ಎದೆಬಡಿತ ಕಡಿಮೆ ಇರುವ ಪುರುಷ ಮಹಿಳೆಯರನ್ನು ಗೇಲಿ ಮಾಡುತ್ತಾನಂತೆ!

By: Hemanth
Subscribe to Boldsky

ಮಹಿಳೆಯರನ್ನು ನೋಡಿದರೆ ಛೇಡಿಸುವಂತಹ ಪುರುಷರು ಪ್ರತಿಯೊಂದು ಕಡೆಯಲ್ಲೂ ಇರುತ್ತಾರೆ. ಅವರ ನಡವಳಿಕೆ ನೋಡಿ ನಮಗೆ ತುಂಬಾ ಹೇಸಿಗೆಯಾಗುವುದು. ಆದರೆ ಅವರು ಇದನ್ನು ಮುಂದುವರಿಸುತ್ತಲೇ ಇರುತ್ತಾರೆ. ಆದರೆ ಪುರುಷರು ಹೀಗೆ ಮಾಡಲು ಬೇರೆಯದೇ ಆದ ಕಾರಣವಿದೆ. ಅದೇನೆಂದರೆ ಕಡಿಮೆ ಹೃದಯಬಡಿತವಿರುವ ಪುರುಷರು ಮಹಿಳೆಯರನ್ನು ಛೇಡಿಸುವವರು (ಗೇಲಿ ಮಾಡು) ಮತ್ತು ಇತರ ಕೆಲವು ಸಮಾಜಘಾತುಕ ಕೆಲಸಗಳಲ್ಲಿ ಕೂಡ ತೊಡಗಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

ಪುರುಷನೊಬ್ಬನ ಹೃದಯ ಬಡಿತವು ಪ್ರಮಾಣಿತ ವಿಚಲನೆಗಿಂತ ಕಡಿಮೆ ಅಥವಾ ತುಂಬಾ ಕೆಳಗಿದ್ದರೆ ಅಂತಹವರು ಮಹಿಳೆಯರನ್ನು ಛೇಡಿಸುವ ಸಾಧ್ಯತೆಯು ಇತರ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ಇರುತ್ತದೆ. ಹೃದಯ ಬಡಿತ ಕಡಿಮೆ ಇರುವಂತಹವರಲ್ಲಿ ಮಹಿಳೆಯರನ್ನು ಛೇಡಿಸುವ ನಡವಳಿಕೆಯು ಗಮನೀಯವಾಗಿ ಹೆಚ್ಚಿರುತ್ತದೆ. 

ಹೃದಯ ರೋಗದ ಲಕ್ಷಣಗಳಿವು...ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಪ್ರಚೋದನೆಯ ಸಿದ್ಧಾಂತದ ಪ್ರಕಾರ ಪ್ರಚೋದನೆಯ ಮಟ್ಟ ತುಂಬಾ ಕಡಿಮೆ ಇರುವ ವ್ಯಕ್ತಿಗಳಲ್ಲಿ ಭೀತಿ ಕಡಿಮೆ ಮತ್ತು ಬಲಿಪಶುಗಳನ್ನು ಉತ್ತೇಜಿಸುವಂತಹ ಅವಕಾಶಗಳಿಗಾಗಿ ಕಾಯುತ್ತಾ ಇರುತ್ತಾರೆ. ಇಂತಹವರು ತಮ್ಮ ಸ್ಪೋಟಕ ನಡವಳಿಕೆ ತೋರಿಸಿಕೊಡುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

Heart

ಲೈಂಗಿಕತೆಗೆ ಸಂಬಂಧಿಸಿದಂತೆ ಆಕ್ರಮಣಶೀಲತೆ ಮತ್ತು ಸಮಾಜಬಾಹಿರ ಚಟುವಟಿಕೆಗಳಿಗೆ ಹೃದಯ ಬಡಿತ ಕಡಿಮೆ ಇರುವುದು ಪ್ರಭಾವ ಬೀರುತ್ತದೆ ಎಂದು ನಮ್ಮ ಅಧ್ಯಯನಗಳಿಂದ ತಿಳಿದುಬಂದಿದೆ.

ಈ ನಡವಳಿಕೆಗಳು ಲೈಂಗಿಕತೆ ಅಥವಾ ಮಹಿಳೆಯರನ್ನು ಛೇಡಿಸುವ ವಿಷಯಗಳಿಗೆ ಸಂಬಂಧಿದ್ದು ಆಗಿರಬಹುದು ಎಂದು ಅಮೆರಿಕಾದ ಟೆಕ್ಸಾಸ್ ನ ಸ್ಯಾಮ್ ಹೌಸ್ಟೊನ್ ಸ್ಟೇಟ್ ಯೂನಿವರ್ಸಿಟಿಯ ಡೇನಿಯಲ್ಲೆ ಬೊಯಿಸ್ವೆರ್ಟ್ ತಿಳಿಸಿದರು. ಛೇಡಿಸುವುದು ಆಕ್ರಮಣಶೀಲತೆ ಮತ್ತು ಹಿಂಸಾಪ್ರವೃತಿಗೆ ಕಾರಣವಾಗಿದೆ. ಇದು ಒಬ್ಬ ವ್ಯಕ್ತಿಯ ಮೇಲೆ ಮತ್ತೊಬ್ಬ ವ್ಯಕ್ತಿ ಅಥವಾ ಒಂದು ಗುಂಪು ಮಾಡುವಂತಹ ಕೃತ್ಯವಾಗಿದೆ.

ಇದು ಬಲಿಪಶುಗಳ ಮೇಲೆ ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮ ಉಂಟು ಮಾಡುತ್ತದೆ. ಲೈಂಗಿಕತೆಗೆ ಸಂಬಂಧಿಸಿದಂತೆ ಹೃದಯದ ಬಡಿತ ಕಡಿಮೆ ಇರುವಂತಹ ಪುರುಷರಲ್ಲಿ ಮಾತ್ರ ಮಹಿಳೆಯರನ್ನು ಛೇಡಿಸುವಂತಹ ಗುಣಗಳು ಕಂಡುಬರುತ್ತದೆ. ಆದರೆ ಮಹಿಳೆಯರಲ್ಲಿ ಇದು ಕಂಡುಬರುವುದಿಲ್ಲ ಎಂದು ಅಧ್ಯಯನಗಳು ಹೇಳಿರುವುದಾಗಿ ಜರ್ನಲ್ ಆಫ್ ಇಂಟರ್ ಪರ್ಸನಲ್ ವೈಯಲೆನ್ಸ್ ನಲ್ಲಿ ಪ್ರಕಟಗೊಂಡಿದೆ.

Heart

ಅಮೆರಿಕಾದಲ್ಲಿರುವ ಹೃದಯ ಅಸೋಸಿಯೇಶನ್ ನ ಪ್ರಕಾರ ಸಾಮಾನ್ಯ ವ್ಯಕ್ತಿಯೊಬ್ಬನ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 60 ರಿಂದ 100 ಸಲ ಬಡಿಯುತ್ತಿರಬೇಕು. ಆದರೆ ಸಾಮಾನ್ಯ ವ್ಯಕ್ತಿಯಲ್ಲಿ ಪ್ರತೀ ನಿಮಿಷಕ್ಕೆ 60ಕ್ಕಿಂತ ಕಡಿಮೆ ಬಡಿತವಿದ್ದರೆ ಅದನ್ನು ಬ್ರಾಡಿಕಾರ್ಡಿಯಾ ಎಂದು ಕರೆಯಲಾಗುತ್ತದೆ. ದೈಹಿಕವಾಗಿ ತುಂಬಾ ಕೆಲಸ ಮಾಡುವ ಮತ್ತು ಅಥ್ಲೆಟಿಕ್‌ಗಳಲ್ಲಿ 60ಕ್ಕಿಂತ ಕಡಿಮೆ ಹೃದಯಬಡಿತವು ಇರುತ್ತದೆ.

ಹೃದಯದ ಆರೋಗ್ಯ: ಸೇವಿಸುವ ಆಹಾರಗಳ ಬಗ್ಗೆ ಇರಲಿ ಎಚ್ಚರ!

ಆದರೆ ಇದರಿಂದ ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ಅವರಿಗೆ ಇದು ಸಾಮಾನ್ಯ. ಅಧ್ಯಯನಕ್ಕಾಗಿ ಸುಮಾರು 384 ಕಾಲೇಜು ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. 32(15 ಮಹಿಳೆಯರು ಮತ್ತು 17 ಪುರುಷರು) ಛೇಡಿಸುವ ನಡವಳಿಕೆ ಹೊಂದಿದ್ದರು. ಮಹಿಳೆಯರ ಬೆನ್ನು ಹತ್ತುವುದು, ಅವರನ್ನು ನೋಡುವುದು ಮತ್ತು ಅವರ ಮೇಲೆ ಗಮನವಿಡುವುದು ಪ್ರಮುಖ ನಡವಳಿಕೆಗಳಾಗಿವೆ ಎಂದು ಅಧ್ಯಯನವು ಹೇಳಿದೆ.

English summary

Men With Low Heart Rate More Likely To Stalk Women

Men with low resting heart rate were at significantly greater risk of engaging in a variety of anti-social behaviours such as stalking, according to a study. The results revealed that men whose heart rate was one standard deviation below the mean or lower had nearly three times the odds of having engaged in stalking as compared with all other participants, suggesting that low resting heart rate is associated with increased prevalence of stalking behaviour.
Subscribe Newsletter