For Quick Alerts
ALLOW NOTIFICATIONS  
For Daily Alerts

ಮೀನು ಸೇವಿಸಿದರೆ, ಹೃದಯಕ್ಕೆ ಒಳ್ಳೆಯದು ಅಲ್ಲದೆ ಹಲವಾರು ಕಾಯಿಲೆಗಳನ್ನೂ ನಿವಾರಿಸಬಹುದು

|

ಸಮುದ್ರದಲ್ಲಿ ಸಿಗುವಂತಹ ಹೆಚ್ಚಿನ ಮೀನು ಹಾಗೂ ಮೀನಿಗೆ ಜಾತಿಗೆ ಸೇರಿದ ಪ್ರತಿಯೊಂದನ್ನು ಮನುಷ್ಯ ಸೇವನೆ ಮಾಡುತ್ತಾನೆ. ಮಾಂಸಾಹಾರಿಗಳಿಗೆ ಹೆಚ್ಚು ಪ್ರಿಯವಾಗಿರುವ ಮೀನಿನಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಮೀನು ನಮಗೆ ತಕ್ಷಣ ಶಕ್ತಿ, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ, ಅಪಧಮನಿ ಆರೋಗ್ಯ ಸುಧಾರಣೆ, ಮಾನಸಿಕ ಆರೋಗ್ಯ ಸುಧಾರಣೆ, ಶ್ವಾಸಕೋಶದ ಆರೋಗ್ಯಕ್ಕೆ ಸಹಕಾರಿ, ನಿದ್ರಾಹೀನತೆ ತಡೆಯುವುದು, ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಹಾನಿಗೀಡಾಗಿರುವಂತಹ ತಲೆಬುರುಡೆಯನ್ನು ಸರಿಪಡಿಸುವುದು.

ಮೀನು ಸ್ನಾಯುಗಳನ್ನು ಬಲಪಡಿಸುವುದು, ದೇಹದಲ್ಲಿ ನೀರಿನಾಂಶವನ್ನು ನಿಯಂತ್ರಿಸುವುದು, ಕಬ್ಬಿನಾಂಶದ ಕೊರತೆ ನೀಗಿಸುವುದು, ಮೂಳೆಗಳಿಗೆ ನೆರವಾಗುವುದು ಮತ್ತು ದೇಹಕ್ಕೆ ವಿಟಮಿನ್ ಡಿ ಒದಗಿಸುವುದು. ಗ್ರಿಲ್, ಸ್ಟೀಮ್ ಅಥವಾ ಫ್ರೈ ಮಾಡಿರುವಂತಹ ಮೀನಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ.

ಆರೋಗ್ಯಕರ ಜೀವನ ಶೈಲಿಗೆ ಆಹಾರತಜ್ಞರು ಮೀನಿನ ಸೇವನೆ ಮಾಡಬೇಕೆಂದು ಸಲಹೆ ನೀಡುವರು. ನೀವು ಬೊಜ್ಜು ದೇಹ ಹೊಂದಿದ್ದು, ಕೊಬ್ಬನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಆಗ ನೀವು ಟ್ಯುನಾ, ಬಂಗುಡೆ ಮತ್ತು ಸಾಲ್ಮನ್ ಮೀನನ್ನು ದೈನಂದಿನ ಆಹಾರ ಕ್ರಮದಲ್ಲಿ ಸೇವನೆ ಮಾಡಬೇಕು. ಇದರಲ್ಲಿ ಹಲವಾರು ರೀತಿಯ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಇವೆ. ಇದು ದೀರ್ಘಕಾಲದ ಕಾಯಿಲೆಗಳಾಗಿರುವಂತಹ ಮಧುಮೇಹ, ಕೊಲೆಸ್ಟ್ರಾಲ್, ಅಸ್ತಮಾ ಮತ್ತು ಕಣ್ಣಿನ ವಿವಿಧ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಹೃದಯದ ಆರೋಗ್ಯ ಸುಧಾರಿಸುವುದು

ಹೃದಯದ ಆರೋಗ್ಯ ಸುಧಾರಿಸುವುದು

ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿರುವಂತಹ ಮೀನಿನ ಸೇವನೆ ಮಾಡಿದರೆ ಅದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ತಪ್ಪಿಸುವುದು. ಯಾವುದೇ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಿ ಹೃದಯದ ಆರೋಗ್ಯ ಕಾಪಾಡುವುದು. ಒಮೆಗಾ-3 ಕೊಬ್ಬಿನಾಮ್ಲವು ಸಂಕೋಚನಗೊಂಡಿರುವ ರಕ್ತನಾಳಗಳನ್ನು ಸರಿಪಡಿಸಿಕೊಂಡು ರಕ್ತಸಂಚಾರವು ಸರಿಯಾಗಿ ಆಗುವಂತೆ ಮಾಡುವುದು. ಇದರಿಂದ ಹೃದಯಕ್ಕೆ ರಕ್ತಸರಬರಾಜು ಸರಿಯಾಗಿ ಆಗಿ ಹೃದಯದ ಆರೋಗ್ಯ ಕಾಪಾಡಬಹುದು. ಅದರಲ್ಲೂ ಮೀನನ್ನು ದಿನಾಲೂ ಸೇವಿಸುವುದರಿಂದ ಮಾರಕ ಮತ್ತು ಪರಿಧಮನಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು. ಹೃದಯದ ಆರೋಗ್ಯಕ್ಕೆ ನೆರವಾಗುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಹೃದಯವನ್ನು ರಕ್ಷಿಸುವುದು.

Most Read:ವೃತ್ತಿ ಜೀವನದ ಯಶಸ್ಸನ್ನು ಸೂಚಿಸುವ ಅಂಗೈ ರೇಖೆಗಳು!- ನಿಮ್ಮದೂ ಪರಿಶೀಲಿಸಿಕೊಳ್ಳಿ

ಶ್ವಾಸಕೋಶದ ಆರೋಗ್ಯ

ಶ್ವಾಸಕೋಶದ ಆರೋಗ್ಯ

ಕಲುಷಿತ ವಾತಾವರಣದಿಂದಾಗಿ ಶ್ವಾಸಕೋಶಕ್ಕೆ ಕೆಲವು ಸಮಸ್ಯೆಗಳು ಕಾಡಬಹುದು. ಇದಕ್ಕಾಗಿ ನೀವು ಪೊಟಾಶಿಯಂ ಮತ್ತು ವಿಟಮಿನ್ ಬಿ ಅಧಿಕ ಇರುವಂತಹ ಆಹಾರ ಸೇವನೆ ಮಾಡಬೇಕು. ಇದರಿಂದ ಶ್ವಾಸಕೋಶಕ್ಕೆ ಬರುವಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಸಾಲ್ಮನ್ ಮತ್ತು ಟ್ಯುನಾ ಮೀನನ್ನು ಅಸ್ತಮಾ ರೋಗಿಗಳು ಸೇವನೆ ಮಾಡಬೇಕು ಎಂದು ಆಹಾರತಜ್ಞರು ಸಲಹೆ ನೀಡುತ್ತಾರೆ. ಕಫದಿಂದಾಗಿ ಎದೆಕಟ್ಟಿರುವುದನ್ನು ನಿವಾರಣೆ ಮಾಡುವ ಉರಿಯೂತ ಶಮನಕಾರಿ ಗುಣವು ಮೀನಿನಲ್ಲಿದೆ ಮತ್ತು ಇದು ಉಸಿರಾಟದ ಸಮಸ್ಯೆ ನಿವಾರಣೆ ಮಾಡುವುದು. ನಿಯಮಿತವಾಗಿ ಮೀನು ಸೇವನೆ ಮಾಡಿದರೆ ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ನಿವಾರಿಸಬಹುದು.

ನಿದ್ರಾಹೀನತೆ ನಿವಾರಣೆ

ನಿದ್ರಾಹೀನತೆ ನಿವಾರಣೆ

ನಿದ್ರಾಹೀನತೆಯಿಂದ ಬಳಲುವುದು ಕೇವಲ ಕಿರಿಕಿರಿ ಮಾತ್ರವಲ್ಲದೆ ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಪೋಷಕಾಂಶಗಳಾಗಿರುವ ವಿಟಮಿನ್ ಡಿ, ಪ್ರೋಟೀನ್, ಮೆಗ್ನಿಶಿಯಂ, ಮ್ಯಾಂಗನೀಸ್ ಇತ್ಯಾದಿಗಳು ಸುಖ ನಿದ್ರೆಗೆ ನೆರವಾಗುವುದು. ಈ ಪೋಷಕಾಂಶಗಳ ಕೊರತೆಯಿಂದಾಗಿ ನಿಮಗೆ ನಿದ್ರಾಹೀನತೆ ಕಾಡಬಹುದು. ಈ ಸಮಸ್ಯೆ ನಿವಾರಣೆ ಮಾಡಲು ರಾತ್ರಿ ಊಟಕ್ಕೆ ನೀವು ವಿವಿಧ ಬಗೆಯ ಮೀನುಗಳನ್ನು ಸೇವನೆ ಮಾಡಿದರೆ ಅದರಿಂದ ನಿದ್ರಾಹೀನತೆ ಸಮಸ್ಯೆಯು ದೂರವಾಗುವುದು.

ತಕ್ಷಣ ಶಕ್ತಿ ನೀಡುವುದು

ತಕ್ಷಣ ಶಕ್ತಿ ನೀಡುವುದು

ದೇಹವು ಶಕ್ತಿಯುತವಾಗಿರಲು ಉತ್ತಮ ಪ್ರಮಾಣದ ಪ್ರೋಟೀನ್ ದೇಹಕ್ಕೆ ಬೇಕಾಗುವುದು. ಮೀನಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಲಭ್ಯವಿರುವ ಕಾರಣದಿಂದಾಗಿ ಇದು ತಕ್ಷಣ ಶಕ್ತಿ ನೀಡುವುದು. ದೇಹಕ್ಕೆ ಬೇಕಾಗಿರುವ ಪೋಷಕಾಂಶವನ್ನು ನೀಡುವ ಕಾರಣದಿಂದಾಗಿ ಇದು ಸಮತೋಲಿತ ಶಕ್ತಿ ಮಟ್ಟವನ್ನು ಕಾಪಾಡುವುದು. ಪ್ರೋಟೀನ್ ದೇಹದಲ್ಲಿ ಹಾನಿಗೀಡಾಗಿರುವ ಕೋಶಗಳನ್ನು ಪುನಶ್ಚೇತನಗೊಳಿಸುವುದು. ಸಾಲ್ಮನ್ ಮೀನಿನ ಸೇವನೆ ಮಾಡಿದರೆ ದೇಹದಲ್ಲಿ ಹೆಚ್ಚಿನ ಶಕ್ತಿ ಪಡೆಯಬಹುದು.

ಕ್ಯಾಲರಿ ಕಡಿಮೆ ಇದೆ

ಕ್ಯಾಲರಿ ಕಡಿಮೆ ಇದೆ

ಕ್ಯಾಲರಿ ದಹಿಸುವುದಕ್ಕಿಂತ ಅದನ್ನು ಸೇವನೆ ಮಾಡುವುದು ತುಂಬಾ ಸುಲಭ. ಇದಕ್ಕಾಗಿ ನೀವು ಕಡಿಮೆ ಕ್ಯಾಲರಿ ಹೊಂದಿರುವ ಮೀನನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಗ್ರಿಲ್ ಮಾಡಿದ ಅಥವಾ ಸ್ಟೀಮ್ ಮಾಡಿದ ಮೀನಿನಲ್ಲಿ ತುಂಬಾ ಕಡಿಮೆ ಕೊಬ್ಬು ಇರುವ ಕಾರಣದಿಂದಾಗಿ ಇದು ಅಧಿಕ ತೂಕ ಹೊಂದಿರುವವರಿಗೆ ತುಂಬಾ ಪರಿಣಾಮಕಾರಿ. ಯಾವುದೇ ಆಲಿವ್ ತೈಲವನ್ನು ಬಳಸಿಕೊಂಡು ಮೀನಿನ ಖಾದ್ಯವನ್ನು ತಯಾರಿಸಿದರೆ ಅದರಿಂದ ನಿಮ್ಮ ದೇಹಕ್ಕೆ ಸಿಗುವಂತಹ ಪೋಷಕಾಂಶಗಳು ದ್ವಿಗುಣವಾಗುವುದು. ಇದು ಹೃದಯದ ಆರೋಗ್ಯ ಕಾಪಾಡುವುದು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ವೃದ್ಧಿಸುವುದು.

ಮಾನಸಿಕ ಆರೋಗ್ಯಕ್ಕೆ

ಮಾನಸಿಕ ಆರೋಗ್ಯಕ್ಕೆ

ಸಾಲ್ಮನ್ ಮತ್ತು ಬಂಗುಡೆ ಮೀನಿನ ಸೇವನೆಯಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಪೋಷಕಾಂಶ ತಜ್ಞರು ವಿವಿಧ ರೀತಿಯ ಮೀನನ್ನು ತಿನ್ನಬೇಕೆಂದು ಸಲಹೆ ಮಾಡುತ್ತಾರೆ. ಇದರಿಂದ ವಯಸ್ಸಿಗೆ ಸಂಬಂಧಿಸಿ ಬರುವಂತಹ ಅಲ್ಝೈಮರ್ ಕಾಯಿಲೆಯನ್ನು ತಡೆಯಬಹುದು. ವಾರದಲ್ಲಿ ಎರಡು ಸಲ ಮೀನಿನ ಊಟವನ್ನು ಮಾಡಿದರೆ ಅದರಿಂದ ನಿಮ್ಮ ಮೆದುಳು ಏಕಾಗ್ರತೆ ಮತ್ತು ಅರಿವಿನ ಕಾರ್ಯ ಸುಧಾರಣೆಯಾಗುವುದು. ಇದರ ಹೊರತಾಗಿ ಮೀನಿನಲ್ಲಿ ಪ್ರಮುಖವಾಗಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಖಿನ್ನತೆ, ಒತ್ತಡ ಮತ್ತು ಆತಂಕವನ್ನು ದೂರ ಮಾಡುವುದು.

ಕಾಂತಿಯುತ ತ್ವಚೆಗೆ

ಕಾಂತಿಯುತ ತ್ವಚೆಗೆ

ಆರೋಗ್ಯಕಾರಿ ಆಹಾರ ಸೇವನೆ ಮಾಡುವುದರಿಂದ ಯೌವನಯುತವಾಗಿರುವ ತ್ವಚೆಯು ನಿಮ್ಮದಾಗುವುದು. ನೀವು ಆಹಾರದಲ್ಲಿ ವಿವಿಧ ಮಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಸೇವನೆ ಮಾಡಬೇಕು. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲ, ಪ್ರೋಟೀನ್, ವಿಟಮಿನ್ ಎ ಮತ್ತು ವಿಟಮಿನ್ ಬಿ ಯು ನಿಮ್ಮ ತ್ವಚೆಗೆ ಕಾಂತಿ ನೀಡುವುದು. ಇವೆಲ್ಲವನ್ನು ನೀವು ಜತೆಯಾಗಿ ಸೇವನೆ ಮಾಡಿದಾಗ ಅದರಿಂದ ಚರ್ಮದ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗಿ, ಅಕಾಲಿಕ ವಯಸ್ಸಾಗುವ ಲಕ್ಷಣ ತಡೆಯುವುದು. ಸೋರಿಯಾಸಿಸ್ ನಂತಹ ಚರ್ಮದ ಸಮಸ್ಯೆಯನ್ನು ಮೀನಿನಲ್ಲಿರುವ ಅಂಶಗಳು ಸಮರ್ಥವಾಗಿ ನಿಭಾಯಿಸುವುದು.

Most Read:ಕಡಲೆಕಾಳಿನಲ್ಲಿದೆ ಲೆಕ್ಕಕ್ಕೂ ಸಿಗದಷ್ಟು ಆರೋಗ್ಯಕಾರಿ ಪ್ರಯೋಜನಗಳು

ಒಣ ಹಾಗೂ ಹಾನಿಗೀಡದ ತಲೆಬುರುಡೆ

ಒಣ ಹಾಗೂ ಹಾನಿಗೀಡದ ತಲೆಬುರುಡೆ

ಅನಾರೋಗ್ಯಕರ ತಲೆಬುರುಡೆಯು ಕೂದಲಿನ ಅಂಗಾಂಶಗಳಿಗೆ ಹಾನಿ ಉಂಟು ಮಾಡಬಹುದು ಮತ್ತು ಇದರಿಂದ ಕೂದಲು ಉದುರಬಹುದು. ಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವನ್ನು ಸೇವನೆ ಮಾಡುವ ಮೂಲಕ ನೀವು ಕೂದಲು ಉದುರುವುದನ್ನು ತಡೆಯಬಹುದು. ಮೀನಿನಲ್ಲಿ ಶಕ್ತಿಶಾಲಿ ಪ್ರೋಟೀನ್ ಕೂಡ ಇದ್ದು, ಎರಡನ್ನು ಜತೆಯಾಗಿ ಸೇವನೆ ಮಾಡಿದರೆ ಆಗ ಹಾನಿಗೀಡಾ ತಲೆಬುರುಡೆ ಸಮಸ್ಯೆ ಸುಧಾರಣೆ ಮಾಡುವುದು. ನಿಯಮಿತವಾಗಿ ಮೀನಿನ ಸೇವನೆ ಮಾಡಿದರೆ ಕೂದಲಿನ ಅಂಗಾಂಶಗಳು ಮರಳಿ, ಕೂದಲಿನ ಬೆಳವಣಿಗೆಗೆ ಕಾರಣವಾಗುವುದು.

ಬಲಶಾಲಿ ಸ್ನಾಯುಗಳಿಗಾಗಿ

ಬಲಶಾಲಿ ಸ್ನಾಯುಗಳಿಗಾಗಿ

ಆಹಾರ ತಜ್ಞರು ಸಾಲ್ಮನ್ ಮೀನಿನಲ್ಲಿರುವ ಪೊಟಾಶಿಯಂ ಅಂಶದಿಂದಾಗಿ ಅದನ್ನು ಸಲಹೆ ಮಾಡುತ್ತಾರೆ. ಪೊಟಾಶಿಯಂ ದೇಹದ ಸ್ನಾಯುಗಳನ್ನು ಬಲಗೊಳಿಸುವುದು. ನೀವು ಗ್ರಿಲ್ ಮಾಡಿರುವ ಸಾಲ್ಮನ್ ಅಥವಾ ಬಂಗುಡೆ ಮೀನನ್ನು ಇತರ ಕೆಲವೊಂದು ಪೋಷಕಾಂಶಗಳಿರುವ ಆಹಾರಗಳಾದ ಕಿಡ್ನಿ ಬೀನ್ಸ್ ಜತೆ ಸೇವಿಸಬಹುದು. ಇದು ಸ್ನಾಯುಗಳ ಸ್ಥಿತಿ ಸುಧಾರಿಸುವುದು.

ದ್ರವ ನಿಯಂತ್ರಣಕ್ಕೆ

ದ್ರವ ನಿಯಂತ್ರಣಕ್ಕೆ

ದೇಹದಲ್ಲಿ ದ್ರವಗಳು ಸರಿಯಾಗಿರಲು ಮೆಗ್ನಿಶಿಯಂ ಬೇಕಾಗುವುದು. ಮೆಗ್ನಿಶಿಯಂ ಸಪ್ಲಿಮೆಂಟ್ ಸೇವನೆ ಮಾಡುವ ಬದಲು ಆಹಾರ ಕ್ರಮದಲ್ಲಿ ಮೀನನ್ನು ಸೇರಿಸಿಕೊಳ್ಳಬೇಕು. ಗ್ರಿಲ್ ಮಾಡಿರುವ ಮೀನು ದೇಹದಲ್ಲಿ ದ್ರವವನ್ನು ನಿಯಂತ್ರಿಸುವುದು.

ಕಬ್ಬಿನಾಂಶ ಕೊರತೆ ನೀಗಿಸುವುದು

ಕಬ್ಬಿನಾಂಶ ಕೊರತೆ ನೀಗಿಸುವುದು

ಕೆಂಪುರಕ್ತದ ಕಣಗಳು ಸರಿಯಾದ ಪ್ರಮಾಣದಲ್ಲಿ ಇಲ್ಲದೆ ಇರುವಾಗ ಕಬ್ಬಿನಾಂಶದ ಕೊರತೆ ಕಾಣಿಸುವುದು. ಕಬ್ಬಿನಾಂಶದ ಕೊರತೆ ಇರುವಂತಹ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಮೀನಿನ ಸೇವನೆ ಮಾಡಬೇಕು ಎಂದು ಪೋಷಕಾಂಶತಜ್ಞರು ಸಲಹೆ ಮಾಡುವರು. ಟ್ಯುನಾ ಮತ್ತು ಸಾಲ್ಮನ್ ಮೀನನ್ನು ಆಹಾರ ಕ್ರಮದಲ್ಲಿ ಸೇರಿಸುವುದರಿಂದ ರಕ್ತಸಂಚಾರವು ಸುಗಮವಾಗಲು ನೆರವಾಗುವುದು ಮತ್ತು ನಿಶ್ಯಕ್ತಿ ಮತ್ತು ರಕ್ತಹೀನತೆ ನಿವಾರಿಸುವುದು.

Most Read:ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!

ಮೂಳೆಗಳು ಬಲಗೊಳ್ಳಲು

ಮೂಳೆಗಳು ಬಲಗೊಳ್ಳಲು

ಮೂಳೆಗಳಿಗೆ ಬೇಕಾಗಿರುವಂತಹ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೀನಿನಲ್ಲಿದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದಾಗಿ ಅಸ್ಥಿರಂಧ್ರತೆ, ಮುರಿತ ಇತ್ಯಾದಿಗಳು ಕಾಡುವುದು. ಮೂಳೆಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹಾಲಿನ ಉತ್ಪನ್ನಗಳನ್ನು ಹೊರತುಪಡಿಸಿ, ಮೀನು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ.

ಮಧುಮೇಹ ತಗ್ಗಿಸುವುದು

ಮಧುಮೇಹ ತಗ್ಗಿಸುವುದು

ಅಧ್ಯಯನವೊಂದರ ಪ್ರಕಾರ ಕೆಲವೊಂದು ಅಟೋಇಮ್ಯೂನ್ ಕಾಯಿಲೆಗಳಾದ ಟೈಪ್ 1 ಮಧುಮೇಹವನ್ನು ಮೀನು ತಗ್ಗಿಸುವುದು. ಮೀನಿನಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಡಿ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಗ್ಲೂಕೋಸ್ ಚಯಾಪಚಾಯಕ್ಕೆ ನೆರವಾಗುವುದು.

ಋತುಚಕ್ರದ ಸಮಸ್ಯೆ ನಿವಾರಣೆ

ಋತುಚಕ್ರದ ಸಮಸ್ಯೆ ನಿವಾರಣೆ

ಮಹಿಳೆಯರಲ್ಲಿ ಋತುಚಕ್ರದ ಮೊದಲು ಕಾಣಿಸಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳನ್ನು ಮೀನಿನಲ್ಲಿರುವ ಅಂಶಗಳು ಪರಿಹರಿಸುವುದು. ಋತುಚಕ್ರದ ಮೊದಲು ಸಮಸ್ಯೆ ಕಾಣಿಸಿಕೊಳ್ಳುವ ಮಹಿಳೆಯರು ನಿಯಮಿತವಾಗಿ ಮೀನಿನ ಸೇವನೆ ಮಾಡಿದರೆ ಸಮಸ್ಯೆ ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳಿವೆ. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಸಮಸ್ಯೆಯು ಮರಕಳಿಸದಂತೆ ತಡೆಯುವುದು.

Most Read:ನೀವು ಅರಿಯದೇ ಇರುವ ಹಣಗಳಿಕೆಯ 7 ಸೂತ್ರಗಳು ಇಲ್ಲಿದೆ ನೋಡಿ

ಕೊನೆಯ ಮಾತು

ಕೊನೆಯ ಮಾತು

ಯಾವುದೇ ರೀತಿಯ ಮೀನು ದೇಹದ ಆರೋಗ್ಯಕ್ಕೆ ಕಾರಣವಾಗುವುದು ಎಂದು ಮೇಲಿನ ಆರೋಗ್ಯ ಲಾಭಗಳು ಸಾಕ್ಷಿಯಾಗಿದೆ. ಉತ್ತಮ ಆರೋಗ್ಯಕ್ಕಾಗಿ ನೀವು ವಾರದಲ್ಲಿ ಎರಡು ಸಲ ಮೀನು ಸೇವನೆ ಮಾಡಬೇಕು.

English summary

How eating fish helps your heart and other diseases

Fish health benefits includes providing instant energy, regulating cholesterol levels, improving cardiovascular health, supporting psychological health, supporting respiratory health, treating insomnia, enhancing the skin and treating damaged scalp. Other benefits includes promoting strong muscles, regulating body fluid, treating iron deficiency, supporting strong bones and supplying the body with vitamin D.
X
Desktop Bottom Promotion