For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಈ ಸಮಯದಲ್ಲಿ ಬಿಪಿ ನಿಯಂತ್ರಣದಲ್ಲಿಡುವುದು ಹೇಗೆ?

|

ಕೊರೊನಾವೈರಸ್‌ ಯಾವಾಗ ಈ ಜಗತ್ತಿಗೆ ಬಂತೋ ಇಡೀ ಜಗತ್ತಿನ ಜನರ ಜೀವನವೇ ಬದಲಾಗಿದೆ. ಮಧುಮೇಹ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಸಮಸ್ಯೆ ಮತ್ತಷ್ಟು ಹೆಚ್ಚಾಗಿ. ಒಂದೆಡೆ ಕೊರೊನಾವೈರಸ್‌ ಕುರಿತು ಮುನ್ನೆಚ್ಚರಿಕೆವಹಿಸಬೇಕು, ಇದನ್ನು ಪ್ರತಿಯೊಬ್ಬರು ಮಾಡಲೇಬೇಕು.

ಆದರೆ ಇತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮೊದಲಿನಂತೆ ಚೆಕಪ್‌ಗೆ ಹೋಗುವಂತಿಲ್ಲ. ಹೋಗುವುದಾದರೆ ಕೊರೊನಾವೈರಸ್‌ ಟೆಸ್ಟ್ ಮಾಡಿಸಿಕೊಮಡು ಹೋಗಬೇಕು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ ವೈದ್ಯರು ಫೋನಿನ ಮುಖಾಂತರ ಕೆಲ ಸಲಹೆ ನೀಡುತ್ತಾರೆ, ಔಷಧಿಯನ್ನೂ ಸೂಚಿಸುತ್ತಾರೆ. ಆದರೆ ಸರಕಾರಿ ಆಸ್ಪತ್ರೆಗೆ ಹೋಗುವುದಾದರೆ ಅಲ್ಲಿ ಕೊರೊನಾ ಟೆಸ್ಟ್ ಮಾಡಿಸಲೇಬೇಕು. ಈ ಕಾರಣಕ್ಕಾಗಿ ಹೆಚ್ಚಿನವರು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದರೆ. ಆದರೆ ನಮ್ಮ ಆರೋಗ್ಯದ ಕಡೆ ಗಮನ ನೀಡುವುದು ಈ ಸಮಯದಲ್ಲಿ ಅವಶ್ಯಕವಾಗಿದೆ ಎಂಬುವುದು ಮರೆಯಬಾರದು, ಅದರಲ್ಲಿ ಅಧಿಕ ರಕ್ತದೊತ್ತಡ ಇರುವವರು ತುಂಬಾನೇ ಎಚ್ಚರವಹಿಸಬೇಕು.

ಅಂತರರಾಷ್ಟ್ರೀಯ ಜರ್ನಲ್ ಪ್ರಕಾರ(International Journal of Hypertension) ವಿಶ್ವದಲ್ಲಿ ಶೇ, 43ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿಯೂ ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. ರಕ್ತದೊತ್ತಡದ ಅಪಾಯ ಯಾರಲ್ಲಿ ಹೆಚ್ಚು, ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ.

ರಕ್ತದೊತ್ತಡಕ್ಕೆ ಕಾರಣಗಳು

ರಕ್ತದೊತ್ತಡಕ್ಕೆ ಕಾರಣಗಳು

 • ವಯಸ್ಸು
 • ಉಪ್ಪಿನಂಶ ಹೆಚ್ಚಾಗಿ ತಿನ್ನುವುದು
 • ಆರೋಗ್ಯಕರವಲ್ಲದ ಆಹಾರಕ್ರಮ
 • ಮಧುಮೇಹದ ಸಮಸ್ಯೆಯಿದ್ದರೆ
 • ಮದ್ಯಪಾನ, ತಂಬಾಕು ಸೇವನೆ
 • ಒತ್ತಡ
 • ಜೀವನಶೈಲಿಯಲ್ಲಾದ ಬದಲಾವಣೆ(ಅನಾರೋಗ್ಯಕರ)
 ರಕ್ತದೊತ್ತಡ ಸಮಸ್ಯೆ ಯಾರಿಗೆ ಅಧಿಕವಾಗುವುದು?

ರಕ್ತದೊತ್ತಡ ಸಮಸ್ಯೆ ಯಾರಿಗೆ ಅಧಿಕವಾಗುವುದು?

 • ಅನಾರೋಗ್ಯಕರ ಜೀವನಶೈಲಿ ಪಾಲಿಸಿದರೆ
 • ವ್ಯಾಯಾಮ ಮಾಡದೇ ಇರುವುದು
 • ಅನಾರೋಗ್ಯಕರ ಆಹಾರ ಸೇವನೆ
 • ತೂಕ ಹೆಚ್ಚಾಗುವುದು
 • ಔಷಧಿ ಸರಿಯಾಗಿ ತೆಗೆದುಕೊಳ್ಳದೇ ಇರುವುದು
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಏನು ಮಾಡಬೇಕು?

ರಕ್ತದೊತ್ತಡ ನಿಯಂತ್ರಣದಲ್ಲಿಡಲು ಏನು ಮಾಡಬೇಕು?

 • ದೈಹಿಕವಾಗಿ ಚಟುವಟಕೆಯಿಂದ ಇರಬೇಕು.
 • ತಿನ್ನುವಾಗ ಎಚ್ಚರಿಕೆವಹಿಸುವುದು (ಅಂದ್ರೆ ಮಿತ ಆಹಾರ ಸೇವನೆ ಮಾಡುವುದು)
 • ಮಧುಮೇಹವನ್ನು ನಿಯಂತ್ರಣದಲ್ಲಿಡುವುದು
 • ಔಷಧವನ್ನು ಸರಿಯಾಗಿ ತೆಗೆದುಕೊಳ್ಳುವುದು.
 • ವೈದ್ಯರ ಬಳಿ ಹೋಗಿ ನಿಯಮಿತ ಚೆಕಪ್ ಮಾಡಿಸುವುದು
ಅಧಿಕ ರಕ್ತದೊತ್ತಡ ಇರುವವರು ಇವುಗಳನ್ನೂ ಪಾಲಿಸುವುದು ಒಳ್ಳೆಯದು

ಅಧಿಕ ರಕ್ತದೊತ್ತಡ ಇರುವವರು ಇವುಗಳನ್ನೂ ಪಾಲಿಸುವುದು ಒಳ್ಳೆಯದು

 • ರಕ್ತದೊತ್ತಡ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಾತ್ರೆ ತಪ್ಪಿಸಬಾರದು.
 • ಸಾಧ್ಯವಾದರೆ ಮನೆಯಲ್ಲಿಯೇ ರಕ್ತದೊತ್ತಡ ಪರಿಶೀಲನೆ ಮಾಡುವುದು, ವೈದ್ಯರ ಸಲಹೆ ಇಲ್ಲದೆ ಔಷಧಿಯಲ್ಲಿ ಬದಲಾವಣೆ ಮಾಡಬಾರದು.
 • ದೇಹದಲ್ಲಿ ನೀರಿನಂಶ ಕಡಿಮೆಯಾದರೆ ರಕ್ತದೊತ್ತಡ ಕಡಿಮೆಯಾಗುವುದು, ಆದ್ದರಿಂದ ಪ್ರತಿದಿನ 8 ಲೋಟ ನೀರು ಸೇವಿಸಬೇಕು.
 • ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡಬೇಕು.
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ದಿನಚರಿ ಹೇಗಿರಬೇಕು?

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ದಿನಚರಿ ಹೇಗಿರಬೇಕು?

 • ನಿದ್ದೆ ಸರಿಯಾಗಿರಬೇಕು. ಅಲ್ಲದೆ ಆರೋಗ್ಯಕರ ಆಹಾರವನ್ನು ಹೊತ್ತಿಗೆ ಸರಿಯಾಗಿ ತೆಗೆದುಕೊಳ್ಖಬೇಕು.
 • ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಅವಶ್ಯಕ, ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ
 • ಆರೋಗ್ಯಕ್ಕೆ ಹಿತವಾದ ಆಹಾರ ಸೇವಿಸಿ (ಕಡಿಮೆ ಕೊಬ್ಬಿನಂಶವಿರುವ)
 • ಉಪ್ಪು ಕಡಿಮೆ ಸೇವಿಸಿ
 • ಚಟುವಟಿಕೆಯಿಂದ ಇರಿ.
 • ಮಾನಸಿಕ ಒತ್ತಡ ನಿಯಂತ್ರಿಸಿ
 • ಮದ್ಯಪಾನ ಕಡಿಮೆ ಸೇವಿಸಿ, ಸೇವಿಸದೇ ಇದ್ದರೆ ಒಳ್ಳೆಯದು.
 • ಧೂಮಪಾನ ಬಿಟ್ಟುಬಿಡಿ.
English summary

Managing Blood Pressure During the COVID-19 Pandemic

Here are managing blood pressure during the covid 19 Pandemic, read on...
X