For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು-ಚೆನ್ನಾಗಿ ಟೊಮೆಟೋ ಸೇವಿಸಿ!

By Hemanth
|

ತರಕಾರಿಯಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡು ಪ್ರತಿಯೊಂದು ಅಡುಗೆ ಮನೆಯಲ್ಲೂ ಕಾಣಿಸಿಕೊಳ್ಳುವ ಟೊಮೆಟೊವು ಹಲವಾರು ರೀತಿಯ ಖಾದ್ಯಗಳಲ್ಲಿ ಬಳಸಲ್ಪಡುತ್ತದೆ. ತುಂಬಾ ಕಡು ಬಣ್ಣ ಹಾಗೂ ಸ್ವಲ್ಪ ಹುಳಿ ರುಚಿ ಹೊಂದಿರುವಂತಹ ಟೊಮೆಟೊವನ್ನು ಕೆಲವರು ಇಷ್ಟಪಡುವುದಿಲ್ಲ. ಆದರೆ ಭಾರತೀಯ ಅಡುಗೆ ಮನೆಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಟೊಮೆಟೊ ಆಹಾರಕ್ಕೆ ವಿಶೇಷ ಸ್ವಾದ ಹಾಗೂ ರುಚಿ ನೀಡುವುದು.

tomatoes

ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಕೆಲವರು ಟೊಮೆಟೋ ಇಲ್ಲದೆ ಯಾವುದೇ ಅಡುಗೆ ಮಾಡಲ್ಲ. ರಕ್ತದೊತ್ತಡದ ನಿಯಂತ್ರಣ ಮತ್ತು ಹೃದಯವನ್ನು ಆರೋಗ್ಯವಾಗಿಡುವಲ್ಲಿ ಟೊಮೆಟೊ ಪ್ರಮುಖ ಪಾತ್ರ ನಿರ್ವಹಿಸುವುದು. ಅಧಿಕ ರಕ್ತದೊತ್ತಡವು ಹೃದಯರಕ್ತನಾಳದ ಕಾಯಿಲೆ ಮತ್ತು ಮರಣ ಪರಿಚಿತ ಅಪಾಯದ ಅಂಶವಾಗಿದೆ.

ದಿನನಿತ್ಯ ಒಂದೆರಡು ಟೊಮೆಟೊ ಸೇವಿಸಿ-ವೈದ್ಯರಿಂದ ದೂರವಿರಿ...

ನಿಮ್ಮ ಆಹಾರ ಕ್ರಮದಲ್ಲಿ ಟೊಮೆಟೊ ಸೇರಿಸಿಕೊಳ್ಳುವುದರಿಂದ ಹೃದಯವನ್ನು ಆರೋಗ್ಯವಾಗಿಡ ಬಹುದು ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು. ಹಲವಾರು ಅಧ್ಯಯನಗಳಿಂದಲೂ ಇದು ಸಾಬೀತಾಗಿದೆ. ಇದು ಆರೋಗ್ಯಕ್ಕೆ ಎಷ್ಟು ಲಾಭ ಉಂಟು ಮಾಡಲಿದೆ ಎಂದು ನೀವು ತಿಳಿದುಕೊಳ್ಳಿ.

ಇದು ಹೇಗೆ ನೆರವಾಗುವುದು?
ಟೊಮೆಟೊದಲ್ಲಿ ತುಂಬಾ ಪ್ರಬಲವಾಗಿರುವ ಆ್ಯಂಟಿಆಕ್ಸಿಡೆಂಟ್ ಗಳಾದ ಲೈಕೋಪೀನ್ ಮತ್ತು ಬೀಟಾ ಕ್ಯಾರೋಟಿನ್ ಗಳಂತಹ ಕ್ಯಾರೋಟಿನ್ ಗಳಿಂದ ಸಮೃದ್ಧವಾಗಿದೆ. ಇನ್ನು ಆಹಾರ ಕ್ರಮದಲ್ಲಿ ಟೊಮೆಟೊ ಹೆಚ್ಚಾಗಿ ಸೇವನೆ ಮಾಡುವುದರಿಂದ ಫ್ರೀ ರ್ಯಾಡಿಕಲ್ ನ್ನು ನಿಷ್ಕ್ರೀಯಗೊಳಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುವುದು.

ಇದು ಅಪಧಮನಿಯ ಕಾಠಿಣ್ಯ ಪ್ರಗತಿಯನ್ನು ನಿಧಾನಗೊಳಿಸುವುದು ಮಾತ್ರವಲ್ಲದೆ ಒಕ್ಸಾಡೇಟಿವ್ ಒತ್ತಡ ಕಡಿಮೆ ಮಾಡಿ ರಕ್ತದೊತ್ತಡ ನಿರ್ವಹಿಸಲು ನೆರವಾಗುವುದು. ಇದರಲ್ಲಿ ವಿಟಮಿನ್ ಇ ಲಭ್ಯವಿದೆ. ಇದು ಆ್ಯಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುವುದು. ಪೊಟಾಶಿಯಂ ದೇಹದಲ್ಲಿ ದ್ರವ ವಿದ್ಯುದ್ವಿಚ್ಚೇದ ಸಮತೋಲನ ಕಾಪಾಡುವುದು ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವುದು.

ಒಂದು ಚಮಚ 'ಟೊಮೆಟೊ ಕೆಚಪ್‌‌ನ ಕಾರು ಬಾರು ನೋಡಿದರೆ ಅಚ್ಚರಿ ಪಡುವಿರಿ!!

ಅಧಿಕ ರಕ್ತದೊತ್ತಡದ ಸಮಸ್ಯೆಯಿದ್ದರೆ ಟೊಮೆಟೊ ಸೇವನೆ ಹೆಚ್ಚು ಮಾಡಿ. ಸಂಧಿವಾತ ಇರುವಂತಹ ರೋಗಿಗಳು ಟೊಮೆಟೊ ಸೇವನೆ ಕಡಿಮೆ ಮಾಡಬೇಕು. ಇದರಿಂದ ಸಮಸ್ಯೆ ಹೆಚ್ಚಾಗಬಹುದು.

ಟೊಮೆಟೋವನ್ನು ಸಲಾಡ್ ರೂಪದಲ್ಲಿ ಹಸಿಯಾಗಿಯೇ ತಿನ್ನಬಹುದು ಅಥವಾ ಬೇರೆ ತರಕಾರಿ ಜತೆಗೆ ಜ್ಯೂಸ್ ಮಾಡಿ ಕುಡಿಯಬಹುದು. ಟೊಮೆಟೋವನ್ನು ಸೂಪ್, ರಸಂ ಅಥವಾ ಚಟ್ನಿಯಾಗಿ ಬಳಸಿಕೊಳ್ಳಬಹುದು.

English summary

Include tomatoes in your diet to control hypertension

Do you like tomatoes? This tangy, red coloured fruit is packed with health benefits. A must-have in Indian cuisine, tomatoes give a unique flavour and taste to the recipe. But what is of more significance is that tomatoes can help you keep your blood pressure in control and help your heart to stay healthy. Hypertension is a known risk factor for cardiovascular morbidity and mortality and including tomatoes in your diet might help you to cut down on the risk a little. And the same has been proven by various research studies.
Story first published: Tuesday, September 19, 2017, 20:01 [IST]
X
Desktop Bottom Promotion