For Quick Alerts
ALLOW NOTIFICATIONS  
For Daily Alerts

ಮರೆವು ಅಲ್ಜೈಮರ್ಸ್‌ನ ಲಕ್ಷಣವೇ? ಇದನ್ನು ತಡೆಯಲು ಸಾಧ್ಯವೇ?

|

ಪ್ರತೀವರ್ಷ ಜೂನ್ ತಿಂಗಳನ್ನುಅಲ್ಜೈಮರ್ಸ್‌ ಮತ್ತು ಮೆದುಳು ಸ್ವಾಸ್ಥ್ಯದ ಬಗ್ಗೆ ಅರಿವು ಮೂಡಿಸುವ ತಿಂಗಳನ್ನಾಗಿ ಗುರುತಿಸಲಾಗಿದೆ. ಇದನ್ನು ಅಲ್ಜೈಮರ್ಸ್ ಅಸೋಸಿಯೇಷನ್‌ ಜನರಲ್ಲಿ ಈ ಕಾಯಿಲೆ ಬಗ್ಗೆ ಅರಿವು ಮೂಡಿಸಿ, ಇದರ ಬಗ್ಗೆ ಅಪಾಯದ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಪ್ರಾರಂಭಿಸಲಾಯಿತು.

ವರ್ಷದಿಂದ ವರ್ಷಕ್ಕೆ ಅಲ್ಜೈಮರ್ಸ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ಬಗ್ಗೆ ಜಾಗ್ರತೆವಹಿಸದಿದ್ದರೆ 2050ರಷ್ಟಿಗೆ ವಿಶ್ವದಲ್ಲಿ ಸುಮಾರು 44 ಮಿಲಿಯನ್‌ ಜನರು ಅಲ್ಜೈಮರ್ಸ್ ಸಮಸ್ಯೆಯಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ.

ವಯಸ್ಸು 60 ದಾಟುತ್ತಿದ್ದಂತೆ ಅಲ್ಜೈಮರ್ಸ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಶೇ.68ರಷ್ಟು ಆಗದಲಿದೆ. ಇನ್ನು ಆರ್ಥಿಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚಲಿದ್ದು, ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ಈ ಸಂಖ್ಯೆ ಕಡಿಮೆ ಕಂಡು ಬರಲಿದೆ.

ಅತೀ ಹೆಚ್ಚಾಗಿ ಕಂಡು ಬರುತ್ತಿರುವ ಮರೆವಿನ ಸಮಸ್ಯೆಯೆಂದರೆ ಅಲ್ಜೈಮರ್ಸ್ ಡಿಸೀಜ್ (AD), ಇದು ಮೆದುಳಿನ ನರಗಳ ದೋಷದಿಂದ ಉಂಟಾಗುವ ಸಮಸ್ಯೆಯಾಗಿದೆ. ಇದರ ಲಕ್ಷಣಗಳು ಪ್ರಾರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ಸುಲಭ, ಸಮಸ್ಯೆ ಹೆಚ್ಚಾದರೆ ಇದನ್ನು ಗುಣಪಡಿಸಲು ಸಾಧ್ಯವಿಲ್ಲ.

ಇಲ್ಲಿ ನಾವು ಮರೆವು ಹಾಗೂ ಅಲ್ಜೈಮರ್ಸ್ ಕುರಿತು ಜನರಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳಿಗೆ ವಿವಿರ ನೀಡಿದ್ದೇವೆ ನೋಡಿ:

ಅಲ್ಜೈಮರ್ಸ್ ಹೇಗೆ ಪ್ರಾರಂಭವಾಗುತ್ತದೆ?

ಅಲ್ಜೈಮರ್ಸ್ ಹೇಗೆ ಪ್ರಾರಂಭವಾಗುತ್ತದೆ?

ತುಂಬಾ ಜನರಿಗೆ ಮರೆವಿನ ಸಮಸ್ಯೆ 60ರ ವಯಸ್ಸಿನಲ್ಲಿ ಪ್ರಾರಂಭವಾಗುವುದು.ಅಲ್ಜೈಮರ್ಸ್‌ ಕಾಯಿಲೆಯ ಲಕ್ಷಣಗಳು ಕೆಲವರಲ್ಲಿ 30 ಆಸುಪಾಸಿನಲ್ಲಿಯೇ ಕಂಡು ಬರುವುದು. ಅಲ್ಜೈಮರ್ಸ್ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ನೆನಪಿನ ಶಕ್ತಿ ಕಡಿಮೆಯಾಗುವುದು.

ಅಲ್ಜೈಮರ್ಸ್‌ನ 7 ಹಂತಗಳು

ಅಲ್ಜೈಮರ್ಸ್‌ನ 7 ಹಂತಗಳು

* ಸ್ಟೇಜ್ 1: ಸಾಮಾನ್ಯ

* ಸ್ಟೇಜ್ 2: ವಯಸ್ಸಿಗೆ ಸಂಬಂಧಿಸಿದ ಮರೆವಿನ ಕಾಯಿಲೆ

* ಸ್ಟೇಜ್ 3: ಸ್ವಲ್ಪ ಅರಿವಿನ ದುರ್ಬಲತೆ

* ಸ್ಟೇಜ್ 4: ಸ್ವಲ್ಪ ಅಲ್ಜೈಮರ್ಸ್ ಲಕ್ಷಣಗಳು

* ಸ್ಟೇಜ್ 5: ಅಲ್ಜೈಮರ್ಸ್ ಲಕ್ಷಣ ಸಾಮಾನ್ಯಗಿಂತಲೂ ಸ್ವಲ್ಪ ಅಧಿಕ

* ಸ್ಟೇಜ್ 6: ಅಲ್ಜೈಮರ್ಸ್ ಸಮಸ್ಯೆ ಹೆಚ್ಚಾಗುವುದು

* ಸ್ಟೇಜ್ 7: ಅಲ್ಜೈಮರ್ಸ್ ಸಮಸ್ಯೆ ಗಂಭೀರವಾಗುವುದು.

ಅಲ್ಜೈಮರ್ಸ್ ಹೇಗೆ ನಮ್ಮನ್ನು ಕೊಲ್ಲುತ್ತದೆ?

ಅಲ್ಜೈಮರ್ಸ್ ಹೇಗೆ ನಮ್ಮನ್ನು ಕೊಲ್ಲುತ್ತದೆ?

ಅಲ್ಜೈಮರ್ಸ್ ಸಮಸ್ಯೆ ನಮ್ಮನ್ನು ಕೊಲ್ಲುವುದಿಲ್ಲ, ಆದರೆ ಮರೆವಿನ ಸಮಸ್ಯೆ ಉಂಟಾಗುತ್ತದೆ, ಇದರಿಂದ ಮೆದುಳಿನ ದುರ್ಬಲತೆ ಉಂಟಾಗಿ ಸಾವು ಉಂಟಾಗುವುದು. ಅಲ್ಜೈಮರ್ಸ್ ಮೆದುಳಿಗೆ ಸಂದೇಶ ರವಾನಿಸುವ ನರಗಳಿಗೆ ಹಾನಿಯುಂಟು ಮಾಡುತ್ತೆ, ಇದರಿಂದ ವ್ಯಕ್ತಿಗೆ ತಿನ್ನುವುದು, ಡೆಯುವುದು ಅಷ್ಟೇ ಏಕೆ ಎಂಜಲು ನುಂಗುವುದು ಹೇಗೆ ಎಂದು ಕೂಡ ಮರೆತು ಹೋಗುತ್ತದೆ.

ಅಲ್ಜೈಮರ್ಸ್ ದೇಹದ ಮೇಲೆ ಬೀರುವ ಪರಿಣಾಮವೇನು?

ಅಲ್ಜೈಮರ್ಸ್‌ ಮೆದುಳಿನ ಸಾಮಾರ್ಥ್ಯ ಸಂಪೂರ್ಣ ಹಾಳು ಮಾಡುವುದರಿಂದ ಏನೂ ನೆನಪಿರಲ್ಲ. ನಾವು ಯಾವುದೇ ಕೆಲಸ ಮಾಡಲು, ಚಿಂತಿಸಲು, ಓಡಾಡಲು ಮೆದುಳು ಕಾರ್ಯನಿರ್ವಹಿಸಬೇಕು, ಮೆದುಳು ದುರ್ಬಲವಾದಾಗ ಗೊಂದಲ, ಮರೆವು ಉಂಟಾಗುವುದು.

ಅಲ್ಜೈಮರ್ಸ್‌ಗೆ ಕಾರಣಗಳೇನು?

ಅಲ್ಜೈಮರ್ಸ್‌ಗೆ ಕಾರಣಗಳೇನು?

ಮೆದುಳಿನ ನರಗಳ ಸುತ್ತ ಅಸಹಜವಾದ ಪ್ರೊಟೀನ್‌ ಬೆಳವಣಿಗೆಯಿಂದ ಉಂಟಾಗುತ್ತದೆ, ಅಲ್ಲದೆ ಇದೇ ಕಾರಣಕ್ಕೆ ಅಲ್ಜೈಮರ್ಸ್ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ವಯಸ್ಸು, ಪರಿಸರ, ಜೀವನಶೈಲಿ ಹಾಗೂ ವಂಶವಾಹಿ ಕಾರಣಗಳಿಂದಾಗಿ ಉಂಟಾಗುತ್ತದೆ.

ಮಾನಸಿಕ ಒತ್ತಡದಿಂದಾಗಿ ಅಲ್ಜೈಮರ್ಸ್ ಬರುತ್ತದೆಯೇ?

ಮಾನಸಿಕ ಒತ್ತಡ ನೇಕ ಸಮಸ್ಯೆಗಳನ್ನು ಉಂಟು ಮಾಡುವುದು, ಅತೀಯಾದ ಮಾನಸಿಕ ಒತ್ತಡ ಮರೆವಿನ ಸಮಸ್ಯೆ ಕೂಡ ತರುತ್ತದೆ. ಇದರಿಂದ ತೂಕದಲ್ಲಿ ವ್ಯತ್ಯಾಸ, ನಿದ್ರಾಹೀನತೆ, ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಲು ಏಕಾಗ್ರತೆ ಕೊರತೆ ಮುಂತಾದ ಸಮಸ್ಯೆ ಉಂಟಾಗುವುದು, ಇದರಿಂದ ಮರೆವಿನ ಸಮಸ್ಯೆ ಉಂಟಾಗುವುದು.

ಅಲ್ಜೈಮರ್ಸ್ ಕಾಯಿಲೆ ಬಂದರೆ ಎಷ್ಟು ಸಮಯ ಬದುಕುತ್ತಾರೆ?

ಅಲ್ಜೈಮರ್ಸ್ ಕಾಯಿಲೆ ಬಂದರೆ ಎಷ್ಟು ಸಮಯ ಬದುಕುತ್ತಾರೆ?

ಅಲ್ಜೈಮರ್ಸ್ ಎಂದರೆ 4-8 ವರ್ಷಗಳ ಬದುಕುತ್ತಾರೆ, ಕೆಲವರು ಇನ್ನೂ ಹೆಚ್ಚಿನ ವರ್ಷಗಳು ಬದುಕುತ್ತಾರೆ, ಅವರು ಅಲ್ಜೈಮರ್ಸ್‌ ಸ್ಟೇಜ್ ಗಂಭಿರವಾಗಿಲ್ಲವೆಂದರೆ ಹೆಚ್ಚು ಕಾಲ ಬದುಕುತ್ತಾರೆ.

ಅಲ್ಜೈಮರ್ಸ್ ಸಮಸ್ಯೆ ಇರುವವರು ತುಂಬಾ ನಿದ್ದೆ ಮಾಡುತ್ತಾರಾ?

ಅಲ್ಜೈಮರ್ಸ್ ಸಮಸ್ಯೆ ಇರುವವರು ತುಂಬಾ ನಿದ್ದೆ ಮಾಡುತ್ತಾರೆ. ಮೆದುಳು ದುರ್ಬಲವಾಗಿರುವುದರಿಂದ ವರು ತುಂಬಾ ನಿದ್ದೆ ಮಾಡುತ್ತಾರೆ.

ಅಲ್ಜೈಮರ್ಸ್ ಮರೆವಿಗಿಂತ ಅಪಾಯಕಾರಿಯೇ?

ಅಲ್ಜೈಮರ್ಸ್ ಹಾಗೂ ಮರೆವಿನ ಸಮಸ್ಯೆ ನಡುವೆ ತುಂಬಾ ವ್ಯತ್ಯಾಸವೇನೂ ಇಲ್ಲ. ಅಲ್ಜೈಮರ್ಸ್‌ ಬಂದಾಗ ಮರೆವು ಉಂಟಾಗುವುದು, ಇದು ಅವರ ಯೋಚನೆ, ಮಾತು ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.

ಅಲ್ಜೈಮರ್ಸ್ ರೋಗಿ ಎಷ್ಟು ಸಮಯ ಬದುಕಿರುತ್ತಾರೆ?

ಅಲ್ಜೈಮರ್ಸ್ ರೋಗಿ ಎಷ್ಟು ಸಮಯ ಬದುಕಿರುತ್ತಾರೆ?

ಸ್ಟೇಜ್‌ 7 ತಲುಪಿರುವ ಅಲ್ಜೈಮರ್ಸ್ ರೋಗಿ ಎಷ್ಟು ಸಮಯ ಬದುಕಿರುತ್ತಾರೆ?

ಅಲ್ಜೈಮರ್ಸ್‌ನ ಕೊನೆಯ ಹಂತವಾಗಿದ್ದು, ಈ ಹಂತ ತಲುಪಿದರೆ ವ್ಯಕ್ತಿ 1 ವರ್ಷ ಹೆಚ್ಚೆಂದರೆ ಎರಡೂವರೆ ವರ್ಷ ಬದುಕಿರುತ್ತಾರೆ.

ಅಲ್ಜೈಮರ್ಸ್ ವ್ಯಕ್ತಿಯ ಮಾನಸಿಕ ಸ್ಥಿತಿ ಹೇಗಿರುತ್ತದೆ?

ಅಲ್ಜೈಮರ್ಸ್ ಬಂದವರಿಗೆ ಮರೆವು ಉಂಟಾಗುವುದರಿಂದ ಕೋಪ, ಆತಂಕ, ಖಿನ್ನತೆ, ಭಯ, ಒಂಟಿತನ ಹೆಚ್ಚಾಗಿ ಕಾಡುತ್ತಿರುತ್ತದೆ.

ಪೀನಟ್‌ ಬಟರ್‌ನಿಂದ ಅಲ್ಜೈಮರ್ಸ್ ಸಮಸ್ಯೆ ಪತ್ತೆ ಹಚ್ಚಬಹುದೇ?

ಪೀನಟ್‌ ಬಟರ್‌ನಿಂದ ಅಲ್ಜೈಮರ್ಸ್ ಸಮಸ್ಯೆ ಪತ್ತೆ ಹಚ್ಚಬಹುದೇ?

ಅಲ್ಜೈಮರ್ಸ್ ಸಮಸ್ಯೆ ಪತ್ತೆಹಚ್ಚಲು ಪೀನಟ್‌ ಬಟರ್ ಬಳಸುತ್ತಾರೆ. ಮೂಗಿನ ಒಂದು ಭಾಗ ಮುಚ್ಚಿ, ಮತ್ತೊಂದು ಭಾಗದಿಂದ ಪೀನಟ್ ಬಟರ್ ವಾಸನೆ ತೆಗೆದುಕೊಳ್ಳಬೇಕು. ಈ ರೀತಿ ಎರಡೂ ಬದಿಯಿಂದಲೂ ವಾಸನೆ ಗ್ರಹಿಸಬೇಕು. ಅಲ್ಜೈಮರ್ಸ್ ಸಮಸ್ಯೆ ಬಂದಿದ್ದರೆ ಬಲಮೂಗಿನಷ್ಟು ವಾಸನೆ ಎಡ ಭಾಗದ ಮೂಗು ಗ್ರಹಿಸುವುದಿಲ್ಲ.

ಅಲ್ಜೈಮರ್ಸ್ ಗುಣಪಡಿಸಲು ಸಾಧ್ಯವೇ?

ಇದನ್ನು ಗುಣ ಪಡಿಸಲು ಸಾಧ್ಯವಿಲ್ಲ, ಪ್ರಾರಂಭದಲ್ಲಿ ಮುನ್ನೆಚ್ಚರಿಕೆ ವಹಿಸಿದರೆ ಇದು ಬಾರದಂತೆ ತಡೆಯಬಹುದು, ಮೆದುಳು ಚುರುಕಾಗಿಸುವ ಗೇಮ್, ಮೆದುಳಿನ ಸಾಮರ್ಥ್ಯಕ್ಕಾಗಿ ಯೋಗ ಇವೆಲ್ಲಾ ಅಲ್ಜೈಮರ್ಸ್ ಕಾಯಿಲೆ ಬಾರದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ.

English summary

Alzheimer's Frequently Asked Questions and Answers in Kannada

Here we will explore each and every aspect of this common type of dementia and attempt to answer your doubts through the Q&A.
X
Desktop Bottom Promotion