For Quick Alerts
ALLOW NOTIFICATIONS  
For Daily Alerts

ಕಿಡ್ನಿ ಸಮಸ್ಯೆಯಿದ್ದರೆ ದಾಳಿಂಬೆ ಜ್ಯೂಸ್ ಕುಡಿಯಿರಿ

By Super
|
Pomegranate for Kidney Disease Patients
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ದಾಳಿಂಬೆ ಜ್ಯೂಸ್ ನಿಂದ ದೇಹದಲ್ಲಿನ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸಬಹುದು ಎಂದು ತಿಳಿಸಿಕೊಟ್ಟಿದೆ.

ದಾಳಿಂಬೆ ಜ್ಯೂಸ್ ನಲ್ಲಿ ದೇಹಕ್ಕೆ ಅತ್ಯವಶ್ಯಕವಾದ ಆಂಟಿಯಾಕ್ಸಿಡಂಟ್ ಇರುವುದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚು ಆರೋಗ್ಯವನ್ನು ನೀಡುತ್ತದೆ ಎನ್ನಲಾಗಿದೆ.

ಇಸ್ರೇಲ್ ನ ವೆಸ್ಟರ್ನ್ ಮೆಡಿಕಲ್ ಸೆಂಟರ್ ನಡೆಸಿದ ಸಂಶೋಧನೆಯಿಂದ ಈ ಅಂಶ ತಿಳಿದುಬಂದಿದೆ. ಕಿಡ್ನಿ ಸಮಸ್ಯೆಯ ರೋಗಿಗಳಲ್ಲಿ ಹೃದಯದ ತೊಂದರೆಗೆ ಎಡೆಮಾಡಿಕೊಡುವ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಂಶದ ಮೇಲೆ ದಾಳಿಂಬೆ ಜ್ಯೂಸ್ ಸೇವನೆ ಯಾವ ರೀತಿ ದೀರ್ಘಕಾಲಿಕ ಪರಿಣಾಮ ಬೀರುತ್ತದೆ ಎಂಬುದಾಗಿ ಸಂಶೊಧನೆ ನಡೆಸಿದಾಗ ಈ ಫಲಿತಾಂಶ ದೊರೆತಿದೆ.

ಸಂಶೋಧನೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 101 ರೋಗಿಗಳನ್ನು ಒಳಪಡಿಸಿ, ವಾರದಲ್ಲಿ ಮೂರು ಬಾರಿ 3 1/2 ಔನ್ಸ್ ದಾಳಿಂಬೆ ಜ್ಯೂಸ್ ಸೇವಿಸಲು ಹೇಳಲಾಯಿತು.

ಒಂದು ವರ್ಷದ ನಂತರ ಸಂಶೋಧನೆಗೆ ಒಳಪಡಿಸಿದ ರೋಗಿಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದಾಗಿ ಸಂಶೋಧನೆ ತಿಳಿಸಿದೆ. ಅಷ್ಟೇ ಅಲ್ಲ, ದಾಳಿಂಬೆ ಜ್ಯೂಸ್ ಸೇವನೆಯಿಂದ ರೋಗಿಗಳಲ್ಲಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಆರೋಗ್ಯಕರವಾಗಿದ್ದು, ಹೃದಯಕ್ಕೆ ರಕ್ತ ಸಂಚಲನ ಮಾಡುವ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ತಡೆದು ಹೃದಯ ಸ್ತಂಭನವಾಗುವ ಸಾಧ್ಯತೆಯನ್ನೂ ನಿವಾರಿಸಿರುವುದಾಗಿ ಕಂಡುಬಂದಿದೆ.

English summary

Pomegranate Juice Health Benefits | Pomegranate for Kidney Disease Patients | ದಾಳಿಂಬೆ ಜ್ಯೂಸ್ ಆರೋಗ್ಯಕರ ಉಪಯೋಗ | ಕಿಡ್ನಿ ಸಮಸ್ಯೆಯ ರೋಗಿಗಳಿಗೆ ದಾಳಿಂಬೆ ಜ್ಯೂಸ್

A new study suggest that drinking pomegranate juice can be more benefit to kidney disease patients. The anti oxidants in pomegranate help to control high blood pressure and cholesterol level.
X
Desktop Bottom Promotion