For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ರೋಗವನ್ನು ನಿರ್ಣಯಿಸುವ 11 ಅಂಶಗಳು

|

ಕ್ಯಾನ್ಸರ್ ಎನ್ನುವುದು ರೋಗಗಳ ಚಕ್ರವರ್ತಿಯೆಂದೆ ಕರೆಯಬಹುದು. ಸಂಶೋಧನೆಗಳು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಆದ ನಂತರವು ಕ್ಯಾನ್ಸರ್ ಎನ್ನುವುದು ಮಹಾಮಾರಿಯಾಗಿಯೇ ನಿಂತಿದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಅದಕ್ಕೆ ಇರಬಹುದು, ಜನರು ಕ್ಯಾನ್ಸರ್ ಎಂದರೆ ಭಯಪಡುತ್ತಾರೆ.

ಜೀವನ ಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು

ಒಂದು ವೇಳೆ ನಿಮಗೆ ಕ್ಯಾನ್ಸರ್ ಬರುತ್ತದೆ ಎಂಬ ಸೂಚನೆಗಳು ದೊರೆತರೆ, ಖಂಡಿತ ನಿಮಗೂ ಭಯವಾಗಬಹುದು. ಆದರೆ ಇದರ ಇನ್ನೊಂದು ಆಯಾಮವನ್ನು ನೋಡಿ, ಈ ಸೂಚನೆಗಳು ನಿಮಗೆ ಕ್ಯಾನ್ಸರ್ ಬರುತ್ತದೆಯೆಂದು ಸೂಚಿಸುತ್ತವೆಯೇ ಹೊರತು, ಬಂದು ಬಿಟ್ಟಿತೆಂದು ಅಲ್ಲ. ಬರುವ ಮೊದಲು ಅದಕ್ಕೆ ಅಗತ್ಯ ಚಿಕಿತ್ಸೆಗಳನ್ನು ಪಡೆಯಿರಿ ಎಂದು ಇವು ಸೂಚಿಸುತ್ತವೆ.

ನಿಮಗೆ ಇತ್ತೀಚೆಗೆ ನಟಿ ಏಂಜೆಲಿನಾ ಜೂಲಿ ತನ್ನನ್ನು ತಾನು ಸ್ತನ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ತನ್ನ ಎರಡು ಸ್ತನಗಳನ್ನು ಛೇದಿಸಿಕೊಂಡ ಪ್ರಕರಣ ನಮಗೆಲ್ಲ ಗೊತ್ತು. ಕಾರಣ ಏಂಜೆಲಿನಾ ಜೂಲಿ ಮತ್ತು ಆಕೆಯ ಚಿಕ್ಕಮ್ಮ ಇಬ್ಬರಿಗೂ ಸ್ತನ ಕ್ಯಾನ್ಸರ್ ಇತ್ತು. ಈಕೆಗೆ ಸ್ತನ ಕ್ಯಾನ್ಸರ್ ಬರುವ ಸಂಭವ ಅಧಿಕವಿತ್ತು ಅದಕ್ಕಾಗಿ ಮುಂಜಾಗರೂಕತೆಯ ಕ್ರಮವಾಗಿ ಈಕೆ ತನ್ನ ಸ್ತನಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆಸಿದಳು. ನಮ್ಮ ದೇಹಗಳಲ್ಲಿ ಸಾಮಾನ್ಯವಾಗಿ ಕ್ಯಾನ್ಸರ್‍‌ಕಾರಕ ಕೋಶಗಳು ಇರುತ್ತವೆ.

ಯಾವಾಗ ಈ ಕೋಶಗಳು ಯದ್ವಾ ತದ್ವಾ ಬೆಳೆಯಲು ಆರಂಭಿಸುತ್ತವೋ, ಆಗ ನಮಗೆ ಕ್ಯಾನ್ಸರ್ ಬರುತ್ತದೆ. ಒಮ್ಮೊಮ್ಮೆ ಈ ಕ್ಯಾನ್ಸರ್‌ಕಾರಕ ಕೋಶಗಳು ಕ್ಷಿಪ್ರವಾಗಿ ಉಲ್ಬಣಗೊಳ್ಳಲು ತೊಡಗುತ್ತವೆ, ಅವುಗಳ ನಿಯಂತ್ರಣ ಅಸಾಧ್ಯ ಎನ್ನುವ ಮಟ್ಟಕ್ಕೆ ಇವು ತಲುಪುತ್ತವೆ. ಆಗ ನಾವು ಕ್ಯಾನ್ಸರ್‌ಗೆ ತುತ್ತಾಗುತ್ತೇವೆ. ಇನ್ನೂ ಕೆಲವೊಮ್ಮೆ ನಮ್ಮ ವಂಶವಾಹಿಗಳು ನಮಗೆ ಕ್ಯಾನ್ಸರ್ ಬರುವ ಸುಳಿವನ್ನು ನೀಡುತ್ತವೆ. ಒಂದು ಡಿಎನ್‍ಎ ಪರೀಕ್ಷೆಯ ಮೂಲಕ ಇದನ್ನು ಖಾತ್ರಿಪಡಿಸಿಕೊಳ್ಳಬಹುದು. ಕ್ಯಾನ್ಸರ್ ನಿಮಗೆ ಬರುವ ಸುಳಿವನ್ನು ನೀಡುವ ಈ ಸೂಚನೆಗಳನ್ನು ಓದಿ ತಿಳಿದುಕೊಳ್ಳಿ.

ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಅನುವಂಶೀಯತೆ

ಅನುವಂಶೀಯತೆ

ಸಂಶೋಧನೆಗಳ ಪ್ರಕಾರ ದೃಢಪಟ್ಟ ವಿಚಾರವೆಂದರೆ, ಕ್ಯಾನ್ಸರ್ ಒಂದು ಅನುವಂಶೀಯ ರೋಗ. ಕುಂಟುಂಬದಲ್ಲಿ ಹಲವು ಬಗೆಯ ಕ್ಯಾನ್ಸರ್‌ಗಳನ್ನು ನಾವು ಪತ್ತೆ ಹಚ್ಚಬಹುದು. ಸ್ತನ ಕ್ಯಾನ್ಸರ್ ಅನುವಂಶೀಯವಾಗಿ ಕಂಡು ಬರುವ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಒಂದು ವೇಳೆ ನಿಮ್ಮ ತಾಯಿ, ಅಜ್ಜಿ, ಚಿಕ್ಕಮ್ಮ ಅಥವಾ ದೊಡ್ಡಮ್ಮನಿಗೆ ಸ್ತನ ಕ್ಯಾನ್ಸರ್ ಇದ್ದರೆ, ನಿಮಗೂ ಸಹ ಅದು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ತೂಕ ಕಡಿಮೆಯಾಗುವುದು

ತೂಕ ಕಡಿಮೆಯಾಗುವುದು

ಯಾವುದೇ ಡಯಟ್ ಅಥವಾ ವ್ಯಾಯಾಮವಿಲ್ಲದೆ ನಿಮ್ಮ ತೂಕವು ಕಡಿಮೆಯಾಗುತ್ತ ಹೋದರೆ ಸ್ವಲ್ಪ ಹುಷಾರಾಗಿರಿ, ಬಹುಶಃ ನಿಮ್ಮ ದೇಹದಲ್ಲಿ ಯಾವುದೋ ಕ್ಯಾನ್ಸರ್ ಬೆಳವಣಿಗೆಯಾಗುತ್ತಿರಬಹುದು.

ಧೂಮಪಾನ

ಧೂಮಪಾನ

ಧೂಮಪಾನಿಗಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಧೂಮಪಾನಿಗಳಲ್ಲದವರಿಗಿಂತ ಹೆಚ್ಚು. ಧೂಮಪಾನಿಗಳಿಗೆ ಗಂಟಲು, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ.

ವಿಕಿರಣಗಳಿಗೆ ತುತ್ತಾದರೆ

ವಿಕಿರಣಗಳಿಗೆ ತುತ್ತಾದರೆ

ಒಂದು ವೇಳೆ ನೀವು ಕೆಲಸ ಮಾಡುವ ಸ್ಥಳದಲ್ಲಿ ವಿಕಿರಣಗಳು ನಿಮಗೆ ನಿರಂತರವಾಗಿ ತಾಕುತ್ತಿದ್ದರೆ, ಖಂಡಿತ ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ: ಇಡೀ ದಿನ ಎಕ್ಸ್-ರೇ ಯಂತ್ರದ ಬಳಿ ಕೆಲಸ ಮಾಡುವ ರೇಡಿಯೋಲಜಿಸ್ಟ್‌ಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಲೋಹಗಳ ಒಡನಾಟ

ಲೋಹಗಳ ಒಡನಾಟ

ಒಂದು ವೇಳೆ ನೀವು ಲೋಹಗಳ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಅಥವಾ ಅಂತಹ ಪರಿಸರದಲ್ಲಿ ವಾಸಿಸುತ್ತಿದ್ದಲ್ಲಿ, ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಕಲ್ನಾರು ಮುಂತಾದ ಕಾರ್ಖಾನೆಗಳ ಬಳಿ ವಾಸ ಮಾಡುವವರಲ್ಲಿ ಚರ್ಮ, ಶ್ವಾಸಕೋಶದ ಕ್ಯಾನ್ಸರ್‌ನಂತಹವು ಕಂಡು ಬರುವುದು ಸಾಮಾನ್ಯ.

ಮಾಂಸ ಸೇವನೆ

ಮಾಂಸ ಸೇವನೆ

ಅರೆ!! ಎನ್ನಬೇಡಿ, ಮಾಂಸಹಾರಿಗಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾ ಹೆಚ್ಚು. ಕಾರಣ ಅವರು ಸೇವಿಸುವ ಮಾಂಸವು ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಚೆನ್ನಾಗಿ ಬೆಳೆಸುತ್ತವೆ, ಹಾಗಾಗಿ.

ಡಯಟ್

ಡಯಟ್

ಒಂದು ವೇಳೆ ನೀವು ಸಕ್ಕರೆ, ಮತ್ತು ಇನ್ನಿತರ ಕ್ಯಾನ್ಸರ್ ಉಲ್ಬಣ ಮಾಡುವ ಆಹಾರಗಳನ್ನು ಹೆಚ್ಚಿಗೆ ಸೇವಿಸಿದಲ್ಲಿ, ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆಯು ಹೆಚ್ಚಾಗುತ್ತದೆ. ಹಾಗಾಗಿ ಆರೋಗ್ಯಕಾರಿಯಾಗಿರುವ ಮತ್ತು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರವನ್ನು ಸೇವಿಸುವ ಮೂಲಕ ಕ್ಯಾನ್ಸರ್ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

ಶಸ್ತ್ರ ಚಿಕಿತ್ಸೆಗಳು

ಶಸ್ತ್ರ ಚಿಕಿತ್ಸೆಗಳು

ಶಸ್ತ್ರ ಚಿಕಿತ್ಸೆ ಮಾಡುವಾಗ ಕತ್ತರಿಸಿದ ಗಾಯಗಳ ಬಳಿಯಲ್ಲಿ ಬೆಳೆಯುವ ಕೋಶಗಳು ಕ್ಯಾನ್ಸರ್ ತರುವ ಅಪಾಯವಿರುತ್ತವೆ. ಅದರಲ್ಲೂ ಹೆಚ್ಚು -ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಜನರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯು ಸಹ ಹೆಚ್ಚಾಗಿಯೇ ಇರುತ್ತದೆ.

ಮುಟ್ಟು ನಿಲ್ಲುವ ಅವಧಿಯ ಆರಂಭದಲ್ಲಿ

ಮುಟ್ಟು ನಿಲ್ಲುವ ಅವಧಿಯ ಆರಂಭದಲ್ಲಿ

ಒಂದು ವೇಳೆ ನೀವು ಮುಟ್ಟು ನಿಲ್ಲುವ ಅವಧಿಯ ಆರಂಭದಲ್ಲಿ ಇದ್ದಾಗ ಅಂದರೆ 30 ರಿಂದ 40 ವರ್ಷದ ಅವಧಿಯ ನಡುವೆ ಇದ್ದಾಗ, ನೀವು ಖಂಡಿತ ಕ್ಯಾನ್ಸ‍ರ್‌ನ ಅಪಾಯಕ್ಕೆ ಒಳಗಾಗುತ್ತೀರಿ. ಮುಟ್ಟು ನಿಲ್ಲುವ ಅವಧಿಯು ಮಹಿಳೆಯರ ದೇಹದಲ್ಲಿ ಹಾರ್ಮೋನಿನ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಮುಂದೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಪುನಃ ಬಿಸಿ ಮಾಡಿದ ತಿಂಡಿಗಳು

ಪುನಃ ಬಿಸಿ ಮಾಡಿದ ತಿಂಡಿಗಳು

ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದ ಅಂಶವೆಂದರೆ, ಫ್ರಿಡ್ಜ್‌ನಲ್ಲಿಟ್ಟು ಹಲವಾರು ಬಾರಿ ತೆಗೆದು ಪುನಃ ಪುನಃ ಬಿಸಿ ಮಾಡಿದ ಆಹಾರವನ್ನು ಸೇವಿಸುವುದರಿಂದ ಜಠರದ ಕ್ಯಾನ್ಸರ್ ಬರುತ್ತದೆಯಂತೆ. ಅದೇ ಈ ಅಧ್ಯಯನದ ಉಪಸಂಹಾರವಲ್ಲ. ಅತಿ ಹೆಚ್ಚಾಗಿ ಮೈಕ್ರೋ ವೇವ್ ಓವನ್ ಮೇಲೆ ಅವಲಂಬಿತರಾಗುವುದು ಸಹ ಕ್ಷೇಮವಲ್ಲ.

ಗರ್ಭನಿರೋಧಕಗಳು

ಗರ್ಭನಿರೋಧಕಗಳು

ಒರಲ್ ಕಾಂಟ್ರಾಸ್ಪೆಕ್ಟೀವ್ (Oral contraceptives) - ಮಹಿಳೆಯರಲ್ಲಿ ಲಿವರ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನ್ನು ಉಂಟುಮಾಡುವ ಸಾಧ್ಯತೆಗಳು ಹೆಚ್ಚು. Oral contraceptives ಈಸ್ಟ್ರೋಜನ್ ಮತ್ತು ಪ್ರೊಜೆಸ್ಟನ್ ನ ಸಂಯೋಜನೆಯಾಗಿದ್ದು ಒವ್ಯೂಲೇಶನ್ (ovulation) ನ್ನು ತಡೆಯುತದೆ.

English summary

11 Warning Signs You May Get Cancer

Cancer is a disease that has been referred to as the emperor of maladies. This is because even after extensive research and advancement, cancer is still a fatal disease; it is not completely curable. We all have cancer cells in our body. These are some of the signs that you may be prone to developing cancer. 
X
Desktop Bottom Promotion