For Quick Alerts
ALLOW NOTIFICATIONS  
For Daily Alerts

ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ

By Manu
|

ಹೃದಯಾಘಾತ ಸಹಿತ ಹಲವು ಪ್ರಾಣಾಂತಿಕ ಕಾಯಿಲೆಗಳಿಗೆ ಅಧಿಕ ರಕ್ತದೊತ್ತಡವೇ ಪ್ರಮುಖ ಕಾರಣ. ಅಷ್ಟೇ ಅಲ್ಲ, ಮಾನಸಿಕ ಆರೋಗ್ಯ ಚಿಂತನೆಯ ಕ್ಷಮತೆ ಉಡುಗುವುದು, ಮೂತ್ರಪಿಂಡಗಳ ವೈಫಲ್ಯ ಮೊದಲಾದವುಗಳಿಗೂ ಅಧಿಕ ರಕ್ತದೊತ್ತಡ ಕಾರಣವಾಗಬಲ್ಲುದು. ಅಧಿಕ ರಕ್ತದೊತ್ತಡ ಇದೆ ಎಂದಾಕ್ಷಣ ಹೆಚ್ಚಿನವರು ಭಯಭೀತರಾಗಿ ವೈದ್ಯರು ನೀಡುವ ಗುಳಿಗೆಗಳ ಮೊರೆ ಹೋಗುತ್ತಾರೆ. ಆದರೆ ಈ ಗುಳಿಗೆಗಳು ರಕ್ತದೊತ್ತಡವನ್ನು ಕಡಿಮೆಗೊಳಿಸಿದರೂ ಕೆಲವು ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಬಿಪಿಯನ್ನು ನಿಯಂತ್ರಿಸಲು, ಸೌತೆ-ಬೆಳ್ಳುಳ್ಳಿಯ ಸಲಾಡ್!

ಈ ಅಡ್ಡಪರಿಣಾಮಗಳಲ್ಲಿ ಪ್ರಮುಖವಾದವು ಎಂದರೆ ನಿದ್ರಾರಾಹಿತ್ಯ, ನರಗಳ ಮತ್ತು ಸ್ನಾಯುಗಳ ಪೆಡಸು, ದಿನದ ಹೊತ್ತಿನಲ್ಲಿ ತಲೆ ತಿರುಗುವುದು ಇತ್ಯಾದಿ. ಅಧಿಕ ರಕ್ತದೊತ್ತಡವಿದ್ದಾಗ ಸುಮ್ಮನೇ ಅತ್ತಿಂದಿತ್ತ ನಡೆದಾಡಿದರೆ ಇದು ಕೊಂಚ ಮಟ್ಟಿಗೆ ಇಳಿಯಲು ಸಹಕಾರಿಯಾಗಿದೆ. ಇದರಿಂದ ಉಸಿರಾಟವ ಕೊಂಚ ಹೆಚ್ಚುವ ಮೂಲಕ ಹೆಚ್ಚು ಆಮ್ಲಜನಕ ದೊರೆತು ರಕ್ತದ ಒತ್ತಡ ಕಡಿಮೆಯಾಗಲು ಸಾಧ್ಯವಾಗುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ

ಇದರೊಂದಿಗೆ ಉಸಿರಾಟವನ್ನು ಸುಗಮಗೊಳಿಸುವ ಯೋಗಾಸನಗಳು, ತಾಯ್ ಛಿ, ಕ್ವಿಗಾಂಗ್ ಮೊದಲಾದ ವ್ಯಾಯಾಮಗಳನ್ನೂ ಅನುಸರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು. ಇದರೊಂದಿಗೆ ಪೊಟ್ಯಾಶಿಯಂ, ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕವೂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಈ ಆಹಾರಗಳು ಯಾವುವು? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಇವುಗಳಲ್ಲಿ ಪ್ರಮುಖವಾದ ಏಳು ಆಹಾರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ.... ಎಚ್ಚರ: ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಕಿವಿಹಣ್ಣು

ಕಿವಿಹಣ್ಣು

ಆಸ್ಟ್ರೇಲಿಯಾ ಮೂಲಕ ಈ ಹುಳಿಮಿಶ್ರಿತ ಸಿಹಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಖನಿಜಗಳಿವೆ. ಒಂದು ಹಣ್ಣನ್ನು ತಿನ್ನುವ ಮೂಲಕ ದಿನದ ಅಗತ್ಯದ 9% ರಷ್ಟು ಪೊಟ್ಯಾಷಿಯಂ, 7% ಮೆಗ್ನೇಶಿಯಂ ಹಾಗೂ 2% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಒಂದು ಕಪ್ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಸೇವಿಸಿದರೆ ಇದರಿಂದ ದಿನದ ಅಗತ್ಯವಿರುವ ಪ್ರಮಾಣದ 20% ಪೊಟ್ಯಾಶಿಯಂ, 10% ಮೆಗ್ನೀಶಿಯಂ ಮತ್ತು 1% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ಕೇಲ್ ಎಲೆಗಳು

ಕೇಲ್ ಎಲೆಗಳು

ಒಂದು ಕಪ್ ಹಸಿ ಎಲೆಗಳನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 9% ಪೊಟ್ಯಾಶಿಯಂ, 6% ಮೆಗ್ನೀಶಿಯಂ ಮತ್ತು 9% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ಪೀಚ್ ಹಣ್ಣುಗಳು

ಪೀಚ್ ಹಣ್ಣುಗಳು

ಮಧ್ಯಮಗಾತ್ರದ ಒಂದು ಪೀಚ್ ಹಣ್ಣನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 8% ಪೊಟ್ಯಾಶಿಯಂ, 3% ಮೆಗ್ನೀಶಿಯಂ ಮತ್ತು 1% ಕ್ಯಾಲ್ಸಿಯಂ ಲಭ್ಯವಾಗುತ್ತದೆ

ಬಾಳೆಹಣ್ಣು

ಬಾಳೆಹಣ್ಣು

ಒಂದು ಬಾಳೆಹಣ್ಣನ್ನು ಯನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 12% ಪೊಟ್ಯಾಶಿಯಂ, 8% ಮೆಗ್ನೀಶಿಯಂ ಮತ್ತು 1% ಕ್ಯಾಲ್ಸಿಯಂ ಲಭ್ಯವಾಗುತ್ತದೆ

ಬ್ರೋಕೋಲಿ

ಬ್ರೋಕೋಲಿ

ಒಂದು ಕಪ್ ಬ್ರೋಕೋಲಿಯನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 14% ಪೊಟ್ಯಾಶಿಯಂ, 8% ಮೆಗ್ನೀಶಿಯಂ ಮತ್ತು 6% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ದೊಣ್ಣೆಮೆಣಸು

ದೊಣ್ಣೆಮೆಣಸು

ಒಂದು ಕಪ್ ದೊಣ್ಣೆಮೆಣಸಿನ ತುಂಡುಗಳಲ್ಲಿ ದಿನಕ್ಕೆ ಅಗತ್ಯವಿರುವ ಪ್ರಮಾಣದ 9% ಪೊಟ್ಯಾಶಿಯಂ 4% ಮೆಗ್ನೇಶಿಯಂ ಹಾಗೂ 1% ರಷ್ಟು ಕ್ಯಾಲ್ಸಿಯಂ ಇದೆ.

English summary

7 Powerful Foods That Reduce BP

High blood pressure is a passive killer as it worsens many other health conditions. In fact, it can also worsen stroke, cognitive decline, kidney failure and heart attack. Though many people prefer medication, over use may cause certain side effects like insomnia, dizziness and cramps. Studies show that those who go for walks can lower their blood pressure up to an extent. Here are some of those foods.
X
Desktop Bottom Promotion