಸಿದಾಗ ನೀರು ಬಿಸಿ ಅದರಲ್ಲಿ ಸ್ವಲ್ಪ ಕಾಲುಗಳನ್ನು ಇಡಿ.

ಹೀಟರ್‌ ಬಳಸುವುದು: ನೀವು ಕೋಣೆಯೊಳಗೆ ಹೀಟರ್‌ ಬಳಸುವುದಾದರೆ ನಮ್ಮ ಮನೆಯೊಳಗಡೆ ಗಾಳಿ ಸರಿಯಾಡುವಂತಿರಬೇಕು. ಇಲ್ಲದಿದ್ದರೆ ಕಲುಷಿತ ಗಾಳಿಯನ್ನು ಉಸಿರಾಡಬೇಕಾಗುವುದು, ಇದರಿಂದ ಆರೋಗ್ಯ ಸಮಸ್ಯೆ ಬರುವುದು, ಆದ್ದರಿಂದ ಸರಿಯಾಗಿ ಗಾಳಿಯಾಡುವಂತಿರಬೇಕು.

ಆಹಾರಕ್ರಮದ ಕಡೆ ಗಮನ ನೀಡಿ

* ಖರ್ಜೂರ, ಬಾದಾಮಿ, ಶುಂಠಿ, ಕರಿ ಮೆಣಸು ಇವುಗಳನ್ನು ನಿಮ್ಮ ಆಹಾರದಲ್ಲಿ ಬಳಸಿ. ಚಕ್ಕೆ, ಲವಂಗ, ಏಲಕ್ಕಿ ಈ ಬಗೆಯ ಮಸಾಲೆ ಪದಾರ್ಥಗಳು ಕೂಡ ಒಳ್ಳೆಯದು.

ಗರ್ಭಿಣಿಯರು ಹೆಚ್ಚು ಜಾಗ್ರತೆವಹಿಸಬೇಕು

ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ನೀವು ತುಂಬಾನೇ ಎಚ್ಚರವಹಿಸಬೇಕು. ಚಳಿಗಾಳಿಯಲ್ಲಿ ಹೆಚ್ಚು ಓಡಾಡಬೇಡಿ, ಆರೋಗ್ಯಕರ ಆಹಾರ ಮಾತ್ರ ಸೇವಿಸಿ. ಹೆಚ್ಚು ಶುಂಠಿ ಬಳಸುವುದು ಒಳ್ಳೆಯದಲ್ಲ. ಬೆಚ್ಚನೆಯ ಸ್ವೆಟರ್ ಧರಿಸಿ, ಡ್ರೈ ಫ್ರೂಟ್ಸ್‌ ಹೆಚ್ಚಾಗಿ ಬಳಸಿ.

English summary

Cold weather: Tips to protect yourself from cold wave in kannada

Cold weather: Follow these tips to protect yourself from cold wave read on...
X
Desktop Bottom Promotion