For Quick Alerts
ALLOW NOTIFICATIONS  
For Daily Alerts

ಗುಣಮುಖರಾದ ಒಂದೇ ತಿಂಗಳಿನಲ್ಲಿ ಮತ್ತೆ ವಕ್ಕರಿಸಿದ ಕೊರೊನಾ : ಬೆಂಗಳೂರಿನಲ್ಲಿ ಮೊದಲ ಕೇಸ್ ಪತ್ತೆ

|

ಕೋವಿಡ್ 19ನಿಂದ ಗುಣಮುಖರಾದವರಲ್ಲಿ ಕೆಲವರಿಗೆ ಮತ್ತೆ ಸೋಂಕು ಮರುಕಳಿಸಿರುವ ಪ್ರಕರಣ ವಿಶ್ವದ ಹಲವೆಡೆ ದಾಖಲಾಗಿತ್ತು. ಆದರೆ ಕರ್ನಾಟಕದಲ್ಲಿ ಈ ರೀತಿಯ ಪ್ರಕರಣಗಳು ಯಾವುದು ದಾಖಲಾಗಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ ಮಹಿಳೆಯೊಬ್ಬರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ.

27 ವರ್ಷದ ಮಹಿಳೆಗೆ ಜುಲೈನಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಬಿಡುಗಡೆಯಾದ ಒಂದೇ ತಿಂಗಳಿನೊಳಗೆ ಮತ್ತೆ ಸೋಂಕು ಮರುಕಳಿಸಿರುವುದಾಗಿ ಫೋರ್ಟಿಸ್‌ ಆಸ್ಪತ್ರೆ ಹೇಳಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಮರುಕಳಿಸಿರುವ ಘಟನೆ ಇದೇ ಮೊದಲನೆಯದು ಆಗಿದೆ ಎಂದು ಎನ್‌ಡಿಟಿವಿಗೆ ಆಸ್ಪತ್ರೆಯ ವೈದ್ಯ ಪ್ರತೀಕ್ ಪಟೀಲ್ ಹೇಳಿದ್ದಾರೆ.

ಕೊರೊನಾ ಸೋಂಕು ಬಂದು ಗುಣಮುಖರಾದವಲ್ಲಿ ಆ ಸೋಂಕಿನ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಸಾಮಾರ್ಥ್ಯ ಅಧಿಕವಿರುವುದರಿಂದ ಸೋಂಕು ಮರುಕಳಿಸುವುದು ತುಂಬಾ ಕಡಿಮೆ. ಹಾಗಂತ ನಿರ್ಲಕ್ಷ್ಯ ಮಾಡಬಾರದು ಏಕೆಂದರೆ ಕೆಲವರಲ್ಲಿ ಆ್ಯಂಟಿಬಾಡಿ ಸಾಮಾರ್ಥ್ಯ ಕಡಿಮೆಯಿದ್ದು ಸೋಂಕಾಣುಗಳು ಮತ್ತೆ ದೇಹವನ್ನು ಪ್ರವೇಶಿಸುವುದು.

ಕೆಲವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಸಾಮಾರ್ಥ್ಯ ತಿಂಗಳಿನ ಒಳಗೆ ಇಲ್ಲವಾಗುವುದು ಎಂದು ಲಂಡನ್‌ನ ಕಿಂಗ್ಸ್‌ ಕಾಲೇಜಿನ ಸಂಶೋಧನೆ ಹೇಳಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮೂರು ತಿಂಗಳು ಕಳೆದ ಮೇಲೆ ಅವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಸಾಮಾರ್ಥ್ಯ ಕಡಿಮೆಯಾಗುವುದಾಗಿ ಆ ಸಂಶೋಧನೆ ಹೇಳಿದೆ.

ಆ್ಯಂಟಿಬಾಡಿ ಕಡಿಮೆಯಾದಾಗ ರೋಗ ನಿರೋಧಕ ಸಾಮಾರ್ಥ್ಯ ಕಡಿಮೆಯಾಗುವುದು

ಆ್ಯಂಟಿಬಾಡಿ ಕಡಿಮೆಯಾದಾಗ ರೋಗ ನಿರೋಧಕ ಸಾಮಾರ್ಥ್ಯ ಕಡಿಮೆಯಾಗುವುದು

ಆ್ಯಂಟಿಬಾಡಿ ಎನ್ನುವುದು ಪ್ಲಾಸ್ಮಾ ಕಣಗಳು ಉತ್ಪತ್ತಿ ಮಾಡುವ ಪ್ರೊಟೀನ್‌ಗಳಾಗಿವೆ. ಇದನ್ನು ರೋಗ ನಿರೋಧಕ ವ್ಯವಸ್ಥೆ ಬಳಸಿಕೊಂಡು ಹೊರಗಿನಿಂದ ದೇಹವನ್ನು ಪ್ರವೇಶಿಸುವ ಸೋಂಕಾಣುಗಳನ್ನುನಿಷ್ಕ್ರಿಯಗೊಳಿಸುತ್ತದೆ. ಅಧ್ಯಯನ ಪ್ರಕಾರ SARS-CoV-2 ಬಂದು ಗುಣಮುಖರಾದವರಲ್ಲಿ ಸ್ಪೈಕ್ಸ್ ಎಂಬ ಪ್ರೊಟೀನ್ ಆ್ಯಂಟಿಬಾಡಿ ಉತ್ಪತ್ತಿಯಾಗುತ್ತದೆ. ಇದು ಹೊರಗಿನಿಂದ ಬರುವ ಸೋಂಕಾಣುಗಳನ್ನು ತಡೆಗಟ್ಟುತ್ತದೆ. ಆದರೆ ಮೂರು ತಿಂಗಳು ಕಳೆಯುವಷ್ಟರಲ್ಲಿ ಈ ಆ್ಯಂಟಿಬಾಡಿ ಸಾಮಾರ್ಥ್ಯ ಕಡಿಮೆಯಾಗುವುದು ಹಾಗಾಗಿ ರೋಗ ನಿರೋಧಕ ವ್ಯವಸ್ಥೆಗೆ ಈ ಆ್ಯಂಟಿಬಾಡಿ ಮರತೇ ಹೋಗುವುದು, ಆಗ ಸೋಂಕಾಣುಗಳು ದೇಹವನ್ನು ಸೇರಿದಾಗ ಅವುಗಳನ್ನು ತಡೆಯುವಲ್ಲಿ ರೋಗ ನಿರೋಧಕ ವ್ಯವಸ್ಥೆಯು ವಿಫಲವಾಗುವುದು.

 ರೋಗ ನಿರೋಧಕ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ರೋಗ ನಿರೋಧಕ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಸಾಮಾನ್ಯವಾಗಿ ನಮ್ಮ ದೇಹಕ್ಕೆ ಹೊರಗಿನಿಂದ ಯಾವುದಾದರೂ ರೋಗಾಣು/ಸೋಂಕಾಣು ಪ್ರವೇಶಿಸಿದರೆ ನಮ್ಮ ದೇಹದಲ್ಲಿ ಅವುಗಳ ವಿರುದ್ಧ ಹೋರಾಡಲು ಆ್ಯಂಟಿಬಾಡಿ ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಮತ್ತೊಮ್ಮೆ ಆ ರೋಗಾಣು ನಮ್ಮ ದೇಹವನ್ನು ಪ್ರವೇಶಿಸುವಾಗ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ತಕ್ಷಣ ಅಲರ್ಟ್ ಆಗಿ ಸೋಂಕಾಣು ಅಥವಾ ರೋಗಾಣುವನ್ನು ನಿಷ್ಕ್ರಿಯಗೊಳಿಸುತ್ತದೆ.

ಕೊರೊನಾವೈರಸ್‌ ಕುರಿತು ಅಧ್ಯಯನಗಳು ಏನು ಹೇಳುತ್ತವೆ?

ಕೊರೊನಾವೈರಸ್‌ ಕುರಿತು ಅಧ್ಯಯನಗಳು ಏನು ಹೇಳುತ್ತವೆ?

ಕೋವಿಡ್‌ 19 ಎನ್ನುವುದು ಹೊಸ ಬಗೆಯ ಸಾಂಕ್ರಾಮಿಕ ಪಿಡುಗು ಆಗಿದ್ದು, ಇದಕ್ಕೆ ಮಾನವನ ರೋಗ ನಿರೋಧಕ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದರ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಿವೆ. ಕೋವಿಡ್19 ಬಂದು ಗುಣಮುಖರಾದ ವ್ಯಕ್ತಿಗಳಲ್ಲಿ ಮತ್ತೆ ಸೋಂಕು ಕಂಡು ಬರುತ್ತಿರುವುದರಿಂದ ಕೋವಿಡ್‌ 19 ವಿರುದ್ಧ ಚುಚ್ಚುಮದ್ದು ತೆಗೆದುಕೊಂಡರೂ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿದೆ.

ಕೋವಿಡ್ 19 ಚುಚ್ಚುಮದ್ದುಗಳಿಂದ ಕೊರೊನಾ ತಡೆಗಟ್ಟಲು ಸಾಧ್ಯವೇ?

ಕೋವಿಡ್ 19 ಚುಚ್ಚುಮದ್ದುಗಳಿಂದ ಕೊರೊನಾ ತಡೆಗಟ್ಟಲು ಸಾಧ್ಯವೇ?

ಕೋವಿಡ್ 19 ಬಾಧಿಸಿ ಗುಣಮುಖರಾದ 90 ಆರೋಗ್ಯ ಕಾರ್ಯಕರ್ತರನ್ನುಸಂಶೋಧನೆಯೊಂದಕ್ಕೆ ಒಳಪಡಿಸಲಾಯಿತು. ಆಗ ಶೇ. 60 ಜನರಲ್ಲಿ ರೋಗದಿಂದ ಗುಣಮುಖರಾದ ಮೂರು ತಿಂಗಳ ಒಳಗೆ ಅತ್ಯಧಿಕ ಆ್ಯಂಟಿಬಾಡಿಕಂಡು ಬಂದಿತ್ತು. ಆದರೆ ಮೂರು ತಿಂಗಳು ಕಳೆಯುತ್ತಿದ್ದಂತೆ ಆ್ಯಂಟಿಬಾಡಿ ಸಾಮಾರ್ಥ್ಯ ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಶೇ. 17ರಷ್ಟು ಜನರಲ್ಲಿ ಮೂರು ತಿಂಗಳ ಬಳಿಕ ಕೊರಿನಾ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಪತ್ತೆಯಾದೆವು. ಆದ್ದರಿಂದ ಕೋವಿಡ್‌19 ತಡೆಗಟ್ಟಲು ಚುಚ್ಚುಮದ್ದು ತೆಗೆದುಕೊಂಡರೆ ಅದಕ್ಕೆ ಸಂಪೂರ್ಣವಾಗಿಕೊರೊನಾ ತಡೆಗಟ್ಟಲು ಸಾಧ್ಯವೇ? ಎನ್ನುವುದು ತಜ್ಞರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಸಲಹೆ:

ಸಲಹೆ:

ಕೋವಿಡ್ 19 ಬಂದವರು ಈ ರೋಗ ಇನ್ನು ನಮಗೆ ಬರುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಬಾರದು. ಈ ರೋಗ ಮತ್ತೆ ಮರುಕಳಿಸದಿರಲು ತುಂಬಾ ಎಚ್ಚರವಹಿಸಬೇಕು. ಹೊರಗಡೆ ಹೋಗುವಾಗ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಲು ಮರೆಯಬಾರದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

English summary

Bengaluru Hospital Reports First Covid-19 Reinfection Case in City

The first case of coronavirus reinfection reported in Bengaluru. A 27-year-old woman who had first tested positive in July and was discharged upon full recovery from a mild form of the disease.
X
Desktop Bottom Promotion