For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಕೊಲ್ಲುವ ಗುಣ ತೆಂಗಿನೆಣ್ಣೆಯಲ್ಲಿದೆಯೇ?

|

ತೆಂಗಿನೆಣ್ಣೆಯ ಆರೋಗ್ಯಕರ ಗುಣಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಕೋವಿಡ್‌ 19 ಸಾಂಕ್ರಾಮಿಕ ಪಿಡುಗು ಇರುವ ಈ ಸಮಯದಲ್ಲಿ ತಜ್ಞರ ಒಂದು ವರ್ಗ ತೆಂಗಿನೆಣ್ಣೆ ಸೋಂಕು ನಾಶ ಗುಣವನ್ನು ಹೊಂದಿದೆ ಎಂಬುವುದಾಗಿ ಹೇಳುತ್ತಿದೆ.

Can Coconut Oil Help Fight Covid-19?

ತೆಂಗಿನೆಣ್ಣೆಯನ್ನು ಸುಮಾರು 4000 ವರ್ಷಗಳ ಹಿಂದಿನಿಂದಲೂ ಆಯುರ್ವೇದದಲ್ಲಿ ಬಳಸುತ್ತಿದ್ದಾರೆ. ತೆಂಗಿನೆಣ್ಣೆಯಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ ಎಂಬುವುದನ್ನು ತಿಳಿದಿದ್ದೇವೆ. ತೆಂಗಿನೆಣ್ಣೆ ಬಳಸುವವರ ಸಂಖ್ಯೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಹಾಗೂ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಅಧಿಕ.

ಕೋವಿಡ್‌ 19 ನಿಯಂತ್ರಿಸುವಲ್ಲಿ ತೆಂಗಿನೆಣ್ಣೆ ಹೇಗೆ ಸಹಕಾರಿ, ತೆಂಗಿನೆಣ್ಣೆಯಲ್ಲಿರುವ ಯಾವ ಗುಣ ವೈರಸ್ ನಾಶ ಮಾಡುತ್ತದೆ, ಈ ಕುರಿತು ತಜ್ಞರು ಏನು ಹೇಳಿದ್ದಾರೆ ನೋಡೋಣ ಬನ್ನಿ:

 ತೆಂಗಿನೆಣ್ಣೆ ಕುರಿತ ವರದಿ

ತೆಂಗಿನೆಣ್ಣೆ ಕುರಿತ ವರದಿ

ಭಾರತದ ಪ್ರಸಿದ್ಧ ವೈದ್ಯಕೀಯ ಜರ್ನಲ್ ಆಗಿರುವ JAPI (Journal Association Of Physicians) ತೆಂಗಿನೆಣ್ಣೆ ಕುರಿತ ವಿಮರ್ಶೆ ಲೇಖನದಲ್ಲಿ ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದ್ದು, ಇದು ಸೂಕ್ಷ್ಮಾಣು ವೈರಸ್‌ಗಳ ನಾಶ ಮಾಡುವ ಗುಣ ಹೊಂದಿದೆ ಎಂದು ಹೇಳಿದೆ.

ಕೋವಿಡ್‌ 19 ನಿಯಂತ್ರಣಕ್ಕೆ ಹೇಗೆ ಸಹಕಾರಿ?

ಕೋವಿಡ್‌ 19 ನಿಯಂತ್ರಣಕ್ಕೆ ಹೇಗೆ ಸಹಕಾರಿ?

ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಮ್ಲ ಮತ್ತು ಸ್ಯಾಚುರೇಟಡ್ ಕೊಬ್ಬಿನ ಆಮ್ಲವನ್ನು ದೇಹವು ಶೀಘ್ರವ ಹೀರಿಕೊಳ್ಳುತ್ತದೆ. ಇದು ದೇಹದಲ್ಲಿ ಮೋನೋ ಲಾರಿನ್ ಆಗಿ ಬದಲಾಗಿ ದೇಹವನ್ನು ಪ್ರವೇಶಿಸುವ ಬ್ಯಾಕ್ಟಿರಿಯಾ, ವೈರಾಣುಗಳನ್ನು ಕೊಲ್ಲುತ್ತದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಡಾ. ಶಶಾಂಕ್ ಜೋಶಿ ಹೇಳಿದ್ದಾರೆ.

ತುಪ್ಪ ಕೂಡ ಒಳ್ಳೆಯದು

ತುಪ್ಪ ಕೂಡ ಒಳ್ಳೆಯದು

ಭಾರತೀಯರು ತುಪ್ಪವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿರುವ ಕೊಬ್ಬಿನಂಶ ಕೂಡ ದೇಹಕ್ಕೆ ಅವಶ್ಯಕವಾಗಿದೆ. ಇದು ಚಯಾಪಚಯ ಕ್ರಿಯೆಗೆ ಸಹಾಯ ಮಾಡಿ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ ಎಂದು ಡಾ. ಶಶಾಂಕ್ ಜೋಶಿ ಹೇಳಿದ್ದಾರೆ.

ಬ್ಯಾಕ್ಟಿರಿಯಾ, ವೈರಸ್ ಕೊಲ್ಲುವ ತೆಂಗಿನೆಣ್ಣೆ

ಬ್ಯಾಕ್ಟಿರಿಯಾ, ವೈರಸ್ ಕೊಲ್ಲುವ ತೆಂಗಿನೆಣ್ಣೆ

ತೆಂಗಿನೆಣ್ಣೆ ವೈರಸ್‌ ತಡೆಗಟ್ಟುವಲ್ಲಿ ಹೇಗೆ ಪರಿಣಾಮಕಾರಿ ಎಂಬುವುದರ ಕುರಿತು ಅಧ್ಯಯನ ಏನು ಹೇಳಿದೆ ಎಂದು ನೋಡೋಣ ಬನ್ನಿ:

  • ಹೊಟ್ಟೆ ಅಪ್‌ಸೆಟ್‌ ಮಾಡುವಂಥ ಲಿಸ್ಟೇರಿಯಾ ಬ್ಯಾಕ್ಟಿರಿಯಾ, ಅಲ್ಸರ್‌ ಉಂಟು ಮಾಡುವ ಹೆಲಿಯೋಬ್ಯಾಕ್ಟರ್ ಪೈಲೋರಿ, ಇ ಕೋಲಿ ಮುಂತಾದ ಬ್ಯಾಕ್ಟಿರಿಯಾ ನಾಶ ಮಾಡುತ್ತದೆ.
  • ತ್ವಚೆ ಅಲರ್ಜಿ ಉಂಟು ಮಾಡುವ ಶಿಲೀಂಧ್ರಗಳನ್ನು ನಾಶ ಮಾಡುತ್ತದೆ
  • RNAನಂಥ ವೈರಸ್ (ನೋವೆಲ್ ಕೊರೊನಾವೈರಸ್, ಅವೈನ್ ಇನ್‌ಫ್ಲುಂಜಾ) ಇವುಗಳ ವಿರುದ್ಧ ಹೋರಾಡುತ್ತದೆ.
  • ಇದರಲ್ಲಿರುವ ಲ್ಯೂರಿಕ್ ಆಮ್ಲ ಮತ್ತು ಮೋನೋಲುರೈನ್ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ.
  • ಆಯುರ್ವೇದದಲ್ಲಿ ಬಳಕೆ

    ಆಯುರ್ವೇದದಲ್ಲಿ ಬಳಕೆ

    ತೆಂಗಿನೆಣ್ಣೆಯನ್ನು ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸು ಔಷಧವಾಗಿ ಬಳಸುತ್ತಾರೆ. ಇದನ್ನು ಮಸಾಜ್‌ನಲ್ಲೂ ಬಳಸುತ್ತಾರೆ. ತ್ವಚೆ ಸಮಸ್ಯೆ, ಕೂದಲಿನ ಸಮಸ್ಯೆ, ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ತೆಂಗಿನೆಣ್ಣೆ ಪರಿಣಾಮಕಾರಿಯಾಗಿದೆ.

    ಕೇರಳದ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕ

    ಕೇರಳದ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕ

    ಕೊರೊನಾವೈರಸ್ ದೇಶದ ಬಹುತೇಕ ರಾಜ್ಯಗಳಲ್ಲಿ ಆರ್ಭಟಿಸುತ್ತಿದೆ, ಆದರೆ ಕೇರಳದಲ್ಲಿ ಸೋಂಕು ಹೆಚ್ಚಾಗಿ ಕಂಡು ಬಂದರೂ ಅದರಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಿದೆ. ಕೇರಳಿಗರು ತೆಂಗಿನೆಣ್ಣೆ ಹೆಚ್ಚಾಗಿ ಬಳಸುತ್ತಿರುವುದು ಕೂಡ ಒಂದು ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಂಶೋಧಕರು, ಈ ಕುರಿತು ಹೇಳಲು ಇದರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.

English summary

Can Coconut Oil Help to Fight Covid-19?

One of India’s prestigious medical journals, JAPI (Journal of Association of Physicians), has carried a review and reported coconut oil ability to act against microbes, read on...
X
Desktop Bottom Promotion