For Quick Alerts
ALLOW NOTIFICATIONS  
For Daily Alerts

ಡೆಂಗ್ಯೂವನ್ನು ನಿಯಂತ್ರಿಸುವುದು ಹೇಗೆ?

By ಲೇಖಕ
|

ಕೆಲವೊಂದು ಅಂಶಗಳು ನಿಮ್ಮ ಜೀವನದಲ್ಲಿ ಎಂದೆಂದಿಗೂ ಸಂಭವಿಸಬಾರದು ಎಂದು ಕೋರಿ ಕೊಳ್ಳುತ್ತಿರುತ್ತೀರಿ. ಅಂತಹ ಅಂಶಗಳಲ್ಲಿ ಡೆಂಗ್ಯೂ ಸಹ ಒಂದು. ಇದು ಯಾವುದೇ ಅಡೆ ತಡೆಯಿಲ್ಲದೆ ಮಾನವನ ರೋಗ ನಿರೋಧಕ ವ್ಯವಸ್ಥೆಯನ್ನು ಭೇದಿಸಿ ರೋಗವನ್ನುಂಟು ಮಾಡುತ್ತದೆ. ವ್ಯಕ್ತಿಗೆ ಡೆಂಗ್ಯೂ ಬಂದರೆ ಸಾಕು ಅವರ ಇಡೀ ದೇಹವೆ ಸಮತೋಲನ ತಪ್ಪಿ ಪ್ರಾಣಾಪಾಯವುಂಟಾಗುತ್ತದೆ.

ಈ ಕಾಯಿಲೆಯ ಬಗ್ಗೆ ಯಾವುದೇ ಅಚ್ಚರಿ ವ್ಯಕ್ತ ಪಡಿಸುವ ಹಾಗೇನು ಇಲ್ಲ. ಇದನ್ನು " ಮೂಳೆ ಮುರಿಯುವ ಜ್ವರ" ವೆಂದು ಸಹ ಕರೆಯುತ್ತಾರೆ. ನಿವಾರಣೋಪಾಯವು ಪರಿಹಾರೋಪಾಯಕ್ಕಿಂತ ಉತ್ತಮವೆನ್ನುವ ನಾಣ್ಣುಡಿಯಂತೆ ಇದನ್ನು ನಿವಾರಿಸಲು ಅಗತ್ಯವಾಗಿರುವ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

How To Prevent Dengue

1. ನಿಮ್ಮ ಸುತ್ತಮುತ್ತಲಿನ ಆವರಣವನ್ನು ಒಣಗಿದ ಸ್ಥಿತಿಯಲ್ಲಿಡಿ

ಡೆಂಗ್ಯೂ ಬರುವ ಅಪಾಯವಿದ್ದಾಗ ಮೊದಲು ನಿಮಗೆ ಕೊಡುವ ಸೂಚನೆಯೆ ಎಂದರೆ ಅದು ನಿಮ್ಮ ಆವರಣವನ್ನು ಒಣ ಸ್ಥಿತಿಯಲ್ಲಿಡಿ. ಎಲ್ಲಿಯೇ ಆಗಲಿ ಯಾವುದೇ ರೀತಿಯಾದ ನೀರು ನಿಲ್ಲದಂತೆ ಎಚ್ಚರವಹಿಸಿ. ಏಕೆಂದರೆ ನಿಂತ ನೀರಿನಲ್ಲಿ ಡೆಂಗ್ಯೂಕಾರಕ ಸೊಳ್ಳೆಗಳು ತಮ್ಮ ವಂಶಾಭಿವೃದ್ಧಿಯನ್ನು ಮಾಡುತ್ತವೆ. ಹಾಗಾಗಿ ಮನೆಯ ಒಳಗಡೆ ಮತ್ತು ಹೊರಗಡೆ ಯಾವುದೇ ರೀತಿಯ ನೀರು ನಿಲ್ಲದಂತೆ ಎಚ್ಚರವಹಿಸಿ. ಅದಕ್ಕಾಗಿ ನಿಮ್ಮ ಮನೆಯ ಮತ್ತು ನೆರೆಹೊರೆಯ ಆವರಣವನ್ನು ಬಿಸಿಲಿಗೆ ತೆರೆದಿಡಿ ಮತ್ತು ಸ್ವಚ್ಛತೆಯನ್ನು ಕಾಪಾಡಿ.

2. ನಿಮ್ಮ ಮನೆಯಲ್ಲಿನ ಪ್ರತಿವಸ್ತುಗಳನ್ನು ಮುಚ್ಚಿಡಿ

ಇದರರ್ಥ ನಿಮ್ಮ ಮನೆಯಲ್ಲಿರುವ ಆಹಾರದ ಪಾತ್ರೆಗಳಿಂದ ಹಿಡಿದು ನೀರಿನ ಪಾತ್ರೆಗಳವರೆಗು ಇರುವ ಎಲ್ಲಾ ವಸ್ತುಗಳನ್ನು ಮುಚ್ಚಿಡಿ. ಏಕೆಂದರೆ ಡೆಂಗ್ಯೂಕಾರಕ ಸೊಳ್ಳೆಗಳು ಮನೆಯಲ್ಲಿ ಬಿದ್ದಿರುವ ಯಾವುದೇ ವಸ್ತುವನ್ನು ತನ್ನ ಅಡಗುತಾಣವನ್ನಾಗಿ ಮಾಡಿಕೊಳ್ಳುತ್ತವೆ. ಅದರಲ್ಲಿಯು ತೆರೆದಿಟ್ಟ ಆಹಾರ ಪದಾರ್ಥಗಳು ಅವುಗಳ ಪ್ರಮುಖ ಗುರಿಯಾಗಿರುತ್ತವೆ!

3. ನಿಮ್ಮ ಜಾಗ್ರತೆಯಲ್ಲಿ ನೀವಿರಿ

ನಿಮ್ಮ ವೈಯುಕ್ತಿಕ ಭದ್ರತೆಗಾಗಿ ಏನು ಮಾಡಿಕೊಂಡಿದ್ದೀರಿ? ಡೆಂಗ್ಯೂ ಮಾರಿ ಕಾಡುವ ಕಾಲದಲ್ಲಿ ಮಲಗುವಾಗ ನೀವು ಆದಷ್ಟು ತುಂಬು ತೋಳಿನ ಅಂಗಿಗಳನ್ನು, ಪ್ಯಾಂಟ್‍ಗಳನ್ನು ಮತ್ತು ಹೊದಿಕೆಗಳನ್ನು ಬಳಸಿ. ಇದರ ಜೊತೆಗೆ ಕೀಟ ನಾಶಕಗಳನ್ನು ಬಳಸಿ ಮನೆಯನ್ನು ಸೊಳ್ಳೆ ಮುಕ್ತಗೊಳಿಸಿ. ಸಾಧ್ಯವಾದರೆ ಸೊಳ್ಳೆ ನಿರೋಧಕ ಕ್ರೀಮ್ ಹಚ್ಚಿಕೊಳ್ಳಿ.

4. ಬಾಗಿಲಿಗೆ ಪರದೆಗಳನ್ನು ಅಳವಡಿಸಿ

ಲೋಹದ ಮೆಶ್ ಅಥವಾ ಸೊಳ್ಳೆ ಪರದೆಗಳನ್ನು ನಿಮ್ಮ ಮುಂಬಾಗಿಲಿಗೆ ಅಳವಡಿಸಿ. ಇದರ ಜೊತೆಗೆ ಕಿಟಕಿಗಳಿಗು ಸಹ ಮೆಶ್ ಅಳವಡಿಸಿ. ಡೆಂಗ್ಯೂವನ್ನು ನಿಯಂತ್ರಿಸಲು ನಿಮ್ಮ ಹಾಸಿಗೆಗೆ ಸೊಳ್ಳೆ ಪರದೆಯನ್ನು ಹಾಕಿಕೊಳ್ಳುವುದನ್ನು ಮರೆಯಬೇಡಿ.

5. ಅಪಾಯಕಾರಿ ಪ್ರದೇಶಗಳಿಂದ ದೂರವಿರಿ

ಡೆಂಗ್ಯೂ ತಗುಲುವ ಸಾಧ್ಯತೆಯಿರುವ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರವಿರಿ. ಅಂದರೆ ತೇವಾಂಶವಿರುವ ಮತ್ತು ಸೊಳ್ಳೆಗಳು ಹೆಚ್ಚಾಗಿ ವಾಸಿಸುವಂತಹ ಉದ್ಯಾನವನ, ತೋಟ ಮುಂತಾದ ಕಡೆ ಸುತ್ತಾಡುವುದನ್ನು ನಿಲ್ಲಿಸಿ. ನಿಮ್ಮ ಪ್ರದೇಶದಲ್ಲಿ ಸೊಳ್ಳೆಗಳು ಹೆಚ್ಚಾಗಿ ಇರುವ ಸ್ಥಳಗಳನ್ನು ಗುರುತಿಸಿ ಅತ್ತ ಸುಳಿದಾಡುವುದನ್ನು ನಿಯಂತ್ರಿಸಿ.

6. ಸ್ವಚ್ಛಗೊಳಿಸಿ

ಇದು ಎಲ್ಲ ನಿವಾರಣ ಕ್ರಮಗಳಿಗಿಂತ ಬಹುಮುಖ್ಯವಾದುದು. ಇದು ವೈಯುಕ್ತಿಕ ಸ್ವಚ್ಛತೆಯ ಒಂದು ಭಾಗವಾಗಿ ಸಹ ಪರಿಗಣಿಸಲ್ಪಡುತ್ತದೆ. ನಿಮ್ಮ ಮನೆಯಲ್ಲಿರುವ ನೀರಿನ ಶೀಥಲೀಕರಣದ ಸಾಧನಗಳನ್ನು, ತೊಟ್ಟಿಗಳನ್ನು ಮತ್ತು ಕೈತೊಳೆಯುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ವಂಶಾಭಿವೃದ್ಧಿಯನ್ನು ನಿಯಂತ್ರಿಸಬಹುದು. ನೀವು ವಾರಕ್ಕೊಮ್ಮೆ ಇವುಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು.

7. ರಾಸಾಯನಿಕಗಳನ್ನು ಬಳಸಿ

ಬ್ಲೀಚಿಂಗ್ ಪೌಡರ್ ಮತ್ತು ಡಿಡಿಟಿಗಳನ್ನು ನಿಮ್ಮ ಮನೆಯ ಸುತ್ತ ಮುತ್ತಲ ಆವರಣದಲ್ಲಿ ಸಿಂಪಡಿಸುವುದರಿಂದ ನೀವು ಡೆಂಗ್ಯೂ ತರುವಂತಹ ಪೀಡೆಗಳನ್ನು ನಿವಾರಿಸಿ, ನಿಮ್ಮನ್ನು ಹಾಗೂ ನಿಮ್ಮವರನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿ ಇಡಬಹುದು.

ಡೆಂಗ್ಯೂವನ್ನು ನಿಯಂತ್ರಿಸಲು ನೀವು ಹರಸಾಹಸ ಪಡಬೇಕಾದ ಅವಶ್ಯಕತೆಯಿಲ್ಲ. ಇದಕ್ಕಾಗಿ ನೀವು ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಕೆಲವೊಂದು ಬದಲಾವಣೆ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡರೆ ಸಾಕು. ಹಾಗಾಗಿಯೇ ಹೇಳುವುದು ನೀವು ಮತ್ತು ನಿಮ್ಮವರ ಆರೋಗ್ಯಕ್ಕಾಗಿ ಪರಿಹಾರಕ್ಕಿಂತ ನಿಯಂತ್ರಣ ಮಾರ್ಗವನ್ನು ಅನುಸರಿಸಿ ಡೆಂಗ್ಯೂವನ್ನು ತಡೆಗಟ್ಟಿ. ಆರೋಗ್ಯವಾಗಿ ಬಾಳಿ.

English summary

How To Prevent Dengue | Tips For Health | ಡೆಂಗ್ಯೂವನ್ನು ನಿಯಂತ್ರಿಸುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There are some things in life that you wish would never happen to you and dengue fever is one of them. The disease itself enters so seamlessly into a human’s immune system that by the time one gets cracking the code, the body comes crashing down.
X
Desktop Bottom Promotion