For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು: ಸ್ತನ ಕ್ಯಾನ್ಸರ್‌ ರೋಗಿಗಳಾಗಿ ನಿಮ್ಮಿಂದಾಗುವ ಈ ಕಾರ್ಯಗಳನ್ನು ಮಾಡುವಿರಾ?

|

ಸ್ತನ ಕ್ಯಾನ್ಸರ್ ಅಂದರೆ ಹೆಚ್ಚಾಗಿ ಸ್ತನ ಗಡ್ಡೆಯೊಂದಿಗೆ ಸಂಬಂಧಿಸಿದೆ. ಇದು ನಿಮ್ಮ ಎದೆಯ ಭಾಗದ ಉದ್ದಕ್ಕೂ ನಿಮ್ಮ ಕಂಕುಳ ಅಡಿಯಲ್ಲಿ ಎಲ್ಲಿಯಾದರೂ ಇರುತ್ತದೆ. ನೀವು ಮೊಲೆತೊಟ್ಟು ರಕ್ತಸ್ರಾವ ಅಥವಾ ನಿಪ್ಪಲ್ ಡಿಸ್ಚಾರ್ಜ್ ಜೊತೆಗೆ ಸಂಬಂಧಿತ ನೋವು ಹೊಂದಿರಬಹುದು. ಸ್ತನದ ಯಾವುದೇ ಪ್ರದೇಶದಲ್ಲಿ ಅಥವಾ ಒಂದು ಸ್ತನದಲ್ಲಿ ಕೆಂಪು ಅಥವಾ ಊತವಿರಬಹುದು. ನಿಮ್ಮ ಮೊಲೆತೊಟ್ಟುಗಳು ಚಪ್ಪಟೆಯಾಗಿ ಅಥವಾ ಒಳಗಿರುವಂತೆಯೂ ಕಾಣಿಸಬಹುದು.

Breast Cancer Awareness Month in kannada

ಇನ್ನು ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಎಲ್ಲಾ ಆಸ್ಪತ್ರೆಗಳು ಪಿಂಕ್ ಬಣ್ಣದ ಕ್ಯಾನ್ಸರ್ ಲೋಗೋಗಳ ಮೂಲಕ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಸ್ತನ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಸಾವಿರಾರು ಮಂದಿ ಸ್ತನ ಕ್ಯಾನ್ಸರ್ ಗೆ ತುತ್ತಾಗಿ ಜಗತ್ತಿನಾದ್ಯಂತ ಸಾವನಪ್ಪುತ್ತಿದ್ದಾರೆ. ಹೀಗಾಗಿ ಸ್ತನ ಕ್ಯಾನ್ಸರ್ ಬಗ್ಗೆ ಜನರು ಜಾಗೃತರಾಗಿದ್ದಾರೆ.

ಹಾಗಾದರೆ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಲ್ಲಿ ನೀವು ಕ್ರಿಯಾತ್ಮಕವಾಗಿ ಹೇಗೆ ಸ್ತನ ಕ್ಯಾನ್ಸರ್ ರೋಗಿಗಳನ್ನು ಮತ್ತು ಅವರಿಗೆ ಚಿಕಿತ್ಸೆ ನೀಡುವವರನ್ನು ಬೆಂಬಲಿಸಬಹುದು. ಹೇಗೆ ಅವರನ್ನು ಜಾಗೃತಗೊಳಿಸಬಹುದು..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಜಾಗೃತಿಗಿಂತ ಹೆಚ್ಚಾಗಿ ಬೆಂಬಲ ನೀಡಿ!

ಜಾಗೃತಿಗಿಂತ ಹೆಚ್ಚಾಗಿ ಬೆಂಬಲ ನೀಡಿ!

ಸ್ತನ ಕ್ಯಾನ್ಸರ್ ರೋಗಿಗಳಿಗೆ ಜಾಗೃತಿಯು ಬೇಕಾಗುತ್ತದೆ. ಅದರ ಜೊತೆಗೆ ಅವರಿಗೆ ಎಲ್ಲಾ ರೀತಿಯಲ್ಲೂ ಬೆಂಬಲ ಬೇಕಾಗುತ್ತದೆ. ಮೊದಲೇ ಸ್ತನ ಕ್ಯಾನ್ಸರ್ ನಿಂದ ಅವರು ಕುಗ್ಗಿ ಹೋಗಿರುತ್ತಾರೆ. ಊ ವೇಳೆ ಅವರ ಜೊತೆ ಮಾತುಕತೆ ನಡೆಸಿ ಬೆಂಬಲ ನೀಡಬಹುದು. ಇನ್ನು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವುದರಿಂದ ಅವರಿಗೆ ಕೂದಲು ಉದುರುವ ಸಮಸ್ಯೆಯು ಉಂಟಾಗುತ್ತದೆ. ಹೀಗಾಗಿ ಅವರನ್ನು ಅಂದ ಮಾಡಿಸಲು ಅವರಿಗಾಗಿ ಮೇಕ್ಅಪ್ ತರಗತಿಗಳು, ಗ್ಯಾಸ್ ಕಾರ್ಡ್‌ಗಳು ಮತ್ತು ವಿಗ್ ಗಳು ನೀಡುವುದು, ವ್ಯಾಯಾಮ ತರಗತಿಗಳು ನಡೆಸುವುದು. ಇನ್ನು ಚಿಕಿತ್ಸೆ ಬೇಕಾದ ಆರ್ಥಿಕ ನೆರವು ನೀಡುವುದು . ಈ ಮೂಲಕ ವ್ಯಕ್ತಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸಹಾಯ ಮಾಡಬಹುದು. ಬೆಂಬಲ ನೀಡಬಹುದು.

ಸಂಶೋಧನಾ ಉಪಕ್ರಮಗಳಿಗೆ ದೇಣಿಗೆ ನೀಡಿ

ಸಂಶೋಧನಾ ಉಪಕ್ರಮಗಳಿಗೆ ದೇಣಿಗೆ ನೀಡಿ

ಯಾವುದೇ ರೋಗಕ್ಕೂ ಸಂಶೊಧನೆ ಮುಖ್ಯ. ಅದೇ ರೀತಿ ಸ್ತನ ಕ್ಯಾನ್ಸರ್ ಇರುವ ವ್ಯಕ್ತಿ ಮೇಲೂ ಸಂಶೋಧನೆ ನಡೆಸುತ್ತಾರೆ. ವಿವಿಧ ಪರೀಕ್ಷೆಗಳು ನಡೆಯುತ್ತದೆ. ಕ್ಯಾನ್ಸರ್ ಸಂಬಂಧ ನಡೆಯುವ ಪರೀಕ್ಷೆ ಮತ್ತು ಸಂಶೊಧನೆಗೆ ಅಧಿಕ ಹಣ ನೀಡಬೇಕಾಗುತ್ತದೆ. ಹೀಗಾಗಿ, ನೀವು ದೇಣಿಗೆ ನೀಡಲು ಬಯಸಿದರೆ ಕ್ಯಾನ್ಸರ್ ಸಂಶೋಧನಾ ಉಪಕ್ರಮಗಳಿಗೆ ಈ ದೇಣಿಗೆಯನ್ನು ನೀಡಬಹುದು. ಈ ಮೂಲಕ ರೋಗಕ್ಕೆ ತುತ್ತಾದ ವ್ಯಕ್ತಿಗೆ ನೈತಿಕವಾಗಿ ಬೆಂಬಲ ನೀಡಿದಂತೆ ಆಗಲಿದೆ.

 ನಿಮಗೆ ತಿಳಿದಿರುವ ಕ್ಯಾನ್ಸರ್ ರೋಗಿಗೆ ಸಹಾಯ ಮಾಡಿ

ನಿಮಗೆ ತಿಳಿದಿರುವ ಕ್ಯಾನ್ಸರ್ ರೋಗಿಗೆ ಸಹಾಯ ಮಾಡಿ

ಕ್ಯಾನ್ಸರ್ ರೋಗಿಗಳನ್ನು ನೋಡಿದಾಗ ನಮ್ಮ ಮನಸ್ಸು ಮರುಗುತ್ತದೆ. ಅದರಲ್ಲೂ ಸ್ತನ ಕ್ಯಾನ್ಸರ್ ಒಳಪಟ್ಟವರನ್ನು ನೋಡುವಾಗ ಅವರಿಗೆ ಸಹಾಯ ಮಾಡುವ ಎಂದು ಅನ್ಸಿಸುತ್ತದೆ. ಅದರ ಕೆಲವರು ನಿಜವಾಗಲೂ ಇಂತಹ ಕೆಲಸ ಮಾಡಲು ಬಯಸುತ್ತಾರೆ. ಈ ರೀತಿಯ ಮನಸ್ಸು ಇದ್ದರೂ ನಿಜಕ್ಕೂ ನಿಮ್ಮ ಒಳ್ಳೆತನಕ್ಕೆ ಸಲಾಂ. ಹೌದು, ಕ್ಯಾನ್ಸರ್ ಗೆ ಒಳಪಟ್ಟ ವ್ಯಕ್ತಿಗಳು ಅಂದರೆ ನಿಮಗೆ ತಿಳಿದಿರುವ ವ್ಯಕ್ತಿಗಳು ಯಾರಾದರು ಇದ್ದರೆ ಅವರಿಗೆ ಸಹಾಯ ಮಾಡಿ. ನಾನು ಸಹಾಯ ಮಾಡಬೇಕಾ ಎಂದು ಕೇಳಿ ಸಹಾಯ ಮಾಡಬೇಡಿ. ನೀವೆ ನೇರವಾಗಿ ತೆರಳಿ ಸಹಾಯ ಮಾಡಿ. ಅವರನ್ನು ಕಿಮೋಥೆರಪಿಗೆ ಕರೆದುಕೊಂಡು ಹೋಗುವುದು, ಅವರನ್ನು ವಾಕಿಂಗ್ ಗೆ ಕರೆದುಕೊಂಡು ಹೋಗುವುದು, ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಅವರ ಮನೆ ಕೆಲಸವನ್ನು ಮಾಡುವುದು. ಈ ರೀತಿ ಮಾಡಿದರೆ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ.

ಕೀಮೋ ಸೆಂಟರ್‌ಗೆ ಬಟ್ಟೆಗಳನ್ನು ನೀಡಿ

ಕೀಮೋ ಸೆಂಟರ್‌ಗೆ ಬಟ್ಟೆಗಳನ್ನು ನೀಡಿ

ಇನ್ನು ನೀವು ಕ್ಯಾನ್ಸರ್ ರೋಗಿಗಳಿಗೆ ಹೀಗೆ ಕೂಡ ಸಹಾಯ ಮಾಡಬಹುದು. ಅವರಲ್ಲಿ ಜಾಗೃತಿ ಮೂಡಿಸಬಹುದು. ಆತ್ಮವಿಶ್ವಾಸ ತುಂಬಬಹುದು. ಹೌದು, ಕ್ಯಾನ್ಸರ್ ರೋಗಿಗಳೊಂದಿಗೆ ಮಾತನಾಡದೆ ಅವರ ಜೀವನದಲ್ಲಿ ನೀವು ಬದಲಾವಣೆಯನ್ನು ತರಬಹುದು. ಪ್ರತಿ ಪಟ್ಟಣದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಂಬಂಧಪಟ್ಟ ಆಸ್ಪತ್ರೆಗಳು ಇರುತ್ತದೆ. ಅಲ್ಲಿ ಕಿಮೋ ಸೆಂಟರ್ ಗಳು ಇರುತ್ತದೆ. ಇಲ್ಲಿ ನೀವು ಕಂಬಳಿಗಳು, ಶಿರೋವಸ್ತ್ರಗಳು, ಬಟ್ಟೆ ಎಲ್ಲವನ್ನು ದೇಣಿಗೆಯನ್ನು ನೀಡಬಹುದು. ದೇಣಿಗೆ ಪಡೆಯುವ ವ್ಯವಸ್ಥೆಯನ್ನು ಆಸ್ಪತ್ರೆ ವೈದ್ಯರು ಮಾಡಿರುತ್ತಾರೆ. ಈ ರೀತಿಯ ಸೇವೆಯನ್ನು ನೀವು ಮಾಡಬಹುದು.

ಕಿಮೋ ಸೆಷನ್ ಗೆ ಕರೆದುಕೊಂಡು ಹೋಗಿ

ಕಿಮೋ ಸೆಷನ್ ಗೆ ಕರೆದುಕೊಂಡು ಹೋಗಿ

ಕ್ಯಾನ್ಸರ್ ಬಂದಿರುವ ವ್ಯಕ್ತಿ ಜೊತೆ ಕುಟುಂಬ ಇದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಕುಟುಂಬದ ಸದಸ್ಯರು ಕ್ಯಾನ್ಸರ್ ರೋಗಿ ಜೊತೆ ಇದ್ದಿದ್ದರೆ. ಹಲವು ಸಮಸ್ಯೆಗಳನ್ನು ಅವರು ಅನುಭವಿಸುತ್ತಾರೆ. ಅವರನ್ನು ಕಿಮೋ ಸೆಷನ್ ಗೆ ಕರೆದುಕೊಂಡು ಹೋಗುವವರು ಇರುವುದಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ನೀಡುವವರು ಇರುವುದಿಲ್ಲ್. ಈ ರೀತಿ ಇದ್ದರೆ ನೀವು ಅವರಿಗೆ ಸಹಾಯ ಮಾಡಬಹುದು. ಅವರನ್ನು

ಕಿಮೋ ಥೆರಪಿಗೆ ಕರೆದುಕೊಂಡು ಹೋಗಬಹುದು. ಅಥವಾ ಈ ಬಗ್ಗೆ ಇತರೆ ಸಮಾಜ ಸೇವೆ ಮಾಡುವ ಸಾಮಾಜಿಕ ಕಾರ್ಯಕರ್ತರಿಗೆ ಮಾಹಿತಿ ನೀಡಬಹುದು.

ಪತ್ರ ಮತ್ತು ಕಾರ್ಡ್ ಬರೆಯಿರಿ

ಪತ್ರ ಮತ್ತು ಕಾರ್ಡ್ ಬರೆಯಿರಿ

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗಿಂತ ಅವರನ್ನು ಆರೈಕೆ ಮಾಡುವುದು ಅವರಿಗೆ ಪ್ರೋತ್ಸಾಹ ನೀಡುವುದು ಅತೀ ಮುಖ್ಯವಾಗಿರುತ್ತದೆ. ಹೌದು, ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿ ನೀಡುವ ಪತ್ರವನ್ನು ಬರೆಯುವುದು ಅಥವಾ ಗ್ರೀಟಿಂಘ್ ಕಾರ್ಡ್ ಗಳನ್ನು ಬರೆದರೆ ನಮ್ಮನ್ನು ಕೇರ್ ಮಾಡುವ ಮನಸ್ಸು ಇಲ್ಲಿದೆ ಎಂದು ಅವರು ಭಾವಿಸುತ್ತಾರೆ. ಈ ಮೂಲಕ ಅವರ ಬದುಕುವ ವಿಲ್ ನೆಸ್ ಹೆಚ್ಚಿಸಬಹುದು.

ಸರ್ಕಾರಕ್ಕೆ, ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಿ!

ಸರ್ಕಾರಕ್ಕೆ, ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಿ!

ನಮ್ಮಲ್ಲಿ ಕ್ಯಾನ್ಸರ್ ರೋಗಿಗಳನ್ನು ಸರ್ಕಾರದಿಂದಲೇ ಹಾಗೂ ಸಂಘ ಸಂಸ್ಥೆಗಳಿಂದಲೇ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಾವು ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ಗಮನ ಸೆಳೆಯಬಹುದು. ಅಲ್ಲದೇ ಕ್ಯಾನ್ಸರ್ ಗೆ ಸಂಬಂಧಪಟ್ಟ ಔಷಧಗಳ ಬೆಲೆಯು ಗಗನಕ್ಕೇರಿದೆ. ಇವುಗಳ ದರವನ್ನು ನಿಯಂತ್ರಣವಿಡಲು ನಿಮ್ಮ ಕೈನಲ್ಲಿ ಆಗುವಂತಹ ಕೆಲಸಗಳನ್ನು ಮಾಡಬಹುದು.

ಕ್ಯಾನ್ಸರ್ ರೋಗಿಗಳೊಂದಿಗೆ ಮಾತನಾಡಿ!

ಕ್ಯಾನ್ಸರ್ ರೋಗಿಗಳೊಂದಿಗೆ ಮಾತನಾಡಿ!

ಕ್ಯಾನ್ಸರ್ ಇದೆ ಎಂದಾಗಲೇ ಅರ್ಧ ಮಾನಸಿಕವಾಗಿ ರೋಗಿಗಳು ಕುಗ್ಗಿರುತ್ತಾರೆ. ಇನ್ನು ಚಿಕಿತ್ಸೆ ಮತ್ತು ದೇಹದಲ್ಲಿ ಆಗುವ ಬದಲಾವಣೆ ಮತ್ತಷ್ಟು ಅವರನ್ನು ಕುಗ್ಗಿಸುತ್ತದೆ. ಹೀಗಾಗಿ ಅವರನ್ನು ಯಾವಾಗಲೂ ಕ್ಯಾನ್ಸರ್ ರೋಗಿಯಂತೆ ಕಾಣಬೇಡಿ. ಪದೇ ಪದೇ ಧೈರ್ಯ ತುಂಬಿ, ನೀನು ಹೋರಾಟಗಾರ ಅನ್ನಬೇಡಿ. ಅದರ ಬದಲು ಅವರನ್ನು ಗೆಳೆಯ, ಗೆಳತಿಯಂತೆ ಟ್ರೀಟ್ ಮಾಡಿ. ಅವರ ಜೊತೆ ಎಂದಿನಂತೆ ಇರುವಂತೆ ಇರಿ. ಅವರಿಗೆ ಇಷ್ಟವಾದ ಆಹಾರ ತಿನ್ನಲು ಬಿಡಿ, ಸಾಮಾನ್ಯವಾಗಿ ಬೆರೆಯಿರಿ. ಅವರನ್ನು ಸ್ಪೆಷಲ್ ಎಂದು ಭಾವಿಸಬೇಡಿ.

ವ್ಯಾಯಾಮ ಮಾಡಿಸಿ!

ವ್ಯಾಯಾಮ ಮಾಡಿಸಿ!

ಯಾವುದೇ ರೋಗಕ್ಕೂ ಮದ್ದು ಎಂದರೆ ಅದು ವ್ಯಾಯಾಮ. ಯೋಗ ಆಗಿರಬಹುದು ಅಥವಾ ವ್ಯಾಯಾಮ ಆಗಿರಬಹುದು. ಎಲ್ಲ ರೋಗಗಳಿಗೆ ಇದು ಸಂಬಂಧಿಸಿದೆ. ಹೀಗಾಗಿ ನಾವು ಕ್ಯಾನ್ಸರ್ ರೋಗಿಗಳೊಂದಿಗೆ ವ್ಯಾಯಾಮ ಅಥವಾ ಯೋಗ ನಡೆಸುವುದು ಉತ್ತಮ. ಯಾಕೆಂದರೆ ಯೋಗ ಹಾಗೂ ವ್ಯಾಯಾಮ ಮಾಡುವುದರಿಂದ ಅವರ ದೇಹ ಸಡಿಲಗೊಳ್ಳುತ್ತದೆ. ಮನಸ್ಸು ಶಾಂತತೆಯಿಂದ ಕೂಡುತ್ತದೆ. ಎಲ್ಲ ಕೆಲಸಕ್ಕೂ ಅವರಿಗೆ ಉತ್ಸಾಹ ಮೂಡುತ್ತದೆ. ಹೀಗಾಗಿ ಈ ರೀತಿಯ ಚಟುವಟಿಕೆ ಅವರೊಂದಿಗೆ ನಡೆಸಬಹುದು. ಅಲ್ಲದೇ ನೀವು ಕ್ಯಾನ್ಸರ್ ರೋಗಿಗಳಿಗೆ ಯೋಗ ಮತ್ತು ವ್ಯಾಯಾಮ ಶಿಬಿರಗಳನ್ನು ನಡೆಸಬಹುದು.

ದೇಣಿಗೆ ಹಣ ಸಂಗ್ರಹಿಸಬಹುದು!

ದೇಣಿಗೆ ಹಣ ಸಂಗ್ರಹಿಸಬಹುದು!

ನಿಮ್ಮ ಹೃದಯ ಕ್ಯಾನ್ಸರ್ ರೋಗಿಗಳಿಗೆ ಮಿಡಿಯುತ್ತದೆ ಅಂದುಕೊಳ್ಳಿ. ಆದರೆ ಅವರಿಗೆ ಸಹಾಯ ಮಾಡಲು ನಿಮ್ಮಲ್ಲಿ ಏನು ಇಲ್ಲ. ಹಾಗಿದ್ದ ಮಾತ್ರಕ್ಕೆ ನೀವು ಅವರಿಗೆ ಸಹಾಯ ಮಾಡಲು ಹಿಂದೇಟು ಹಾಕಬೇಡಿ. ನೀವು ಚೆನ್ನಾಗಿ ಮಾತನಾಡುವವರಾದರೆ ಜನರಿಗೆ ಮಾಹಿತಿ ನೀಡಿ ಸಾರ್ವಜನಿಕ ವಲಯದಿಂದ ಕ್ಯಾನ್ಸರ್ ರೋಗಿಗಳಿಗಾಗಿ ದೇಣಿಗೆ ಸಂಗ್ರಹಿಸಬಹುದು. ಸಾರ್ವಜನಿಕರು ಕೊಡುವ ದೇಣಿಗೆಯನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುವ ಕೆಲಸವನ್ನು ಮಾಡಬಹುದು.

ಈ ಬಗ್ಗೆ ಅರಿವು ನಿಮಗೂ ಹಾಗೂ ಇನ್ನಿತರರಿಗೂ ನೀಡಿ!

ಅಕ್ಟೋಬರ್ ಅನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು ಎಂದು ಆಚರಣೆ ಮಾಡಲಾಗುತ್ತದೆ. ಈ ತಿಂಗಳಲ್ಲಿ ಈ ಬಗ್ಗೆ ಅರಿವು ಕಾರ್ಯಕ್ರಮ ವಿವಿಧೆಡೆ ನಡೆಯುತ್ತದೆ. ನೀವು ಕೂಡ ಈ ಅಭಿಯಾನದಲಿ ಪಾಲ್ಗೊಳ್ಳಬಹುದು. ನೀವು ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚೆಚ್ಚು ಅರಿತುಕೊಳ್ಳಬಹುದು. ಅಲ್ಲದೇ ಇನ್ನಿತರಿಗೂ ಮಾಹಿತಿ ನೀಡಬಹುದು. ವಿವಿಧ ಸಂಘಸಂಸ್ಥೆಗಳಿಗೆ ತೆರಳಿ ಮಾಹಿತಿಯನ್ನು ಹಂಚಬಹುದು. ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ಯಾವ ರೀತಿ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ನೀವು ತಿಳಿದುಕೊಂಡು ಇನ್ನಿತರಿಗೆ ಮಾಹಿತಿ ನೀಡಬಹುದು.

English summary

Breast Cancer Awareness Month: What Are The Meaningful Things You Can Do This Month in kannada

Breast Cancer Awareness Month: What Are The Meaningful Things You Can Do This Month in kannada
X
Desktop Bottom Promotion