For Quick Alerts
ALLOW NOTIFICATIONS  
For Daily Alerts

ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆಹಾರಗಳಿವು

|

ನಮ್ಮ ದೇಹದ ಒಟ್ಟಾರೆ ಆರೋಗ್ಯವು ಸುಸ್ಥಿತಿಯಲ್ಲಿರಬೇಕಾದರೆ ದೇಹದ ಎಲ್ಲ ಅಂಗಾಂಗಗಳಿಗೆ ರಕ್ತದ ಪೂರೈಕೆ ಚೆನ್ನಾಗಿ ಆಗಬೇಕಾಗಿರುವುದು ಅತ್ಯಗತ್ಯ. ಹಾಗಾಗಿಯೇ ರಕ್ತಪರಿಚಲನೆಯು ಶರೀರದ ಅತೀ ಪ್ರಮುಖವಾದ ಕಾರ್ಯಗಳಲ್ಲಿ ಒಂದು. "ನಾವು ಏನನ್ನು ತಿನ್ನುತ್ತೇವೆಯೋ ಅದೇ ನಾವಾಗಿರುತ್ತೇವೆ" ಅನ್ನೋ ಒಂದು ಮಾತಿದೆ. ಅರ್ಥಾತ್ ನಮ್ಮ ಶರೀರದ ಆರೋಗ್ಯವನ್ನ ನಿರ್ಣಯಿಸುವುದರಲ್ಲಿ ನಾವು ತಿನ್ನುವ ಆಹಾರ ಬಹು ಪ್ರಮುಖ ಪಾತ್ರವಹಿಸುತ್ತೆ. ದೇಹದ ಬೇರೆ ಬೇರೆ ಬಗೆಯ ಕಾರ್ಯಚಟುವಟಿಕೆಗಳಿಗೆ ಬೇರೆ ಬೇರೆ ಬಗೆಯ ಆಹಾರವಸ್ತುಗಳು ಯೋಗ್ಯವಾಗಿರುತ್ತವೆ ಅನ್ನೋದು ನಮಗೀಗಾಲೇ ಗೊತ್ತೇ ಇದೆ.

Natural Blood Thinning Foods To Reduce Blood Clots

ಹಾಗೇನೇ ಕೆಲನಿರ್ಧಿಷ್ಟ ಬಗೆಯ ಆಹಾರವಸ್ತುಗಳು ರಕ್ತಪರಿಚಲನೆಯನ್ನು ಸುಧಾರಿಸಲಿಕ್ಕೂ ನೆರವಾಗುತ್ತವೆ ಹಾಗೂ ಅನೇಕ ಬಗೆಯ ಹೃದ್ರೋಗಗಳನ್ನ ತಡೆಗಟ್ಟೋಕೂ ನೆರವಾಗುತ್ತವೆ ಅನ್ನೋ ಸಂಗತಿ ನಿಮಗೆ ಗೊತ್ತಿದೆಯೇ ? ಹೌದು ಅದು ನಿಜ! ರಕ್ತವನ್ನ ತೆಳುವಾಗಿಸುವ (ಬ್ಲಡ್ ಥಿನ್ನಿನಿಂಗ್) ಅನೇಕ ಆಹಾರವಸ್ತುಗಳಿದ್ದು, ಇವು ರಕ್ತ ಹೆಪ್ಪುಗಟ್ಟುವ ಅಪಾಯವನ್ನ ತಗ್ಗಿಸುತ್ತವೆ.

ರಕ್ತವನ್ನ ತೆಳುವಾಗಿಸಬಲ್ಲ ಬಗೆಬಗೆಯ ನೈಸರ್ಗಿಕ ಆಹಾರವಸ್ತುಗಳ ಕುರಿತು ನಾವು ಮಾತನಾಡುವುದಕ್ಕೆ ಮೊದಲು, ರಕ್ತ ಹೆಪ್ಪುಗಟ್ಟೋದು ಅಂದರೇನು ಹಾಗೂ ಅದು ನಮ್ಮ ಶರೀರದ ಮೇಲೆ ಯಾವ ರೀತಿಯಲ್ಲಿ ಪರಿಣಾಮವನ್ನುಂಟು ಮಾಡುತ್ತದೆ ಅನ್ನೋದನ್ನ ತಿಳಿದುಕೊಳ್ಳುವುದು ಅತೀ ಮುಖ್ಯವಾಗುತ್ತದೆ.

ರಕ್ತ ಹೆಪ್ಪುಗಟ್ಟುವಿಕೆ ಅನ್ನೋದು ಸಹಜವಾದ ಆದರೆ ಅಷ್ಟೇ ಸಂಕೀರ್ಣವಾದ ಒಂದು ದೈಹಿಕ ಪ್ರಕ್ರಿಯೆ. ನಮ್ಮ ದೇಹಕ್ಕೆ ಗಾಯವಾದಾಗ ಅಥವಾ ದೇಹದ ಭಾಗವೊಂದು ಕತ್ತರಿಸಲ್ಪಟ್ಟಾಗ ಅತಿಯಾಗಿ ಸೋರಿಹೋಗದಂತೆ ರಕ್ತವು ನೈಸರ್ಗಿಕವಾಗಿಯೇ ಸ್ವಯಂ ಹೆಪ್ಪುಗಟ್ಟುತ್ತದೆ. ಇಂತಹ ಪ್ರಕರಣಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯು ಒಂದು ವರದಾನವೇ ಸರಿ..

ಆದರೆ, ಕೆಲವೊಮ್ಮೆ ರಕ್ತವು ಹೃದಯ, ಶ್ವಾಸಕೋಶ, ಅಥವಾ ಮೆದುಳಿನಂತಹ ಕೆಲವು ಪ್ರಮುಖ ಅಂಗಗಳಲ್ಲಿ ಹೆಪ್ಪುಗಟ್ಟುವುದುಂಟು. ಇದಂತೂ ತೀರಾ ಒಲ್ಲದ ಪ್ರಸಂಗವಾಗಿದ್ದು, ಕ್ಲಪ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ವ್ಯಕ್ತಿಯ ಜೀವಕ್ಕೇ ಸಂಚಕಾರ ಬಂದೀತು!! ಹೆಪ್ಪುಗಟ್ಟಿದ ರಕ್ತದ ಇಂತಹ ಉಂಡೆಗಳು (ಬ್ಲಡ್ ಕ್ಲಾಟ್ಸ್) ಅಭಿದಮನಿಗಳಲ್ಲಿ ಅಥವಾ ಅಪಧಮನಿಗಳಲ್ಲೂ (ರಕ್ತನಾಳಗಳು) ಉಂಟಾಗುವ ಸಾಧ್ಯತೆಗಳಿವೆ. ಹೆಪ್ಪುಗಟ್ಟಿದ ಇಂತಹ ರಕ್ತದುಂಡೆಗಳು ರಕ್ತನಾಳಗಳಲ್ಲಿ ರಕ್ತದ ಹರಿವಿಗೆ ತಡೆಯೊಡ್ಡಿ ಹೃದಯ, ಶ್ವಾಸಕೋಶಗಳು, ಅಥವಾ ಮೆದುಳಿನಂತಹ ಪ್ರಮುಖ ಅಂಗಾಂಗಗಳಿಗೆ ರಕ್ತದ ಪೂರೈಕೆಯನ್ನೇ ವ್ಯತ್ಯಯಗೊಳಿಸಿಬಿಡುತ್ತವೆ. ಹೀಗಾದಾಗ ವ್ಯಕ್ತಿಗೆ ಲಕ್ವಾ ಹೊಡೆಯುವ ಸಂಭವವಿರುತ್ತದೆ.

ರಕ್ತವು ಹೀಗೆ ಹೆಪ್ಪುಗಟ್ಟಿ ಉಂಡೆಗಳಾಗುವುದನ್ನು ತಪ್ಪಿಸಲು ಹಾಗೂ ಲಕ್ವಾ ಹೊಡೆಯುವ ಅಪಾಯವನ್ನ ತಗ್ಗಿಸಲು, ನಾವು ಈ ಕೆಳಗೆ ಸೂಚಿಸಿರುವ ಐದು ನೈಸರ್ಗಿಕ ರಕ್ತ ತೆಳುಕಾರಕಗಳು (ಬ್ಲಡ್ ಥಿನ್ನರ್ಸ್) ಬಲು ಪ್ರಯೋಜನಕಾರಿಯಾಗಿವೆ:

1. ಶುಂಠಿ

1. ಶುಂಠಿ

ನಿಮ್ಮ ಆಹಾರಪದ್ಧತಿಗೆ ಶುಂಠಿಯನ್ನ ಸೇರಿಸಿಕೊಳ್ಳುವ ಅತೀ ಸುಲಭೋಪಾಯ ಯಾವುದು ಗೊತ್ತೇ ? ಬೆಳಗಿನ ನಿಮ್ಮ ಚಹಾಪಾನದಲ್ಲಿ ಶುಂಠಿಯನ್ನ ಸೇರಿಸಿಕೊಂಡು ಸೊಗಸಾದ ಶುಂಠಿ ಚಹಾವನ್ನ ಹೀರೋದು!! ಶುಂಠಿ ಚಹಾವನ್ನ ಹೀರೋದು ಬಹು ಪ್ರಯೋಜನಕಾರಿಯಾಗಿದ್ದು, ಅನೇಕ ಬಗೆಯ ಆರೋಗ್ಯ ತೊಂದರೆಗಳನ್ನ ಅದು ಪರಿಹರಿಸುತ್ತದೆ ಅನ್ನೋದು ಸಂಶೋಧಕರ ಅಭಿಪ್ರಾಯ. ಇನ್ನು ರಕ್ತವನ್ನ ತೆಳ್ಳಗಾಗಿಸುವ ವಿಚಾರಕ್ಕೆ ಬರೋದಾದರೆ, ಶುಂಠಿಯು ಉರಿಯನ್ನ ಶಮನ ಮಾಡಿ ಸ್ನಾಯುಗಳನ್ನ ಇನ್ನಷ್ಟು ನಿರಾಳಗೊಳಿಸುತ್ತದೆ. "ಬಾಯಿಗೂ ರುಚಿ, ಹೊಟ್ಟೆಗೂ ಹಿತಕರ" ಆಗಿರೋ ಈ ಶುಂಠಿ ಚಹಾ ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲ ಒಳಿತನ್ನ ಮಾಡತ್ತೇಂತ ಎಷ್ಟು ಜನರಿಗೆ ಗೊತ್ತಿದೆ ಹೇಳಿ ?!!

2. ಕೆಂಪುಮೆಣಸು

2. ಕೆಂಪುಮೆಣಸು

ನಮ್ಮ ರಕ್ತವನ್ನ ತೆಳ್ಳಗಾಗಿಸುವ ಸಕಲ ಸದ್ಗುಣಗಳಿಂದ ಸಂಪನ್ನವಾಗಿದೆ ಕೆಂಪುಮೆಣಸು. ಇದಕ್ಕೆ ಕಾರಣ ಕೆಂಪುಮೆಣಸಿನಲ್ಲಿರುವ ಸೆಲಿಸೈಲೇಟ್ ಗಳು. ಇವು ಕೆಂಪುಮೆಣಸಿನಲ್ಲಿ ಹೇರಳವಾಗಿವೆ. ಕೆಂಪುಮೆಣಸನ್ನ ಕ್ಯಾಪ್ಸೂಲ್ ನ ರೂಪದಲ್ಲಿಯೋ ಅಥವಾ ಚಟ್ನಿ, ಸಾಂಬಾರ್ ನಂತಹ ಪದಾರ್ಥಗಳಲ್ಲೋ ಬಳಸಿಕೊಂಡು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. ಹೀಗೆ ಮಾಡಿದಲ್ಲಿ ಅದು ನಿಮ್ಮ ರಕ್ತದೊತ್ತಡವನ್ನ ತಗ್ಗಿಸಿ ರಕ್ತದ ಪರಿಚಲನೆಯನ್ನ ವೃದ್ಧಿಗೊಳಿಸುತ್ತದೆ.

3. ಸಾಲ್ಮನ್

3. ಸಾಲ್ಮನ್

ಸಾಲ್ಮನ್, ಟ್ಯೂನಾ, ಮತ್ತು ಟ್ರೌಟ್ ನಂತಹ ಮೀನುಗಳು ರಕ್ತವನ್ನ ತೆಳ್ಳಗಾಗಿಸುವ ವಿಚಾರದಲ್ಲಿ ಅತ್ಯುತ್ತಮ ಆಹಾರವಸ್ತುಗಳಾಗಿವೆ. ಇದಕ್ಕೆ ಕಾರಣ ಈ ಮೀನುಗಳಲ್ಲಿ ಒಮೇಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರೋದು. ಒಮೇಗಾ - 3 ಕೊಬ್ಬಿನಾಮ್ಲಗಳು ನಮ್ಮ ಶರೀರದ ಕೊಲೆಸ್ಟೆರಾಲ್ ಮಟ್ಟವನ್ನ ತಗ್ಗಿಸೋದರಲ್ಲಿ ಬಹಳ ಪ್ರಯೋಜನಕಾರಿಯಾಗಿವೆ. ಅದಕ್ಕಿಂತಲೂ ಮಿಗಿಲಾಗಿ, ರಕ್ತಪ್ರವಾಹದಲ್ಲಿ ರಕ್ತವು ಹೆಪ್ಪುಗಟ್ಟುವ ಸಾಧ್ಯತೆಯನ್ನ ಒಮೇಗಾ - 3 ಕೊಬ್ಬಿನಾಮ್ಲಗಳು ಗಣನೀಯವಾಗಿ ತಗ್ಗಿಸುತ್ತವೆ.

 4. ಕೆಂಪು ದ್ರಾಕ್ಷಾರಸ

4. ಕೆಂಪು ದ್ರಾಕ್ಷಾರಸ

ಪ್ರತೀ ದಿನ ಒಂದು ಗ್ಲಾಸ್ ನಷ್ಟು ಕೆಂಪು ದ್ರಾಕ್ಷಾರಸವನ್ನ ಕುಡಿಯೋದ್ರಿಂದ ಹೃದ್ರೋಗಗಳನ್ನ ತಡೆಗಟ್ಟಬಹುದು ಅಂತಾ ಅನೇಕ ತಜ್ಞರು ನಂಬುತ್ತಾರೆ. ಯಾಕಂದ್ರೆ, ರಕ್ತವನ್ನ ತೆಳುವಾಗಿಸೋ ಗುಣವನ್ನ ಹೊಂದಿದೆ ಕೆಂಪು ದ್ರಾಕ್ಷಾರಸ. ಹಾಗೆ ಮಾಡೋದರ ಮೂಲಕ ಅದು ರಕ್ತನಾಳಗಳಲ್ಲಿ ಅಡಚಣೆಗಳಾಗದಂತೆ ತಡೆಯುತ್ತೆ. ಹಾಂ! ಕೆಂಪು ದ್ರಾಕ್ಷಾರಸವನ್ನ ಹೀರ್ತಾ ಇದ್ರೆ ನೀವು ಲೋಕಾನೇ ಮರೆತುಬಿಡ್ತೀರಾ ಅಂತಾ ನಮ್ಗೂ ಗೊತ್ತು. ಅದಕ್ಕೇ ನಾವು ಎಚ್ಚರಿಸ್ತಾ ಇದ್ದೀವಿ ಕೇಳಿ, "ದಿನಕ್ಕೊಂದೇ ಗ್ಲಾಸು ವೈನ್ ಕುಡಿದ್ರೆ ಸಾಕು, ಜಾಸ್ತಿ ಬೇಡ!!".

English summary

Natural Blood Thinning Foods To Reduce Blood Clots

Here is information about natural blood thinning foods to reduce blood clots, read on....
X
Desktop Bottom Promotion