For Quick Alerts
ALLOW NOTIFICATIONS  
For Daily Alerts

ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?

|

ನೀವು ಹಾಗೂ ನಿಮ್ಮ ಗಂಡ ಇಬ್ಬರು ತೂಕ ಕಳೆದುಕೊಳ್ಳಬೇಕೆಂದು ಒಟ್ಟಿಗೆ ನಿರ್ಧರಿಸಿ ಒಂದೇ ರೀತಿಯ ಡಯಟ್‌, ವಾಕ್‌, ವ್ಯಾಯಾಮ ಎಲ್ಲಾ ಮಾಡುತ್ತೀರಿ, ನೋಡು-ನೋಡುತ್ತಿದ್ದಂತೆ ನಿಮ್ಮ ಗಂಡ ನಿಮಗಿಂತ ಬೇಗ ಸಣ್ಣಗಾಗುತ್ತಿರುತ್ತಾರೆ, ಅರೇ.... ನಾವಿಬ್ಬರು ಒಂದೇ ರೀತಿಯ ಡಯಟ್‌ ಮಾಡುತ್ತೇವೆ, ಒಂದೇ ರೀತಿಯ ವ್ಯಾಯಾಮ ಮಾಡುತ್ತೇವೆ, ಮತ್ಯಾಕೆ ನಾನು ಮಾತ್ರ ಅವರಷ್ಟು ಬೇಗ ಸಣ್ಣಗಾಗುತ್ತಿಲ್ಲ ಎಂದು ನಿಮಗನಿಸಿದೆಯೇ?

weight loss

ನಿಮಗೆ ಗೊತ್ತಾ ಮಹಿಳೆಯರಿಗೆ ಪುರುಷರಷ್ಟು ಸುಲಭದಲ್ಲಿ ಮೈ ತೂಕ ಇಳಿಸಲು ಸಾಧ್ಯವಿಲ್ಲ, ಏಕೆ? ಇದರ ಹಿಂದೆ ಏನಾದರೂ ಕಾರಣವಿದೆಯೇ ಎಂದು ನೋಡೋಣ ಬನ್ನಿ:

 ಮಹಿಳೆಯರ ಹಾಗೂ ಪುರುಷರ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸವಿದೆ

ಮಹಿಳೆಯರ ಹಾಗೂ ಪುರುಷರ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸವಿದೆ

ಪುರುಷರಲ್ಲಿ ಮಹಿಳೆಯರಿಗಿಂತ ಚಯಪಚಯ ಕ್ರಿಯೆ ವೇಗವಾಗಿ ನಡೆಯುವುದು ಈ ಕಾರಣದಿಂದಾಗಿ ಅವರು ಮಹಿಳೆಯರಿಗಿಂತ ಬೇಗನೆ ತೂಕನೇ ಕಳೆದುಕೊಳ್ಳುತ್ತಾರೆ.

ಅಲ್ಲದೆ ಪುರುಷರು ವರ್ಕೌಟ್‌ ಮಾಡಿದಾಗ ಮಸಲ್ ಬಿಲ್ಡ್‌ ಆಗುತ್ತೆ, ಅದೇ ಮಹಿಳೆಯರಲ್ಲಿ ಕೊಬ್ಬು ಸಂಗ್ರಹವಾಗುತ್ತೆ. ಈ ಸಂಗ್ರಹವಾದ ಕೊಬ್ಬು ಬೇಗನೆ ಕರಗುವುದಿಲ್ಲ ಆದ್ದರಿಂದ ಮಹಿಳೆಯರು ತೂಕ ಕಳೆದುಕೊಳ್ಳಲು ಪುರುಷರಿಗಿಂತ ಅಧಿಕ ಸಮಯ ತೆಗೆದುಕೊಳ್ಳುತ್ತಾರೆ.

ಗರ್ಭಿಣಿಯಾದಾಗ:

ಗರ್ಭಿಣಿಯಾದಾಗ:

ಮಹಿಳೆಯರು ಗರ್ಭಿಣಿಯದಾಗ ಸ್ವಾಭಾವಿಕವಾಗಿ ಮೈ ತೂಕ ಹೆಚ್ಚಾಗುವುದು, ಹೆರಿಗೆಯ ಬಳಿಕ ಮೈ ತೂಕ ಸಹಜ ಸ್ಥಿತಿಗೆ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಕೆಲ ಮಹಿಳೆಯರಿಗೆ ಹೆರಿಗೆಯ ಬಳಿಕ ಹೊಟ್ಟೆ ಬೊಜ್ಜಿನ ಸಮಸ್ಯೆ ಕಾಡುವುದು. ಅಲ್ಲದೆ ಮಹಿಳೆಯರಿಗೆ ತಮ್ಮ ದೇಹದ ಆರೈಕೆಗೆ ಪುರುಷರಷ್ಟು ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಮಕ್ಕಳ ಆರೈಕೆ ಮಾಡುವುದರಿಂದ ಕೆಲವೊಮ್ಮೆ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಸಮಯ ಸಿಗಲ್ಲ, ಈ ಕಾರಣದಿಂದಾಗಿ ಮೈ ತೂಕ ಕಡಿಮೆಯಾಗಲು ಕಷ್ಟವಾಗುವುದು.

ಮೆನೋಪಾಸ್‌:

ಮೆನೋಪಾಸ್‌:

ಮೆನೋಪಾಸ್‌ ಹಂತದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಈ ಕಾರಣದಿಂದಾಗಿ ಮೈ ತೂಕ ಹೆಚ್ಚಾಗುವುದು.

 ಪಿಸಿಒಎಸ್:

ಪಿಸಿಒಎಸ್:

ಇತ್ತೀಚೆಗೆ ಹೆಚ್ಚಿನ ಮಹಿಳೆಯರಲ್ಲಿ ಪಿಸಿಒಎಸ್‌ ಸಮಸ್ಯೆ ಕಂಡು ಬರುತ್ತಿದೆ, ಪಿಸಿಒಎಸ್‌ ಸಮಸ್ಯೆಯಿದ್ದಾಗ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮೈ ತೂಕ ತುಂಬಾನೇ ಹೆಚ್ಚಾಗುವುದು.

ಪಿಸಿಎಸ್‌ ಸಮಸ್ಯೆಯಿಂದಾಗಿ ಮೈ ತೂಕ ಹೆಚ್ಚಾಗುವುದು ಮಾತ್ರವಲ್ಲ ಅನಿಯಮಿತ ಮುಟ್ಟಿನ ಸಮಸ್ಯೆ, ಬಂಜೆತನ ಈ ಎಲ್ಲಾ ಸಮಸ್ಯೆ ಉಂಟಾಗುವುದು. ಇದರಿಂದ ಕೂಡ ಮೈ ತೂಕ ಹೆಚ್ಚಾಗುವುದು.

ಈ ಎಲ್ಲಾ ಕಾರಣದಿಂದಾಗಿ ಮಹಿಳೆಯರಿಗೆ ಪುರುಷರಷ್ಟು ಸುಲಭದಲ್ಲಿ ಮೈ ತೂಕ ಕಡಿಮೆಯಾಗಲ್ಲ.

ಹೆರಿಗೆಯ ಬಳಿಕ ಹೆಚ್ಚಾಗುವ ಮೈ ತೂಕದ ಸಮಸ್ಯೆ

ಹೆರಿಗೆಯ ಬಳಿಕ ಹೆಚ್ಚಾಗುವ ಮೈ ತೂಕದ ಸಮಸ್ಯೆ

ಹೆರಿಗೆಯ ಬಳಿಕ ಮೈ ತೂ ಹೆಚ್ಚಾಗದಿರಲು ಏನು ಮಾಡಬೇಕು?

ನೀವು ಕೆಲ ಸೆಲೆಬ್ರಿಟಿಗಳನ್ನು ನೋಡುವಾಗ ಹೆರಿಗೆಯಾಗಿ ಸ್ವಲ್ಪ ದಿನಗಳಲ್ಲಿಯೇ ಮೈ ತೂಕವನ್ನು ಕಳೆದುಕೊಂಡು ಮೊದಲಿನ ಮೈ ತೂಕಕ್ಕೆ ಬಂದಿರುತ್ತಾರೆ, ಅದನ್ನು ನೋಡುವಾಗ ಸಾಮಾನ್ಯ ಜನರಿಗೆ ಸೆಲೆಬ್ರಿಟಿಗಳು ಮಾತ್ರ ಅಂಥ ಆಕರ್ಷಕ ಮೈ ಮಾಟ ಮರಳಿ ಪಡೆಯುವುದು ಹೇಗೆ, ನಮ್ಮ ಮೈ ಮಾಟ ಮರಳಿ ಪಡೆಯಲು ಏನು ಮಾಡಬೇಕೆಂದು ಸಹಜ.

ಹೆರಿಗೆಯ ಬಳಿಕ ಮೈ ತೂಕ ಕಡಿಮೆಯಾಗಲು ಮಾನಸಿಕ ಬೆಂಬಲ ಅಗ್ಯತ

ಹೌದು ಮಗುವಿನ ಸಂಪೂರ್ಣ ಜವಾಬ್ದಾರಿ ನೀವೇ ನೋಡಿಕೊಳ್ಳುವುದಾದರೆ ಮೈ ತೂಕ ನಿಯಂತ್ರಣದಲ್ಲಿಡುವುದು ಕಷ್ಟ. ಅದೇ ಮನೆಯವರು ಅಥವಾ ಗಂಡ ಸ್ವಲ್ಪ ಹೊತ್ತು ಮಗುವನ್ನು ನೋಡಿಕೊಂಡರೆ ನೀವು ವ್ಯಾಯಾಮ ಮಾಡುವ ಮೂಲಕ ಮೊದಲಿನ ಮೈ ತೂಕ ಪಡೆಯಬಹುದು.

ಆಹಾರದಲ್ಲಿ ಕೊಬ್ಬಿನಂಶ ನಿರ್ಲಕ್ಷ್ಯ ಮಾಡಬೇಡಿ

ಹೆರಿಗೆಯ ಬಳಿಕ ಆರೋಗ್ಯಕರ ಆಹಾರ ಅದರಲ್ಲೂ ಕೊಬ್ಬಿನಂಶದ ಆಹಾರದ ಕಡೆಗೆ ಗಮನ ನೀಡಬೇಕು. ನೀವು ತುಪ್ಪ ಸೇವನೆ ಮಾಡಬೇಕು. ಎಷ್ಟೋ ಜನರು ದಪ್ಪಗಾಗುತ್ತೇವೆ ಎಂದು ಆಹಾರ ಸರಿಯಾಗಿ ತಿನ್ನುವುದಿಲ್ಲ, ಹೀಗೆ ಮಾಡುವುದರಿಂದ ವೀಕ್ನೆಸ್ ಉಂಟಾಗುವುದು. ಅದರ ಬದಲಿಗೆ ಪೋಷಕಾಂಶ ಇರುವ ಆಹಾರ ಸೇವಿಸಿ, ಇದು ನಿಮ್ಮ ಶರೀರದ ಆರೋಗ್ಯದ ದೃಷ್ಟಿಯಿಂದ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅವಶ್ಯಕ.

English summary

Weight loss may be harder for women than men! Here’s why in kannada

Why weight loss difficult for women than men read on..
X
Desktop Bottom Promotion