For Quick Alerts
ALLOW NOTIFICATIONS  
For Daily Alerts

ನಿತ್ಯ ಅರ್ಧ ಗಂಟೆ 'ಚುರುಕು ನಡಿಗೆ' ಹೃದಯಕ್ಕೆ ಒಳ್ಳೆಯ ವ್ಯಾಯಮ

By Hemanth
|

ಹಿಂದೆ ಯಾವುದೇ ರೀತಿಯ ವಾಹನಗಳು ಇಲ್ಲದೆ ಇರುವಂತಹ ಸಮಯದಲ್ಲಿ ಜನರು ನಡೆದುಕೊಂಡೇ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸುತ್ತಿದ್ದರು. ಹೀಗೆ ಪ್ರತಿಯೊಂದು ಕಡೆಯೂ ನಡೆದುಕೊಂಡೇ ಹೋದ ಕಾರಣ ಅವರ ಆರೋಗ್ಯವು ಚೆನ್ನಾಗಿರುತ್ತಿತ್ತು. ನಡೆಯುವುದರಿಂದ ನಮ್ಮ ಆರೋಗ್ಯವು ಒಳ್ಳೆಯದಾಗಿರುವುದು ಎಂದು ಹಲವಾರು ಅಧ್ಯಯನಗಳು ಕೂಡ ಹೇಳಿವೆ. ನಡೆಯುವುದರಿಂದ ನಮ್ಮ ದೇಹದ ಅಂಗಾಂಗಳಿಗೆ ವ್ಯಾಯಾಮ ಸಿಗುವುದು. ಇದು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಅತ್ಯಂತ ಸರಳ ವಿಧಾನ.

ಹೃದಯದ ಆರೋಗ್ಯಕ್ಕೆ- ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ

ಯಾವುದೇ ದೈಹಿಕ ಚಟುವಟಿಕೆ ನಡೆಸಿದರೂ ಅದು ಹೃದಯದ ಬಡಿತ ಹೆಚ್ಚು ಮಾಡಿ ಹೃದಯ ಬಲಗೊಳಿಸುವುದು, ಮಾತ್ರವಲ್ಲದೆ ದೇಹವಿಡಿ ರಕ್ತಸಂಚಾರ ಉತ್ತಮಪಡಿಸುವುದು. ಇದರಿಂದ ಅಂಗಾಂಗಗಳಿಗೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳು ಲಭ್ಯವಾಗುವುದು. ವ್ಯಾಯಾಮದಿಂದ ಶ್ವಾಸಕೋಶದ ಆಮ್ಲಜನಕ ಪಡೆಯುವ ಸಾಮರ್ಥ್ಯ ಹೆಚ್ಚಿಸುವುದು, ರಕ್ತದೊತ್ತಡ ಕಡಿಮೆ ಮಾಡಿ, ದೇಹದಲ್ಲಿನ ಕೊಬ್ಬು ಕರಗಿಸುವುದು, ರಕ್ತದಲ್ಲಿ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟ ಸುಧಾರಣೆಯಾಗುವುದು.

ಹೃದಯದ ಆರೋಗ್ಯ: ಸೇವಿಸುವ ಆಹಾರಗಳ ಬಗ್ಗೆ ಇರಲಿ ಎಚ್ಚರ!

ಆದರೆ ವ್ಯಾಯಾಮ ಮಾಡುವ ಮೊದಲು ನಿಮಗೆ ಯಾವುದೇ ರೀತಿಯ ಹೃದಯದ ಸಮಸ್ಯೆಯಿಲ್ಲವೆಂದು ಪರೀಕ್ಷಿಸಿಕೊಳ್ಳಬೇಕು. ಹೃದಯದ ಸಮಸ್ಯೆಯಿದ್ದರೆ ವಾರದಲ್ಲಿ ಎರಡುವರೆ ಗಂಟೆಗಳ ಕಾಲ ನಡೆಯಲು ಸೂಚಿಸಬಹುದು. ಆಗ ನೀವು ಪ್ರತೀ ದಿನ 30 ನಿಮಿಷ ಕಾಲ ವಾರದಲ್ಲಿ ಐದು ದಿನ ನಡೆಯಬೇಕು. ನಡೆಯುವುದರಿಂದ ನಿಮ್ಮ ಹೃದಯಕ್ಕೆ ಸಿಗುವಂತಹ ಹಲವಾರು ರೀತಿಯ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ಓದುತ್ತಾ ಸಾಗಿ....

ನಡೆಯುವುದು ಓಟದಷ್ಟೇ ಉತ್ತಮ

ನಡೆಯುವುದು ಓಟದಷ್ಟೇ ಉತ್ತಮ

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ನಡೆಯುವುದರಿಂದ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡುವುದು. 30 ನಿಮಿಷ ಕಾಲ ನಡೆದರೆ ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರುವುದು.

ನಡೆಯುವುದರಿಂದ ಹೃದಯ ಬಲಿಷ್ಠ

ನಡೆಯುವುದರಿಂದ ಹೃದಯ ಬಲಿಷ್ಠ

ನಡೆಯುವುದು ಒಂದು ಒಳ್ಳೆಯ ಹೃದಯದ ವ್ಯಾಯಾಮ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು. ಇದು ನಡೆಯುವುದರಿಂದ ಹೃದಯಕ್ಕೆ ಆಗುವ ಪ್ರಮುಖ ಲಾಭವಾಗಿದೆ.

ನಡೆಯುವುದು ಒಳ್ಳೆಯ ಔಷಧಿ

ನಡೆಯುವುದು ಒಳ್ಳೆಯ ಔಷಧಿ

ಪ್ರತಿನಿತ್ಯ 30 ನಿಮಿಷ ಕಾಲ ನಡೆಯುವುದರಿಂದ ಪರಿಧಮನಿಯ ಹೃದಯರೋಗದ ಅಪಾಯ ಶೇ.18ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ. ವಾರದಲ್ಲಿ ಮೂರು ಗಂಟೆಗಳ ಕಾಲ ನಡೆಯಲು ಸೂಚಿಸಿದ ವ್ಯಕ್ತಿಯಲ್ಲಿ ಹೃದಯಾಘಾತ ಮತ್ತು ಅದರಿಂದ ಸಂಭವಿಸುವ ಸಾವಿನ ಅಪಾಯವು ಶೇ.30ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.

ನಡೆಯುವುದರಿಂದ ಶಕ್ತಿ ಹೆಚ್ಚಳ

ನಡೆಯುವುದರಿಂದ ಶಕ್ತಿ ಹೆಚ್ಚಳ

ನಡೆಯುವುದರಿಂದ ರಕ್ತ ಸರಬರಾಜು ಹೆಚ್ಚಾಗುವುದು ಮತ್ತು ದೇಹದ ಪ್ರತಿಯೊಂದು ಕೋಶಗಳಿಗೆ ಆಮ್ಲಜನಕವು ಸಿಗುವುದು. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನಡೆಯುವುದರಿಂದ ಮನಸ್ಸು ಶಾಂತವಾಗುವುದು

ನಡೆಯುವುದರಿಂದ ಮನಸ್ಸು ಶಾಂತವಾಗುವುದು

ಆತಂಕ ಹಾಗೂ ಹೃದಯದ ಕಾಯಿಲೆಯು ಒಂದಕ್ಕೊಂದು ಸಂಬಂಧ ಹೊಂದಿದೆ. ಆತಂಕದಿಂದ ಹೃದಯದ ಮೇಲಿನ ಪರಿಣಾಮದಿಂದ ಹೃದಯಾತಿಸ್ಪಂದನ ಉಂಟಾಗಬಹುದು. ರಕ್ತದೊತ್ತಡ ಹೆಚ್ಚಬಹುದು ಮತ್ತು ಹೃದಯ ಏರಿಳಿತ ಹೆಚ್ಚಾಗಬಹುದು.

English summary

World Heart Day: How Walking Helps To Keep Your Heart Healthy

Walking is an automatic human function that serves many practical roles. It is a form of aerobic exercise and is one of easist ways to increase your physical activity. Any kind of a physical activity increases your heart rate, strengthens your heart, increases blood circulation throughout the body, bringing more oxygen and nutrients to your organs. Exercise also increases your lung's ability to take in the oxygen, lowers blood pressure levels, helps reduce body fat, improves blood sugar and cholesterol levels.
X
Desktop Bottom Promotion